Asianet Suvarna News Asianet Suvarna News

ಗುರು ಗ್ರಹದ ರಾಶಿ ಪರಿವರ್ತನೆ- ಹೀಗಿದ್ದರೆ ಜಾತಕದಲ್ಲಿ ರಾಜಯೋಗ

 ಗುರುಗ್ರಹವು ಏಪ್ರಿಲ್ 6ರಂದು ಮಕರ ರಾಶಿಯಿಂದ ಕುಂಭರಾಶಿಗೆ ಪರಿವರ್ತನೆ ಹೊಂದಿದ್ದು, ಈ ರಾಶಿ ಪರಿವರ್ತನೆಯು ಎಲ್ಲ ರಾಶಿಗಳ ಮೇಲೂ ಶುಭಾಶುಭ ಫಲವನ್ನು ನೀಡಲಿದೆ. ಅಷ್ಟೇ ಅಲ್ಲದೆ ಗುರು ಗ್ರಹವು ಜಾತಕದಲ್ಲಿ ಕೇಲವು ವಿಶೇಶ ಸ್ಥಾನಗಳಲ್ಲಿ ಸ್ಥಿತವಾಗಿದ್ದರೆ ಅದು ರಾಜಯೋಗವುಂಟಾಗಲು ಕಾರಣವಾಗುತ್ತದೆ. ಗುರುಗ್ರಹದಿಂದ ಉಂಟಾಗುವ ರಾಜಯೋಗದ ಬಗ್ಗೆ ತಿಳಿಯೋಣ..

In kundali Jupiter transition creates Rajayoga like this
Author
Bangalore, First Published Apr 6, 2021, 3:54 PM IST

ಗುರು ಗ್ರಹವು ಏಪ್ರಿಲ್ 6ರ ಮಂಗಳವಾರವಾದ ಇಂದು ರಾಶಿ ಪರಿವರ್ತನೆ ಹೊಂದಿದೆ. ಬೃಹಸ್ಪತಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಪರಿವರ್ತನೆ ಹೊಂದಿದೆ. ಈ ಗ್ರಹವು 14 ಸೆಪ್ಟೆಂಬರ್ ವರೆಗೆ ಅಲ್ಲೇ ಸ್ಥಿತವಾಗಿದ್ದು, ನಂತರ ವಕ್ರಿ ಸ್ಥಿತಿಯಲ್ಲಿ ಮಕರ ರಾಶಿಯನ್ನು ಮತ್ತೆ ಪ್ರವೇಶಿಸುತ್ತದೆ. 2021ರ ನವೆಂಬರ್ 20ರ ನಂತರ ಮಾರ್ಗಿ ಸ್ಥಿತಿಯಲ್ಲಿ  ಪುನಃ ಕುಂಭರಾಶಿಯನ್ನು ಪ್ರವೇಶಿಸುತ್ತದೆ. ಗುರು ಬೃಹಸ್ಪತಿಯ ಈ ಗೋಚಾರವು ಎಲ್ಲ ರಾಶಿಗಳ ಮೇಲೆ ಶುಭ-ಅಶುಭ ಫಲಗಳನ್ನು ನೀಡಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ  ಗುರುಗ್ರಹಕ್ಕೆ ವಿಶೇಷವಾದ ಮಹತ್ವವಿರುವುದನ್ನು ತಿಳಿಸಲಾಗಿದೆ. ಧನು ಮತ್ತು ಮೀನ ರಾಶಿಗೆ ಅಧಿಪತಿಯಾಗಿರುವ ಗುರು ಗ್ರಹವು ಅತ್ಯಂತ ವಿಶಾಲವಾದ ಗ್ರಹವಾಗಿದೆ. ಬೃಹಸ್ಪತಿಯು ಜಾತಕದಲ್ಲಿ ಕೆಲವು ವಿಶೇಷ ಸ್ಥಾನಗಳಲ್ಲಿದ್ದರೆ ಅದನ್ನು ರಾಜಯೋಗವೆಂದು ಕರೆಯಲಾಗುತ್ತದೆ. ಹಾಗಾದರೆ ಗುರು ಗ್ರಹವು ಜಾತಕದಲ್ಲಿ ಯಾವ ಸ್ಥಾನದಲ್ಲಿದ್ದರೆ ಏನು ಫಲ ಎಂಬ ಬಗ್ಗೆ ತಿಳಿಯೋಣ..

ಇದನ್ನು ಓದಿ: ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..! 

ಜಾತಕದಲ್ಲಿ ಗುರುವು ಕೇಂದ್ರವಾಗಿದ್ದರೆ ಉತ್ತಮ ಫಲ
ವ್ಯಕ್ತಿಯ ಜಾತಕದಲ್ಲಿ ಬೃಹಸ್ಪತಿಯು ಕೇಂದ್ರವಾಗಿದ್ದರೆ, ಅದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಜೊತೆಗೆ ಲಗ್ನದಲ್ಲಿ ಕೇಂದ್ರವಾಗಿದ್ದರು ಸಹ ಹೆಚ್ಚು ಶುಭವೆಂದು ಹೇಳಲಾಗುತ್ತದೆ. ಗುರುವು ಕೇಂದ್ರವಾಗಿದ್ದಾಗ ಜಾತಕದಲ್ಲಿ ಅನ್ಯ ದೋಷಗಳಿದ್ದರೆ ಅವುಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ವ್ಯಕ್ತಿಯ ಆಯಸ್ಸು ವೃದ್ಧಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

In kundali Jupiter transition creates Rajayoga like this



ಗುರುಗ್ರಹದಿಂದ ಗಜಕೇಸರಿ ಯೋಗ 
ಬೃಹಸ್ಪತಿ ಮತ್ತು ಚಂದ್ರ ಗ್ರಹವು ಪರಸ್ಪರ ಕೇಂದ್ರವಾಗಿ ಸ್ಥಿತರಾಗಿದ್ದಾಗ ಉಂಟಾಗುವ ಯೋಗವನ್ನು ಗಜಕೇಸರಿ ಯೋಗವೆಂದು ಕರೆಯಲಾಗುತ್ತದೆ. ಈ ಯೋಗವು ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಗೆ ಲಾಭವನ್ನುಂಟು ಮಾಡುತ್ತದೆ. ಹಾಗಾಗಿ ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರು ಅದು ಫಲಪ್ರದವಾಗಲಿದೆ. ಈ ಮೂರು ರಾಶಿಯವರು ಗಜಕೇಸರಿ ಯೋಗವಿದ್ದಾಗ ಶಿವನನ್ನು ಆರಾಧನೆಯನ್ನು ಮಾಡವುದರಿಂದ ಮತ್ತಷ್ಟು ಶುಭವಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ! 

ಗುರುಗ್ರಹವು ಈ ರಾಶಿಗಳಲ್ಲಿದ್ದಾಗ ರಾಜಯೋಗ
ಬೃಹಸ್ಪತಿಯು ಕರ್ಕಾಟಕ, ಧನು, ಮೀನ ರಾಶಿಯಲ್ಲಿದ್ದರೆ ರಾಜಜಯೋಗವುಂಟಾಗುತ್ತದೆ. ಈ ಯೋಗವು ವ್ಯಕ್ತಿಗೆ ಸಮಾಜದಲ್ಲಿ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದೇ ವೃಷಭ ರಾಶಿಯಲ್ಲಿ ಚಂದ್ರನಿದ್ದು, ಅದಕ್ಕೆ ಗುರುವಿನ ದೃಷ್ಟಿ ನೇರವಾಗಿ ಬೀರುತ್ತಿದೆ ಎಂದಾದರೆ ಅಂತಹ ಜಾತಕದ ವ್ಯಕ್ತಿಗಳು.
ಉನ್ನತ ಪದವಿ, ರಾಜಕಾರಣದಲ್ಲಿ ಉನ್ನತ ಸ್ಥಾನ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಉದ್ಯೋಗವನ್ನು ಗಳಿಸಬಹುದಾಗಿರುತ್ತದೆ.

ಕರ್ಕಾಟಕ ರಾಶಿ - ಕರ್ಕಾಟಕ ರಾಶಿಯವರ ಜಾತಕದಲ್ಲಿ ಚಂದ್ರನು ಭಾಗ್ಯಸ್ಥಾನದಲ್ಲಿ ಮತ್ತು ಗುರುಗ್ರಹವು ಕರ್ಮಸ್ಥಾನದಲ್ಲಿ ಸ್ಥಿತವಾಗಿದ್ದರೆ ಅದಕ್ಕೆ ಕೇಂದ್ರ ತ್ರಿಕೋನ ರಾಜಯೋಗವೆಂದು ಹೇಳುತ್ತಾರೆ. ಇಂಥ ಜಾತಕದವರಿಗೆ ಜೀವನಪೂರ್ತಿ ಯಾವುದಕ್ಕೂ ಕೊರತೆ ಬರುವುದಿಲ್ಲ, ಸುಖಿಗಳಾಗಿರುತ್ತಾರೆ.

ಧನು ರಾಶಿ - ಈ ರಾಶಿಯವರ ಜಾತಕದಲ್ಲಿ ಭಾಗ್ಯ ಸ್ಥಾನದಲ್ಲಿ ಗುರು ಮತ್ತು ಕರ್ಮ ಸ್ಥಾನದಲ್ಲಿ ಸೂರ್ಯನು ಇದ್ದರೆ ಅಂಥ ಜಾತಕ ರಾಜಯೋಗವನ್ನು ಸೂಚಿಸುತ್ತದೆ.

ಮೀನ ರಾಶಿ - ಮೀನ ರಾಶಿಯವರ ಜಾತಕದಲ್ಲಿ ಗುರುಗ್ರಹವು ಒಂಭತ್ತನೇ ಮನೆಯಲ್ಲಿ ಮತ್ತು ಮಂಗಳಗ್ರಹವು ಹತ್ತನೇ ಮನೆಯಲ್ಲಿ ಸ್ಥಿತವಾಗಿದ್ದರೆ ಇದು ರಾಜಯೋಗವನ್ನು ಸೂಚಿಸುತ್ತದೆ.
ಈ ರಾಶಿಗಳಲ್ಲಿ ರಾಜಯೋಗವುಂಟಾಗಲು ಗುರು ಗ್ರಹದ ಪಾತ್ರ ಮಹತ್ವದ್ದಾಗಿರುತ್ತದೆ.

ಇದನ್ನು ಓದಿ: ಫರ್ನಿಚರ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು.. 


ಗುರು ಅಥವಾ ಚಂದ್ರನ ಈ ಸ್ಥಿತಿಯಿಂದ ರಾಜಯೋಗ 
ಗುರು ಜ್ಞಾನದ ಕಾರಕನಾಗಿದ್ದರೆ, ಚಂದ್ರನು ಮನಸ್ಸಿನ ಕಾರಕನಾಗಿದ್ದಾನೆ. ಗುರುವು ಐದನೇ ಮನೆಯಲ್ಲಿ ಇದ್ದು, ಚಂದ್ರನು ಹತ್ತನೇ ಮನೆಯಲ್ಲಿ ಇದ್ದರೆ ಅಂತಹ ಜಾತಕದವರು ಅತ್ಯಂತ ಬುದ್ಧಿವಂತರು, ಯಶಸ್ವಿ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವವರಾಗಿರುತ್ತಾರೆ. ಅಷ್ಟೇ ಅಲ್ಲದೆ ರಾಜಭೋಗವನ್ನು ಅನುಭವಿಸುತ್ತಾರೆ.

ಬೃಹಸ್ಪತಿ ಆರಾಧನೆ
ಗುರುವಿನ ಆರಾಧನೆಯಿಂದ ಸರ್ವಸುಖ ಪ್ರಾಪ್ತಿಯಾಗುತ್ತದೆ. ಗುರು ಅನುಗ್ರಹ ಇದ್ದರೆ ಅತ್ಯಂತ ಕಷ್ಟಗಳಿಂದ ಸುಲಭವಾಗಿ ಪಾರಾಗಲು ಸಾಧ್ಯವಾಗುತ್ತದೆ.  ಗುರುವನ್ನು ಆರಾಧಿಸುವವರು, ಪೂಜೆ, ಅರ್ಚನೆ ಮಾಡುವವರು ಸಾತ್ವಿಕವಾಗಿರಬೇಕಾಗುತ್ತದೆ. ಸಾತ್ವಿಕವಾಗಿದ್ದಲ್ಲಿ ಅಂತವರ ಮೇಲೆ ಗುರು ಕೃಪೆ ಸದಾ ಇರುತ್ತದೆ.  

Follow Us:
Download App:
  • android
  • ios