Asianet Suvarna News Asianet Suvarna News

ಸಂಬಂಧ ಹಾಳು ಮಾಡುವ ರಾಶಿ ಯಾವುದು ...?

ಇಂದಿನ ಆಧುನಿಕ ಕಾಲದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸ್ನೇಹ, ಪ್ರೀತಿ ಹಾಗೂ ಮದುವೆ (marriage) ಸೇರಿದಂತೆ ಎಲ್ಲಾ ಸಂಬಂಧಗಳಿಗೂ ಒಮ್ಮೊಮ್ಮೆ ಕ್ಷಣದಲ್ಲೇ ಮುರಿದು ಹೋಗುತ್ತವೆ. ಅದಕ್ಕೆ ರಾಶಿ ಚಕ್ರ ಕಾರಣವಾಗಿದೆ.

Zodiac signs who are likely to ruin their first time in a relationship suh
Author
First Published Jun 28, 2023, 4:16 PM IST

ಇಂದಿನ ಆಧುನಿಕ ಕಾಲದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸ್ನೇಹ, ಪ್ರೀತಿ ಹಾಗೂ ಮದುವೆ (marriage) ಸೇರಿದಂತೆ ಎಲ್ಲಾ ಸಂಬಂಧಗಳಿಗೂ ಒಮ್ಮೊಮ್ಮೆ ಕ್ಷಣದಲ್ಲೇ ಮುರಿದು ಹೋಗುತ್ತವೆ. ಅದಕ್ಕೆ ರಾಶಿ ಚಕ್ರ ಕಾರಣವಾಗಿದೆ. ಸಂಬಂಧ (relationship) ಗಳನ್ನು ತಮ್ಮ ದುಡುಕಿನಿಂದ ಹಾಳು ಮಾಡುವ ಸಾಧ್ಯತೆಯಿರುವ ರಾಶಿಚಕ್ರದ ಚಿಹ್ನೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಕೋಪ ತನ್ನನ್ನಲ್ಲದೇ ನೆರೆ ಮನೆಯ ಸುಡುವುದೇನಯ್ಯ ಎಂಬ ವಿಶ್ವಗುರು ಬಸವಣ್ಣ (Basavanna) ನವರ ಮಾತಿನಂತೆ, ಇಂದಿನ ಪೀಳಿಗೆಯಲ್ಲಿ ಕ್ಷಣಿಕ ಕೋಪವೆಂಬುದು ಮಿತಿ ಮೀರಿದೆ. ಸಂಬಂಧಗಳ ಉಳಿವಿಗಾಗಿ ಜನರು ಶ್ರಮಿಸಬೇಕಾದ ಸ್ಥಿತಿ ಎದುರಾಗಿದೆ. ಕೆಲವು ಜನರು ತಮ್ಮ ಸ್ವಾರ್ಥ (selfishness) ದಿಂದ ಸುಂದರವಾದ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತಾರೆ. 

ಕೆಲವರ ದುರ್ಬಲ, ಆತಂಕ (anxiety) ಮತ್ತು ಒತ್ತಡದ ವ್ಯಕ್ತಿತ್ವದಿಂದ ಸಂಬಂಧವನ್ನು ನಿಭಾಯಿಸಲು ಸಾಧ್ಯವಾಗಲ್ಲ. ಮತ್ತು ಅವರು ಅದನ್ನು ಕೆಟ್ಟ ರೀತಿಯಲ್ಲಿ ಹಾಳುಮಾಡುತ್ತಾರೆ. ಸಂಬಂಧದಲ್ಲಿ ಮೊದಲ ಬಾರಿಗೆ ಹಾಳುಮಾಡುವ ರಾಶಿಚಕ್ರ (Zodiac)  ಚಿಹ್ನೆಗಳು ಇಲ್ಲಿವೆ.

ಮೇಷ ರಾಶಿ (Aries)

ಮೇಷ ರಾಶಿಯವರು ಹಠಾಮಾರಿ  (Stubborn) ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರೀತಿಯನ್ನು ಅನುಭವಿಸುವ ಅವರ ಉತ್ಸಾಹ (passion) ದಿಂದ, ಅವರು ಕೆಲವೊಮ್ಮೆ ಸಂಬಂಧಗಳಿಗೆ ಬೆಲೆ ಕೊಡಲ್ಲ. ಅವರ ಆತುರದ ನಿರ್ಧಾರ (decision) ವು ಸುಂದರ ಸಂಬಂಧಗಳನ್ನು ಹಾಳು ಮಾಡುತ್ತದೆ.

ಚಾಣಕ್ಯ ನೀತಿ: 'ಗುಣ'ವಂತ, ನೀ ಹೀಗಿದ್ದರೇ ಬದುಕೇ ನಿನ್ನ ಸ್ವಂತ..!

 

ಮಿಥುನ ರಾಶಿ (Gemini) 

ಮಿಥುನ ರಾಶಿಯವರು ಕುತೂಹಲ (curiosity) ಮತ್ತು ಸಾಮಾಜಿಕ ಜೀವಿಗಳು. ಅವರ ದ್ವಂದ್ವ ಸ್ವಭಾವ (Dual nature) ವು ಕೆಲವೊಮ್ಮೆ ಬೇರೆಯವರನ್ನು ಬೇಸರಗೊಳಿಸುತ್ತದೆ. ಇದರಿಂದ ಸಂಬಂಧಗಳಲ್ಲಿನ ಆಸಕ್ತಿ ಕಡಿಮೆ ಆಗಲು ಶುರು ಆಗುತ್ತದೆ. ಅಥವಾ ಹೊಸ ಅನುಭವ (experience) ಗಳನ್ನು ಹುಡುಕಲು ಕಾರಣವಾಗಬಹುದು.ಇದು ಅವರ ಮೊದಲ ಸಂಬಂಧದ ಸ್ಥಿರತೆಯನ್ನು ಹಾಳುಮಾಡುತ್ತದೆ.

ಸಿಂಹ ರಾಶಿ (Leo)

ಸಿಂಹ ರಾಶಿಯವರು ಬೇರೆಯವರಿಂದ ಮೆಚ್ಚುಗೆಯನ್ನು ಪಡೆಯಲು ಹಂಬಲಿಸುತ್ತಾರೆ. ಅವರು ತುಂಬಾ ಪ್ರೀತಿ (love) ಯಿಂದ ಇದ್ದರೂ, ಅವರು ಕೆಲವೊಮ್ಮೆ ಅವರ ಪಾಲುದಾರರ ಅಗತ್ಯತೆಗಳು ಮತ್ತು ಭಾವನೆ (feeling) ಗಳಿಗೆ ಬೆಲೆ ಕೊಡಲ್ಲ. ಇದು ಯಾವುದೇ ಸಂಬಂಧದಲ್ಲಿ ಬಿರುಕು ಸೃಷ್ಟಿಸಲು ಕಾರಣ ಆಗಲಿದೆ.

ವೃಶ್ಚಿಕ ರಾಶಿ (Scorpio) 

ಇವರು ತುಂಬಾ ಕೋಪ (anger) ದ ಸ್ವಭಾವ ಹೊಂದಿರುವ ವ್ಯಕ್ತಿಗಳು. ಇವರು ಇನ್ನೊಬ್ಬರ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಇವರ ಅಸೂಯೆ (Jealousy)   ಗುಣ ಸಂಬಂಧಗಳಲ್ಲಿ ಬಿರುಕು ಸೃಷ್ಟಿಸುತ್ತದೆ.

ಮನೆಯಲ್ಲಿ ಯಾವ ವಸ್ತುಗಳು ಎಲ್ಲಿರಬೇಕು?: ಎಚ್ಚರ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ..!

 

ಕುಂಭ ರಾಶಿ (Aquarius) 

ಕುಂಭ ರಾಶಿಯವರು ಇಂಡಿಪೆಂಡೆಂಟ್ ಜೀವಿಗಳು. ಇದರಿಂದ ಅವರು ಸಂಬಂಧ (relationship)ದಲ್ಲಿ ಸಂಪೂರ್ಣವಾಗಿ ಬೆರೆಯಲು ಕಷ್ಟವಾಗಬಹುದು. ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಅವರು ತಮ್ಮ ಸಂಗಾತಿಯಿಂದ ದೂರ ಆಗುತ್ತಾರೆ.

ವೃಷಭ (Taurus) , ಕಟಕ (Cancer) , ಕನ್ಯಾ (Virgo) , ತುಲಾ (Libra) , ಧನು (Sagittarius) , ಮಕರ  (Capricorn) ಮತ್ತು ಮೀನ ರಾಶಿಯವರು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಇವರು ತಮ್ಮ ಸಂಬಂಧ ಹಾಳಾಗುವ ಸಂದರ್ಭದಲ್ಲಿ ತಾಳ್ಮೆಯಿಂದ ಇರುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios