Asianet Suvarna News Asianet Suvarna News

ಯಾರದ್ದೋ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಅಷ್ಟೇ, ಆಗಬಾರದ್ದು ಆಗಿಬಿಡುತ್ತೆ!

ದೃಷ್ಟಿ ತೆಗೆಯುವುದು ಅಥವಾ ನಿವಾಳಿಸುವ ಮೂಲಕ ಕೆಟ್ಟ ದೃಷ್ಟಿಯ ಪ್ರಭಾವವನ್ನು ಇಲ್ಲದಂತೆ ನೋಡಿಕೊಳ್ಳಬಹುದು. ಪುಟ್ಟ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಕೆಟ್ಟ ದೃಷ್ಟಿಯ ಪರಿಣಾಮ ಉಂಟಾಗುತ್ತದೆ. ಹಣಕಾಸು, ವೃತ್ತಿ, ಸಂಬಂಧಗಳಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ.

How to find evil eye is on you
Author
First Published Dec 23, 2023, 3:39 PM IST

ದೃಷ್ಟಿ ನಿವಾಳಿಸುವ ಪದ್ಧತಿ ಸಾಮಾನ್ಯವಾಗಿ ಎಲ್ಲೆಡೆ ಇದೆ. ಆಯಾ ಸಂಸ್ಕೃತಿ, ವಿಚಾರಗಳಿಗೆ ತಕ್ಕಂತೆ ದೃಷ್ಟಿ ನಿವಾಳಿಸುವುದು ಕಂಡುಬರುತ್ತದೆ. ಇದನ್ನು ವೈಜ್ಞಾನಿಕವಾಗಿಯೂ ಬಹಳಷ್ಟು ಜನ ವಿಶ್ಲೇಷಿಸುತ್ತಾರೆ. ಸಂಜೆಯ ವೇಳೆ ಒಂದೇ ಸಮನೆ ಅಳುತ್ತಿರುವ ಮಗು ದೃಷ್ಟಿ ತೆಗೆದ ಕೆಲ ಸಮಯದಲ್ಲೇ ಸುಧಾರಿಸಿಕೊಳ್ಳುವುದು, ಚೆನ್ನಾಗಿ ನಿದ್ರೆ ಮಾಡುವುದನ್ನು ಕಾಣುತ್ತೇವೆ. ಹಲವು ಎನರ್ಜಿಗಳಿಂದ ಕೂಡಿರುವ ಈ ವಿಶ್ವದಲ್ಲಿ, ಯಾವುದೋ ಒಂದು ನಕಾರಾತ್ಮಕ ಶಕ್ತಿಯ ಚಿಕ್ಕದೊಂದು ಪ್ರಭಾವವಾದರೂ ದೇಹದಲ್ಲಿ, ಮನಸ್ಸಿನಲ್ಲಿ ಕಿರಿಕಿರಿ ಉಂಟಾಗಲು ಸಾಧ್ಯ. ಇಂತಹ ಪ್ರಭಾವದಿಂದ ಆಚೆಗೆ ಬರಲು ದೃಷ್ಟಿ ನಿವಾಳಿಸುವ ಪದ್ಧತಿ ನೆರವಿಗೆ ಬರುತ್ತದೆ. ಇದರಲ್ಲೂ ಹಲವು ವಿಧ. ಬೆಂಕಿ ಹಚ್ಚಿ ಸುಡುವುದು ಹೆಚ್ಚು ಜನಪ್ರಿಯ ವಿಧಾನ. ಅಗ್ನಿಗೆ ಎಲ್ಲ ರೀತಿಯ ನಕಾರಾತ್ಮಕ ಪ್ರಭಾವ ನಿವಾರಿಸುವ ಶಕ್ತಿಯಿದೆ. ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ದೃಷ್ಟಿಯ ಪ್ರಭಾವ ಉಂಟಾಗಬಹುದು. ಇದಕ್ಕಿದ್ದಂತೆ ಏನೋ ಸರಿಯಿಲ್ಲ ಅನಿಸಲು ಶುರುವಾದರೆ, ನಿರಂತರವಾಗಿ ಕೆಟ್ಟ ಘಟನೆಗಳೇ ನಡೆಯುತ್ತಿದ್ದರೆ ಅದು ಸಹಜತೆಯೇನೂ ಅಲ್ಲ. ಕೆಟ್ಟ ದೃಷ್ಟಿಯ ಪರಿಣಾಮ ಇರಬಹುದು. ಆದರೆ, ಇದನ್ನು ಗುರುತಿಸುವುದು ಹೇಗೆ? ಕೆಲವು ಲಕ್ಷಣಗಳ ಮೂಲಕ ನಮ್ಮ ಮೇಲೆ ಕೆಟ್ಟ ದೃಷ್ಟಿ ಉಂಟಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

•    ಅನಿರೀಕ್ಷಿತ ಹಿನ್ನಡೆ (Setback)
ಜೀವನದಲ್ಲಿ ಏಳುಬೀಳುಗಳು (Up-Down) ಸಹಜ. ಆದರೆ, ಯಶಸ್ಸನ್ನು (Success) ನಿರೀಕ್ಷಿಸುತ್ತಿರುವ ಸಮಯದಲ್ಲಿ ಆಘಾತಕಾರಿಯಾಗಿ ಕೆಲವೊಮ್ಮೆ ಹಿನ್ನಡೆಯಾಗಬಹುದು. ಅನಿರೀಕ್ಷಿತ ಸವಾಲುಗಳು (Challenges) ಎದುರಾಗಬಹುದು. ಹಣಕಾಸು ವಿಚಾರ, ವೃತ್ತಿಯಲ್ಲಿ ಸಮಸ್ಯೆ ಉಂಟಾಗಬಹುದು. ಇವೆಲ್ಲ ಸುಖಾಸುಮ್ಮನೆ ಬರುವುದಿಲ್ಲ. ಕೆಟ್ಟ ದೃಷ್ಟಿಯ ಪರಿಣಾಮವಾಗಿ ನೆಗೆಟಿವ್‌ (Negative) ಪ್ರಭಾವಕ್ಕೆ ನಾವು ತುತ್ತಾಗುತ್ತೇವೆ. ಅಂತಹ ಸಮಯದಲ್ಲಿ ಹಿನ್ನಡೆ ಕಟ್ಟಿಟ್ಟ ಬುತ್ತಿ. ನಮ್ಮ ಯಾವುದೇ ಸಂಘರ್ಷದ ಹಿಂದೆ ಕೆಟ್ಟ ದೃಷ್ಟಿಯ ಪ್ರಭಾವ ಇರಲು ಸಾಧ್ಯ. ಅದನ್ನು ಆರಂಭದಲ್ಲೇ ಗುರುತಿಸುವುದು ಅಗತ್ಯ.

ಜಾತಕದಲ್ಲಿನ ಈ ದೋಷದಿಂದ ಡಿವೋರ್ಸ್ ಆಗುತ್ತಂತೆ..

•    ನಿರ್ದಿಷ್ಟ ಸಮಸ್ಯೆಯಿಲ್ಲದೇ ಅನಾರೋಗ್ಯ (Unhealthy)
ಮನುಷ್ಯರಿಗೆ ಅನಾರೋಗ್ಯ ಉಂಟಾಗುವುದು ಸಹಜ. ಆದರೆ, ನಿರ್ದಿಷ್ಟ ಕಾರಣವೇ ಇಲ್ಲದೆ ದೀರ್ಘಕಾಲ ಆರೋಗ್ಯ ತೊಂದರೆ ಅನುಭವಿಸುತ್ತಿದ್ದರೆ ಅದಕ್ಕೆ ಕೆಟ್ಟ ದೃಷ್ಟಿ ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು. ಕೆಟ್ಟ ದೃಷ್ಟಿಯಿಂದಾಗಿ (Evil Eye) ವ್ಯಕ್ತಿಯ ದೌರ್ಬಲ್ಯ (Weakness) ಹೆಚ್ಚುತ್ತದೆ.

•    ಸಂಬಂಧದಲ್ಲಿ ಸಮಸ್ಯೆ (Problems)
ಅಷ್ಟು ವರ್ಷಗಳ ಕಾಲ ಚೆನ್ನಾಗಿರುವ ದಂಪತಿ ಏಕಾಏಕಿ ಪರಸ್ಪರ ದ್ವೇಷಿಸುವುದಕ್ಕೂ ಕೆಟ್ಟ ದೃಷ್ಟಿ ಕಾರಣವಾಗಿರಬಹುದು. ಈ ಸಮಯದಲ್ಲಿ ಸಂಬಂಧವು (Relation) ಅತಿ ಕಷ್ಟಕರವಾದ ಹಾದಿಯಲ್ಲಿ ಸಾಗುತ್ತಿದೆ ಎನಿಸಬಹುದು. ಕೆಟ್ಟ ದೃಷ್ಟಿಯಿಂದ ಇತರರೊಂದಿಗೆ ಸಂಬಂಧ ಹದಗೆಡುತ್ತದೆ, ತಪ್ಪು ತಿಳಿವಳಿಕೆ ಹೆಚ್ಚುತ್ತದೆ, ಸಂಘರ್ಷಗಳು ಮುಗಿಯುವುದಿಲ್ಲ.

•    ಹಣಕಾಸು (Financial) ಅಡೆತಡೆ 
ಅನಿರೀಕ್ಷಿತವಾಗಿ ಹಣಕಾಸಿನ ವಿಚಾರದಲ್ಲಿ ಎದುರಾಗುವ ಅಡೆತಡೆಗಳು, ಎಷ್ಟೇ ಪ್ರಯತ್ನಿಸಿದರೂ ಸರಿಯಾಗದ ಆರ್ಥಿಕತೆ ಸಹ ಕೆಟ್ಟ ದೃಷ್ಟಿಯ ಪರಿಣಾಮವಾಗಿರುವ ಸಾಧ್ಯತೆ ಹೆಚ್ಚು. ಕೆಟ್ಟ ದೃಷ್ಟಿಯಿಂದಾಗಿ ಅಕಾಲಿಕ ನಷ್ಟವಾಗಬಹುದು, ಬೆಳೆ ನಾಶವಾಗಬಹುದು, ಉದ್ಯಮದ ವಹಿವಾಟು ಕುಸಿಯಬಹುದು. ಸೂಕ್ತ ಪರಿಹಾರ ಕಂಡುಕೊಳ್ಳುವುದು ಅಗತ್ಯ.

ನಕಾರಾತ್ಮಕ ಶಕ್ತಿ ತೆಗೆದು ಹಾಕಲು ಇಲ್ಲಿದೆ ಪರಿಹಾರ...

•    ಭಾವನಾತ್ಮಕ (Emotional) ಏರಿಳಿತ
ನಿರ್ದಿಷ್ಟ ಕಾರಣವೇ ಇಲ್ಲದೇ ಮನಸ್ಸಿನಲ್ಲಿ ದುಗುಡ ತುಂಬಿಕೊಳ್ಳುತ್ತಿದ್ದರೆ, ಭಯ ಮೂಡಿದರೆ, ಆತಂಕವಾದರೆ, ಒತ್ತಡವಾದರೆ ಕೆಟ್ಟ ದೃಷ್ಟಿ ಆಗಿರುವ ಸಾಧ್ಯತೆ ಹೆಚ್ಚು. ಕೆಟ್ಟ ದೃಷ್ಟಿಯಿಂದಾಗಿ ಒಟ್ಟಾರೆ ಮನಸ್ಥಿತಿಯೇ ಕಡೆಬಹುದು. ಕೆಟ್ಟ ದೃಷ್ಟಿಯ ಪ್ರಭಾವವನ್ನು ಅಲ್ಲಗಳೆಯಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಉತ್ತಮ ಆಚಾರ-ವಿಚಾರಗಳ ಪ್ರಭಾವವನ್ನು ಸಹ ಕಡೆಗಣಿಸಲು ಸಾಧ್ಯವಿಲ್ಲ, ಧ್ಯಾನ-ಪ್ರಾಣಾಯಾಮಗಳ ನಿರಂತರ ಅಭ್ಯಾಸ, ಹೀಲಿಂಗ್‌ ಮುಂತಾದ ಔಷಧರಹಿತ ಚಿಕಿತ್ಸೆಗಳ ಮೂಲಕ ಕೆಟ್ಟ ದೃಷ್ಟಿಯ ಪ್ರಭಾವದಿಂದ ಬಚಾವಾಗಲು ಸಾಧ್ಯ. 
 

Follow Us:
Download App:
  • android
  • ios