Asianet Suvarna News Asianet Suvarna News

Key to Success: ಚಾಣಕ್ಯನ ಪ್ರಕಾರ ತಾಯಿ ಮಹಾಲಕ್ಷ್ಮೀಯನ್ನು ಒಲಿಸಲು ನಾವು ಮಾಡಬೇಕಾದ್ದಿಷ್ಟು..

ಲಕ್ಷ್ಮೀ ದೇವಿ ಒಲಿದರೆ, ಸಂಪತ್ತು ಮನೆಯಲ್ಲಿ ತುಂಬುತ್ತಾ ಹೋಗುತ್ತದೆ, ಖಾಲಿ ಜೇಬು ಭಾರವಾಗುತ್ತಾ ಹೋಗುತ್ತದೆ, ನಮ್ಮ ಹಲವಷ್ಟು ಸಮಸ್ಯೆಗಳು ಬಗೆ ಹರಿಯುತ್ತವೆ. ಆಕೆಯನ್ನು ಒಲಿಸಿಕೊಳ್ಳುವುದು ಹೇಗೆ?

Impress Goddess of wealth Lakshmi by doing these things skr
Author
Bangalore, First Published Jan 27, 2022, 2:29 PM IST

ಲಕ್ಷ್ಮೀ ಸಂಪತ್ತಿನ ದೇವತೆ. ಆಕೆಯ ಅನುಗ್ರಹವಿದ್ದರೆ ಹಣ, ಒಡವೆ, ಸಂಪತ್ತು ಮನೆಯಲ್ಲಿ ತುಂಬುತ್ತದೆ. ಆದರೆ, ಅಡ್ಡ ದಾರಿಯಲ್ಲಿ ಸಾಗಿ ಸಂಪತ್ತು ತಂದರೆ ಲಕ್ಷ್ಮೀ ಅದಕ್ಕೆ ಬೇರೆ ರೀತಿಯಲ್ಲೇ ಶಾಪ ಕೊಡುತ್ತಾಳೆ. ನೆಮ್ಮದಿಯಿಂದ ಅವನ್ನು ಅನುಭವಿಸಲು ಬಿಡುವುದಿಲ್ಲ. ನಾವು ಪರಿಶ್ರಮದಿಂದ ಕೆಲಸ ಮಾಡಿದಾಗ ಆಕೆಯ ಅನುಗ್ರಹವೂ ದೊರೆತರೆ ಅದೃಷ್ಟ ಜೊತೆಗೂಡುತ್ತದೆ. ಆಗ, ಸಂತೋಷ ನೆಲೆಸುತ್ತದೆ. ಬದುಕು ಸರಳವಾಗುತ್ತದೆ.  ಹಾಗಾದರೆ ಲಕ್ಷ್ಮೀದೇವಿಯನ್ನು ಒಲಿಸಲು ನಾವೇನು ಮಾಡಬೇಕು ಎಂಬ ಬಗ್ಗೆ ಆರ್ಥಿಕ ತಜ್ಞ ಕೌಟಿಲ್ಯ ಕೆಲ ನೀತಿಗಳನ್ನು ರಚಿಸಿದ್ದಾನೆ. ಇದೇ ಚಾಣಕ್ಯ ನೀತಿ ಎಂದು ಹೆಸರಾಗಿರುವುದು.

ಚಾಣಕ್ಯ ನೀತಿಯ ಪ್ರಕಾರ, ಹಣವಿದ್ದವನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಆ ವ್ಯಕ್ತಿಗೆ ಗೌರವ(respect)ವೂ ಹೆಚ್ಚುತ್ತದೆ. ಹಾಗಾಗಿ ಹಣ ಪಡೆಯಲು ನಾವು ಹೀಗಿರಬೇಕು..

ಗಂಭೀರತೆ
ಹಣದ ವಿಷಯದಲ್ಲಿ ಯಾವುದೇ ಚೆಲ್ಲಾಟ ಸಲ್ಲದು. ಹಣ(money)ದ ವಿಷಯದಲ್ಲಿ ಗಂಭೀರತೆ ಹಾಗೂ ಪ್ರಜ್ಞೆ ಇಟ್ಟುಕೊಂಡೇ ಕೆಲಸ ಮಾಡಬೇಕು. 

ಸಮಯಪ್ರಜ್ಞೆ(time sense)
ಸಮಯಕ್ಕೆ ಬೆಲೆ ಕೊಡುವವರೆಂದರೆ ಲಕ್ಷ್ಮಿಗೆ ಅಚ್ಚು ಮೆಚ್ಚು. ಹಾಗಾಗಿ, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸುವವರು ಲಕ್ಷ್ಮೀಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಎಲ್ಲ ಕೆಲಸಗಳನ್ನು ಆಯಾ ಸಮಯಕ್ಕೆ ಮುಗಿಸುವವರಿಗೆ ಗೌರವವೂ ಹೆಚ್ಚುತ್ತದೆ. 

ಉದಾಸೀನತೆ(laziness) ಬೇಡ
ಲಕ್ಷ್ಮೀ ದೇವಿಗೆ ಸೋಮಾರಿಗಳನ್ನು ಕಂಡರಾಗದು. ಸೋಮಾರಿತನದಲ್ಲಿ ದಿನ ದೂಡುವವರನ್ನು, ಕೆಲಸಗಳನ್ನು ನಾಳೆ, ನಾಡಿದ್ದು ಎಂದು ಮುಂದೂಡುವವರನ್ನು ಕಂಡರೆ ಲಕ್ಷ್ಮೀಗೆ ಕೋಪ. ಇಂಥ ಸೋಮಾರಿಗಳು ಬಂದ ಅವಕಾಶವನ್ನು ಕೂಡಾ ಉಪಯೋಗಿಸಿಕೊಳ್ಳಲಾರರು. 

ಕೋಪ, ಅಹಂಕಾರ ಬೇಡ
ಸದಾ ಸಣ್ಣ ಪುಟ್ಟದ್ದಕ್ಕೆ ಕೋಪಿಸಿ(angry)ಕೊಳ್ಳುವವರು, ಅಹಂಕಾರ(arrogant) ತುಂಬಿರುವವರು ಅಂದರೆ ಲಕ್ಷ್ಮೀಗಾಗುವುದಿಲ್ಲ ಎನ್ನುತ್ತಾರೆ ಚಾಣಕ್ಯ. ಬದುಕಿನಲ್ಲಿ ಯಶಸ್ಸು ಬೇಕೆಂದರೆ ಕೋಪ, ಅಹಂನಿಂದ ದೂರವಿರಬೇಕು.

ಈ ನಾಲ್ಕು ರಾಶಿಗಳಿಂದ Break up ನೋವನ್ನು ಸಹಿಸೋದು ಸಾಧ್ಯವೇ ಇಲ್ಲ..

ಮನೆಯ ಸ್ವಚ್ಛತೆ(Home Cleanliness)
ಲಕ್ಷ್ಮೀಯನ್ನು ಮನೆಗೆ ಆಹ್ವಾನಿಸಬೇಕೆಂದರೆ ಮೊದಲು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಕೆ ಸದಾ ಅಲ್ಲೇ ನೆಲೆಸಿರಬೇಕೆಂದರೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಸ್ವಚ್ಛತೆ ಇದ್ದಲ್ಲಿ ತಾಯಿ ಲಕ್ಷ್ಮೀ ಇರುತ್ತಾಳೆ. 

ವಂಚನೆಗೆ ಹಣ ಬಳಕೆ ಬೇಡ
ಇನ್ನೊಬ್ಬರಿಗೆ ನೋವು ಮಾಡಲು, ಮೋಸ ಮಾಡಲು ಎಂದೂ ಹಣವನ್ನು ಬಳಸಬಾರದು. ಹಣವನ್ನು ಯಾವಾಗಲೂ ಸದ್ಬಳಕೆ ಮಾಡಬೇಕು. ತನ್ನ ದುಡಿಮೆಯ ಹಣದಿಂದ ಇಲ್ಲದವರಿಗೆ ಸಾಧ್ಯವಾದಷ್ಟು ದಾನ ಮಾಡಬೇಕು. ಕಷ್ಟ ಪಟ್ಟು ದುಡಿದ ಹಣವನ್ನು ಅಳೆದು ತೂಗಿ ಉಪಯೋಗಿಸಬೇಕು. ಒಂದು ವೇಳೆ ನೀವು ಹಣವನ್ನು ಕೆಟ್ಟ ಉದ್ದೇಶಗಳಿಗಾಗಿ ಬಳಸಿದರೆ, ಅದರಿಂದ ಲಕ್ಷ್ಮೀ ಕೋಪಗೊಳ್ಳುವುದು ಖಚಿತ. ನಂತರ ಮನೆಯಲ್ಲಿ ದಾರಿದ್ರ್ಯ(poverty) ತುಂಬುತ್ತದೆ. 

Om benefits: ಪ್ರತಿದಿನ ಈ ರೀತಿ ಓಂಕಾರ ಜಪಿಸಿದರೆ ಸಿಗೋ ಲಾಭ ಒಂದೆರಡಲ್ಲ..

ಅಡ್ಡ ದಾರಿಯ ಸಂಪಾದನೆ ಬೇಡ
ಅಡ್ಡ ದಾರಿಯಿಂದ, ಬೇಗ ಶ್ರೀಮಂತರಾಗುವ ಬಯಕೆಯಿಂದ ಬೇಡದ ಕೆಲಸಗಳನ್ನು(wrongdoing) ಮಾಡಿ ಸಂಪಾದಿಸಿದ ಹಣ ಎಂದಿಗೂ ಜೊತೆಯಲ್ಲಿ ನಿಲ್ಲುವುದಿಲ್ಲ. ಅಂಥ ಹಣ ಇಡೀ ಕುಟುಂಬವನ್ನೇ ನಾಶ ಮಾಡುತ್ತದೆ. ಹಣ ಯಾವಾಗಲೂ ಕಷ್ಟ ಪಟ್ಟೇ ಗಳಿಸಬೇಕು. ಆಗಲೇ ಕುಟುಂಬದ ಏಳ್ಗೆಯಾಗುವುದು. 

ಉಳಿತಾಯ(savings)
ನಿಮ್ಮ ಸಂಪಾದನೆ ದೊಡ್ಡದಿದ್ದರೂ, ಚಿಕ್ಕದಿದ್ದರೂ ಅದನ್ನು ಬೇಕಾಬಿಟ್ಟು ಖರ್ಚು ಮಾಡಬಾರದು. ಗಳಿಸಿದ ಪ್ರತಿ ಗಳಿಕೆಯಲ್ಲೂ ಒಂದಿಷ್ಟನ್ನು ಉಳಿತಾಯ ಮಾಡಲೇಬೇಕು. ಕೆಟ್ಟ ಗಳಿಗೆ ಬಂದಾಗ ಹೀಗೆ ಕೂಡಿಟ್ಟ ಹಣ ನಿಮಗೆ ಗೆಳೆಯನಂತೆ ಒದಗುವುದು. ಹಾಗಾಗಿ, ಬೇಡದ ವಸ್ತುಗಳಿಗಾಗಿ ವೃಥಾ ಹಣ ಖರ್ಚು ಮಾಡಬೇಡಿ. 
 

Follow Us:
Download App:
  • android
  • ios