ಯಾರೋ ಮಾಟಮಂತ್ರ ಮಾಡಿಸಿದ್ದಾರೆಂದು ಬೆಚ್ಚಿದ್ದೀರಾ? ಹೀಗೆ ನಿಮ್ಮನ್ನು ರಕ್ಷಿಸಿಕೊಳ್ಳಿ..
ಕೆಲವೊಮ್ಮೆ ಯಾರೋ ನಿಮ್ಮ ಮನೆಯ ಮುಂದೆ ಅರಿಶಿನ ಕುಂಕುಮ ಬೆರೆತ ನಿಂಬೆಹಣ್ಣು ಎಸೆಯಬಹುದು. ಅಥವಾ ಕೂದಲು, ಒಡೆದ ಬಳೆ ಚೂರು, ಬಟ್ಟೆಯನ್ನೊಳಗೊಂಡ ಗಂಟನ್ನು ಮನೆಯ ಮೂಲೆಯಲ್ಲಿರಿಸಬಹುದು. ಅಂಥ ಮಾಟಮಂತ್ರ ನಡೆದಾಗ ಎದುರಿಸುವ ವಿಧಾನಗಳೇನು?
ಇದ್ದಕ್ಕಿದ್ದಂತೆ ಮನೆಯ ಮುಂದೆ ಬಂದು ಬೀಳುವ ಕೂದಲು, ಒಡೆದ ಬಳೆ ಚೂರು, ಬಟ್ಟೆಯನ್ನೊಳಗೊಂಡ ಗಂಟು ಭಯ ಹುಟ್ಟಿಸುತ್ತದೆ. ಓಕುಳಿ ನೀರನ್ನು ಮನೆಯೆದುರು ಚೆಲ್ಲಿ ದಿಗಿಲು ಹುಟ್ಟಿಸುವವರಿದ್ದಾರೆ. ಅಥವಾ ಅರಿಶಿನ ಕುಂಕುಮದ ನೀರನ್ನು ಹೊಂದಿದ ನಿಂಬೆಹಣ್ಣು ನಿಮ್ಮ ನಿದ್ದೆ ಕೆಡಿಸಬಹುದು. ಇವೆಲ್ಲವೂ ಮಾಟಮಂತ್ರದ ಮಾರ್ಗಗಳು. ನಿಮ್ಮ ನೆಮ್ಮದಿ, ಸಂತೋಷ, ಬೆಳವಣಿಗೆ ಹಾಳು ಮಾಡಬೇಕೆಂದೇ ಬಯಸುವ ಅತೃಪ್ತ ಆತ್ಮಗಳು ಮಾಡಿಸುವ ಕೃತ್ಯ.
ಮತ್ತೊಬ್ಬರನ್ನು ಹಾಳು ಮಾಡುವ ಉದ್ದೇಶದಿಂದಲೇ ಮಾಡುವ ಇಂಥ ಕೆಲಸಗಳು ಸರ್ವೇ ಸಾಮಾನ್ಯವಾಗಿವೆ ಎಂಬುದು ಬೇಸರದ ಸಂಗತಿ. ಹೀಗಾದಾಗ ಸರಣಿಯಲ್ಲಿ ದುಃಖದ, ನೋವಿನ, ನಷ್ಟದ ಸಂಗತಿಗಳು ಘಟಿಸಲಾರಂಭಿಸಿ ನಿಮ್ಮನ್ನು ಬೆಚ್ಚಿ ಬೀಳಿಸಬಹುದು. ಒಂದು ವೇಳೆ ನೀವೂ ಈ ಸಮಸ್ಯೆ ಎದುರಿಸುತ್ತಿದ್ದರೆ ಈ ದುಷ್ಟ ಶಕ್ತಿಗಳು ನಿಮಗೆ ಹಾನಿಯಾಗದಂತೆ ತಡೆಯಲು ಮಾರ್ಗಗಳಿವೆ ಮತ್ತು ಅವುಗಳು ಏನೆಂದು ನೀವು ತಿಳಿದುಕೊಳ್ಳಬೇಕು.
ಮಾಟಮಂತ್ರದ ವಿರುದ್ಧ ಪರಿಹಾರಗಳು..
ಉಪ್ಪುನೀರಿನ ಪರಿಹಾರ
ಉಪ್ಪು ನೀರಿನ ಪರಿಹಾರವು ಹಾನಿಕಾರಕ ಕಾಣದ ಕಪ್ಪು ಶಕ್ತಿಯನ್ನು ಪ್ರತಿರೋಧಿಸಲು ಮತ್ತು ನಮ್ಮ ವ್ಯವಸ್ಥೆಯಿಂದ ಹೊರಹಾಕಲು ಸರಳವಾದ ಆದರೆ ಶಕ್ತಿಯುತವಾದ ಆಧ್ಯಾತ್ಮಿಕ ಪರಿಹಾರವಾಗಿದೆ. ಪ್ರತಿ ದಿನ ಉಪ್ಪು ನೀರಿನಿಂದ ಮನೆ ಒರೆಸುವ ಅಭ್ಯಾಸ ಮಾಡಿಕೊಳ್ಳಿ. ಉಪ್ಪುನೀರು ಸ್ವತಃ ಕಪ್ಪು ಶಕ್ತಿಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಇದರಿಂದ ಆಲಸ್ಯ, ಯೋಚಿಸಲು ಅಸಮರ್ಥತೆ, ಅತಿಯಾದ ಯೋಚನೆಗಳು, ಕೋಪ, ಒತ್ತಡ, ದ್ವೇಷ, ಕಾಯಿಲೆಗಳು ದೂರವಾಗುತ್ತವೆ.
Vastu Tips: ಎದ್ ಕೂಡ್ಲೇ ಇದ್ನೆಲ್ಲ ನೋಡ್ಬಿಟ್ಟು ದಿನ ಹಾಳ್ ಮಾಡ್ಕೋಬೇಡಿ ಸ್ವಾಮಿ!
ಆಧ್ಯಾತ್ಮಿಕ ಶೀಲ್ಡ್ ಅನ್ನು ಬಲಪಡಿಸಿ
ನಿಮ್ಮ ಆಧ್ಯಾತ್ಮಿಕ ಗುರಾಣಿಯನ್ನು ನಿಯಮಿತವಾಗಿ ಬಲಪಡಿಸದಿದ್ದರೆ, ನೀವು ನಕಾರಾತ್ಮಕ ಶಕ್ತಿ ಮತ್ತು ಕಪ್ಪು ಮ್ಯಾಜಿಕ್ ದಾಳಿಗಳಿಗೆ ನಿಮ್ಮನ್ನು ತೆರೆದಿಡುತ್ತೀರಿ. ಮನೆಯನ್ನು ಪ್ರತಿ ದಿನ ಸ್ವಚ್ಛಗೊಳಿಸಿ. ಧ್ಯಾನ ಮತ್ತು ಆಧ್ಯಾತ್ಮಿಕ ಅಥವಾ ಸ್ಪೂರ್ತಿದಾಯಕ ಓದುವಿಕೆಯೊಂದಿಗೆ ನಿಮ್ಮ ಮನಸ್ಸನ್ನು ತೆರವುಗೊಳಿಸಿ. ಮನೆಯಲ್ಲಿ ಧೂಪ ಸುಡುವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದಷ್ಟು ದೃಢ ಮನಸ್ಸನ್ನು ಹೊಂದಲು ಧ್ಯಾನದ ಸಹಾಯ ಪಡೆಯಿರಿ.
ಆಕರ್ಷಣೆಯ ನಿಯಮ
ನಕಾರಾತ್ಮಕ ಆಲೋಚನೆಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಎಂದರೆ ಯಾರಾದರೂ ತಮ್ಮ ಎಲ್ಲಾ ಆಲೋಚನೆಗಳನ್ನು ನಿಮಗೆ ಸಂಭವಿಸುವ ಕೆಟ್ಟ ವಿಷಯಗಳ ಮೇಲೆ ಕೇಂದ್ರೀಕರಿಸುವುದು. ನೀವು ಮಾಡಬೇಕಾಗಿರುವುದು ಒಳ್ಳೆಯ ವಿಷಯಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದು.ನೀವು ಕೇವಲ ಒಳಿತನ್ನೇ ಯೋಚಿಸಿ, ಒಳಿತನ್ನೇ ಮಾಡಿದಷ್ಟೂ ಒಳಿತನ್ನು ಆಕರ್ಷಿಸುವ ಸಾಮರ್ಥ್ಯ ಹೊಂದುತ್ತೀರಿ. ಹೆಚ್ಚು ನಗುವ ಅಭ್ಯಾಸ ಇಟ್ಟುಕೊಂಡಷ್ಟೂ ನಗು ತರಿಸುವ ವಿಷಯಗಳು ನಿಮ್ಮ ಬಳಿ ಸುಳಿಯುತ್ತವೆ. ಹೀಗಿದ್ದಾಗ ಬ್ಲ್ಯಾಕ್ ಮ್ಯಾಜಿಕ್ ನಿಮ್ಮ ಮೇಲೆ ಕೆಲಸ ಮಾಡಲಾರದು.
ತಾಯಿತದ ಶಕ್ತಿ
ತಾಯಿತವು ಒಂದು ಆಭರಣ ಅಥವಾ ವಸ್ತುವಾಗಿದ್ದು ಅದು ನಕಾರಾತ್ಮಕ ಶಕ್ತಿ ಮತ್ತು ಮಾಟಮಂತ್ರವನ್ನು ರಕ್ಷಣಾತ್ಮಕವಾಗಿ ಹಿಮ್ಮೆಟ್ಟಿಸುತ್ತದೆ. ತಾಯತಗಳನ್ನು ಆಭರಣವಾಗಿ ಇಲ್ಲವೇ ನಿಮ್ಮ ಮನೆ ಅಥವಾ ಕಚೇರಿಯ ಅಲಂಕಾರದ ಭಾಗವಾಗಿ ಬಳಸಿ. ಮಾಟಮಂತ್ರವನ್ನು ಹಿಮ್ಮೆಟ್ಟಿಸಲು ತಾಯತಗಳ ಶಕ್ತಿಯನ್ನು ನೀವು ನಂಬುವುದು ಬಹಳ ಮುಖ್ಯ. ಇದಲ್ಲದೇ ಮನೆಯಲ್ಲಿ ಪ್ರತಿ ನಿತ್ಯ ಪೂಜೆ, ಧಾರ್ಮಿಕ ಚಿತ್ರಗಳನ್ನು ಹೊಂದಿ.
ಜಪ ಮತ್ತು ಪ್ರಾರ್ಥನೆ
ಜಪ ಮತ್ತು ಪ್ರಾರ್ಥನೆಯು ದುಷ್ಟಶಕ್ತಿಗಳಿಂದ ನಮ್ಮ ಅಸ್ತಿತ್ವದ ವಿವಿಧ ಭಾಗಗಳಲ್ಲಿ ಉತ್ಪತ್ತಿಯಾಗುವ ಕಪ್ಪು ಶಕ್ತಿಯ ಕಣಗಳ ಸ್ಥಳಾಂತರ ಮತ್ತು ವಿಘಟನೆಗೆ ಕಾರಣವಾಗುತ್ತದೆ. ದೇವರಿಗಿಂತ ಹೆಚ್ಚಿನ ಶಕ್ತಿ ಇಲ್ಲ ಎಂಬುದನ್ನು ನೆನಪಿಡಿ ಮತ್ತು ದೇವರು ನಿಮಗಾಗಿ ಏನನ್ನಾದರೂ ಯೋಜಿಸಿದ್ದರೆ, ಅದು ನಿಮ್ಮನ್ನು ತಲುಪುವುದನ್ನು ತಡೆಯಲು ಈ ವಿಶ್ವದಲ್ಲಿ ಯಾವುದರಿಂದಲೂ ಸಾಧ್ಯವಿಲ್ಲ.