Asianet Suvarna News Asianet Suvarna News

Marriage Horoscope: ನಿಮ್ಮದು ಲವ್ ಮ್ಯಾರೇಜಾ, ಆರೇಂಜ್ಡ್ ಮ್ಯಾರೇಜಾ? ಜಾತಕ ಏನ್ ಹೇಳತ್ತೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕ ನೋಡಿ ಭವಿಷ್ಯದ ಅನೇಕ ವಿಷಯಗಳನ್ನು ತಿಳಿಯಬಹುದಾಗಿದೆ. ವಿದ್ಯೆ, ವಿವಾಹ, ಸಂತಾನ, ಅದೃಷ್ಟ, ಆರ್ಥಿಕ ಸ್ಥಿತಿ ಹೀಗೆ ಎಲ್ಲ ವಿಷಯಗಳನ್ನು ತಿಳಿಯಬಹುದು. ಜಾತಕದ ಪ್ರಕಾರ ಯಾರದು ಪ್ರೇಮ ವಿವಾಹ ಎಂಬುದನ್ನು ತಿಳಿಯೋಣ...

How to see love marriage in Horoscope
Author
Bangalore, First Published Jan 26, 2022, 9:58 AM IST

ಪ್ರೀತಿ (Love) ಎಲ್ಲರ ಜೀವನದಲ್ಲೂ (Life) ಇರುತ್ತದೆ. ಒಬ್ಬೊಬ್ಬರದ್ದು ಒಂದೊಂದು ರೀತಿ. ಇನ್ನು ಎಲ್ಲರಿಗೂ ಅವರ ಮದುವೆ (Marriage) ಬಗ್ಗೆ ಕನಸುಗಳು (Dream) ಇರುತ್ತವೆ. ಯಾವ ರೀತಿ ಮದುವೆ ಆಗಬೇಕು? ಹೇಗೆ ಆಗಬೇಕು? ಪ್ರೇಮ ವಿವಾಹವೋ? ಆರೇಂಜ್ಡ್ ಮ್ಯಾರೇಜಾ..? ಕೊನೆಗೆ ಏನಾಗುತ್ತದೆ ಎಂಬುದು ಇನ್ನೂ ಪ್ರೀತಿಯಲ್ಲಿ ಬೀಳದೇ ಇರುವವರ ಕುತೂಹಲವಾಗಿರುತ್ತದೆ (Curiosity). ಇನ್ನು ಪ್ರೀತಿಯಲ್ಲಿ ಬಿದ್ದವರಿಗೆ ತಮ್ಮ ಮದುವೆ ಇವರ ಜೊತೆಗೇ ಆಗುತ್ತದೆಯೋ ಇಲ್ಲವೇ ಎಂಬ ಆತಂಕ. ಬಹಳಷ್ಟು ಜನ ಪ್ರೇಮ ವಿವಾಹವನ್ನು (Love marriage) ಇಷ್ಟಪಡುವವರಿದ್ದಾರೆ. ತಾವು ಲವ್ ಮ್ಯಾರೇಜೇ ಆಗೋದು ಎನ್ನುವವರಿದ್ದಾರೆ. ಹೀಗೆ ಅವರು ಹೇಳುವುದಕ್ಕೂ ಕಾರಣವಿದೆ. 

ಪ್ರೀತಿ ಮಾಡಿ ಮದುವೆಯಾದರೆ ಇಬ್ಬರೂ ಅರ್ಥಮಾಡಿಕೊಂಡು (Understanding) ಬಾಳಬಹುದು. ಗುಣ, ಸ್ವಭಾವಗಳು, ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಇನ್ನು ಜಗಳಗಳು ಆದರೆ ಎಂಬ ಆತಂಕ ಬೇರೆ.  ಜ್ಯೋತಿಷ್ಯದಲ್ಲಿ ಇದಕ್ಕೆ ಪರಿಹಾರವೂ ಇದೆ. ಲವ್ ಮ್ಯಾರೇಜ್ ಯೋಗ ನಿಮಗಿ ಇದೆಯೇ ಅಥವಾ ನಿಮ್ಮರಿಗೆ ಇದೆಯೋ ಎಂದು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ, ಜಾತಕದ (Horoscope) ಮೂಲಕ ಪ್ರೇಮ ವಿವಾಹದ ಬಳಿಕದ ಜೀವನ ಹೇಗೆ ಎಂಬುದನ್ನೂ ತಿಳಿಯಬಹುದು. ಹೀಗಾಗಿ ಮೊದಲೇ ತಿಳಿದುಕೊಳ್ಳಿ, ಬಳಿಕ ಲವ್ ಮಾಡುವ ಬಗ್ಗೆ ಚಿಂತಿಸಬಹುದು. ಈಗಾಗಲೇ ಪ್ರೀತಿಯಲ್ಲಿದ್ದವರು ಹಾಗಾಗದಂತೆ ನೋಡಿಕೊಳ್ಳುವುದು ಉತ್ತಮ.

ವಿಶೇಷ ಯೋಗಗಳಿಂದ ಪ್ರೇಮ ವಿವಾಹ
ಜಾತಕದ ಲಗ್ನದಲ್ಲಿ ಇರುವ ಗ್ರಹ ಮತ್ತು ಐದನೇ ಮನೆಯ ಗ್ರಹ ಒಟ್ಟಿಗೆ ಇದ್ದರೆ, ಲಗ್ನದಲ್ಲಿರುವ ಗ್ರಹ ಮತ್ತು ಒಂಭತ್ತನೇ (Nine) ಮನೆಯ ಗ್ರಹ ಜೊತೆಗೆ ಸ್ಥಿತರಾಗಿದ್ದರೆ ಅಥವಾ ಒಬ್ಬರ ಮೇಲೊಬ್ಬರು ದೃಷ್ಟಿ ಬೀರಿದ್ದರೆ ಆಗ ಆಗುವುದು ಪ್ರೇಮ ವಿವಾಹ.

ಇದನ್ನು ಓದಿ: Numerology: ಪಾದಾಂಕ 5ರ ವ್ಯಕ್ತಿಗಳ 2022ರ ದಾಂಪತ್ಯ ರಹಸ್ಯ

ಜಾತಕದಲ್ಲಿ ಮಂಗಳ (Mars ) ಅಥವಾ ಚಂದ್ರ 5ನೇ ಮನೆಯ ಗ್ರಹದ ಜೊತೆ 5ನೇ ಮನೆಯಲ್ಲಿಯೇ ನೆಲೆಸಿದ್ದರೆ, ಆಗ ಏಳನೇ ಮನೆಯ ಗ್ರಹದ ಜೊತೆ ಏಳನೇ ಮನೆಯಲ್ಲಿಯೇ ಇದ್ದಾಗ ಲವ್ ಮ್ಯಾರೇಜ್ ಯೋಗ ಇರುತ್ತದೆ. ಶುಕ್ರ ಲಗ್ನದಿಂದ ಐದನೇ ಅಥವಾ ಏಳನೇ ಮನೆಯಲ್ಲಿ, ಇನ್ನು ಚಂದ್ರ ಲಗ್ನದಿಂದ ಐದನೇ ಮನೆಯಲ್ಲಿ ಸ್ಥಿತನಾಗಿದ್ದರೆ ಪ್ರೇಮ ವಿವಾಹ ಸಾಧ್ಯತೆ ಹೆಚ್ಚಿರುತ್ತದೆ.

ಜಾತಕದಲ್ಲಿ ಐದನೇ ಮತ್ತು ಏಳನೇ ಮನೆಯ ಗ್ರಹ, ಏಳನೇ ಮತ್ತು ಒಂಭತ್ತನೇ ಮನೆಯ ಗ್ರಹಗಳು ಜೊತೆಯಲ್ಲಿ ಸ್ಥಿತವಾಗಿದ್ದರೆ ಪ್ರೇಮ ವಿವಾಹದ ಯೋಗವು ಒಲಿಯಲಿದೆ. ಏಳನೇ ಮನೆಯಲ್ಲಿ ಕೇತು ಅಥವಾ ಶನಿ (Saturn) ಇದ್ದರೂ ಈ ಯೋಗವು ಉಂಟಾಗುತ್ತದೆ. 

ಜಾತಕದಲ್ಲಿ ಏಳನೇ ಮನೆಯ ಗ್ರಹವು ಏಳನೇ ಮನೆಯಲ್ಲಿಯೇ ಸ್ಥಿತನಾಗಿದ್ದರೆ ಆಗ ವಿವಾಹ ಯೋಗ ಬಲವಾಗಿರುತ್ತದೆ. ಅಂಥ ಸಂದರ್ಭದಲ್ಲಿ ಇಲ್ಲವೇ ಜಾತಕದಲ್ಲಿ ಏಳನೇ ಮನೆಯ ದೃಷ್ಟಿ, ಸಹಯೋಗ ಮತ್ತು ಸ್ಥಿತಿ ಶುಕ್ರನ (venus) ಜೊತೆ, ಹನ್ನೆರಡನೇ ಮನೆಯ ಜೊತೆ ಇದ್ದರೂ ಪ್ರೇಮ ವಿವಾಹವಾಗುವ ಸಂಭವವಿರುತ್ತದೆ.

ರಾಹು ದೃಷ್ಟಿ (Rahu drushti)
ರಾಹು ಲಗ್ನದಲ್ಲಿದ್ದು, ಏಳನೇ (ಸಪ್ತಮ) ಮನೆಯ ಮೇಲೆ ಗುರುವಿನ ದೃಷ್ಟಿ ಇದ್ದರೆ ಅಂಥವರಿಗೆ ಪ್ರೇಮ ವಿವಾಹದ ಯೋಗವಿರುತ್ತದೆ. ಜಾತಕದಲ್ಲಿ ಮಂಗಳ ಗ್ರಹದ ಸಂಬಂಧ ಶನಿ, ರಾಹುವಿನೊಂದಿಗೆ ಇದ್ದರೆ ಅಥವಾ ಈ ಗ್ರಹಗಳ ಸಹಯೋಗವಿದ್ದರೆ ಪ್ರೇಮ ವಿವಾಹವಾಗುವ ಸಾಧ್ಯತೆ ಇರುತ್ತದೆ. ಜಾತಕದಲ್ಲಿ ಈ ಮೂರು ಗ್ರಹಗಳನ್ನು ಹೆಚ್ಚು ಅಶುಭ (Bad) ಮತ್ತು ಪಾಪಿ ಗ್ರಹ ಎಂದು ಹೇಳಲಾಗುತ್ತದೆ. ಈ ಮೂರು ಗ್ರಹಗಳಲ್ಲಿ ಯಾವುದಾದರೂ ಒಂದು ಗ್ರಹ ವಿವಾಹ ಮನೆಯಲ್ಲಿದ್ದರೆ ಅಥವಾ ಆ ಮನೆಯ ಮೇಲೆ ದೃಷ್ಟಿ ಬೀರಿದ್ದರೆ ಅಂಥವರು ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಸಂಭವ ಹೆಚ್ಚಿರುತ್ತದೆ. 

ಇದನ್ನು ಓದಿ: No Moon Day: ಅಮಾವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರಬೇಡಿ..

ಜಾತಕದಲ್ಲಿ ಸಪ್ತಮದಲ್ಲಿ ರಾಹು, ಶುಕ್ರ ಅಥವಾ ಶನಿಯ ದೃಷ್ಟಿ ಬಿದ್ದಿದ್ದರೆ ಅಂತಹ ಜಾತಕದವರು ಲವ್ ಮ್ಯಾರೇಜ್ ಆಗೋದೇ ಹೆಚ್ಚು. ಐದನೇ ಮನೆಯಲ್ಲಿ ಇರುವ ಗ್ರಹದ ಉಚ್ಛ ರಾಶಿಯಲ್ಲಿ ರಾಹು ಅಥವಾ ಕೇತು ಇದ್ದರೂ ಪ್ರೇಮ ವಿವಾಹವಾಗೋದು ನಿಶ್ಚಿತ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ.

Follow Us:
Download App:
  • android
  • ios