ಜೀವನ ನಡೆಸಲು ಪ್ರೀತಿಯೊಂದು ಇದ್ದರೆ ಸಾಲದು, ಬದುಕಲು ಹಣವು ಅಷ್ಟೇ ಮುಖ್ಯವಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಾಗಂತ ಹಣವೇ ಎಲ್ಲವೂ ಅಲ್ಲ. ಜೀವನದಲ್ಲಿ  ಸಂಬಂಧಗಳು ಹಾಗೂ ಅವುಗಳೊಂದಿಗಿನ ಬಾಂಧವ್ಯವು ಅಷ್ಚೇ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ತಂದೆ-ತಾಯಿ, ಪತಿ-ಪತ್ನಿ, ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ಹಲವಾರು ಸಂಬಂಧಗಳ ಕೊಂಡಿ ಒಬ್ಬರಿಂದ ಒಬ್ಬರಿಗೆ ಬೆಸೆದುಕೊಂಡಿರುತ್ತದೆ. ಅಂತಹ ಸಂಬಂಧಗಳಲ್ಲಿ ಹಣಕ್ಕಿಂತ ಹೆಚ್ಚು ಪ್ರೀತಿ ಮತ್ತು ಬಾಂಧವ್ಯಗಳಿಗೆ ಬೆಲೆ ಕೊಡಬೇಕಾಗುತ್ತದೆ. ಬಾಂಧವ್ಯಗಳ ಮೌಲ್ಯಗಳಿಗೆ ಬೆಲೆ ಕೊಟ್ಟರು ಸಹ ಹಣಕ್ಕೆ ಒಂಚೂರು ಜಾಸ್ತಿ ಬೆಲೆ ಕೊಡುವ ರಾಶಿಯವರಿದ್ದಾರೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಹೌದು. ಈ ನಾಲ್ಕು ರಾಶಿಯ ವ್ಯಕ್ತಿಗಳಿಗೆ ಸಂಗಾತಿಯ ಹಣದ ಮೇಲೆ ಹೆಚ್ಚು ವ್ಯಾಮೋಹವೆಂದು ಹೇಳಲಾಗಿದೆ. ಸಂಗಾತಿಯ ಮೇಲೆ ಪ್ರೀತಿ ಇದ್ದೇ ಇರುತ್ತದೆ. ಆದರೆ ಭವಿಷ್ಯದ ಚಿಂತೆ ಕಾಡುವುದು ಸಹಜ. ಭವಿಷ್ಯದಲ್ಲಿ ಐಷಾರಾಮಿ ಜೀವನವನ್ನು ನಡೆಸುವ ಕನಸು ಈ ರಾಶಿಯವರಿಗೆ ಎಲ್ಲರಿಗಿಂತ ಸ್ವಲ್ಪ ಹೆಚ್ಚಿರುತ್ತದೆ. ಜೀವನ ನಡೆಸಲು ಹಣವು ಮುಖ್ಯವೇ ಆದರೂ ಬಾಂಧವ್ಯಗಳ ಮೌಲ್ಯಕ್ಕಿಂತ ದೊಡ್ಡದಲ್ಲ. ಸಂಗಾತಿಯ ಪ್ರೀತಿಯ ಜೊತೆಗೆ ಜೀವನದ ಭದ್ರತೆ ಬಗೆಗೆ ಹೆಚ್ಚಿನ ಆಸಕ್ತಿಯುಳ್ಳ ಈ ರಾಶಿಯವರಿಗೆ ಸಂಗಾತಿಯ ಹಣದ ಬಗ್ಗೆಯೆ ಹೆಚ್ಚು ಯೋಚನೆ. ಹಾಗಾಗಿ ಸಂಗಾತಿಯ ಪ್ರೀತಿಯ ಜೊತೆಗೆ ಆತನ ಹಣದ ಮೇಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಪ್ರತ್ಯೇಕ ರಾಶಿಯವರಿಗೆ ಅವರದ್ದೇ ಆದ ಗುಣ ಮತ್ತು ಸ್ವಭಾವಗಳಿರುತ್ತವೆ. ಹಾಗೆಯೇ ಆಸೆ ಆಕಾಂಕ್ಷೆಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಹಾಗೆಯೇ ಇಲ್ಲಿ ಸಂಗಾತಿಗಿಂತ ಸಂಗಾತಿಯ ಹಣಕ್ಕೆ ಹೆಚ್ಚು ಬೆಲೆ ಕೊಡುವ ಕೆಲವು ರಾಶಿಯವರ ಬಗ್ಗೆ  ತಿಳಿಯೋಣ... 

ಇದನ್ನು ಓದಿ: ಮನೆಯಲ್ಲಿ ಗಾಜಿನ ವಸ್ತುಗಳನ್ನಿಡೋ ಮುನ್ನ ವಾಸ್ತು ನಿಯಮವನ್ನೊಮ್ಮೆ ಓದಿ ಕೊಳ್ಳಿ!...

ಧನು ರಾಶಿ
ಈ ರಾಶಿಯ ವ್ಯಕ್ತಿಗಳಿಗೆ ಐಷಾರಾಮಿ ವಸ್ತುಗಳನ್ನು ಕೊಳ್ಳುವುದು ಮತ್ತು ಹೊಸ ಹೊಸ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳುವುದೆಂದರೆ ಇವರಿಗೆ ಇಷ್ಟ. ಹಾಗಾಗಿ ಈ ರಾಶಿಯ ಹೆಚ್ಚು ಜನ ಇದೇ ತೆರನಾದ ಹವ್ಯಾಸವನ್ನು ಹೊಂದಿರುವ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಧನು ರಾಶಿಯವರು ಜೀವನಸಂಗಾತಿಯ ಪ್ರೀತಿಯ ಜೊತೆಗೆ ಸಂಗಾತಿಯ ಹಣವನ್ನು ಬಯಸುತ್ತಾರೆ. 



ಮಕರ ರಾಶಿ
ಮಕರ ರಾಶಿಯ ಅಧಿಪತಿ ಗ್ರಹ ಶನಿದೇವ. ಹಾಗಾಗಿ ಈ ರಾಶಿಯ ವ್ಯಕ್ತಿಗಳು ಪರಿಶ್ರಮಿಗಳು, ಪ್ರಾಮಾಣಿಕರು ಮತ್ತು ಸಮರ್ಪಣಾ ಮನೋಭಾವವನ್ನು ಹೊಂದಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಯಾವುದನ್ನಾದರು ಮಾಡಬೇಕೆಂದುಕೊಂಡು ದೃಢನಿಶ್ಚಯವನ್ನು ಮಾಡಿದರೆಂದರೆ ಅದನ್ನು ಸಂಪೂರ್ಣ ಮಾಡಿ ಮಗಿಸುವವರೆಗೂ ನಿಶ್ಚಿಂತರಾಗಿರುವುದಿಲ್ಲ. ಹಾಗಾಗಿ ಮಕರ ರಾಶಿಯ ವ್ಯಕ್ತಿಗಳು ಸಂಗಾತಿಯ ಜೊತೆ ಅವರ ಅನುಕೂಲವನ್ನು ನೋಡುತ್ತಾರೆ. ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಬೇಕೆಂದರೆ ಇಬ್ಬರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರಬೇಕೆಂಬುದು ಇವರ ಆಶಯ.

ಇದನ್ನು ಓದಿ: ಈ ವರ್ಷ ರಾಹು ಗ್ರಹದ ನಕ್ಷತ್ರ ಪರಿವರ್ತನೆ - 5 ರಾಶಿಯವರಿಗೆ ಸಂಕಷ್ಟ, ಮತ್ತೆ ಕೆಲವರಿಗೆ ಅದೃಷ್ಟ! 

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಹೆಚ್ಚಿನ ವ್ಯಕ್ತಿಗಳು ಷರತ್ತಿನ ಮೇಲೆ ಜೀವನವನ್ನು  ನಡೆಸಲು ಇಚ್ಚಿಸುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯ ವ್ಯಕ್ತಿಗಳಿಗೆ ಸಂಗಾತಿಯು ತಾವು ಹೇಳಿದಂತೆ ಕಾರ್ಯ ನಿರ್ವಹಿಸಬೇಕೆಂದು ಇವರು ಬಯಸುತ್ತಾರೆ. ಹಾಗಾಗಿ ವೃಶ್ಚಿಕ ರಾಶಿಯ ವ್ಯಕ್ತಿಗಳು ಸಂಗಾತಿಯನ್ನು ಪ್ರೀತಿಸುವುದರ ಜೊತೆಗೆ ಅವರ ಹಣವನ್ನು ಹೆಚ್ಚು ಬಯಸುತ್ತಾರೆ. 

ಇದನ್ನು ಓದಿ: ಮಾರ್ಚ್‌ನಲ್ಲಿ ಜನಿಸಿದವರು ಹೀಗೆ ಇರ್ತಾರಂತೆ ....! 

ವೃಷಭ ರಾಶಿ
ಈ ರಾಶಿಯ ವ್ಯಕ್ತಿಗಳು ಸರಿಯಾಗಿ ಯೋಚಿಸದೆ ಯಾವುದಾದರು ಕೆಲಸವನ್ನು ಮಾಡಿಬಿಡುತ್ತಾರೆ. ಈ ರಾಶಿಯವರು ವ್ಯವಹಾರವನ್ನು ಚೆನ್ನಾಗಿ ಬಲ್ಲವರು ಮತ್ತು ವಿಶ್ವಾಸಕ್ಕೆ ಅರ್ಹರು ಸಹ ಆಗಿರುತ್ತಾರೆ. ಆದರೆ ಹಣವನ್ನು ಹೆಚ್ಚು ಪ್ರೀತಿಸುವ ಇವರು ಎಷ್ಟೇ ಆರಾಮವಾಗಿ ಇದ್ದರು ಸಹ ಇನ್ನೂ ಹೆಚ್ಚು ಸುಖವಾಗಿ ಇರಬೇಕು ಮತ್ತು ಐಷಾರಾಮಿಯಾಗಿ ಬದುರಬೇಕೆಂದು ಹಂಬಲಿಸುತ್ತಾರೆ. ಹಾಗಾಗಿ ಸಂಗಾತಿಯಿಂದ ಶ್ರೀಮಂತಿಕೆಯ ಜೀವನವನ್ನು ಹೊಂದಲು ಇಚ್ಚಿಸುತ್ತಾರೆ.