ವಿಜಯಪುರ ಹೇಳಿ ಕೇಳಿ ಸಂತ-ಶರಣರ-ಸೂಫಿ ಸಂತರ ನಾಡು. ಜಾತಿ-ಮತ-ಪಂಥಗಳ ಎಲ್ಲೆ ಮೀರಿ ಇಲ್ಲಿನ ಜನರು ಬದುಕು ಸಾಗಿಸೋದು ಸೋಜಿಗದ ವಿಚಾರ. ಇದಲ್ಲೆದಕ್ಕು ಉದಾಹರಣೆ ಎನ್ನುವಂತೆ ವಿಜಯಪುರದ ಮುಸ್ಲಿಂ ವ್ಯಕ್ತಿಯೊಬ್ಬ ಹನುಮ ಮಾಲೆ ಧರಿಸಿ ಗಮನ ಸೆಳೆದಿದ್ದಾನೆ.

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯಪುರ

ವಿಜಯಪುರ (ಡಿ.02): ವಿಜಯಪುರ ಹೇಳಿ ಕೇಳಿ ಸಂತ-ಶರಣರ-ಸೂಫಿ ಸಂತರ ನಾಡು. ಜಾತಿ-ಮತ-ಪಂಥಗಳ ಎಲ್ಲೆ ಮೀರಿ ಇಲ್ಲಿನ ಜನರು ಬದುಕು ಸಾಗಿಸೋದು ಸೋಜಿಗದ ವಿಚಾರ. ಇದಲ್ಲೆದಕ್ಕು ಉದಾಹರಣೆ ಎನ್ನುವಂತೆ ವಿಜಯಪುರದ ಮುಸ್ಲಿಂ ವ್ಯಕ್ತಿಯೊಬ್ಬ ಹನುಮ ಮಾಲೆ ಧರಿಸಿ ಗಮನ ಸೆಳೆದಿದ್ದಾನೆ.

ಮುಸ್ಲಿಂ ವ್ಯಕ್ತಿ ಧರಿಸಿದ ಹನುಮ ಮಾಲೆ: ಬಸವ ಜನ್ಮಭೂಮಿಯಲ್ಲಿ ಮುಸ್ಲಿಂ ಭಕ್ತನೊಬ್ಬ ಹನುಮ ಮಾಲಾ ಧರಿಸಿ ಹನುಮ ಜನ್ಮಭೂಮಿ ಅಂಜನಾದ್ರಿ ಬೆಟ್ಟಕ್ಕೆ ಹೊರಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾನೆ. ಬಸವೇಶ್ವರ ಹುಟ್ಟಿದ ನಾಡು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಜಾಫರ್ ಬೆಣ್ಣೆ ಎಂಬವರೇ ಭಾವೈಕ್ಯತೆ ಮೆರೆದ ಹನುಮ ಭಕ್ತರಾಗಿದ್ದಾರೆ.

Vijayapura: ನೀರಾವರಿ ವ್ಯಾಪ್ತಿ ಹೆಚ್ಚಿಸುವುದೇ ನನ್ನ ಗುರಿ: ಶಾಸಕ ಸೋಮನಗೌಡ

ಹಣೆಗೆ ಗಂಧ-ತಿಲಕ ಕೊರಳಲ್ಲಿ ಮಾಲೆ: ಹಣೆಗೆ ಗಂಧ, ತಿಲಕ ಇರಿಸಿ, ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ಹನುಮ ಮಾಲಾ ಧರಿಸಿ, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಫರ್ ಜಾತಿಗಿಂತ ಭಾವೈಕ್ಯತೆ ದೊಡ್ಡದು ಎನ್ನುವದನ್ನು ತೋರಿಸಿ ಕೊಟ್ಟಿದ್ದಾರೆ. ಹನುಮ ಮಾಲೆ ಧರಿಸಿರುವ ಜಾಫರ್ ಉತ್ತರ ಕರ್ನಾಟಕದ ಪ್ರಸಿದ್ದ ಹಾಗೂ ಹನುಮ ಜನ್ಮಭೂಮಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಹನುಮದೇವನಿಗೆ ಪೂಜೆ ಸಲ್ಲಿಸಿ ಮಾಲಾಧಾರ ವ್ರತ ಮುಕ್ತಾಯ ಮಾಡುವುದಾಗಿ ಜಾಫರ್ ಹೇಳಿದ್ದಾರೆ.

ಭಾವೈಕ್ಯತೆಯ ಸಾಕ್ಷಿಪ್ರಜ್ಞೆ ಜಾಫರ್‌: ಜಾಫರ್‌ ಹನುಮ ಮಾಲೆ ಹಾಕಿರೋದು ಜನರಲ್ಲಿ ಅಚ್ಚರಿ ಮೂಡಿಸಿದೆ. ಇನ್ನು ಹನುಮ ದೇಗುಲದಲ್ಲಿ ನಡೆದ ಭಜನೆಗಳಲ್ಲು ಜಾಫರ್‌ ಅತಿ ಉತ್ಸಾಹದಿಂದಲೆ ಪಾಲ್ಗೊಂಡಿದ್ದಾರೆ. ತಾವೆ ಸ್ವತಃ ಮಾರುತಿಯನ್ನ ಭಜಿಸುವ ಗೀತೆಗಳನ್ನು ಹಾಡಿ ಆಂಜನೇಯನನ್ನ ಆರಾಧಿಸಿದ್ದಾರೆ.

Vijayapura: ಮತದಾರ ಪಟ್ಟಿಯಲ್ಲಿ ಹೆಸರು ಡಿಲಿಟ್‌ ಖಂಡಿಸಿ ಧರಣಿ ಸತ್ಯಾಗ್ರಹ

ಮುಸ್ಲಿಂರಾದ್ರು ಹನುಮ ಭಕ್ತ ಜಾಫರ್: ಮುಸ್ಲಿಂ ಸಮುದಾಯದಲ್ಲಿ ಏಕ ದೇವೋಪಾಸನೆ ಪಾಲನೆಯಾಗುತ್ತೆ. ಅಲ್ಲಾಹ ನನ್ನ ಬಿಟ್ಟರೇ ಬೇರೆ ದೇವರಿಲ್ಲ. ಅಲ್ಲಾಹ ಒಬ್ಬನೇ ದೇವರು ಎಂದು ನಂಬಿಕೊಂಡವರು. ಆದ್ರೆ ಮುಸ್ಲಿಂ ಸಮುದಾಯದ ಜಾಫರ್‌ ಅವರಿಗೆ ಮುಖ್ಯಪ್ರಾಣಅಂದ್ರೆ ಪಂಚಪ್ರಾಣವಂತೆ. ಈ ಮೂಲಕ ಭಾವೈಕ್ಯತೆ ಮೂಡಿಸಿದ್ದಾರೆ ಜಾಫರ್.‌ ಹೀಗಾಗಿಯೆ ಹನುಮ ಮಾಲೆ ಧರಿಸಿ ಅಂಜನಾದ್ರಿಗೆ ಹೊರಡಲು ಅನಿಯಾಗಿದ್ದಾರೆ. ಭಕ್ತಿಭಾವಗಳಿಂದ ಆಂಜನೇಯ ದೇವರ ದರ್ಶನ ಪಡೆಯಲು ಜಾಫರ್‌ ಉತ್ಸುಕರಾಗಿದ್ದಾರೆ.