ಅವಿವಾಹಿತೆಯರು ಶೀಘ್ರ ವಿವಾಹಕ್ಕಾಗಿ ಶ್ರಾವಣ ಸೋಮವಾರ ಈ ರೀತಿ ಮಾಡಿ..

ನಿಮ್ಮ ದಾಂಪತ್ಯದಲ್ಲಿ ಯಾವುದೇ ರೀತಿಯ ಅಡೆತಡೆಗಳು ಇದ್ದಲ್ಲಿ, ವಿವಾಹಕ್ಕೆ ಅಡ್ಡಿ ಆತಂಕಗಳು ಎದುರಾಗಿತ್ತಿದ್ದಲ್ಲಿ ಶ್ರಾವಣ ಸೋಮವಾರದಂದು ಇಲ್ಲಿ ತಿಳಿಸಲಾದ ಪರಿಹಾರಗಳನ್ನು ನೀವು ಪ್ರಯತ್ನಿಸಬಹುದು.

If there are obstacles in the marriage of a girl then do these measures in Sawan Monday skr

ಶ್ರಾವಣ ಮಾಸ ಆರಂಭವಾಗಿದೆ. ಎಲ್ಲೆಡೆ ಜನರು ಶಿವನ ಭಕ್ತಿಯಲ್ಲಿ ಮುಳುಗಿದ್ದಾರೆ. ಎಲ್ಲೆಡೆ ಪೂಜೆ ಪುನಸ್ಕಾರ ಆರಂಭವಾಗಿದ್ದು,ದೇವರನ್ನು ಒಲಿಸಲು ಜನರು ನಾನಾ ರೀತಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಇಡೀ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಜನರು ಈ ತಿಂಗಳಲ್ಲಿ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುತ್ತಾರೆ.

ಈ ಮಾಸದಲ್ಲಿ ಜನರು ಮುಖ್ಯವಾಗಿ ಶ್ರಾವಣ ಸೋಮವಾರದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅವಿವಾಹಿತ ಹುಡುಗಿಯರು ಈ ತಿಂಗಳಲ್ಲಿ ಉಪವಾಸವನ್ನು ಆಚರಿಸಿದರೆ ಅವರಿಗೆ ಉತ್ತಮ ವರ ಸಿಗುತ್ತಾನೆ. ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಮದುವೆಗೆ ಕೆಲವು ಅಡೆತಡೆಗಳು ಬರಲು ಪ್ರಾರಂಭಿಸುತ್ತವೆ, ಇದರಿಂದಾಗಿ ಮದುವೆ ವಿಳಂಬವಾಗುತ್ತದೆ. ಹೆಣ್ಣುಮಕ್ಕಳು ವಿವಾಹಕ್ಕಾಗಿ ಶ್ರಾವಣ ಸೋಮವಾರ ಉಪವಾಸವನ್ನು ಆಚರಿಸುವ ಜೊತೆಗೆ ಕೆಲವು ಸುಲಭವಾದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬಹುದು. 

ಶ್ರಾವಣ ಸೋಮವಾರದಂದು ಈ ಕ್ರಮಗಳನ್ನು ಮಾಡಿ..
ಅವಿವಾಹಿತ ಹುಡುಗಿಯರು ಶ್ರಾವಣ ಸೋಮವಾರದಂದು ಮುಂಜಾನೆ ಎದ್ದು ತಮ್ಮ ಮನಸ್ಸಿನಲ್ಲಿ ಪರಿಶುದ್ಧತೆಯ ಭಾವನೆಯನ್ನು ಹೊಂದಬೇಕು. ನಂತರ ಬಕೆಟ್‌ ನೀರಿನಲ್ಲಿ ಸ್ವಲ್ಪ ಗಂಗಾಜಲವನ್ನು ಸೇರಿಸಿಕೊಂಡು ಸ್ನಾನ ಮಾಡಬೇಕು. ನಂತರ ದೇವರ ಕೋಣೆಯಲ್ಲಿ ಕುಳಿತು 'ಓಂ ನಮಃ ಶಿವಾಯ' ಪಠಿಸುತ್ತಾ ನಿಮ್ಮ ಮನೆಯ ದೇವತೆಗಳನ್ನು ಪೂಜಿಸಬೇಕು.

ನೀವು ಶ್ರಾವಣ ಸೋಮವಾರದ ಉಪವಾಸವನ್ನು ಆಚರಿಸಲು ಹೋದರೆ, ಉಪವಾಸವನ್ನು ಮುಕ್ತಾಯಗೊಳಿಸುವ ಪೂಜೆಯಲ್ಲಿ ಇವನ್ನು ಬಳಸಿ. ಮೊದಲಿಗೆ ಅಕ್ಷತೆ, ಕುಂಕುಮ, ಹಳದಿ ಚಂದನ, ಹಾಲು, ಮೊಸರು, ತುಪ್ಪ, ಮಧು ಭಸ್ಮ, ಗಂಗಾಜಲ, ಸಕ್ಕರೆಯನ್ನು ಶಿವನಿಗೆ ಅರ್ಪಿಸಿ. ತೆಂಗಿನಕಾಯಿಯನ್ನು ಒಡೆದು ಶಿವನ ಮುಂದೆ ಅರ್ಪಿಸಬೇಕು. ತೆಂಗಿನಕಾಯಿಯನ್ನು ಅರ್ಪಿಸುವಾಗ, ಅದರೊಂದಿಗೆ ಒಂದು ದಾರವನ್ನು ಇರಿಸಿ ಮತ್ತು ದೀಪವನ್ನು ಸಹ ಇರಿಸಿ.

ಶ್ರಾವಣ ಸೋಮವಾರ ಅವಿವಾಹಿತೆಯರು ಈ ಕೆಲ್ಸ ಮಾಡ್ಬೇಡಿ

ಮದುವೆಯಾಗ ಬಯಸುವವರು ಹೀಗೆ ಮಾಡಿ

  • ಶ್ರಾವಣ ಸೋಮವಾರದಂದು ಬರಿಗಾಲಿನಲ್ಲಿ ದೇವಸ್ಥಾನಕ್ಕೆ ಹೋಗಿ. ಈ ಸಂದರ್ಭದಲ್ಲಿ ಹಳದಿ ಅಥವಾ ಬಿಳಿ ಬಟ್ಟೆಗಳನ್ನು ಧರಿಸಿ. ಹೂವಿನ ಹಾರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಮತ್ತು ವೀಳ್ಯದೆಲೆಗಳು ಬಹಳ ಮುಖ್ಯ. ದೇವಾಲಯದಲ್ಲಿ ಮೊದಲು ಗಣಪತಿಯಿಂದ ಪ್ರಾರಂಭಿಸಿ ಶಿವ, ಪಾರ್ವತಿ, ನಂದಿ ಮತ್ತು ಕಾರ್ತಿಕೇಯರಿಗೆ ಜಲಾಭಿಷೇಕ ಮಾಡಿಸಿ. 
  • ಶ್ರಾವಣ ಮಾಸದಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ, ಇದನ್ನು ವಾಸ್ತವವಾಗಿ ಕೌಟುಂಬಿಕ ಜೀವನಕ್ಕೆ ಕಾರಣವಾಗುವ ಅಂಶವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವ-ಪಾರ್ವತಿಯರ ಜಂಟಿ ಆರಾಧನೆಯನ್ನು ಮಾಡಿದರೆ ಮದುವೆ ಬೇಗ ಆಗುವುದಲ್ಲದೆ ದಾಂಪತ್ಯ ಜೀವನದಲ್ಲಿ ಅಡೆತಡೆಗಳಿದ್ದರೆ ಅದೂ ದೂರವಾಗುತ್ತದೆ.
  • ಶ್ರಾವಣದ ಸಂಜೆ, ಶಿವ-ಪಾರ್ವತಿಯ ಜಂಟಿ ಪೂಜೆಯನ್ನು ಮಾಡಿ ಮತ್ತು 'ಓಂ ಗೌರಿ ಶಂಕರಾಯ ನಮಃ' ಎಂದು ಜಪಿಸಿ. ಶಿವಲಿಂಗಕ್ಕೆ ಧೂಪದೀಪ ನೈವೇದ್ಯ ಮಾಡಿ. ನಂತರ 'ಓಂ ಪಾರ್ವತೀಪತಯೇ ನಮಃ' ಎಂದು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಈಡೇರುತ್ತದೆ.

    Nag Panchami 2022: ಹಬ್ಬದ ದಿನ ತಪ್ಪಿಯೂ ಈ ಕೆಲಸ ಮಾಡಬೇಡಿ..

ಶ್ರಾವಣ ಸೋಮವಾರದ ಪೂಜೆ ವಿಧಿ

  • ಸೋಮವಾರದ ಪೂಜೆಯ ಸಮಯದಲ್ಲಿ, 108 ಬಿಲ್ಪತ್ರೆ ತೆಗೆದುಕೊಂಡು ಪ್ರತಿ ಎಲೆಯಲ್ಲೂ ಓಂ ನಮಃ ಶಿವಾಯ ಎಂದು ಬರೆಯಿರಿ. ನಂತರ ಶಿವಲಿಂಗಕ್ಕೆ ಎಲ್ಲಾ ಬಿಲ್ಪತ್ರೆಯನ್ನು ಒಂದೊಂದಾಗಿ ಅರ್ಪಿಸಿ. ಇದರಿಂದ ಶೀಘ್ರದಲ್ಲೇ ವಿವಾಹವಾಗುವುದು. 
  • ಅವಿವಾಹಿತ ಹೆಣ್ಣುಮಕ್ಕಳು ಶ್ರಾವಣ ಮಾಸದಲ್ಲಿ ಬೆಳಿಗ್ಗೆ ಸ್ನಾನ ಮಾಡಿ ಹಳದಿ ಬಟ್ಟೆಗಳನ್ನು ಧರಿಸಿ ಶಿವಲಿಂಗಕ್ಕೆ ನೀರು ಮತ್ತು ನಾಗಕೇಸರ ಹೂವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಅವರಿಗೆ ಬೇಗ ಉತ್ತಮ ಸಂಬಂಧ ಅರಸಿ ಬರುತ್ತದೆ. ವಿವಾಹಿತ ಹೆಣ್ಣುಮಕ್ಕಳು ಹೀಗೆ ಮಾಡಿದರೆ ದಾಂಪತ್ಯದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. 
  • ಹೆಣ್ಣುಮಕ್ಕಳ ಮದುವೆಗೆ ಅಡ್ಡಿಯುಂಟಾದರೆ, ಶ್ರಾವಣ ಸೋಮವಾರದಂದು, ಕನಿಷ್ಠ 11 ದಿನಗಳ ಕಾಲ ಶಿವಲಿಂಗಕ್ಕೆ ಸುಗಂಧ ದ್ರವ್ಯವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ದಾಂಪತ್ಯದಲ್ಲಿ ಬರುವ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ.
  • ಹುಡುಗಿಯ ಮದುವೆಗೆ ಯಾವುದೇ ಅಡಚಣೆ ಉಂಟಾದರೆ, ಅದನ್ನು ಶಿವನ ವಿಗ್ರಹ ಅಥವಾ ಫೋಟೋದ ಮುಂದೆ ಇರಿಸಿದ ನಂತರ 'ಓಂ ಶ್ರೀ ವರ ಪ್ರದಾಯ ಶ್ರೀ ನಮಃ' ಎಂಬ ಮಂತ್ರವನ್ನು ಐದು ಬಾರಿ ಹೇಳಬೇಕು. ನಂತರ ಶಿವನ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಬಿಟ್ಟು ಬರಬೇಕು. 
  • ಶ್ರಾವಣ ಮಾಸದಲ್ಲಿ ಶಿವ ಮತ್ತು ಪಾರ್ವತಿಯನ್ನು ನಿರಂತರವಾಗಿ ಪೂಜಿಸುವುದರಿಂದ ಮತ್ತು ಇಲ್ಲಿ ಹೇಳಲಾದ ಪರಿಹಾರಗಳನ್ನು ಪ್ರಯತ್ನಿಸುವುದರಿಂದ ಮದುವೆಯ ಸಾಧ್ಯತೆಗಳು ಶೀಘ್ರದಲ್ಲೇ ರೂಪುಗೊಳ್ಳುತ್ತವೆ. 
Latest Videos
Follow Us:
Download App:
  • android
  • ios