Asianet Suvarna News Asianet Suvarna News

ರಂಗುರಂಗಿನ ಹೋಳಿಹಬ್ಬಕ್ಕೆ ಸಜ್ಜಾದ ಮಹಾನಗರ: ರತಿ-ಮನ್ಮಥರ ಮೂರ್ತಿಗೆ ಬೇಡಿಕೆ

ರಂಗು ರಂಗಿನ ಹೋಳಿ ಹಬ್ಬಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಸಜ್ಜುಗೊಳ್ಳುತ್ತಿದೆ. ರಂಗಪಂಚಮಿಗೆ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲು ಸಂಘ-ಸಂಸ್ಥೆಗಳು ಭರ್ಜರಿ ಸಿದ್ಧತೆ ಕೈಗೊಂಡಿವೆ. ಈ ಹಿನ್ನೆಲೆ ನಗರದಲ್ಲಿರುವ ಮೂರ್ತಿ ತಯಾರಕರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಕೊರೋನಾ ಬಳಿಕ ಕಲಾವಿದರು ಮತ್ತೆ ಆಶಾಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ.

Hubli Dharwad metropolis is Preparing up for Holi festival rav
Author
First Published Mar 2, 2023, 11:17 AM IST

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ಮಾ.2) : ರಂಗು ರಂಗಿನ ಹೋಳಿ ಹಬ್ಬಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಸಜ್ಜುಗೊಳ್ಳುತ್ತಿದೆ. ರಂಗಪಂಚಮಿಗೆ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲು ಸಂಘ-ಸಂಸ್ಥೆಗಳು ಭರ್ಜರಿ ಸಿದ್ಧತೆ ಕೈಗೊಂಡಿವೆ. ಈ ಹಿನ್ನೆಲೆ ನಗರದಲ್ಲಿರುವ ಮೂರ್ತಿ ತಯಾರಕರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಕೊರೋನಾ ಬಳಿಕ ಕಲಾವಿದರು ಮತ್ತೆ ಆಶಾಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ.

ನಗರದ ಬಮ್ಮಾಪೂರ ಓಣಿ(Bamlapur street)ಯಲ್ಲಿ ಮೂರ್ತಿ ತಯಾರಿಸುವ ಸುಮಾರು 4-5 ಕುಟುಂಬಗಳಿವೆ. ಈ ಕುಟುಂಬದ ಸದಸ್ಯರು ಜನವರಿಯಿಂದಲೇ ರತಿ-ಮನ್ಮಥರ ಮೂರ್ತಿ ತಯಾರಿಕೆಯಲ್ಲಿ ತಲ್ಲೀನರಾಗಿದ್ದಾರೆ. ಸುಮಾರು 6 ತಲೆಮಾರಿನಿಂದ ಈ ಕುಟುಂಬಗಳು ಮೂರ್ತಿ ತಯಾರಿಕೆಯನ್ನೇ ತಮ್ಮ ವೃತ್ತಿಯನ್ನಾಗಿಸಿ ಬದುಕು ಕಟ್ಟಿಕೊಂಡಿವೆ.

ಬಿಸಿಲು ನಾಡು ಯಲಬುರ್ಗಾಕ್ಕೆ ಬಂದ ಕೃಷ್ಣೆ; ಸಂಭ್ರಮಿಸಿದ ರೈತರು

ಕಟ್ಟಿಗೆ ಹಾಗೂ ಮಣ್ಣಿನಿಂದ ಮೂರ್ತಿ ತಯಾರಿಸಲಾಗುತ್ತಿದೆ. ಹಗುರವಾದ, ಬೆಂಡಿನ ತೂಕವುಳ್ಳ ಹತ್ತಿಮರದ ಹಳೆ ಕಟ್ಟಿಗೆಯಿಂದ ಮೂರ್ತಿ ತಯಾರಿಸಲಾಗುತ್ತದೆ. ಜೇಡಿ ಹಾಗೂ ಕೆರೆ ಮಣ್ಣಿನಿಂದಲೂ ಮೂರ್ತಿ ನಿರ್ಮಿಸಲಾಗುತ್ತದೆ. ಇನ್ನು ಮೂರ್ತಿ ತಯಾರಿಸುವುದಷ್ಟೆಅಲ್ಲದೆ, ಹಳೆಯ ಮೂರ್ತಿಗೆ ಸುಣ್ಣಬಣ್ಣ ಬಳಿಯುವುದು ಇವರ ಕೆಲಸವಾಗಿದೆ. ಇದಕ್ಕಾಗಿಯೇ ಜನರು ಹಳೇಮೂರ್ತಿಯನ್ನೂ ತರುತ್ತಾರೆ.

ಆಳೆತ್ತರದ ಮೂರ್ತಿ:

ಹೊಸ ಮಣ್ಣಿನ ರತಿ-ಮನ್ಮಥ ಮೂರ್ತಿಗೆ ಸುಮಾರು .2500 ಬೆಲೆ ಇದೆ. ಕಟ್ಟಿಗೆಯಿಂದ ಮಾಡುವ 3 ಅಡಿ ಎತ್ತರದ ಮೂರ್ತಿಗೆ ಸುಮಾರು .30 ಸಾವಿರ ಬೆಲೆ ನಿಗದಿ ಮಾಡಿದ್ದಾರೆ. ಅಳತೆ ಎತ್ತರದ ಮೇಲೆ ಬೆಲೆ ಹೆಚ್ಚು ಕಮ್ಮಿಯಾಗುತ್ತದೆ. ಇನ್ನು ಕಟ್ಟಿಗೆಯ ಹಳೆಯ ಮೂರ್ತಿಗೆ ಬಣ್ಣ ಹಚ್ಚಲು .3ರಿಂದ .4 ಸಾವಿರ, ಮಣ್ಣಿನ ಮೂರ್ತಿಗೆ ಬಣ್ಣ ಬಳಿಯಲು .1 ಸಾವಿರದಿಂದ .1500 ವರೆಗೆ ಬೆಲೆ ಇದೆ. ಕಟ್ಟಿಗೆ ಮೂರ್ತಿ ತಯಾರಿಕೆಗೆ ಹೆಚ್ಚು ಸಮಯ ತಗಲುತ್ತದೆ. ಕಟ್ಟಿಗೆಯ ಬೆಲೆಯೂ ದುಬಾರಿಯಾಗಿದೆ. ಒಮ್ಮೆ ಮಾಡಿಸಿದರೆ ಐದಾರು ವರ್ಷ ಬಳಕೆ ಮಾಡಬಹುದು. ಹಾಗಾಗಿ ಅದರ ಬೆಲೆ ಹೆಚ್ಚಾಗಿದೆ.

ಹುಬ್ಬಳ್ಳಿ ತಾಲೂಕಿನ ಅದರಗುಂಚಿ, ನೂಲ್ವಿ ಹಾಗೂ ಗದಗ, ಹಾವೇರಿ, ಹಾನಗಲ್‌, ಶಿರಸಿ ಭಾಗ ಸೇರಿದಂತೆ ಅಕ್ಕಪಕ್ಕದ ತಾಲೂಕುಗಳ ಹಲವು ಗ್ರಾಮಗಳ ಜನರು ಮೂರ್ತಿ ಕೊಳ್ಳಲು ಇಲ್ಲಿಗೆ ಬರುತ್ತಾರೆ. ರತಿ ಮನ್ಮಥರ ಮೂರ್ತಿಯನ್ನು 5 ದಿನಗಳ ಕಾಲ ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆಯಾಗಿದೆ. ಆ ಮೂಲಕ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮೂರ್ತಿ ಮೆರವಣಿಗೆ ಮಾಡಿ ಕೊನೆ ದಿನ ಕೆಲವೆಡೆ ಮೂರ್ತಿ ದಹಿಸಲಾಗುತ್ತದೆ. ಇನ್ನು ಕೆಲವಡೆ ಮೂರ್ತಿಯನ್ನು ಸುರಕ್ಷಿತವಾಗಿ ಇಡಲಾಗುತ್ತದೆ.

ರತಿ-ಮನ್ಮಥ ಮೂರ್ತಿ(Rati-Manmatha idol) ತಯಾರಿಕೆ ಕೆಲಸವನ್ನು ಜನವರಿಯಿಂದಲೇ ಆರಂಭಿಸಿದ್ದೇವೆ. ನಮ್ಮ ಇಡೀ ಕುಟುಂಬ 6 ತಲೆಮಾರಿನಿಂದ ಮೂರ್ತಿ ತಯಾರಿಸುತ್ತಿದೆ. ಕೊರೋನಾ(Corona virus)ದಿಂದ ಕೆಲಸ ಕಡಿಮೆಯಾಗಿತ್ತು. ಈಗ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಬಮ್ಮಾಪೂರ ಓಣಿಯ ಕಲಾವಿದ ವಿಜಯ ಕಾಂಬಳೆ.(Vijay Kamble)

ಹಳೆಯ ಕಸುಬು ಮಾಡುವವರ ಸಂಖ್ಯೆ ಕಡಿಮೆಯಾಗಿತ್ತಿದೆ. ಅದರಲ್ಲೂ ಹಬ್ಬದ ಕಳೆಯೂ ಮೊದಲಿನಂತಿಲ್ಲ. ಕೊರೋನಾ ಬಳಿಕ ಈಗ ಎಲ್ಲ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಾಗಾಗಿ, ಗ್ರಾಮೀಣ ಭಾಗದವರು ಹುಬ್ಬಳ್ಳಿಯ ಶೀಲವಂತರ ಓಣಿ, ಹಳೇಹುಬ್ಬಳ್ಳಿಯ ಸೇರಿದಂತೆ ಅನೇಕ ಕಡೆಯ ಸಂಘ-ಸಂಸ್ಥೆಯವರು ಮೂರ್ತಿಗೆ ಬಣ್ಣ ಹಚ್ಚಿಸಿಕೊಳ್ಳಲು, ಹೊಸ ಮೂರ್ತಿ ಬೇಕೆಂದು ಬರುತ್ತಿದ್ದಾರೆ ಎನ್ನುತ್ತಾರೆ ಕಲಾವಿದ ರಿತೇಶ ಕಾಂಬಳೆ.

Holi 2023: ಈ ದಿನ ಶನಿ ಸೇರಿ ಈ ಗ್ರಹಗಳ ಸಂಚಾರ 4 ರಾಶಿಗಳಿಗೆ ತರಲಿದೆ ಕುತ್ತು, ಇಲ್ಲಿದೆ ಪರಿಹಾರ

ಈ ವರ್ಷ 25 ಮಣ್ಣಿನ ಹಾಗೂ 2 ಕಟ್ಟಿಗೆಯ ರತಿ-ಮನ್ಮಥರ ಮೂರ್ತಿ ಮಾಡಿಕೊಡಲು ಬೇಡಿಕೆ ಬಂದಿದೆ. ಎರಡ್ಮೂರು ತಿಂಗಳಿಂದಲೇ ಮೂರ್ತಿ ತಯಾರಿಕೆ ಕೆಲಸ ಆರಂಭಿಸಲಾಗಿದೆ.

ಉದಯ ಕಾಂಬಳೆ, ಕಲಾವಿದ

Follow Us:
Download App:
  • android
  • ios