ಸತ್ಕರ್ಮಿಗೆ ಅನ್ಯಾಯ ಮಾಡಿದ್ರೆ ಇನ್ನಾರು ತಿಂಗಳಲ್ಲಿ... ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಸ್ಫೋಟಕ ಭವಿಷ್ಯ...

ರಾಜಕೀಯದಲ್ಲಿ ಆಗುತ್ತಿರುವ ಅಲ್ಲೋಲ ಕಲ್ಲೋಲದ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಏನದು?
 

In the wake of the political turmoil  Prakash Ammannaya has made an  prediction suc

ರಾಜಕೀಯ, ಸಿನಿಮಾ, ಹವಾಮಾನ, ಪ್ರಕೃತಿ ವಿಕೋಪ... ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು ಇದಾಗಲೇ  ಹಲವಾರು ಭವಿಷ್ಯ ನುಡಿದಿದ್ದು, ಅವೆಲ್ಲಾ ನಿಜವಾಗಿವೆ ಎಂದೇ ಹೇಳಲಾಗುತ್ತಿದೆ. ಇದೀಗ ರಾಜಕೀಯದಲ್ಲಿ ದೇಶಾದ್ಯಂತ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ವಿಶ್ವದಾದ್ಯಂತ ಅನೇಕ ಆತಂಕಕಾರಿ ಘಟನೆಗಳು ನಡೆದಿವೆ, ನಡೆಯುತ್ತಲೇ ಇವೆ.  ಯುದ್ಧ, ಮಾರಣಾಂತಿಕ ಕಾಯಿಲೆ, ನೈಸರ್ಗಿಕ ವಿಕೋಪ, ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲ... ಹೀಗೆ ಹಲವಾರು ರೀತಿಯ ಊಹಿಸಲು ಸಾಧ್ಯವಾಗದ ಘಟನೆಗಳೂ ನಡೆಯುತ್ತಲೇ ಇವೆ. ಇನ್ನು ಭಾರತದ ವಿಷಯಕ್ಕೆ ಬರುವುದಾದರೆ ಕೆಲವು ದಿನಗಳಿಂದ ಕೇಂದ್ರ ಮತ್ತು ರಾಜ್ಯ ಎರಡರಲ್ಲಿಯೂ ರಾಜಕೀಯ ವ್ಯಕ್ತಿಗಳ ಕೆಸರೆರೆಚಾಟ ಹೆಚ್ಚಾಗುತ್ತಲೇ ಸಾಗುತ್ತಿದೆ. ಆರೋಪ- ಪ್ರತ್ಯಾರೋಪಗಳಿಗಂತೂ ಲೆಕ್ಕವೇ ಇಲ್ಲ.

ಇದರ ನಡುವೆಯೇ, ಪ್ರಕಾಶ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲ, ಸಮಸ್ಯೆಗಳು, ವಿವಿದಾತ್ಮಕ ಹೇಳಿಕೆಗಳು, ಗಲಾಟೆ, ಗದ್ದಲ ಇವುಗಳ ನಡುವೆಯೇ, ಅವರ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಸತ್ಯವಂತರು ಯಾರು, ಸುಳ್ಳು ಹೇಳುತ್ತಿರುವವರು ಯಾರು ಎಂಬ ಬಗ್ಗೆ ಗೊಂದಲುಗಳು ಸೃಷ್ಟಿಯಾಗುತ್ತಲೇ ಇವೆ. ನಾನು ಹಾಗೆ ಮಾಡಿಲ್ಲ ಎಂದು ಅವರು, ಅವರು ಹೀಗೆಯೇ ಮಾಡಿದ್ದಾರೆ ಎಂದು ಇವರು, ನಾನು ಹಾಗೆ ಹೇಳಿಲ್ಲ ಎಂದು ಇವರು, ಅವರು ಹೇಳಿರುವುದು ಹಾಗೆಯೇ ಎಂದು ಇವರು... ಹೀಗೆ ಆರೋಪ-ಪ್ರತ್ಯಾರೋಪಗಳು ಕೇಂದ್ರದ ಮಟ್ಟದಲ್ಲಿ ಮಾತ್ರವಲ್ಲದೇ, ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಇಂಥ ಸ್ಥಿತಿ ನಿರ್ಮಾಣವಾಗಿದೆ. ಇವುಗಳನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ನೋಡುವುದಾದರೆ ಪ್ರಕಾಶ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರ ಭವಿಷ್ಯ ಬಹಳ ಮಹತ್ವ ಪಡೆದುಕೊಳ್ಳುತ್ತಿದೆ.

ಅಮಿತ್​ ಶಾ ಭಾಷಣ ತಿರುಚಿದ್ರಾ ರಾಹುಲ್​? ಫುಲ್​ ವಿಡಿಯೋ ವೈರಲ್​- ವಿಪಕ್ಷ ನಾಯಕನ ವಿರುದ್ಧ ಮತ್ತೊಂದು ಕೇಸ್​?

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪ್ರಕಾಶ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು, 'ಇದು ಭಯೋತ್ಪಾದನೆಯಲ್ಲ. ವಾಸ್ತವ.ಯಾವ ಜಾತಕದಲ್ಲಿ ಗುರು ಉಚ್ಚ ಕ್ಷೇತ್ರಗತನಾಗಿರುತ್ತಾನೋ, ಅದರಲ್ಲೂ ತನ್ನ ತ್ರಿಕೋಣಕ್ಕೇ ಅಂಶ ಕೊಟ್ಟಿರುತ್ತಾನೋ ಅಂತವರಿಗೆ ಅನ್ಯಾಯ ಮಾಡಿದರೆ ಪೋಲೀಸರೇ ಆಗಲಿ,ಆಡಳಿತಗಾರರೇ ಆಗಲಿ,ಸಾರ್ವಜನಿಕರೇ ಆಗಲೀ ಆ ಲೆಕ್ಕಾಚಾರ ಇಲ್ಲ.ಅವರು ಆರು ತಿಂಗಳೊಳಗೆ ಪುತ್ರ ನಷ್ಟ ಹೊಂದುತ್ತಾರೆ.ಇದು ಜ್ಯೋತಿಷ್ಯದೊಳಗಿನ ಧರ್ಮ ಸೂಕ್ಷ್ಮಗಳು. ಇವರಲ್ಲಿ ಆಕಾಶ ತತ್ವ ಇರುತ್ತದೆ. ಇಂಥವರು ಖಂಡಿತ ಅನ್ಯಾಯ ಮಾಡಲ್ಲ.ಕೆಲವೊಮ್ಮೆ ವಾಸ್ತವ ಸತ್ಯವನ್ನು ಕಟುವಾಗಿ ಹೇಳಬಹುದಷ್ಟೆ. ಈಗಿನ ಉದಾಹರಣೆ ಹೇಳೋದಿಲ್ಲ. ಮಹಾಭಾರತದಲ್ಲಿ ಶ್ರೀ ಕೃಷ್ಣನಿಗೆ, ರಾಮಾಯಣದಲ್ಲಿ ಶ್ರೀ ರಾಮನಿಗೆ ಇಂತಹ ಮಹಾ ಯೋಗವಿತ್ತು. ಅದೇನಾದರೂ ಕೇಂದ್ರದ ಗುರು ಆಗಿದ್ದರೆ ಹಂಸ ಮಹಾಯೋಗವೂ ಇರುತ್ತದೆ. ನಾವು ಜಾತಕ ನೋಡಿ ಅನ್ಯಾಯ ಮಾಡಬಹುದೋ ಎಂದು ಲೆಕ್ಕ ಹಾಕಲಾಗುತ್ತದೆಯೇ? ಸಂದೇಶ ಇಷ್ಟೆ. ಒಬ್ಬ ಅಸಂಖ್ಯಾತ ಅಭಿಮಾನಿಗಳನ್ನು ಪಡೆದವ, ಸತ್ಕರ್ಮ ನಿರತನು ಆಗಿದ್ದವನಿಗೆ ಆಗಲೀ ಅಥವಾ ಯಾರಿಗೇ ಆಗಲಿ ಅನ್ಯಾಯ ಮಾಡಬಾರದು ಎಂಬುದೇ ಮುಖ್ಯ ಸಂದೇಶ' ಎಂದಿದ್ದಾರೆ.

ಇವರು ಬರೆದಿರುವ ಪ್ರಕಾರ ಅಧರ್ಮಿಗಳಿಗೆ ಇನ್ನಾರು ತಿಂಗಳಿನಲ್ಲಿ ಫಲಿತಾಂಶ ತಿಳಿಯುತ್ತದೆ. ಅನ್ಯಾಯ ಮಾಡುವವರಿಗೆ ಅನ್ಯಾಯವೇ ಆಗುತ್ತದೆ. ಅಸಂಖ್ಯಾತ ಅಭಿಮಾನಿಗಳನ್ನು ಪಡೆದವ, ಸತ್ಕರ್ಮ ನಿರತನು ಆಗಿದ್ದವನಿಗೆ ಅನ್ಯಾಯ ಎಸಗಿದರೆ, ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ ಎನ್ನುವುದು. ಇವರ ಈ ಪೋಸ್ಟ್​ಗೆ ಕಮೆಂಟಿಗರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. 

ಸಿ.ಟಿ.ರವಿ ಘಟನೆ ಬೆನ್ನಲ್ಲೇ ಜಾಲತಾಣದಲ್ಲಿ ಭಾರಿ ಹಲ್​ಚಲ್​ ಸೃಷ್ಟಿಸ್ತಿದೆ ಲಕ್ಷ್ಮೀ ಹೆಬ್ಬಾಳ್ಕರ್​ ಹಳೆಯ ವಿಡಿಯೋ!

 

Latest Videos
Follow Us:
Download App:
  • android
  • ios