Asianet Suvarna News Asianet Suvarna News

Astrology Tips: ಖಿನ್ನತೆ ಒತ್ತಡ ದೂರ ಮಾಡುತ್ತೆ ಶ್ರಾವಣದಲ್ಲಿ ಮಾಡೋ ಈ ಕೆಲಸ!

ಶ್ರಾವಣ ಮಾಸದಲ್ಲಿ ಕಷ್ಟವನ್ನು ಪರಿಹರಿಸುವಂತೆ ಶಿವನನ್ನು ಬೇಡಿಕೊಳ್ತೇವೆ. ಬಡತನ, ದೈಹಿಕ ರೋಗ ನಿವಾರಣೆ ಮಾಡುವಂತೆ ಪ್ರಾರ್ಥಿಸುವ ಭಕ್ತರು ಮಾನಸಿಕ ನೆಮ್ಮದಿ ಮರೆತಿರುತ್ತಾರೆ. ಸುಖ, ಸಂತೋಷಕ್ಕೆ ಬಹಳ ಮುಖ್ಯವಾಗಿರುವ ಮಾನಸಿಕ ನೆಮ್ಮದಿ ಸಿಗಬೇಕೆಂದ್ರೆ ನೀವು ಶ್ರಾವಣ ಮಾಸದಲ್ಲಿ ಏನು ಮಾಡ್ಬೇಕು ಗೊತ್ತಾ?
 

How To Relieve Stress And Anxiety In Sawan Month roo
Author
First Published Jul 29, 2023, 4:32 PM IST | Last Updated Jul 29, 2023, 4:32 PM IST

ಟೆನ್ಷನ್ ಯಾರಿಗೆ ಇಲ್ಲ ಹೇಳಿ? ಈಗಿನ ದಿನಗಳಲ್ಲಿ ಮಗು ಹುಟ್ಟುತ್ತಲೇ ಒಂದಿಷ್ಟು ಒತ್ತಡವನ್ನು ಮೈಮೇಲೆ ಎಳೆದುಕೊಂಡು ಬರುತ್ತೆ ಅಂದ್ರೆ ಅತಿಶಯೋಕ್ತಿಯಾಗದು. ಭೂಮಿಗೆ ಬಂದಾಗಿನಿಂದ ಇಹಲೋಕ ತ್ಯಜಿಸುವವರೆಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡಕ್ಕೆ ಒಳಗಾಗಿರುತ್ತಾರೆ. ಮಕ್ಕಳಿಗೆ ಕಲಿಕೆ ಟೆನ್ಷನ್ ಆದ್ರೆ ಪಾಲಕರಿಗೆ ಮತ್ತೊಂದು, ವೃದ್ಧರಿಗೆ ಇನ್ನೊಂದು. ಒಟ್ಟಿನಲ್ಲಿ ಇಡೀ ಕುಟುಂಬದ ಎಲ್ಲ ಸದಸ್ಯರೂ ಟೆನ್ಷನ್ ನಲ್ಲಿರುತ್ತಾರೆ. ಈ ಒತ್ತಡ, ಖಿನ್ನತೆಯಿಂದ ಹೊರಗೆ ಬರೋದು ಸುಲಭವಲ್ಲ. ಮನೆಯಲ್ಲಿ ಒಬ್ಬರು ಇದ್ರಿಂದ ಬಳಲುತ್ತಿದ್ದರೂ ಅವರನ್ನು ಸಂಭಾಳಿಸಲು ಇಡೀ ಕುಟುಂಬ ಒತ್ತಡಕ್ಕೆ ಬೀಳುತ್ತದೆ.  ಶ್ರಾವಣ ಮಾಸದಲ್ಲಿ ಮಾಡುವ ಕೆಲಸಗಳಿಂದ ನೀವು ಈ ಖಿನ್ನತೆ, ಒತ್ತಡದಿಂದ ಸುಲಭವಾಗಿ ಹೊರಗೆ ಬರಬಹುದು.

ಶ್ರಾವಣ (Shravan) ಮಾಸದಲ್ಲಿ ಈಶ್ವರನ ಆರಾಧನೆ ನಡೆಯುತ್ತದೆ. ಶಿವ (Shiva) ನಿಗೆ ಭಕ್ತರು ಭಕ್ತಿಯಿಂದ ಪೂಜೆ ಮಾಡ್ತಾರೆ. ಈಶ್ವರನ ಕೃಪೆಗೆ ಪಾತ್ರರಾಗಲು ಈಶ್ವರನಿಗೆ ಇಷ್ಟವಾದ ವಸ್ತುವನ್ನು ಅರ್ಪಿಸಲಾಗುತ್ತದೆ. ಜಲಾಭಿಷೇಕ, ಬಿಲ್ವಪತ್ರೆ ಅರ್ಪಣೆ ಸೇರಿದಂತೆ ಶಿವನ ಜಪವನ್ನು ಭಕ್ತರು ಮಾಡ್ತಾರೆ. ನೀವು ಒತ್ತಡದಲ್ಲಿದ್ದು, ಖಿನ್ನತೆ (Depression) ಯಿಂದ ದೂರ ಸರಿಯಬೇಕೆಂದ್ರೆ ಶ್ರಾವಣ ಮಾಸದಲ್ಲಿ ಕೆಲವೊಂದು ಉಪಾಯಗಳನ್ನು ಪಾಲಿಸಬೇಕು. ಅದು ಯಾವುದೆಂದು ನಾವು ಹೇಳ್ತೇವೆ. 

ಹೆಂಡತಿಯ ವಿಚಾರದಲ್ಲಿ ಈ ತಪ್ಪು ಮಾಡಬೇಡಿ; ಜೀವನವಿಡೀ ಪಶ್ಚಾತ್ತಾಪ ತಪ್ಪಿದ್ದಲ್ಲ..!

ತೆಂಗಿನಕಾಯಿ ದಾನ ಮಾಡಿ : ಯಾವುದೋ ಕಾರಣಕ್ಕೆ ಮಾನಸಿಕ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ನೆಮ್ಮದಿ ಇಲ್ಲವೆಂದಾದ್ರೆ, ಅಜ್ಞಾತ ಭಯ ನಿಮ್ಮನ್ನು ಕಾಡ್ತಿದ್ದರೆ ಅಭದ್ರತೆಯ ಭಾವದಿಂದ ನೀವು ಬಳಲುತ್ತಿದ್ದರೆ ಇದ್ರಿಂದ ದೂರವಾಗಲು ಶ್ರಾವಣ ಮಾಸದಲ್ಲಿ ನೀವು ಮಾಡುವ ಕೆಲಸ ಮಹತ್ವ ಪಡೆಯುತ್ತದೆ. ನೀವು ಶ್ರಾವಣ ಮಾಸದ ಯಾವುದೇ ಬುಧವಾರ ಒಂದು ತೆಂಗಿನ ಕಾಯಿಯನ್ನು ದಾನ ಮಾಡಬೇಕು. ಬುಧವಾರದಂತೆ ತೆಂಗಿನ ಕಾಯಿಯನ್ನು ನೀಲಿ ವಸ್ತ್ರದಲ್ಲಿ ಸುತ್ತಿ, ಅದನ್ನು ಭಿಕ್ಷುಕನಿಗೆ ದಾನ ಮಾಡಬೇಕಾಗುತ್ತದೆ. ನೀವು ಹೀಗೆ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. 

ಕೆಂಪು ಮೆಣಸಿನ ಕಾಯಿ ಬೀಜದಲ್ಲಿದೆ ಉದ್ವಿಗ್ನತೆ ಕಡಿಮೆ ಮಾಡುವ ಶಕ್ತಿ :  ನೀವು ಒಂದಿಲ್ಲೊಂದು ಕಾರಣಕ್ಕೆ ಉದ್ವಿಗ್ನತೆಗೆ ಒಳಗಾಗ್ತಿದ್ದರೆ ಕೆಂಪು ಮೆಣಸಿನಕಾಯಿ ಬೀಜವನ್ನು ತೆಗೆದುಕೊಳ್ಳಿ. ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ನಾಲ್ಕು ಕೆಂಪು ಮೆಣಸಿನ ಬೀಜವನ್ನು ಹಾಕಿ. ನಂತ್ರ ಇದನ್ನು ನಿಮ್ಮ ಸುತ್ತ ಏಳು ಬಾರಿ ಸುತ್ತಿ ಅದನ್ನು ನಿಮ್ಮ ಮನೆಯ ಹೊರಗಿನ ರಸ್ತೆಗೆ ಎಸೆದು ಬನ್ನಿ. ನೀವು ಶ್ರಾವಣ ಮಾಸದಲ್ಲಿ ಈ ಕೆಲಸ ಮಾಡಿದ್ರೆ ಶೀಘ್ರ ಪರಿಹಾರ ಕಂಡುಕೊಳ್ಳಬಹುದು.

ಹನುಮಂತನ ಆರಾಧನೆ : ಶ್ರಾವಣ ಮಾಸದಲ್ಲಿ ಮಾತ್ರವಲ್ಲ ನೀವು ಪ್ರತಿ ದಿನ ಹನುಮಾನ್ ಚಾಲೀಸಾ ಪಠಣೆ ಮಾಡಿದ್ರೆ ಸಾಕಷ್ಟು ಲಾಭವಿದೆ. ಇದ್ರಿಂದ ಧೈರ್ಯ ಬರುವುದಲ್ಲದೆ ನಿಮ್ಮ ಮಾನಸಿಕ ಸಮಸ್ಯೆ ಬೇಗ ಕಡಿಮೆಯಾಗುತ್ತದೆ. ಪ್ರತಿ ದಿನ ಸಾಧ್ಯವಿಲ್ಲ ಎನ್ನುವವರು ಶ್ರಾವಣ ಮಾಸದಲ್ಲಿ ಅಥವಾ ಶನಿವಾರದಂದು ಹನುಮಾನ್ ಚಾಲೀಸಾ ಪಠಣೆ ಮಾಡಿ. ಅಲ್ಲದೆ ಶನಿವಾರದಂದು ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಎಣ್ಣೆಯನ್ನು ಅರ್ಪಿಸಿ. ಅಲ್ಲದೇ ಶನಿವಾರ ಬಡವರಿಗೆ ಒಂದು ಜೊತೆ ಚಪ್ಪಲಿಯನ್ನು ದಾನ ಮಾಡಿದ್ರೂ ನಿಮಗೆ ಇದ್ರಿಂದ ಅಪಾರ ಲಾಭವಿದೆ.

ಸಾಮುದ್ರಿಕ ಶಾಸ್ತ್ರ: ಕಣ್ಣಿನ ಬಣ್ಣ ವ್ಯಕ್ತಿತ್ವ ಹೇಳುತ್ತೆ, ನಿಮ್ಮ ಸ್ವಭಾವವೇನು?

ಕರ್ಪೂರದಲ್ಲೂ ಇದೆ ಪರಿಹಾರ : ಭಯ, ಚಿಂತೆ ಮತ್ತು ಮಾನಸಿಕ ತೊಂದರೆಯಿಂದ ನೀವು ಬಳಲುತ್ತಿದ್ದರೆ  ಮಲಗುವ ರೂಮಿನಲ್ಲಿ ಕರ್ಪೂರದ ದೀಪವನ್ನು ಹಚ್ಚಬೇಕು. ಮನೆಯಲ್ಲಿ ಕರ್ಪೂರದ ದೀಪವಿಲ್ಲದಿದ್ದರೆ, ಯಾವುದೇ ದೀಪವನ್ನು ನೀವು ಹಚ್ಚಬಹುದು. ಇದು ಎಲ್ಲಾ ರೀತಿಯ ಭಯವನ್ನು ಕಡಿಮೆ ಮಾಡುತ್ತದೆ.  

ಜ್ಞಾನ ಮುದ್ರೆ : ನೀವು ಶ್ರಾವಣ ಮಾಸದಲ್ಲಿ ಜ್ಞಾನ ಮುದ್ರೆ ಹಾಕಿದ್ರೂ ಸಾಕಷ್ಟು ಲಾಭವಿದೆ. ಜ್ಞಾನ ಮುದ್ರೆಯನ್ನು ನೀವು 10 ನಿಮಿಷ ಮಾಡಬೇಕಾಗುತ್ತದೆ. 

Latest Videos
Follow Us:
Download App:
  • android
  • ios