Asianet Suvarna News Asianet Suvarna News

ಇದ್ದಕ್ಕಿದ್ದಂತೆ ನಿಮ್ಮ ಪಕ್ಕದಲ್ಲಿ ಯಾರೋ ಪಾಸ್ ಆದಂತೆ ಅನಿಸಿದ್ಯಾ? ಮೃತ ನಿಮ್ಮ ಬಂಧುಗಳದು!

ಗರುಡ ಪುರಾಣದ (Garuda purana) ಪ್ರಕಾರ ಮೃತಪಟ್ಟ ನಮ್ಮ ಬಂಧುಗಳು, ಆತ್ಮೀಯರು ನಮ್ಮನ್ನು ಸಂಪರ್ಕಿಸಲು ಸದಾ ಪ್ರಯತ್ನಿಸುತ್ತಾ ಇರುತ್ತಾರೆ. ಹೇಗೆ? ನಮಗದು ಹೇಗೆ ಗೊತ್ತಾಗುತ್ತೆ? ತಿಳಿಯೋಣ ಬನ್ನಿ.

 

How your dead relatives will communicate with you what Garuda purana says bni
Author
First Published Nov 20, 2023, 12:03 PM IST

ನಮ್ಮ ದೇಹ ನಮಗೇ ಆರಿವಿಲ್ಲದಂತೆ ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ವರ್ತಿಸಲು ಆರಂಭಿಸುತ್ತದೆ. ಕೆಲವೊಮ್ಮೆ ನಮ್ಮ ಒಂದು ಕಣ್ಣು ಇದ್ದಕ್ಕಿದ್ದಂತೆ ಅದುರಬಹುದು; ತುರಿಸಬಹುದು. ಎಡಗಣ್ಣು ಹೀಗಾಗಿಬಿಟ್ಟರೆ ನಮ್ಮ ಆತ್ಮೀಯರಿಗೆ ಕೇಡಾಗಿದೆ, ಅಥವಾ ಕೇಡಾಗಲಿದೆ ಎಂದೇ ಮನಸ್ಸು ಶಂಕಿಸಬಹುದು. ಇನ್ನು ಕೆಲವೊಮ್ಮೆ ಕಾರಣವಿಲ್ಲದೇ ಪಾದದ ಅಡಿಯಲ್ಲಿ ತುರಿಕೆ ಶುರುವಾಗಬಹುದು. ಯಾಕೆ ಹೀಗಾಗುತ್ತದೆ? ಇದಕ್ಕೆ ವೈಜ್ಞಾನಿಕ, ವೈದ್ಯಕೀಯ ಕಾರಣಗಳು ಏನೇ ಇರಲಿ, ಗರುಡಪುರಾಣ ಮತ್ತು ಜ್ಯೋತಿರ್ವಿಜ್ಞಾನ ಹೇಳುವ ಪ್ರಕಾರ, ನಮ್ಮನ್ನು ಅಗಲಿ ಹೋದವರು, ನಿಮಗೆ ತಮ್ಮ ಆತ್ಮೀಯತೆ- ಪ್ರೀತಿ ತಿಳಿಸಲು, ನಿಮ್ಮನ್ನು ತಲುಪಲು ಇಂಥ ದೈಹಿಕ ಸಂದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತವಂತೆ.

ಮೇಷ, ವೃಷಭ ರಾಶಿ
ಒಂದು ಕಣ್ಣು ತುರಿಸಲು ಆರಂಭವಾಗುತ್ತದೆ. ಇದು ದೈಹಿಕ ಅನಾರೋಗ್ಯವಲ್ಲ; ಇದ್ದಕ್ಕಿದ್ದಂತೆ ಎಲ್ಲ ಸರಿಯಿದ್ದಾಗಲೂ ಕಣ್ಣು ತುರಿಸುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಮಹಿಳೆಯರಲ್ಲಿ ಎಡಗಣ್ಣು ತುರಿಸಿದರೆ, ಆಕೆಯನ್ನು ಯಾರೋ ಹೊಗಳುತ್ತಾರೆಂದೂ, ಬಲಗಣ್ಣು ತುರಿಸಿದರೆ ಆಕೆಗೆ ಯಾರೋ ಆಕೆಯ ಒಳ್ಳೆಯದನ್ನು ಬಯಸುತ್ತಿಲ್ಲ ಎಂದು ಕೆಲವೆಡೆ ಅರ್ಥ ಮಾಡುತ್ತಾರೆ. ಪುರುಷರಿಗೆ ಅದು ವಿರುದ್ಧವಾಗಿ ಅಂದರೆ, ಎಡಗಣ್ಣು ತುರಿಸಿದರೆ ಯಾರೋ ನಿಮ್ಮ ಒಳ್ಳೆಯದು ಬಯಸುತ್ತಿಲ್ಲವೆಂದೂ ಬಲಗಣ್ಣು ತುರಿಸಿದರೆ, ಹೊಗಳುತ್ತಿದ್ದಾರೆಂದೂ ಅರ್ಥ. ಇದೊಂದು ಹಳೆಯ ನಂಬಿಕೆ. ಬಹಳಷ್ಟು ದೇಶಗಳಲ್ಲೂ ಇದನ್ನು ನಂಬುತ್ತಾರೆ. ಆದರೆ ಜ್ಯೋತಿರ್ವಿಜ್ಞಾನದಲ್ಲಿ ಇದು ಮೃತರ ಸಂದೇಶ. 

ಇದ್ದಕ್ಕಿದ್ದಂತೆ ವಿಚಿತ್ರ ಭಾವನೆಗಳ ಅನುಭವವಾಗಬಹುದು. ನೀವು ನಿಮ್ಮ ಆಫೀಸಿನಲ್ಲಿ ಏನೋ ಬ್ಯುಸಿಯಾಗಿ ಕೆಲಸ ಮಾಡುತ್ತಿರಬಹುದು ಅಥವಾ ಯಾವುದೋ ಪಾರ್ಟಿಯಲ್ಲಿ ನಗುತ್ತಾ ಕುಣಿಯುತ್ತಾ ಇರಬಹುದು. ಇದ್ದಕ್ಕಿದ್ದಂತೆಯೇ ಕಾರಣವಿಲ್ಲದೆ ಯಾವ ಸೂಚನೆಯೂ ಇಲ್ಲದೆ ನಿಮ್ಮ ಮೂಡ್‌ನಲ್ಲಿ ಬದಲಾವಣೆಯಾಗಬಹುದು. ತುಂಬ ಒತ್ತಡದಲ್ಲಿದ್ದು, ಕೆಲಸದ ಮೇಲೆ ಗಮನ ಕೊಡಲಾಗದಷ್ಟು ಸುಸ್ತಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಶಕ್ತಿ ಬಂದಂತೆನಿಸಿ ಒಂದೇ ಓಘದಲ್ಲಿ ಬಾಕಿಯಿರುವ ಅಷ್ಟೂ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ಅದೆಲ್ಲಿಂದಲೋ ಒಂದು ಚೈತನ್ಯ ತುಂಬಿದಂತಾಗಿ ಫ್ರೆಶ್‌ ಫೀಲ್‌ ಸಿಗುತ್ತದೆ. ಇದು, ನಿಮ್ಮನ್ನು ಪ್ರೀತಿಸುವ ಜೀವಚೈತನ್ಯ ನಿಮಗಾಗಿ ಮಿಡಿಯುತ್ತಿದೆ ಎಂದರ್ಥವಂತೆ.

ಮಿಥುನ, ಕಟಕ ರಾಶಿ
ಕಾರಣವಿಲ್ಲದೆ ರೋಮಾಂಚನವಾಗುವುದು ಇವರಲ್ಲಿ ಕಾಮನ್.‌ ಕೆಲವೊಮ್ಮೆ ಬೆನ್ನೆಲುಬಿನಲ್ಲಿ ಚಳಿ ಚಳಿ ಆದಂತಾಗಿ ರೋಮಾಂಚನವಾಗಬಹುದು. ನೀವು ಸುಮ್ಮನೆ ಕುಳಿತಿದ್ದರೂ, ಯಾರಾದರೂ ಬೇರೆಯವರು ನಿಮ್ಮಿಂದ ಆಕರ್ಷಿತರಾಗಿದ್ದಾರೆಂದಾದಲ್ಲಿ ನಿಮ್ಮನ್ನು ಅವರು ಮುಟ್ಟದೆಯೂ ನಿಮಗೆ ರೋಮಾಂಚನವಾದಲ್ಲಿ, ಆ ಆಕರ್ಷಿತಳಾ/ನಾದ ವ್ಯಕ್ತಿ ಮಾನಸಿಕವಾಗಿ ಬಹಳ ಸಾಮರ್ಥ್ಯವುಳ್ಳವಳು/ನು ಎಂದು ಅರ್ಥ. ಇದು ಸ್ವರ್ಗದಿಂದ ಬಂದ ಒಂದು ಸಂದೇಶವೂ ಇರಬಹುದು.

ಕಣ್ಣಿನಂತೆ ಕೆನ್ನೆಯೂ ಕೆಲವೊಮ್ಮೆ ಅದುರುತ್ತದೆ. ಕೆನ್ನೆ ಹಾಗೂ ಕಿವಿ ಕಾರಣವಿಲ್ಲದೆ ಕೆಂಪಗಾಗುತ್ತದೆ ಎಂದಾದಲ್ಲಿ ಯಾವುದೋ ಚೈತನ್ಯ ನಿಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದೆ ಎಂದು ಅರ್ಥವಂತೆ. ನೀವ್ಯಾರಿಗೋ ಬೈಯುವಾಗ ಅಥವಾ ಯಾರ ಜೊತೆಗೂ ರೊಮ್ಯಾಂಟಿಕ್‌ ಆಗಿ ಹರಟುವಾಗ ಕೆನ್ನೆ, ಕಿವಿ ಕೆಂಪಾಗುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾರಣವಿಲ್ಲದೆ ಆದರೆ, ಮಾತ್ರ ಇದು ಅನ್ವಯವಾಗುತ್ತದಂತೆ.

ಸಿಂಹ, ಕನ್ಯಾ ರಾಶಿ
ಪದೇ ಪದೇ ಬಿಕ್ಕಳಿಕೆ ಬಂದರೆ ಯಾರೋ ನಿಮ್ಮನ್ನು ಸರಿಯಾಗಿ ಬೈಯುತ್ತಿದ್ದಾರೆ ಎಂದು ಕೆಲವು ಕಡೆ ಅರ್ಥ. ಆದರೆ ಅದನ್ನು ಪರಿಹರಿಸಿಕೊಳ್ಳಲು ನೀವು ಕತ್ತು ಎತ್ತಿ ಮೇಲೆ ಆಕಾಶದ ಕಡೆ ನೋಡಬೇಕು ತಾನೆ? ಆಗ ಅಲ್ಲಿ ನಿಮಗೆ ನಿಮ್ಮ ಅಗಲಿದ ಆತ್ಮೀಯರು ಮಂಜುಮಂಜಾಗಿ ಕಾಣಿಸಬಹುದು.

ಇದ್ದಕ್ಕಿದ್ದಂತೆ ಸೀನು ಬರುವುದು ಕೂಡಾ ಇಂಥದ್ದರೊಂದಿಗೆ ತಾಳೆ ಮಾಡಲಾಗುತ್ತದೆ. ಇದು ಬಹಳ ದೇಶಗಳಲ್ಲಿ ನಂಬಿಕೊಂಡಿರುವ ಸಂಸ್ಕೃತಿ ಇದು. ಯಾರಾದರೂ ಕಾರಣವಿಲ್ಲದೆ ಸೀನಿದರೆ, ಯಾರೋ ನಿಮ್ಮನ್ನು ನೆನೆಸುತ್ತಿದ್ದಾರೆಂದೂ, ಹಲವು ದೇಶಗಳಲ್ಲಿ ಪಕ್ಕದಲ್ಲಿರುವ ವ್ಯಕ್ತಿಯ ಬಳಿ ಮೂರಂಕಿಯ ಸಂಖ್ಯೆಯನ್ನು ಕೇಳಿ ಲೆಕ್ಕಾಚಾರದ ಮೂಲಕ ಯಾವ ಅಕ್ಷರದ ಮಂದಿ ತನ್ನನ್ನು ನೆನೆಸಿಕೊಳ್ಳುತ್ತಿದ್ದಾರೆಂದು ಕಂಡುಹಿಡಿಯುವ ಸಂಪ್ರದಾಯವಿದೆಯಂತೆ. ಅಂದರೆ, ಉದಾಹರಣೆಗೆ ಪಕ್ಕದಲ್ಲಿರುವವರು ೨೪೬ ಎಂದರೆ, ಈ ಮೂರೂ ಅಂಕೆಗಳನ್ನು ಕೂಡಿಸಿ ಬರುವ ೧೨ ಸಂಖ್ಯೆಗೆ ಸರಿ ಸಮನಾದ ಇಂಗ್ಲಿಷ್‌ ಅಕ್ಷರ ಎಲ್‌ ಎಂದೂ ಎಲ್‌ ಅಕ್ಷರದ ವ್ಯಕ್ತಿ ನಿಮ್ಮನ್ನು ನೆನೆಸುತ್ತಿದ್ದಾರೆಂದೂ ಅರ್ಥವಂತೆ.

ತುಲಾ, ವೃಶ್ಚಿಕ ರಾಶಿ
ಇಬ್ಬರ ನಡುವೆ ಅದ್ಭುತವಾದ ಕನೆಕ್ಷನ್‌ ಇರುವ ಸಂದರ್ಭ ದೂರದಲ್ಲಿದ್ದರೂ ಪರಸ್ಪರ ಹತ್ತಿರವೇ ಇದ್ದಂತೆ ಭಾಸವಾಗುತ್ತದೆ. ದೂರದಲ್ಲಿರುವ ನಿಮ್ಮ ಪ್ರೀತಿಯ ವ್ಯಕ್ತಿಯ ಆಲೋಚನೆಗಳು ಅರಿವೇ ಇಲ್ಲದಂತೆ ಅದೇ ಸಂದರ್ಭ ನಿಮ್ಮನ್ನು ತಲುಪಿಬಿಡುತ್ತದೆ. ಇದೊಂದು ಅದ್ಭುತವಾದ ಅನುಭವ. ನಿಮ್ಮಿಂದ ಬಹುದೂರದಲ್ಲಿದ್ದರೂ ನಿಮ್ಮ ಆಲೋಚನೆಗಳೊಂದಿಗೆ ಆತ್ಮೀಯರ ಆತ್ಮ ಮಿಳಿತಗೊಳ್ಳಬಲ್ಲುದು.

ಯಾರೋ ಇದ್ದಕ್ಕಿದ್ದಂತೆ ಮುಟ್ಟಿದಂತೆ ಅನುಭವವಾಗುವುದೂ ಇದೆ. ಇದು ಯಾಕೆಂದರೆ, ನಿಮ್ಮನ್ನು ನೆನೆಸಿಕೊಳ್ಳುವ ವ್ಯಕ್ತಿಯ ಚೈತನ್ಯದ ಮಾನಸಿಕತೆ ಎಷ್ಟು ಶಕ್ತಿಯುತವಾದದ್ದೆಂದರೆ, ನಿಮ್ಮಿಬ್ಬರ ಪ್ರೀತಿ ಅಷ್ಟು ಗಟ್ಟಿಯಾಗಿರುವುದೆಂದಾದಲ್ಲಿ ಬಹಳ ಸಾರಿ ಹತ್ತಿರವಿಲ್ಲದಿದ್ದರೂ ಈ ರೀತಿ ಸ್ಪರ್ಶಾನುಭವವಾಗುವ ಸಾಧ್ಯತೆಗಳೂ ಇವೆಯಂತೆ.

ಈ ರಾಶಿಯವರ ಸುದ್ದಿಗೆ ಹೋಗ್ಬೇಡಿ, ಹಗೆತನ ಸಾಧಿಸಿ ನಿಮ್ಮನ್ನ ಹೈರಾಣಾಗಿಸ್ತಾರೆ

ಧನು, ಮಕರ ರಾಶಿ
ಇದ್ದಕ್ಕಿದ್ದಂತೆ ನಿಮ್ಮ ಪಾದದ ಅಡಿ ಕಾರಣವಿಲ್ಲದೇ ತುರಿಸಲು ಆರಂಭಿಸಬಹುದು. ಹೀಗಾದರೆ ನೀವು ನಿಮ್ಮ ಆತ್ಮೀಯರನ್ನು ಕಾಣಲು ಆ ಆತ್ಮೀಯರಿದ್ದಲ್ಲಿ, ಅಥವಾ ಅವರ ನೆನಪಿನ ಸಂಗತಿಗಳು ಇರುವ ಕಡೆಗೆ ಪಾದ ಬೆಳೆಸಬೇಕು ಎಂದರ್ಥ. ಅದು ಅವರು ವಾಸಿಸಿದ್ದ ಜಾಗವಿರಬಹುದು ಅಥವಾ ಸಮಾಧಿ ಸ್ಥಾನವೂ ಇರಬಹುದು.

ಇನ್ಯಾರೋ ನಿಮ್ಮನ್ನು ಎಷ್ಟು ಇಷ್ಟಪಡುತ್ತಿದ್ದಾರೆಂದರೆ, ಅವರು ನಿಮ್ಮ ಕನಸಿನಲ್ಲಿ ಆ ಮೂಲಕ ಬರುತ್ತಾರೆ. ನಿಮ್ಮ ಬಗೆಗಿನ ಅವರ ಯೋಚನೆಗಳು ಎಷ್ಟು ಗಾಢವಾಗಿರುತ್ತದೆಂದರೆ, ಇದ್ದಕ್ಕಿದ್ದಂತೆ ನಿಮಗರಿವೇ ಇಲ್ಲದೆ ನಿಮ್ಮಲ್ಲಿ ಅವರ ನೆನಪು, ಬಯಕೆ ಮೂಡುತ್ತದೆ. ಇದೂ ಒಂದು ಬಗೆಯ ಟೆಲಿಪತಿಯೇ. ಅಗಲಿದವರು ನಿಮ್ಮನ್ನು ಈ ಮೂಲಕ ಸ್ಪರ್ಶಿಸಲು ಬಯಸುತ್ತಿರಬಹುದು.


ಕುಂಭ, ಮೀನ ರಾಶಿ
ಇದ್ದಕ್ಕಿದ್ದಂತೆ ನೀವೊಬ್ಬರೇ ಇರುವಾಗ, ನಿಮ್ಮ ಅಕ್ಕಪಕ್ಕದಲ್ಲಿ ಯಾರೋ ಓಡಾಡಿದಂತೆ ಅನಿಸಬಹುದು. ತೀರಿಕೊಂಡವರ ಧ್ವನಿ ಕೇಳಿದಂತೆ ಅನುಭವ ಆಗಬಹುದು. ಗಾಬರಿಯಾಗಬೇಡಿ. ಅಲ್ಲಿ ಅವರ ಆತ್ಮ ಇರಲೂಬಹುದು, ಅಥವಾ ಇಲ್ಲದಿದ್ದರೂ ಇಂಥ ಸನ್ನೆಗಳು ನಿಮಗೆ ಕಾಣಿಸಿಕೊಳ್ಳಬಹುದು. ಕೆಲವರ ಆತ್ಮಚೈತನ್ಯ ಎಷ್ಟು ಶಕ್ತಿಶಾಲಿ ಎಂದರೆ ಅದು ಸಾವಿರಾರು ಮೈಲು ದೂರದಿಂದಲೂ ಇಂಥ ಸನ್ನೆಗಳನ್ನು ಕಳಿಸಲು ಶಕ್ತಿಶಾಲಿಯಾಗಿರುತ್ತದೆ. 

ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬರುತ್ತಿದೆಯಾ? ಮತ್ತು ಅದು ಪದೇ ಮರುಕಳಿಸುತ್ತಿದೆಯಾ? ಹಾಗಿದ್ದರೆ ತೀರಿಕೊಂಡ ನಿಮ್ಮ ಅಪ್ಪ ಅಥವಾ ಅಮ್ಮ ಅಥವಾ ಸಂಗಾತಿ (Companion) ನಿಮ್ಮನ್ನು ಆ ಮೂಲಕ ತಾಗಲು ಬಯಸಿದ್ದಾರೆ ಎಂದರ್ಥ ಮಾಡಿಕೊಳ್ಳಬೇಕು. ನೀವು ನೀರು ಕುಡಿದು ಬಿಕ್ಕಳಿಕೆ ಪರಿಹರಿಸಿಕೊಳ್ಳಬಹುದು. ಆದರೆ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುವುದು ಇನ್ನಷ್ಟು ಉತ್ತಮ ಉಪಾಯ.

ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಹೊಸ ಪ್ರಣಯದಾಟ!
 

Follow Us:
Download App:
  • android
  • ios