Zodiac Sign: ಒತ್ತಡ ಕಡಿಮೆ ಮಾಡ್ಕೊಬೇಕಾ? ನಿಮ್ಮ ರಾಶಿಗೆ ಯಾವ ವಿಧಾನ ಬೆಸ್ಟ್?

ಏನು ಮಾಡಿದರೂ ಒತ್ತಡ ಕಡಿಮೆ ಆಗುವುದಿಲ್ಲವೇ? ಹಾಗಿದ್ದರೆ ನಿಮ್ಮ ರಾಶಿಗೆ ಅನುಗುಣವಾಗಿ ಏನು ಮಾಡಬಹುದು ಎಂದು ಅರಿತುಕೊಂಡು ಅದನ್ನು ಅನುಸರಿಸಿ. ಆಗ ಹೆಚ್ಚು ಪರಿಣಾಮಕಾರಿಯಾಗಿ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತದೆ. 
 

How to control stress and which method is best as per your zodiac sign

ಒತ್ತಡವಿಲ್ಲದ ಬದುಕಿಲ್ಲ. ಎಲ್ಲೆಲ್ಲೂ ಒತ್ತಡ ಇದ್ದಿದ್ದೇ. ಇಂದಿನ ಸ್ಪರ್ಧಾತ್ಮಕ ಜೀವನದಲ್ಲಂತೂ ಒತ್ತಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನೀವು ಸ್ಪರ್ಧೆಗೆ ಬೀಳುವ ಜನರಲ್ಲವಾಗಿದ್ದರೂ ಏನಾದರೊಂದು ಒತ್ತಡ ಇದ್ದೇ ಇರುತ್ತದೆ. ಹೀಗಾಗಿ, ಒತ್ತಡವಿಲ್ಲದ ಜೀವನಕ್ಕಾಗಿ ಹೋರಾಡುವ ಬದಲು ಒತ್ತಡವನ್ನು ನಿಭಾಯಿಸುವ ಕಲೆ ಅರಿತುಕೊಳ್ಳುವುದು ಮುಖ್ಯ. ಕೆಲವೊಮ್ಮೆ ನಾವು ಏನೇ ಮಾಡಿದರೂ ಒತ್ತಡ ನಿಭಾಯಿಸುವುದು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಕೈ ಮೀರಿದ ಭಾವನೆಯಿಂದ ತತ್ತರಿಸುವಂತಾಗುತ್ತದೆ. ಅಂತಹ ಸಮಯದಲ್ಲಿ, ನಾವು ನಮ್ಮದಲ್ಲದ ವಿಧಾನಗಳ ಮೂಲಕ ಒತ್ತಡ ನಿಭಾಯಿಸಲು ಪ್ರಯತ್ನ ಪಡುತ್ತಿದ್ದೇವೆಯೇ ಎಂದು ಯೋಚಿಸುವುದು ಅಗತ್ಯ. ಏಕೆಂದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಗೆ ಅನುಗುಣವಾಗಿ ಒತ್ತಡ ನಿಭಾಯಿಸುವುದು ಹೆಚ್ಚು ಪರಿಣಾಮಕಾರಿ. ಎಲ್ಲರಿಗೂ ಎಲ್ಲ ವಿಧಾನಗಳೂ ಹೊಂದಾಣಿಕೆ ಆಗದಿರಬಹುದು. ಹೀಗಾಗಿ, ನಿಮ್ಮ ರಾಶಿಗೆ ಯಾವ ವಿಧಾನ ಸೂಕ್ತ ಎನ್ನುವುದನ್ನು ತಿಳಿದುಕೊಂಡರೆ ಸುಗಮವಾಗುತ್ತದೆ. 

•    ಮೇಷ (Aries)
ಮೇಷ ರಾಶಿಯ ಜನರಿಗೆ ಒತ್ತಡದ (Stress) ಸಮಸ್ಯೆ ಅಧಿಕ. ಇದನ್ನು ಸರಿಯಾಗಿ ನಿಭಾಯಿಸಬೇಕೆಂದರೆ ಇವರು ದೈಹಿಕ ಚಟುವಟಿಕೆಗೆ (Physical Activity) ಹೆಚ್ಚು ಗಮನ ನೀಡಬೇಕು. ಆಗ ಇವರಲ್ಲಿ ಮತ್ತೆ ಎನರ್ಜಿ ಹರಿಯಲು ಶುರುವಾಗುತ್ತದೆ. ಅಧಿಕ ದೈಹಿಕ ಚಟುವಟಿಕೆ, ಯೋಗ, ಧ್ಯಾನಗಳಿಂದ ಇವರು ಮನಸ್ಥಿತಿಯನ್ನು ಶಾಂತವಾಗಿ ಇರಿಸಿಕೊಳ್ಳಬಹುದು. 

ಸಂಬಂಧ ಹಾಳು ಮಾಡುವ ರಾಶಿ ಯಾವುದು ...?

•    ವೃಷಭ (Taurus)
ವೃಷಭ ರಾಶಿಯ ಜನ ತಮ್ಮ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದರೆ ತಮ್ಮ ಬಗ್ಗೆ ತಾವು ಕಾಳಜಿ (Care) ವಹಿಸಬೇಕು, ಪ್ರಶಾಂತವಾದ ವಾತಾವರಣದಲ್ಲಿರಬೇಕು. ಅಡುಗೆ ಮಾಡುವುದು, ಹೂದೋಟದ ಕಾರ್ಯ, ಸುಖವಾದ ಸ್ನಾನ ಇವರಿಗೆ ಸಹಕಾರಿ. ಪ್ರಕೃತಿ (Nature) ಜತೆಗೆ ಸಂಪರ್ಕ ಸಾಧಿಸುವ ಮಾರ್ಗಗಳು ಉತ್ತಮ.

•    ಮಿಥುನ (Gemini)
ಅತ್ಯಂತ ಕ್ರಿಯಾಶೀಲ ಮನಸ್ಸಿನ ಮಿಥುನ ರಾಶಿಗೆ ಒತ್ತಡದ ಸಮಸ್ಯೆ ಹೆಚ್ಚು. ಇದನ್ನು ನಿಭಾಯಿಸಲು ಪರಿಣಾಮಕಾರಿ ಸಂವಹನದ (Effective Communication) ಬಗ್ಗೆ ಗಮನ ಹರಿಸಬೇಕು. ಮಾನಸಿಕ ಸಾಮರ್ಥ್ಯ ಸರಿಯಾಗಿ ಬಳಕೆಯಾಗುವ ಅಂಶದತ್ತ ಆದ್ಯತೆ ನೀಡಬೇಕು. ಪ್ರೀತಿಪಾತ್ರರೊಂದಿಗೆ ಆಳವಾದ ಮಾತುಕತೆ, ಗಾಢ ಸ್ನೇಹಿತರ ಬೆಂಬಲ ಅಗತ್ಯ. ಬರವಣಿಗೆ, ಉಸಿರಾಟದ ವ್ಯಾಯಾಮ (Breathing Exercise), ವಿಷುವಲೈಸೇಷನ್ ತಂತ್ರಗಳು ಸಹಕಾರಿ.

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನ ಕೆಲವೊಮ್ಮೆ ಒತ್ತಡಕ್ಕೆ ತುತ್ತಾಗುತ್ತಾರೆ. ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇವರು ಸ್ವ ಕಾಳಜಿ (Self Care) ಮತ್ತು ಭಾವನಾತ್ಮಕ (Emotional) ಕ್ಷೇಮದತ್ತ ಗಮನ ಹರಿಸಬೇಕು. ಪ್ರೀತಿಪಾತ್ರರ ಬೆಂಬಲ ಪಡೆದುಕೊಳ್ಳಬೇಕು. 

•    ಸಿಂಹ (Leo)
ಸ್ವಾಭಿಮಾನ ಹೆಚ್ಚಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಸಿಂಹ ರಾಶಿಯವರಿಗೆ ಅಗತ್ಯ. ನೃತ್ಯ, ಬರವಣಿಗೆ ಸೇರಿದಂತೆ ವ್ಯಕ್ತಪಡಿಸುವ ಯಾವುದಾದರೂ ಮಾರ್ಗ ಸೂಕ್ತ. ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ಹಂಚಿಕೊಂಡರೂ ಸರಿ. ಗುಂಪು ಕ್ರೀಡೆಗಳು (Group Sports) ಹೆಚ್ಚು ಅನುಕೂಲ. 

Zodiac Anger: ಕೋಪದ ಮೇಲೆ ನಿಯಂತ್ರಣಕ್ಕಾಗಿ ಈ ರತ್ನ ಧರಿಸಿ!

•    ಕನ್ಯಾ (Virgo)
ಪರಿಪೂರ್ಣತೆ ಬಯಸುವ ಗುಣದಿಂದಾಗಿಯೇ ಒತ್ತಡಕ್ಕೆ ತುತ್ತಾಗುವ ಕನ್ಯಾ ರಾಶಿಯ ಜನ ತಮ್ಮದೇ ಕೆಲಸ ಕಾರ್ಯಗಳಲ್ಲಿ ನೆಮ್ಮದಿ ಕಾಣಬಲ್ಲರು. ಸಂಘಟಿತ ಕೆಲಸ (Orgonise Work), ಸ್ವಚ್ಛತೆ, ಹವ್ಯಾಸಗಳ ಮೂಲಕ ಒತ್ತಡ ನಿಭಾಯಿಸಲು ಸಾಧ್ಯ. ಪ್ರಕೃತಿಯಲ್ಲಿ ವಾಕ್ ಹೋಗುವುದು ಸೂಕ್ತ.

•    ತುಲಾ (Libra)
ಸಂಬಂಧಗಳನ್ನು (Relations) ಸಮತೋಲನಗೊಳಿಸುವ ಮೂಲಕ, ನಿಭಾಯಿಸುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಧ್ಯಾನ ಮಾಡುವುದರಿಂದ ಆಂತರಿಕ ಶಾಂತಿ (Inner Peace) ಲಭಿಸುತ್ತದೆ. ಪ್ರೀತಿಪಾತ್ರರ ಬೆಂಬಲ ಪಡೆದುಕೊಳ್ಳಬೇಕು. ಜನರ ಒಡನಾಟ ಕಡಿಮೆ ಮಾಡಿ, ಆಪ್ತರೊಂದಿಗೆ ಒಡನಾಡುವುದರಿಂದಲೂ ಒತ್ತಡ ಕಡಿಮೆಯಾಗುತ್ತದೆ.

•    ವೃಶ್ಚಿಕ (Scorpio) 
ಬರೆಯುವುದು, ವ್ಯಕ್ತಪಡಿಸುವ ಕ್ರಿಯೆಗಳ ಮೂಲಕ ಇವರಲ್ಲಿ ಒತ್ತಡ ಕಡಿಮೆಯಾಗುತ್ತದೆ. ಏಕಾಂಗಿಯಾಗಿರುವುದು, ಆಂತರಿಕ ವಿಮರ್ಶೆಗಳೂ ಸೂಕ್ತ. ಹೀಲಿಂಗ್ (Healing), ಧ್ಯಾನಗಳು ಸಹಕಾರಿ.

•    ಧನು (Sagittarius)
ಸ್ವತಂತ್ರವಾಗಿ ಮಾಡುವ ಚಟುವಟಿಕೆಗಳಿಂದ ಒತ್ತಡ ಕಡಿಮೆಯಾಗುತ್ತದೆ. ಪ್ರಯಾಣ (Travel), ದೈಹಿಕ ಚಟುವಟಿಕೆ, ಹೊರಾಂಗಣ ಕ್ರೀಡೆಗಳು ಅನುಕೂಲ. ಜ್ಞಾನವನ್ನು ವಿಸ್ತರಿಸಿಕೊಳ್ಳುವ ಓದು ಸಹಕಾರಿ. 

•    ಮಕರ (Capricorn)
ವರ್ಕೋಹಾಲಿಕ್ ಗುಣದಿಂದಾಗಿ ಒತ್ತಡಕ್ಕೆ ತುತ್ತಾಗುವ ಇವರು ಖಾಸಗಿ ಮತ್ತು ವೃತ್ತಿಪರ ಜೀವನವನ್ನು ಬ್ಯಾಲೆನ್ಸ್ (Balance) ಮಾಡಬೇಕು. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದು, ಹವ್ಯಾಸಗಳಲ್ಲಿ ನಿರತರಾಗುವುದು, ಧ್ಯಾನ ಮತ್ತು ನಿಯಮಿತ ವ್ಯಾಯಾಮವೂ ಸಹಕಾರಿ.

•    ಕುಂಭ (Aquarius)
ಗುಂಪು ಚಟುವಟಿಕೆಗಳು (Group Activities), ಕಾರ್ಯಕರ್ತರಾಗಿ ಕೆಲಸ ಮಾಡುವುದು, ಸಮಾನ ಮನಸ್ಕರೊಂದಿಗೆ ಬೌದ್ಧಿಕ ಚರ್ಚೆ ಇವರಿಗೆ ಸಹಕಾರಿ. ಪ್ರಕೃತಿಯಲ್ಲಿ ಸಮಯ ಕಳೆಯುವುದು, ಭಾವನೆಗಳನ್ನು ಹಂಚಿಕೊಳ್ಳುವುದು, ತಮ್ಮದೇ ವಿಶಿಷ್ಟ ತಂತ್ರಗಾರಿಕೆಯ ಮೂಲಕ ಒತ್ತಡ ನಿವಾರಣೆ ಮಾಡಿಕೊಳ್ಳಲು ಸಾಧ್ಯ.

•    ಮೀನ (Pisces)
ಸ್ವಯಂ ಕಾಳಜಿ, ಭಾವನಾತ್ಮಕ ಆರೋಗ್ಯವನ್ನು (Health) ಕಾಪಾಡಿಕೊಳ್ಳುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಪೇಂಟಿಂಗ್, ಬರವಣಿಗೆ, ಸಂಗೀತ ಆಲಿಸುವುದು ಸಹಕಾರಿ. ಶಾಂತ ವಾತಾವರಣದಲ್ಲಿ ಮನಸ್ಸು ಅರಳುತ್ತದೆ.

Latest Videos
Follow Us:
Download App:
  • android
  • ios