ಅಮೆರಿಕದಲ್ಲಿ ಹಿಂದೂ ಧರ್ಮಕ್ಕೆ ಕೋಟಿಗಟ್ಟಲೆಖರ್ಚು ಮಾಡ್ತಿರುವ ಈ ವ್ಯಕ್ತಿ ಯಾರು?
ಭಾರತದಲ್ಲೇ ಹಿಂದೂ ಧರ್ಮ ಪಾಲನೆ ಮಾಡುವವರ ಸಂಖ್ಯೆ ಕಡಿಮೆ ಆಗ್ತಿದೆ. ಹಿಂದುಗಳೇ ಧರ್ಮ ಮರೆಯುತ್ತಿದ್ದಾರೆ. ಈ ಸಮಯದಲ್ಲಿ ಅಮೆರಿಕಾದಲ್ಲಿರುವ ವ್ಯಕ್ತಿಯೊಬ್ಬ ನಮ್ಮ ಧರ್ಮಕ್ಕೆ ಹಣ ಖರ್ಚು ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ಚರ್ಚೆಯಲ್ಲಿದ್ದಾರೆ. ಅಮೆರಿಕಾದಲ್ಲಿ ಈ ವೈದ್ಯ ಮಾಡ್ತಿರುವ ಕೆಲಸವೇ ಇದಕ್ಕೆ ಕಾರಣ. ಅಮೆರಿಕಾದಲ್ಲಿ ಹಿಂದೂ ಧರ್ಮದ ಪ್ರಚಾರಕ್ಕಾಗಿ ನಲವತ್ತು ಮಿಲಿಯನ್ ಡಾಲರ್ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಾವಿಂದು ಅಮೆರಿಕಾದಲ್ಲಿ ಹಿಂದೂ ಧರ್ಮ ಪ್ರಚಾರಕ್ಕೆ ಮುಂದಾಗಿರುವ ವೈದ್ಯರ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.
ಅಮೆರಿಕ (America) ದಲ್ಲಿ ಹಿಂದು ಧರ್ಮ ಪ್ರಚಾರ ಮಾಡ್ತಿರುವ ವೈದ್ಯ ಯಾರು? : ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹಿಂದೂ ಧರ್ಮ ಪ್ರಚಾರಕ್ಕೆ ಮುಂದಾಗಿರುವ ವೈದ್ಯರ ಹೆಸರು ಮಿಹಿರ್ ಮೇಘಾನಿ (Mihir Meghani). ಹಿಂದೂ ಎನ್ನುವುದು ಕೇವಲ ಧರ್ಮ (Religion) ವಲ್ಲ ಅದು ಜೀವನಶೈಲಿ ಎಂದು ಭಾರತೀಯ ವೈದ್ಯ ಮಿಹಿರ್ ಮೇಘಾನಿ ನಂಬುತ್ತಾರೆ. ಅಮರಿಕದಲ್ಲಿ ಹಿಂದೂ ಧರ್ಮ ಪ್ರಚಾರ ಮಾಡುವ ಹಿನ್ನಲೆಯಲ್ಲಿ ಎರಡು ದಶಕಗಳ ಹಿಂದೆಯೇ ಮೇಘಾನಿ, ತಮ್ಮ ಸ್ನೇಹಿತರ ಜೊತೆ ಸೇರಿ ಹಿಂದು – ಅಮೆರಿಕ ಫೌಂಡೆಶನ್ (Hindu America Foundation) ಸ್ಥಾಪಿಸಿದ್ದಾರೆ. ಈ ತಿಂಗಳ ಆರಂಭದಲ್ಲೇ ಮಿಹಿರ್ ಮೇಘಾನಿ, ಮುಂದಿನ ಎಂಟು ವರ್ಷಗಳಲ್ಲಿ ಹಿಂದೂಗಳ ಹಿತಾಸಕ್ತಿಗಾಗಿ 15 ಲಕ್ಷ ಡಾಲರ್ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದರು.
ಹೊಟೇಲ್ ಕೊಂಡಷ್ಟೇ ಇಲ್ಲಿಯ ಫುಡ್ ಬೆಲೆ! ಮತ್ತೊಂದು ದೇಶದಲ್ಲಿ ಪ್ರಯಾಣಿಸುವುದು ದುಬಾರಿ!
ಹಿಂದೂ ಧರ್ಮದ ಪ್ರಚಾರಕ್ಕಾಗಿ ಅವರು 15 ಮಿಲಿಯನ್ ಡಾಲರ್ ಸಹಾಯವನ್ನು ನೀಡಿದ್ರೆ ಮುಂದಿನ ಎರಡು ದಶಕಗಳಲ್ಲಿ ಅವರು ಹಿಂದೂ ಧರ್ಮದ ಪ್ರಚಾರಕ್ಕಾಗಿ 40 ಮಿಲಿಯನ್ ಡಾಲರ್ ಗಳನ್ನು ದಾನ ಮಾಡಿದಂತಾಗುತ್ತದೆ. ಇದರೊಂದಿಗೆ ಅವರು ಹಿಂದೂ ಧರ್ಮಕ್ಕೆ ಇಷ್ಟು ದೊಡ್ಡ ಮೊತ್ತದ ಹಣವನ್ನು ದಾನ ಮಾಡುವ ಭರವಸೆ ನೀಡಿದ ಮೊದಲ ಭಾರತೀಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಾನು ಮತ್ತು ನನ್ನ ಪತ್ನಿ ಇಲ್ಲಿಯವರೆಗೆ 15 ಮಿಲಿಯನ್ ಡಾಲರ್‌ಗಳನ್ನು ಹಿಂದೂ ಅಮೇರಿಕನ್ ಫೌಂಡೇಶನ್‌ಗೆ ನೀಡಿದ್ದೇವೆ ಎಂದು ಮಿಹಿರ್ ಹೇಳುತ್ತಾರೆ. ನಾವು ಕಳೆದ 15 ವರ್ಷಗಳಲ್ಲಿ ಹಿಂದೂ ಮತ್ತು ಭಾರತೀಯ ಸಂಘಟನೆಗಳಿಗೆ ಒಂದು ಮಿಲಿಯನ್ ಡಾಲರ್‌ಗೂ ಹೆಚ್ಚು ಆರ್ಥಿಕ ನೆರವು ನೀಡಿದ್ದೇವೆ ಎಂದಿದ್ದಾರೆ.
ಮಿಲಿಯನ್ ಡಾಲರ್ ದೇಣಿಗೆ ನೀಡಲು ಕಾರಣವೇನು? : ಹಿಂದೂ ಧರ್ಮದ ಪ್ರಚಾರಕ್ಕಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ನೀಡುವುದರ ಹಿಂದಿನ ಉದ್ದೇಶವೇನೆಂದು ಮಿಹಿರ್ ಮೇಘಾನಿ ಹೇಳಿದ್ದಾರೆ. ಕೇವಲ ಹಿಂದೂ ಧರ್ಮ ಪ್ರಚಾರ ಮಾಡಬೇಕೆಂಬುದು ಮಿಹಿರ್ ಮೇಘಾನಿ ಉದ್ದೇಶವಂತೆ. ಹೆಚ್ಚಿನ ಅಮೆರಿಕನ್ ಪ್ರಜೆಗಳು ಹಿಂದೂ ಧರ್ಮವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದಿಲ್ಲ ಏಕೆಂದರೆ ಅಲ್ಲಿನ ಹೆಚ್ಚಿನ ಜನರು ಕ್ರಿಶ್ಚಿಯನ್ನರು ಎನ್ನುತ್ತಾರೆ ಮೇಘಾನಿ. ಅವರು ಅಬ್ರಹಾಮಿಕ್ ಹಿನ್ನೆಲೆಯಿಂದ ಬಂದವರು. ಅವರು ಇತರ ಧರ್ಮಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ, ಇದು ಜೀವನ ವಿಧಾನವಾಗಿದೆ. ಬದುಕಿನ ಬಗ್ಗೆ ಯೋಚಿಸುವ ರೀತಿ ಎಂಬುದು ಅವರಿಗೆ ಅರ್ಥವಾಗುವುದಿಲ್ಲ ಎನ್ನುತ್ತಾರೆ ಮೇಘಾನಿ. ಭಾರತದಿಂದ ಬರುವ ಹಿಂದುಗಳು ಕೂಡ ಹಿಂದುತ್ವ ತಮ್ಮ ಗುರುತು ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಾವು ಅದರ ಬಗ್ಗೆ ಮಾತನಾಡುವ ಅಗತ್ಯವಿದೆ ಎನ್ನುತ್ತಾರೆ ಅವರು.
ಅಕ್ಕ ಪಕ್ಕವೇ ಹರಿಯುತ್ತೆ ಕಪ್ಪು-ಬಿಳಿ ನದಿ, ಆದ್ರೂ ಒಂದಾಗೋಲ್ಲ, ಪ್ರಕೃತಿ ವಿಸ್ಮಯಕ್ಕೆ ತಲೆ ಬಾಗದಿರಲು ಆಗುತ್ತಾ?
ಮಿಹಿರ್ ಮೇಘಾನಿ ಯಾವುದೇ ಸ್ಟಾರ್ಟ್ ಅಪ್ (Start UP\p) ಕಂಪನಿ ಹೊಂದಿಲ್ಲ. ಯಾವುದೇ ಬ್ಯುಸಿನೆಸ್ (Business) ಮಾಡ್ತಿಲ್ಲ. ಮಿಹಿರ್, ಸಂಬಳ ಪಡೆಯುವ ವೈದ್ಯ. ಅವರ ಪತ್ನಿ ಫಿಟ್ನೆಸ್ ಬೋಧಕಕಿ (Fitness Instructor) ಮತ್ತು ಆಭರಣ ವಿನ್ಯಾಸಕಿ (Jewellary Designer) ಯಾಗಿದ್ದಾರೆ. ಮಿಹಿರ್ ಮತ್ತು ಅವರ ಪತ್ನಿ ಯಾವುದೇ ಷೇರು ಕಂಪನಿಯಲ್ಲಿ ಹಣವನ್ನೂ ಹೂಡಿಲ್ಲ. ಅವರು ನಮ್ಮ ಉಳಿತಾಯದ ಹಣವನ್ನು ಹಿಂದೂ ಧರ್ಮದ (Hindu Religion) ಪ್ರಚಾರಕ್ಕಾಗಿ ಮಾತ್ರ ಖರ್ಚು ಮಾಡ್ತಿದ್ದಾರೆ. ಹಿಂದೂ ಧರ್ಮದ ಪ್ರಚಾರಕ್ಕೆ ಹಣ ಖರ್ಚು ಮಾಡೋದು ನಮ್ಮ ಕರ್ತವ್ಯ ಎನ್ನುತ್ತಾರೆ ಮಿಹಿರ್.