ನನ್ನ ಮೂಡ್ ಖರಾಬ್ ಆಗಿದ್ದಾಗ ಅಥವಾ ಯಾವುದಾದರೂ ಕೆಲಸ ಮಾಡೋಕೆ ಮೂಡಿಲ್ಲ ಅನಿಸಿದಾಗ, ಮೂಡ್ ಚೇಂಜ್ ಮಾಡೊಕೆ, ಪಾಸಿಟಿವ್ ಆಗೋಕೆ ನಾನು ಸ್ವಿಚ್‌ವರ್ಡ್ ಯೂಸ್ ಮಾಡ್ತೀನಿ ಅಂತ ಆರ್‌ಜೆ ಶ್ರುತಿ ಇತ್ತೀಚೆಗೆ ಹೇಳಿದ್ದರು. ಸ್ವಿಚ್‌ವರ್ಡ್ಸ್‌ಗೆ ನಿಜಕ್ಕೂ ಆ ಸಾಮರ್ಥ್ಯ ಇದೆಯಾ?

ನೀವು ಹಿಂದೂ ಧರ್ಮದವರಾಗಿದ್ದರೆ ನಿಮಗೆ ಮಂತ್ರಗಳ ಬಗ್ಗೆ ತಿಳಿದೇ ಇರುತ್ತೆ. ಈ ಮಂತ್ರಗಳು ಗುಡ್ ಮೂಡ್ ಅನ್ನು ಕ್ರಿಯೇಟ್ ಮಾಡೋ ಸಾಮರ್ಥ್ಯ ಹೊಂದಿವೆ. ಇದರಲ್ಲಿ ಬರುವ ಓಂ, ಶ್ರೀಂ, ಶ್ರೀ, ಹ್ಲೀಂ, ಕ್ಲೀಂ ಮುಂತಾದ ಪದಗಳು ನಿಮ್ಮ ಸುತ್ತಮುತ್ತ ಪಾಸಿಟಿವ್ ಎನರ್ಜಿ ಕ್ರಿಯೇಟ್ ಮಾಡುವ ಶಕ್ತಿ ಹೊಂದಿವೆ. ಅದೇ ರೀತಿ, ನೀವು ಪ್ರತಿದಿನ ಬಳಸುವ ಇತರ ಹಲವು ಪದಗಳು ಕೂಡ ನಿಮ್ಮ ಸುತ್ತಮುತ್ತ ಒಳ್ಳೆಯ ಅಥವಾ ಕೆಟ್ಟ ಮೂಡ್ ಸೃಷ್ಟಿ ಮಾಡುವ ಸಾಮರ್ಥ್ಯ ಹೊಂದಿವೆ.

ಇದು ಹೇಗೆ ಸಾಧ್ಯ? ಹೇಗೆ ಎಂದರೆ, ಪದಗಳು ನಿಮ್ಮ ಪ್ರಜ್ಞೆಯ ಅಭಿವ್ಯಕ್ತಿ. ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ಅವು ಅಭಿವ್ಯಕ್ತಿಸುತ್ತವೆ. ಹಾಗೇ ನೀವು ಒಂದು ದಿನದಲ್ಲಿ ಮಾಡುವ ಕೆಲಸಕ್ಕೆ ಪೂರಕವಾದ ಸಾಮರ್ಥ್ಯ ತುಂಬುವ ಕೆಲಸವನ್ನು ಈ ಪದಗಳು ಮಾಡುತ್ತವೆ. ನೀವು ಯಾವುದಾದರೂ ಕೆಲಸಕ್ಕೆ ಹೊರಟಾಗ ಮನೆಯ ಹಿರಿಯರು, ಒಳ್ಳೆಯದಾಗಲಿ, ಕೆಲಸ ಕೈಗೂಡಲಿ ಎಂದು ಹಾರೈಸಿ ಕಳಿಸಿದರೆ ಎಷ್ಟು ಹಾಯೆನಿಸುತ್ತದೆ ಅಲ್ಲವೇ? ಅದೇ ಯಾರಾದರೂ ಅಪಶಕುನದಂಥ ಮಾತುಗಳನ್ನು ಆಡಿದರೆ, ಮೂಡ್ ಕೆಟ್ಟು ಖರಾಬ್‌ ಆಗಿ, ಆಗುವ ಕೆಲಸವೂ ಆಗದೆ ಹೋಗುವುದನ್ನೂ ನೀವು ಕಂಡಿರುತ್ತೀರಿ. ಇದೆಲ್ಲವೂ ಸ್ವಿಚ್‌ವರ್ಡ್‌ಗಳ ಪ್ರತಾಪ.

ಉದಾಹರಣೆಗೆ ಹೀಗೆ ಮಾಡಿ ನೋಡಿ: ನಿಮ್ಮ ಕಚೇರಿಯಲ್ಲಿ ನೀವು ನಿಮ್ಮದೇ ಆದ ಕೆಲಸದಲ್ಲಿ ತಲ್ಲೀನರಾಗಿರುತ್ತೀರಿ. ಆಗ ನಿಮಗೆ ಬೇಡದೆ ಇದ್ದ ಯಾವುದೋ ಬೆಳವಣಿಗೆ ಘಟಿಸುತ್ತದೆ. ಆಗ ಅದರಿಂದ ಪಾರಾಗಲು ಏನು ಮಾಡುತ್ತೀರಿ? ಆ ಸನ್ನಿವೇಶದಿಂದ ದೂರ ಹೋಗಿ ಕುಳಿತುಕೊಳ್ಳುತ್ತೀರಿ ಅಲ್ಲವೇ? ಆದರೆ ಕಚೇರಿಯಲ್ಲಿ ನೀವು ಹಾಗೆ ಮಾಡುವ ಹಾಗಿಲ್ಲ. ನೀವು ಅಲ್ಲಿಯೇ ಇರಬೇಕಾಗುತ್ತದೆ. ಇಂಥ ವೇಳೆಯಲ್ಲಿ ನಿಮ್ಮ ಮೂಡನ್ನು ಚೆನ್ನಾಗಿ ಇಡಬಹುದಾದ ಯಾವುದಾದರೂ ನೆನಪು ಮಾಡಿಕೊಳ್ಳಿ. ಉದಾಹರಣೆಗೆ, ನೀವು ಕಳೆದ ವರ್ಷ ನಿಮ್ಮ ಗೆಳೆಯರ ಜೊತೆಗೆ ಹಿಲ್‌ಸ್ಟೇಶನ್ ಮನಾಲಿಗೆ ಹೋಗಿದ್ದಿರಿ. ಅಲ್ಲಿ ಬಿಯಾಸ್ ನದಿಯ ಕೊರೆಯುವ ಚಳಿಯಲ್ಲಿ ಸ್ನಾನ ಮಾಡಿದ್ದು ನಿಮಗೆ ಈಗಲೂ ತುಂಬಾ ಹಿತ ನೀಡುವ ಅನುಭವವವಾಗಿ ಉಳಿದುಕೊಂಡಿದೆ ಎಂದಿಟ್ಟುಕೊಳ್ಳಿ. ಆಗ ಮನಸ್ಸಿನಲ್ಲೇ ದೊಡ್ಡದಾಗಿ ಮನಾಲಿ- ಬಿಯಾಸ್ ಎಂದು ಹತ್ತು ಸಲ ಹೇಳಿಕೊಳ್ಳಿ. ಆಗ ನಿಮ್ಮ ಮೂಡ್ ಫ್ರೆಶ್ ಆಗುತ್ತದೆ.

ಕೆಲವೊಮ್ಮೆ ನೀವು ಮನೆಯಿಂದ ಕೆಲಸಕ್ಕೆ ಹೊರಡುವಾಗ ಯಾಕೋ, ಇಂದು ಈ ಕೆಲಸ ಆಗುವುದೇ ಡೌಟು ಎಂಬ ಅನುಮಾನ ಮೂಡಿತು ಅಂತಿಟ್ಟುಕೊಳ್ಳಿ. ಆಗ ಐದು ನಿಮಿಷ ಸುಮ್ಮನೆ ಕುಳಿತು, ನಿಮ್ಮ ಮೂಡನ್ನು ಫ್ರೆಶ್ ಆಗಿ ಮಾಡಬಹುದಾದ ತಾಣಗಳನ್ನು ಮನದಲ್ಲೇ ಕಲ್ಪಿಸಿಕೊಳ್ಳಿ. ನೀವು ಅಲ್ಲಿಗೆ ಹೋಗಿದ್ದಾಗ ಆದ ಆನಂದದ ಅನುಭವಗಳನ್ನು ಕಲ್ಪಿಸಿಕೊಳ್ಳಿ. ಆ ಊರಿನ ಹೆಸರನ್ನು ಮನದಲ್ಲೇ ಹತ್ತು ಬಾರಿ ಹೇಳಿಕೊಳ್ಳಿ.

ಹೊಸ ವರ್ಷದಲ್ಲಿ ಈ ಆರು ರಾಶಿಗಳ ಪ್ರೀತಿ ಪ್ರೇಮ ಪ್ರಣಯ! ...

ನೀವು ಯಾವುದೋ ಒಂದು ಕೆಲಸವನ್ನು ಮಾಡಬೇಕೆಂದುಕೊಂಡಿದ್ದೀರಿ. ಆದರೆ ಅದಕ್ಕೆ ತನ್ನ ಶಕ್ತಿ ತನ್ನಲ್ಲಿ ಇದೆ ಎಂದು ನಿಮಗೆ ಅನಿಸುತ್ತಿಲ್ಲ. ಇದೇ ಸಂದರ್ಭದಲ್ಲಿ, ನಿಮ್ಮ ಕಣ್ಣಲ್ಲಿ ಬಲಿಷ್ಠವಾಗಿ ಕಾಣುವ ಒಂದು ಪ್ರಾಣಿಯನ್ನು ಕಣ್ಣಿನೆದುರು ತಂದುಕೊಳ್ಳೀ. ಅದು ಆನೆ ಇರಬಹುದು, ಕುದುರೆ ಇರಬಹುದು. ಅದರ ಹೆಸರನ್ನು ಹತ್ತು ಸಲ ಹೇಳಿಕೊಳ್ಳಿ.

ನಿಮ್ಮ ಪ್ರೇಮವನ್ನು ಸಂಗಾತಿಗೆ ಹೇಳಿಕೊಳ್ಳಲು ಹೊರಟಿದ್ದೀರಿ. ಆದರೆ ಧೈರ್ಯ ಸಾಕಾಗುತ್ತಿಲ್ಲ. ಮನಸ್ಸು ಉದ್ವಿಗ್ನತೆಯಿಂದ ಚಡಪಡಿಸುತ್ತಿದೆ. ಬೆಂಕಿ ಕುಂಡದಂತಾಗಿದೆ. ಈಗ ಐಸ್‌ಕ್ರೀಮ್ ಎಂದು ಹತ್ತು ಸಲ ಮನದಲ್ಲಿ ಹೇಳಿಕೊಳ್ಳಿ. ಮನಸ್ಸು ತಣ್ಣಗಾಗಿ, ಉದ್ವಿಗ್ನತೆಯಿಲ್ಲದೆ ಯೋಚಿಸಲು ಆರಂಭ ಮಾಡುತ್ತೀರಿ. ಈಗ ಮನದ ಮಾತನ್ನು ಹೇಳಿಕೊಳ್ಳಲೂ ನಿಮ್ಮಿಂದ ಸಾಧ್ಯ.

ಈ ವರ್ಷ ಕೊನೆಯ ಆರು ರಾಶಿಯವರಿಗೆ ಲವ್ ಲೈಫ್ ಹೇಗಿರುತ್ತೆ? ...

ಆಟೋಸಜೆಷನ್ ಎಂಬ ಒಂದು ಪರಿಕಲ್ಪನೆಯೂ ಇದರ ಜೊತೆಗಿದೆ. ಕೆಲವೊಮ್ಮೆ ನೀವು ಖಿನ್ನತೆಯಲ್ಲಿರುತ್ತೀರಿ. ಆಗ, ನನಗೆ ಕೆಟ್ಟದೇನೂ ಆಗಿಲ್ಲ, ಹಾಗೆ ಏನೂ ಆಗಲು ಸಾಧ್ಯವಿಲ್ಲ. ನಾನು ಗಟ್ಟಿಯಾಗಿದ್ದೇನೆ. ಹಿಡಿದ ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂದು ಮನಸ್ಸಿಗೆ ಆಜ್ಞೆ ಕೊಟ್ಟುಕೊಳ್ಳುತ್ತೀರಲ್ಲ. ಅದು ಕೂಡ ಸ್ವಿಚ್‌ವರ್ಡ್‌ನ ಇನ್ನೊಂದು ರೂಪ. ಕೆಡುಕು, ಕೇಡು, ದುಷ್ಟ, ನೀಚ, ಹಾಳು, ಅಶುಭ, ಫೇಲ್ಯೂರ್ ಮುಂತಾದ ಪದಗಳನ್ನು ದಿನದ ಆರಂಭದಲ್ಲಿ ನೆನೆಯಲು ಹೋಗಬೇಡಿ. ಅದು ಇಡೀ ದಿನವನ್ನು ಹಾಳು ಮಾಡುತ್ತದೆ. ಬದಲಾಗಿ ಶುಭ ಪದಗಳನ್ನು ನೆನೆಯಿರಿ. ಒಳ್ಳೆಯದು, ಗುಡ್, ವೆರಿ ಗುಡ್, ಪ್ರೀತಿ, ಶುಭ, ಅರಿಶಿನ ಕುಂಕುಮ, ಮಂಗಳ, ಸಕ್ಸಸ್, ಪಾಸ್, ಮುಂತಾದ ಪದಗಳು ಸ್ವಿಚ್‌ವರ್ಡ್‌ಗೆ ತುಂಬಾ ಒಳ್ಳೆಯ ಪದಗಳು. ಇವುಗಳನ್ನು ಬೆಳಗ್ಗೆ ಎದ್ದು ಹತ್ತು ಬಾರಿ ಪಠಿಸಿದರೆ ನೀವು ಆ ದಿನ ಮಾಡಲಿರುವ ಯಾವುದೇ ಕೆಲಸ ಶುಭವಾಗುತ್ತದೆ.

ಮನುಷ್ಯ ಜನ್ಮದ ಬಗ್ಗೆ ವ್ಯಾಪಾರಿ ಕಥೆ ಮೂಲಕ ರಾಜನಿಗೆ ಭರತ ತತ್ವೋಪದೇಶ ಮಾಡಿದ್ದು ಹೀಗೆ ...