Asianet Suvarna News Asianet Suvarna News

ನಿಮಗೆ ಯಾವ ರಾಶಿಯವರು ಹೊಂದಾಣಿಕೆ ಆಗುತ್ತಾರೆ?: ಇಲ್ಲಿದೆ ಕುತೂಹಲಕರ ಮಾಹಿತಿ

ಜ್ಯೋತಿಷ್ಯದ ಪ್ರಕಾರ ರಾಶಿಗಳ ಗುಣಸ್ವಭಾವ ಭಿನ್ನವಾಗಿರುವುದರಿಂದ ಒಂದೊಂದು ರಾಶಿ ಕೆಲವೊಂದು ರಾಶಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಕೆಲ ರಾಶಿಗಳು ಮಾತ್ರ ಹೊಂದಾಣಿಕೆಯ ಜೋಡಿ ಆಗುತ್ತವೆ. ಅವುಗಳನ್ನು ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಮಾಹಿತಿ

How to Decode Zodiac Sign Compatibility suh
Author
First Published Jun 5, 2023, 5:39 PM IST

ಕೆಲವರು ಯಾರನ್ನಾದರೂ ಭೇಟಿ (visit) ಆದ ಕೆಲವೇ ನಿಮಿಷಗಳಲ್ಲಿ ತುಂಬಾ ಸಲುಗೆ ಬೆಳೆಸಿಕೊಂಡು ಬಿಡುತ್ತಾರೆ. ಅವರೊಂದಿಗೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಕೆಲವರು ಯಾರೊಂದಿಗೆ ಬೇರೆಯದೇ ತಮ್ಮಷ್ಟಕ್ಕೆ ತಾವು ಇರುತ್ತಾರೆ. ತಮ್ಮ ಭಾವನೆ (feeling)ಗಳನ್ನು ಅಷ್ಟಾಗಿ ತೋರಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ರಾಶಿ ಚಕ್ರ. ಜ್ಯೋತಿಷ್ಯದ ಪ್ರಕಾರ ರಾಶಿಗಳ ಗುಣಸ್ವಭಾವ ಭಿನ್ನವಾಗಿರುವುದರಿಂದ ಒಂದೊಂದು ರಾಶಿ ಕೆಲವೊಂದು ರಾಶಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಕೆಲ ರಾಶಿಗಳು ಮಾತ್ರ ಹೊಂದಾಣಿಕೆಯ ಜೋಡಿ ಆಗುತ್ತವೆ. ಅವುಗಳನ್ನು ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರೀತಿ (love)ಗಿಂತ ಮಿಗಿಲಾದ ಭಾವನೆ ಇನ್ನೊಂದಿಲ್ಲ, ಅದು ಭಾವನೆ ಭಾಷೆಗೂ ಮೀರಿದ ಸಂಗತಿ. ಇದು ಎರಡು ಹೊಂದಾಣಿಕೆಯ ರಾಶಿಚಕ್ರ ಚಿಹ್ನೆಗಳು ಕೂಡಿದಾಗ ಮಾತ್ರ ಸಾಧ್ಯ. ಪ್ರೀತಿಯಾಗಿರಲಿ ಅಥವಾ ವಿವಾಹ (marriage)ವೇ ಆಗಿರಲಿ ಯಾವುದೇ ಒಂದು ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ. ಇಬ್ಬರ ಅಭಿರುಚಿಗಳೂ ಹೊಂದಾಣಿಕೆಯಾದರೆ ಮಾತ್ರ ಸಂಬಂಧ ಮುಂದುವರಿಯುತ್ತದೆ. ರಾಶಿಗಳ ಹೊಂದಾಣಿಕೆ ಸಂಬಂಧದಲ್ಲಿ ಬಹಳ ಮುಖ್ಯ ಆಗಿದೆ.

ಯಾವ ರಾಶಿಗಳ ನಡುವೆ ಹೊಂದಾಣಿಕೆ?

ಅಗ್ನಿ ಚಿಹ್ನೆಗಳಾದ ಮೇಷ, ಸಿಂಹ (leo) ಮತ್ತು ಧನು ರಾಶಿಗಳು ಗಾಳಿಯ ಚಿಹ್ನೆಗಳಾದ ಮಿಥುನ, ತುಲಾ ಮತ್ತು ಕುಂಭ ರಾಶಿಯವರೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಬಹುದು. ಏಕೆಂದರೆ ಇವು ನೈಸರ್ಗಿಕವಾಗಿ ಬೆಂಕಿಯನ್ನು ಸುಡಲು ಬೆಂಬಲಿಸುತ್ತವೆ. ಆದರೆ ವೃಷಭ, ಕನ್ಯಾರಾಶಿ ಮತ್ತು ಮಕರ ರಾಶಿಯವರಿಗೆ ವೃಶ್ಚಿಕ, ಕಟಕ ಮತ್ತು ಮೀನ ರಾಶಿ (Pisces)ಯವರಿಗೆ ಸೂಕ್ತವಾಗಿರುತ್ತದೆ.

- ವೃಷಭ ರಾಶಿ ಹಾಗೂ ವೃಶ್ಚಿಕ ರಾಶಿ (Scorpio)ಯವರ ನಡುವೆ ಉತ್ತಮ ಬಾಂಧವ್ಯ ಇರಲಿದೆ. ಎರಡು ರಾಶಿಚಕ್ರ (Zodiac)ಚಿಹ್ನೆಗಳು ಪರಸ್ಪರ ಪ್ರೀತಿಯನ್ನು ಕೂಡ ನೀಡುತ್ತದೆ. 
- ಮಕರ ಹಾಗೂ ಕಟಕ ರಾಶಿಯವರು ಪರಸ್ಪರ ಸಮತೋಲನ ಕಾಯ್ದುಕೊಳ್ಳುತ್ತಾರೆ. ಮೊದಲ ಭೇಟಿಯಲ್ಲೇ ಕಟಕ ಮತ್ತು ಮಕರ ರಾಶಿ (Capricorn)ಯವರು ಆಕರ್ಷಿತರಾಗುತ್ತಾರೆ.
- ಮೇಷ ಹಾಗೂ ಧನು ರಾಶಿಯವರು ಹರ್ಷಚಿತ್ತದ ವ್ಯಕ್ತಿತ್ವ ಹೊಂದಿರುವವರು ಮತ್ತು ಯಾವುದೇ ರೀತಿಯ ಸನ್ನಿವೇಶದಲ್ಲಿ ಸುಲಭವಾಗಿ ಬೆರೆಯುತ್ತಾರೆ.
- ಮಿಥುನ ಮತ್ತು ಕುಂಭ ರಾಶಿ (Aquarius) ಯವರು ಪರಸ್ಪರರ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ
- ಮೇಷ ರಾಶಿ (Aries) ಯವರು ಸಿಂಹ ರಾಶಿಯವರೊಂದಿಗೆ ಮದುವೆಯಾದರೆ ಅತ್ಯುತ್ತಮ ಜೋಡಿಯಾಗಬಹುದು.
- ಕುಂಭ ರಾಶಿಯವರು ಧನು ರಾಶಿಯವರು ಯೋಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇಬ್ಬರ ನಡುವೆ ಹೊಂದಾಣಿಕೆ ಆಗಲಿದೆ

ಈ ವಾರದ ಸಂಖ್ಯಾಶಾಸ್ತ್ರ: ಹುಟ್ಟಿದ ದಿನಾಂಕ ತಿಳಿಸುತ್ತೆ ನಿಮ್ಮ ಭವಿಷ್ಯ ...

 

ಜಾತಕದಲ್ಲಿ ಸೂರ್ಯ & ಚಂದ್ರನ ಚಿಹ್ನೆ

ಜಾತಕದಲ್ಲಿ ಸೂರ್ಯ (sun)ನ ಚಿಹ್ನೆ ಹಾಗೂ ಚಂದ್ರ (moon)ನ ಚಿಹ್ನೆ ಬಹಳ ಮುಖ್ಯವಾಗಿರುತ್ತದೆ. ಜನ್ಮ ಜಾತಕ ( Birth Horoscope)ಅಥವಾ ಕುಂಡಲಿಯ ಹಲವು ಅಂಶಗಳಲ್ಲಿ ಚಂದ್ರನ ಚಿಹ್ನೆಯೂ ಒಂದು. ಚಂದ್ರನ ಚಿಹ್ನೆ ಎಂಬುದು ಹುಟ್ಟಿದ ಸಮಯದಲ್ಲಿ ಚಂದ್ರನು ಎಲ್ಲಿದ್ದಾನೆ ಎಂಬುದನ್ನು ಗುರುತಿಸುವುದು. ಹಾಗೂ ನೀವು ಹುಟ್ಟಿದ ಕ್ಷಣದಲ್ಲಿ ಸೂರ್ಯನು ಯಾವ ಸ್ಥಾನದಲ್ಲಿರುತ್ತಾನೋ ಅದು ಸೂರ್ಯನ ಚಿಹ್ನೆಯಾಗಿರುತ್ತದೆ ಮತ್ತು ಇದನ್ನು ನಕ್ಷತ್ರ (star)ಚಿಹ್ನೆ ಎಂದೂ ಕರೆಯಲಾಗುತ್ತದೆ. ಇದನ್ನು ನೋಡಿ ಕೂಡ ರಾಶಿ ಹೊಂದಾಣಿಕೆ ಮಾಡುತ್ತಾರೆ.

ಬಿಳಿ ಹಲ್ಲುಗಳ ಜನರು ಅದೃಷ್ಟವಂತರು: ಏನು ಹೇಳುತ್ತೆ ಸಾಮುದ್ರಿಕ ಶಾಸ್ತ್ ...

 

ರಾಶಿಗಳ ಹೊಂದಾಣಿಕೆಯಾದರೆ ಇಬ್ಬರ ಮಧ್ಯೆ ಸಂಘರ್ಷಗಳು ಕಡಿಮೆಯಾಗುತ್ತದೆ, ಭಿನ್ನಾಭಿಪ್ರಾಯಗಳನ್ನೂ ಬೇಗನೇ ಪರಿಹರಿಸಿಕೊಳ್ಳಬಹುದು. ಯಾರು ನಮ್ಮೊಂದಿಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಅರಿತುಕೊಳ್ಳಬಹುದು. ಆದ್ದರಿಂದ ಮದುವೆಗೂ ಮುನ್ನ ಜಾತಕ (Horoscope)ನೋಡುತ್ತಾರೆ.
 

Follow Us:
Download App:
  • android
  • ios