Asianet Suvarna News Asianet Suvarna News

Surya Gochar 2023: ವೃಷಭ ಸಂಕ್ರಾಂತಿಯ ದಿನ ಈ ಕೆಲಸ ಮಾಡಿದ್ರೆ ಹೆಚ್ಚುತ್ತೆ ನಿಮ್ಮ ಖ್ಯಾತಿ

ವೃಷಭ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಮೆಚ್ಚಿಸುವ ಮೂಲಕ, ಖ್ಯಾತಿ ಮತ್ತು ಗೌರವವನ್ನು ಪಡೆಯಬಹುದು. ಈ ದಿನ ನೀವು ಸೂರ್ಯ ದೇವರನ್ನು ಮೆಚ್ಚಿಸಲು ಏನು ಮಾಡಬೇಕು ಎಂದು ಇಲ್ಲಿ ತಿಳಿಯಿರಿ.

how to please Sun God on Vrishabh Sankranti to get the benefit of respect skr
Author
First Published May 14, 2023, 11:45 AM IST | Last Updated May 14, 2023, 11:45 AM IST

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಿಸಿದಾಗ ಅದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಒಂದು ವರ್ಷದಲ್ಲಿ 12 ಸಂಕ್ರಾಂತಿಗಳಿವೆ ಮತ್ತು ಪ್ರತಿ ಸಂಕ್ರಾಂತಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಂಕ್ರಾಂತಿಯ ಸಮಯವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಪಿತೃ ತರ್ಪಣ, ದಾನ, ಧರ್ಮ ಮತ್ತು ಸ್ನಾನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಸೂರ್ಯ ದೇವನು ಮೇಷ ರಾಶಿಯಲ್ಲಿದ್ದು ಮೇ 15ರಂದು ವೃಷಭ ರಾಶಿಗೆ ಹೋಗುತ್ತಾನೆ. ವೃಷಭ ರಾಶಿಯಲ್ಲಿ ಸೂರ್ಯನ ಪ್ರವೇಶವನ್ನು ವೃಷಭ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ವೃಷಭ ಸಂಕ್ರಾಂತಿಯ ಸಮಯದಲ್ಲಿ ಸೂರ್ಯನ ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನವು ಮಂಗಳಕರವಾಗಿದ್ದರೆ, ಜೀವನದಲ್ಲಿ ಎಲ್ಲಾ ರೀತಿಯ ಸಂತೋಷಗಳು ಪ್ರಾಪ್ತಿಯಾಗುತ್ತವೆ. ವೃಷಭ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಪ್ರಸನ್ನಗೊಳಿಸುವುದರಿಂದ ವ್ಯಕ್ತಿಗೆ ಕೀರ್ತಿ ಮತ್ತು ಗೌರವ ದೊರೆಯುತ್ತದೆ. ವೃಷಭ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಹೇಗೆ ಮೆಚ್ಚಿಸಬೇಕು ಎಂದು ತಿಳಿಯೋಣ.

ವೃಷಭ ಸಂಕ್ರಾಂತಿಯಂದು ಸೂರ್ಯ ದೇವರನ್ನು ಮೆಚ್ಚಿಸುವುದು ಹೀಗೆ..

  • ಈ ದಿನ ಸೂರ್ಯ ದೇವರ ವಿಶೇಷ ಪೂಜೆಯನ್ನು ಮಾಡಬೇಕು. ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಸೂರ್ಯ ನಾರಾಯಣನ ಕೃಪೆ ಉಳಿಯುತ್ತದೆ. 
  • ಈ ದಿನ ಸೂರ್ಯನನ್ನು ಪೂಜಿಸುವುದರಿಂದ ಸೂರ್ಯನಿಗೆ ಸಂಬಂಧಿಸಿದ ದೋಷಗಳು ದೂರವಾಗುತ್ತವೆ. 
  • ಈ ದಿನದಲ್ಲಿ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ಮಂತ್ರವನ್ನು ಪಠಿಸುವುದರಿಂದಲೂ ತುಂಬಾ ಫಲ ಸಿಗುತ್ತದೆ. 
  • ಸೂರ್ಯನನ್ನು ಮೆಚ್ಚಿಸಲು, ನೀವು ಅವನ ಬೀಜ ಮಂತ್ರವನ್ನು ಪಠಿಸಬೇಕು. ಅಂದರೆ- 'ಔಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ' ಮಂತ್ರ ಪಠಣ ಮಾಡಿ.
  • ನಂಬಿಕೆಗಳ ಪ್ರಕಾರ, ವೃಷಭ ಸಂಕ್ರಾಂತಿಯ ದಿನದಂದು, ಸೂರ್ಯ ದೇವರ ಅನುಗ್ರಹವನ್ನು ಪಡೆಯಲು ಬ್ರಹ್ಮಚರ್ಯವನ್ನು ಅನುಸರಿಸಬೇಕು. ಈ ದಿನ ಸಾಧ್ಯವಾದಷ್ಟು ನೆಲದ ಮೇಲೆ ಮಲಗಿಕೊಳ್ಳಿ.
  • ವೃಷಭ ಸಂಕ್ರಾಂತಿಯ ದಿನದಂದು ದಾನ ಮತ್ತು ದಕ್ಷಿಣೆಗೆ ವಿಶೇಷ ಮಹತ್ವವಿದೆ. ಈ ದಿನದಂದು ನಿರ್ಗತಿಕರಿಗೆ ದಾನ ಮಾಡಬೇಕು. 
  • ವೃಷಭ ಸಂಕ್ರಾಂತಿಯ ದಿನದಂದು, ಭಗವಾನ್ ಸೂರ್ಯ ಮತ್ತು ವಿಷ್ಣು ಜೊತೆಗೆ, ಶಿವನನ್ನೂ ಪೂಜಿಸಬೇಕು. 

    Weekly Love Horoscope: ಈ ರಾಶಿಯ ಪ್ರೇಮ ಸಂಬಂಧದಿಂದ ಕುಟುಂಬದಲ್ಲಿ ಉದ್ವಿಗ್ನತೆ
     
  • ಈ ದಿನ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ತರ್ಪಣ ಬಿಡುವುದು ಅತ್ಯಂತ ಶ್ರೇಯಸ್ಕರ.
  • ವಿಶೇಷ ಫಲಗಳನ್ನು ಪಡೆಯಲು, ಈ ದಿನದಂದು ಹಸುವನ್ನು ದಾನ ಮಾಡಿ ಅಥವಾ ಗೋಶಾಲೆಯಲ್ಲಿ ಹಸುಗಳಿಗೆ ಅಗತ್ಯವಾದ ವಸ್ತುಗಳನ್ನು ದಾನ ಮಾಡಿ. 
  • ಈ ದಿನದಂದು, ಅಗತ್ಯವಿರುವ ಜನರಿಗೆ ನೀರು ಮತ್ತು ಬೀಸಣಿಕೆಗಳನ್ನು ದಾನ ಮಾಡುವ ಮೂಲಕ, ವರುಣ ದೇವ್ ಮತ್ತು ಸೂರ್ಯ ದೇವ ಅವರ ಆಶೀರ್ವಾದವು ಜೀವನದಲ್ಲಿ ಉಳಿಯುತ್ತದೆ. ಇದರೊಂದಿಗೆ, ವ್ಯಕ್ತಿಯು ಮಂಗಳಕರ ಆರೋಗ್ಯ ಸಂಬಂಧಿತ ಫಲಿತಾಂಶಗಳನ್ನು ಸಹ ಪಡೆಯುತ್ತಾನೆ.
  • ನೀವು ಈ ದಿನ ಬೆಳಿಗ್ಗೆ 8 ಗಂಟೆಗೆ ಮೊದಲು ನಿಮ್ಮ ಉಂಗುರದ ಬೆರಳಿನಲ್ಲಿ ನೈಸರ್ಗಿಕ ಮಾಣಿಕ್ಯವನ್ನು ಧರಿಸಬೇಕು.
Latest Videos
Follow Us:
Download App:
  • android
  • ios