ರಾಶಿಗೂ ಸೂಟ್ ಆಗೋ ತರ ಟೀ ಇರುತ್ತೆ. ಅಷ್ಟಕ್ಕೂ ನೀವು ಯಾವ ಟೀ ಕುಡಿಯಬೇಕು? ಏನಿದು ವಿಚಿತ್ರ?

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಯ ಬಗ್ಗೆ ಅನೇಕ ಸಂಗತಿಯನ್ನು ಹೇಳಲಾಗಿದೆ. ಇದ್ರಲ್ಲಿ ಕೆಲವು ಮೋಜಿನ ಸಂಗತಿಗಳೂ ಇವೆ. ನಾವಿಂದು ಸ್ವಲ್ಪ ತಮಾಷೆಯಾಗಿ ಯಾವ ರಾಶಿಯವರು ಯಾವ ಟೀ ಸೇವನೆ ಮಾಡಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
 

How To Select Tea Based On Your Zodiac Sign Fun Activity roo

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಭಿನ್ನತೆಯಿರುತ್ತದೆ. ಆತನ ಜೀವನ, ವೃತ್ತಿ, ಕುಟುಂಬ, ವ್ಯಕ್ತಿತ್ವ ಎಲ್ಲವೂ ವಿಭಿನ್ನವಾಗಿರುತ್ತದೆ. ವ್ಯಕ್ತಿ ಹುಟ್ಟಿದ ದಿನ, ಸಮಯ ಆತನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಗ್ರಹ, ನಕ್ಷತ್ರ, ರಾಶಿ ವ್ಯಕ್ತಿಯ ಜೀವನವನ್ನು ನಿರ್ಧರಿಸುತ್ತದೆ. ಜಗತ್ತು ಎಷ್ಟೇ ಮುಂದುವರೆದ್ರೂ ಈಗ್ಲೂ ಜನರು ಈ ಗ್ರಹ – ನಕ್ಷತ್ರದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ನಿತ್ಯ ಭವಿಷ್ಯ ನೋಡುವ ಜನರಿದ್ದಾರೆ. ಶುಭ ಕೆಲಸದ ಸಮಯದಲ್ಲಿ ಜಾತಕ, ನಕ್ಷತ್ರವನ್ನು ನೋಡಿಯೇ ಕೆಲಸ ಶುರು ಮಾಡುವವರಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನಿಗೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ವಿವರವಾಗಿ ಹೇಳಲಾಗಿದೆ. ಯಶಸ್ಸಿಗೆ ಆತ ಯಾವ ಕೆಲಸ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ.  ಯಾವ ರಾಶಿಯ ಜನರು ಯಾವ ಬಟ್ಟೆ ಧರಿಸಬೇಕು, ಯಾವ ದಿನ ಯಾವ ದಿಕ್ಕಿನಲ್ಲಿ ಪ್ರಯಾಣ ಬೆಳೆಸಬೇಕು ಎಂಬುದರಿಂದ ಹಿಡಿದು ಯಾವ ಆಹಾರ ಸೇವನೆ ಮಾಡಬೇಕು ಎನ್ನುವವರೆಗೆ ಅನೇಕ ವಿಷ್ಯಗಳನ್ನು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದಲ್ಲಿ ಹೇಳಲಾಗುತ್ತದೆ. ಅನೇಕರು ಇದನ್ನು ಚಾಚುತಪ್ಪದೆ ಪಾಲಿಸುತ್ತಾರೆ. ನಾವಿಂದು ಯಾವ ರಾಶಿಯವರು ಯಾವ ಟೀ ಸೇವನೆ ಮಾಡಬೇಕು ಎಂಬುದನ್ನು ಹೇಳ್ತೇವೆ. 

ರಾಶಿಗನುಗುಣವಾಗಿ ಸೇವಿಸಿಈ ಟೀ (Tea) :
ಮೇಷ  ರಾಶಿ : ಮೇಷ  ರಾಶಿಯ ಜನರು ಮಚ್ಚಾ ಟೀ ಸೇವನೆ ಮಾಡ್ಬೇಕು. ಒಂದು ಕಪ್ ಗೆ ಮಚ್ಚಾ (Matcha) ಪೌಡರ್ ಹಾಕಿ. ಅದಕ್ಕೆ ನೀರು ಅಥವಾ ಬಿಸಿ ಹಾಲನ್ನು ಸೇರಿಸಿ ಸೇವನೆ ಮಾಡಿ.

ಮುಂದಿನ 6 ತಿಂಗಳಲ್ಲಿ ಈ ರಾಶಿ ಭವಿಷ್ಯ ಇದ್ದಕ್ಕಿದ್ದಂತೆ ಬದಲಾಗುತ್ತಾ? 30 ವರ್ಷಗಳ ನಂತರ ಇವರಿಗೆ ಹೆಚ್ಚೆ ಹೆಜ್ಜೆಗೂ ಯಶಸ್ಸು ಹಣ

ವೃಷಭ ರಾಶಿ : ವೃಷಭ ರಾಶಿಯವರು ರೂಯಿಬೋಸ್ ಚಹಾ ಕುಡಿಯಬೇಕು, ರೂಯಿಬೋಸ್ ಟೀ ಎಲೆಗಳನ್ನು ನೀರಿನಲ್ಲಿ 5-6 ನಿಮಿಷಗಳ ಕಾಲ ಕುದಿಸಿ. ಅದನ್ನು ಫಿಲ್ಟರ್ ಮಾಡಿ ನಂತರ ಬಿಸಿಯಾಗಿ ಸೇವಿಸಿ.

ಮಿಥುನ ರಾಶಿ : ಹಣ್ಣಿನ ಟೀಯನ್ನು ಈ ರಾಶಿಯವರು ಸೇವನೆ ಮಾಡಬೇಕು. ಒಂದು ಪಾತ್ರೆಗೆ ಟೀ ಎಲೆ, ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನಂತ್ರ ಅದಕ್ಕೆ ಒಣ ಹಣ್ಣುಗಳನ್ನು ಸೇರಿಸಿ ಕುದಿಸಿ ಕುಡಿಯಿರಿ.

ಕರ್ಕ ರಾಶಿ : ಕ್ಯಾಮೊಮೈಲ್ ಚಹಾವನ್ನು ಕರ್ಕ ರಾಶಿಯವರು ಸೇವನೆ ಮಾಡಬೇಕು. ಕ್ಯಾಮೊಮೈಲ್ ಹೂವನ್ನು ನೀರಿಗೆ ಹಾಕಿ, ಟೀ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಕುಡಿಯಿರಿ.

ಸಿಂಹ ರಾಶಿ : ಸಿಂಹ ರಾಶಿಯ ಜನರು ಮಸಾಲಾ ಟೀ ಸೇವನೆ ಮಾಡಬೇಕು. 

ಕನ್ಯಾ ರಾಶಿ : ಈ ರಾಶಿಯ ಜನರು ಬ್ಲಾಕ್ ಟೀ ಕುಡಿಯುವುದು ಒಳ್ಳೆಯದು. ಬ್ಲಾಕ್ ಟೀ ಎಲೆಯನ್ನು ನೀರಿನಲ್ಲಿ ಕುದಿಸಿ ನಂತ್ರ ಕುಡಿಯಬೇಕು,

ತುಲಾ ರಾಶಿ : ತುಲಾ ರಾಶಿಯ ಜನರು ಪುದೀನಾ ಟೀ ಕುಡಿಯಬೇಕು. ನೀರಿಗೆ ಪುದೀನಾ ಎಲೆ ಹಾಕಿ ಕುದಿಸಿ ನಿಂಬೆ ರಸ ಹಿಂಡಿ ಸೇವನೆ ಮಾಡಿ.

ವೃಶ್ಚಿಕ ರಾಶಿ : ಈ ರಾಶಿಯವರಿಗೆ ಶುಂಠಿ ಚಹಾ ಬೆಸ್ಟ್. ಟೀ ಎಲೆ ಮತ್ತು ಶುಂಠಿಯನ್ನು ನೀರಿಗೆ ಹಾಕಿ ಕುದಿಸಿ ಸೇವನೆ ಮಾಡಬೇಕು.

ಒಂದೂವರೆ ವರ್ಷಗಳ ನಂತರ ಶುಕ್ರಾದಿತ್ಯ ರಾಜ ಯೋಗ, ಏಪ್ರಿಲ್ 24ರಿಂದ ಈ ರಾಶಿ ಜೀವನದಲ್ಲಿ ಹೊಸ ತಿರುವು

ಧನು ರಾಶಿ : ಈ ರಾಶಿಯ ಜನರು ಸೆಂಚಾ ಟೀ ಕುಡಿಯಬೇಕು. ಸೆಂಚಾ ಟೀ ಎಲೆಯನ್ನು ಕುದಿಸಿ ಫಿಲ್ಟರ್ ಮಾಡಿ ಕುಡಿಯಬೇಕು.

ಮಕರ : ಕಪ್ಪು ರಾಶಿಯ ಜನರು ಬ್ಲಾಕ್ ಟೀ ಕುಡಿಯಿರಿ.

ಕುಂಭ : ಈ ರಾಶಿಯ ಜನರು ದಾಸವಾಳದ ಎಲೆ ಟೀ ಕುಡಿಯುವುದು ಒಳ್ಳೆಯದು. ದಾಸವಾಳದ ಎಲೆಯನ್ನು ಟೀ ಎಲೆ ಜೊತೆ ಕುದಿಸಿ ಕುಡಿಯಬೇಕು.

ಮೀನ ರಾಶಿ : ಇನ್ನು ಕೊನೆಯ ಮೀನ ರಾಶಿಯ ಜನರು ವೈಟ್ ಟೀ ಸೇವನೆ ಮಾಡಬೇಕು ಎನ್ನಲಾಗುತ್ತದೆ. ಆದ್ರೆ ಇದ್ಯಾವುದೂ ಜ್ಯೋತಷ್ಯ ಶಾಸ್ತ್ರದ ಜೊತೆ ಆಳವಾದ ಸಂಬಂಧ ಹೊಂದಿಲ್ಲ ಎಂಬುದನ್ನು ನೆನಪಿಡಿ. 

Latest Videos
Follow Us:
Download App:
  • android
  • ios