ಕೆರಿಯರ್‌ನಲ್ಲಿ ಟಾಪ್‌ ಸಾಧನೆ ಮಾಡುವುದು ಹೇಗೆ? ಈ 7 ಸೂತ್ರ ಅನುಸರಿಸಿ

ಜ್ಯೋತಿಷ್ಯದ ಸಹಾಯದಿಂದ ನೀವು ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಂಡು, ಕೆಲವು ಸೂತ್ರಗಳನ್ನು ಅನುಸರಿಸುವ ಮೂಲಕ ನಿಮ್ಮ ವೃತ್ತಿ ಗುರಿಗಳನ್ನು ಸಾಧಿಸಲು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅಂಥ ಏಳು ಸೂತ್ರಗಳು ಇಲ್ಲಿವೆ.

How to achieve goals in career employment Astrology tips bni

ಜ್ಯೋತಿಷ್ಯವು ಶತಮಾನಗಳಿಂದ ಮಾನವ ನಾಗರಿಕತೆಯ ಭಾಗ. ಅದರ ಪ್ರಭಾವ ನಮ್ಮ ಜೀವನದ ವಿವಿಧ ಅಂಶಗಳಲ್ಲಿ ಇರುತ್ತದೆ. ಅದು ವೃತ್ತಿಜೀವನದ ಬೆಳವಣಿಗೆಗೂ ಕಾರಣವಾಗುತ್ತದೆ. ಜ್ಯೋತಿಷ್ಯ ಸೂತ್ರಗಳು ತಮ್ಮ ವೃತ್ತಿಪರ ಜೀವನದಲ್ಲಿ ಸಾಧನೆಯನ್ನು ಹೆಚ್ಚಿಸಲು ಬಯಸುವ ವ್ಯಕ್ತಿಗಳಿಗೆ ಅಮೂಲ್ಯವಾದ ಒಳನೋಟಗಳನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಜ್ಯೋತಿಷ್ಯದ ಸಹಾಯದಿಂದ ನೀವು ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಂಡು, ಕೆಲವು ಸೂತ್ರಗಳನ್ನು ಅನುಸರಿಸುವ ಮೂಲಕ ನಿಮ್ಮ ವೃತ್ತಿ ಗುರಿಗಳನ್ನು ಸಾಧಿಸಲು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಅಂಥ ಏಳು ಸೂತ್ರಗಳು ಇಲ್ಲಿವೆ:

ನಿಮ್ಮ ಮುಂಜಾನೆ ಹೀಗಿರಲಿ
ನಿಮ್ಮ ವೃತ್ತಿಜೀವನದ ಬೆಳವಣಿಗೆಯನ್ನು ಹೆಚ್ಚಿಸಲು ಒಂದು ಪರಿಣಾಮಕಾರಿ ವಿಧಾನವೆಂದರೆ ಬೆಳಗಿನ ರೊಟೀನ್‌ನಲ್ಲಿ ಕೆಲವು ಧಾರ್ಮಿಕ ಸಂಗತಿಗಳನ್ನು ಸಂಯೋಜಿಸಿಕೊಳ್ಳುವುದು. ಮುಂಜಾನೆ ಎದ್ದ ಕೂಡಲೆ ನಿಮ್ಮ ಅಂಗೈಗಳನ್ನು ಉಜ್ಜಿಕೊಂಡು ಬಿಡಿಸಿ ಅವುಗಳನ್ನು ನೋಡಿ. ಏಕೆಂದರೆ ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದ ಲಕ್ಷ್ಮಿ ದೇವತೆ ಅಂಗೈಗಳಲ್ಲಿ ನೆಲೆಸಿರುತ್ತಾಳೆ. ಹೆಚ್ಚುವರಿಯಾಗಿ ಈ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದು ಅಥವಾ ಭಜನೆ, ಭಕ್ತಿಗೀತೆಗಳನ್ನು ಕೇಳುವುದು ಸಹ ನಿಮ್ಮ ವೃತ್ತಿಜೀವನದ ಯಶಸ್ಸಿಗೆ ಪ್ರಯೋಜನಕಾರಿ. ಈ ಅಭ್ಯಾಸಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದರೆ ನಿಮ್ಮ ವೃತ್ತಿಪರ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಧನಾತ್ಮಕ ಮತ್ತು ಮಂಗಳಕರ ಶಕ್ತಿಯನ್ನು ನೀವು ಬೆಳೆಸಿಕೊಳ್ಳಬಹುದು.

ಆಂಜನೇಯನನ್ನು ಪೂಜಿಸಿ
ಅಡೆತಡೆಗಳು ಮತ್ತು ತೊಂದರೆಗಳಿಂದ ಮುಕ್ತಿ ನೀಡುವ ದೇವರು ಆಂಜನೇಯ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಸವಾಲುಗಳನ್ನು ಎದುರಿಸುತ್ತಿದ್ದರೆ ಅಥವಾ ನೀವು ಬಯಸಿದ ಗುರಿಗಳನ್ನು ಸಾಧಿಸಲು ಸಾಧ್ಯವಾಗದಿದ್ದರೆ, ಭಗವಾನ್ ಹನುಮಂತನನ್ನು ಆರಾಧಿಸುವುದು ಪ್ರಯೋಜನಕಾರಿ. ಹನುಮಾನ್ ಚಾಲೀಸಾ ಎಂಬ, ಭಗವಾನ್ ಹನುಮಾನ್‌ಗೆ ಸಮರ್ಪಿತವಾದ ಭಕ್ತಿ ಸ್ತೋತ್ರವನ್ನು ದಿನಕ್ಕೆ ಎರಡು ಬಾರಿಯಾದರೂ ಪಠಿಸುವುದು ಕೆಲಸದ ಸ್ಥಳದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಹೆಚ್ಚು ಕೆಲಸ ಮಾಡಲು ಆತ್ಮವಿಶ್ವಾಸವನ್ನು ತುಂಬುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಅಭ್ಯಾಸವು ಭಗವಾನ್ ಹನುಮಂತನ ಆಶೀರ್ವಾದವನ್ನು ತರುತ್ತದೆ ಮತ್ತು ನಿಮ್ಮ ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗಬಹುದಾದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.

ಈ ರಾಶಿಯ ಹೆಣ್ಣು ಮಕ್ಕಳು ತಂದೆಗೆ ಅದೃಷ್ಟ ದೇವತೆ

ಸುಣ್ಣ ಮತ್ತು ಲವಂಗ ಆಚರಣೆ
ತಮ್ಮ ವ್ಯಾಪಾರದ ಬೆಳವಣಿಗೆಯನ್ನು ಹೆಚ್ಚಿಸಲು ಬಯಸುವವರಿಗೆ ಜ್ಯೋತಿಷ್ಯವು (Astrology) ಹಲವಾರು ಟಿಪ್ಸ್‌ ನೀಡುತ್ತದೆ. ಅಂತಹ ಒಂದು ಪರಿಹಾರವೆಂದರೆ ಸುಣ್ಣ ಮತ್ತು ಲವಂಗ ಆಚರಣೆ. ಇದನ್ನು ಹೀಗೆ ಮಾಡಿ- ನಿಮ್ಮ ಬಲಗೈಯಲ್ಲಿ ನಾಲ್ಕು ಲವಂಗವನ್ನು ತೆಗೆದುಕೊಂಡು "ಓಂ ಶ್ರೀ ಹನುಮತೇ ನಮಃ" ಎಂಬ ಮಂತ್ರವನ್ನು 21 ಬಾರಿ ಪಠಿಸಿ. ಪಠಿಸುವಾಗ ಅವುಗಳಿಗೆ ಸುಣ್ಣ ಚುಚ್ಚಿಕೊಳ್ಳಿ. ನಂತರ, ದಿನವಿಡೀ ನಿಮ್ಮ ಪಾಕೆಟ್ ಅಥವಾ ಪರ್ಸ್‌ನಲ್ಲಿ ಈ ಸುಣ್ಣಮಿಶ್ರಿತ ಲವಂಗ ಒಯ್ಯಿರಿ. ಈ ಅಭ್ಯಾಸವು ಧನಾತ್ಮಕ ಶಕ್ತಿ (positive vibe) ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ತತ್ವಗಳ ಪ್ರಕಾರ, ಇದು ಶನೀಶ್ವರನಿಗೆ ಸಂಬಂಧಿಸಿದ್ದು. ಇದು ವೃತ್ತಿಜೀವನದ ಬೆಳವಣಿಗೆಗೆ ಕಾರಣವಾಗುತ್ತದೆ.

ಕಾಗೆಗಳಿಗೆ ಆಹಾರ ಹಾಕಿ
ಜ್ಯೋತಿಷ್ಯವು ಅನೇಕ ಸಂಕೇತಗಳಲ್ಲಿ (signs) ಮುಖ್ಯವಾದುದು ಎಂದರೆ ಕಾಗೆ. ಇದನ್ನು ಶನಿ ಗ್ರಹದ ವಾಹನವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ನಂಬಿಕೆಗಳ ಪ್ರಕಾರ, ಶನಿವಾರದಂದು ಕಾಗೆಗಳಿಗೆ ಅನ್ನವನ್ನು ಬಡಿಸುವುದರಿಂದ ಶನೀಶ್ವರನನ್ನು ಶಾಂತಗೊಳಿಸಬಹುದು. ಶನಿಯ ಆಶೀರ್ವಾದವನ್ನು ಪಡೆಯಬಹುದು. ಶನಿಯು ವೃತ್ತಿ ಬೆಳವಣಿಗೆಯನ್ನು ನಿಯಂತ್ರಿಸುತ್ತಾನೆ. ಈ ಆಚರಣೆಯು ವೃತ್ತಿಪರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಿಮ್ಮ ಯಶಸ್ಸಿಗೆ ಅಡ್ಡಿಯಾಗುವ ಯಾವುದೇ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಕಾಗೆಗಳಿಗೆ ಆಹಾರ ನೀಡುವ ಕ್ರಿಯೆಯಿಂದ ನೀವು ಪಂಚಭೂತಕ್ಕೂ ಪಿತೃಗಳಿಗೂ ಕೃತಜ್ಞತೆಯನ್ನು ತೋರಿಸುತ್ತೀರಿ. ಅದು ಯಾವಾಗಲೂ ಪ್ರಯೋಜನಕಾರಿ ಪರಿಣಾಮ ನೀಡುತ್ತದೆ.

ಸೂರ್ಯನಿಗೆ ಅರ್ಘ್ಯ ಅರ್ಪಣೆ
ಸೂರ್ಯದೇವರು ಜ್ಞಾನ, ಶಕ್ತಿ ಮತ್ತು ಚೈತನ್ಯವನ್ನು ಸಂಕೇತಿಸುತ್ತಾನೆ. ಪ್ರತಿ ದಿನ ಬೆಳಿಗ್ಗೆ ಸೂರ್ಯೋದಯವಾದ ಒಂದು ಗಂಟೆಯೊಳಗೆ ತಾಮ್ರದ ಪಾತ್ರೆಯಲ್ಲಿ ಬೆಲ್ಲವನ್ನು ಹೊಂದಿರುವ ನೀರನ್ನು ಅರ್ಪಿಸುವುದು ವೃತ್ತಿಪರ ಪ್ರಗತಿಗೆ ಪ್ರಬಲವಾದ ಸೂತ್ರ. ಈ ಅಭ್ಯಾಸವು ಸೂರ್ಯದೇವನ ಆಶೀರ್ವಾದವನ್ನು ಆಕರ್ಷಿಸುತ್ತದೆ ಮತ್ತು ನಿಮ್ಮ ವೃತ್ತಿ ಭವಿಷ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸ ಮತ್ತು ವೃತ್ತಿಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜ್ಯೋತಿಷ್ಯ ತತ್ವಗಳ ಪ್ರಕಾರ, ತಾಮ್ರವು ಸೂರ್ಯನೊಂದಿಗೆ ಸಂಬಂಧ ಹೊಂದಿದೆ. ಮತ್ತು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ. ಈ ಆಚರಣೆಯನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಸೂರ್ಯನ ಸಕಾರಾತ್ಮಕ ಶಕ್ತಿಗಳೊಂದಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳಬಹುದು.

ಗಣೇಶ ಬೀಜ ಮಂತ್ರ ಪಠನ
ಗಣೇಶನೆಂದರೆ ವಿಘ್ನನಿವಾರಕ. ಅಡೆತಡೆಗಳನ್ನು ನಿವಾರಿಸುವ ದೇವತೆ. ಭಗವಾನ್ ಗಣೇಶನನ್ನು ಜ್ಯೋತಿಷ್ಯದಲ್ಲಿ ಹೆಚ್ಚು ಪೂಜಿಸಲಾಗುತ್ತದೆ. ಗಣೇಶ ಬೀಜ ಮಂತ್ರವನ್ನು ಪಠಿಸುವುದು ನಿಮ್ಮ ವೃತ್ತಿಪರ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಮತ್ತು ಯಶಸ್ಸನ್ನು ಸಾಧಿಸಲು ಪ್ರಬಲ ಪರಿಹಾರ. ಈ ಮಂತ್ರವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮತ್ತು ಧನಾತ್ಮಕತೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ವೃತ್ತಿಜೀವನಕ್ಕೆ ಸ್ಥಿರತೆಯನ್ನು ತರುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಮಂತ್ರವನ್ನು ನಿಯಮಿತವಾಗಿ ಪಠಿಸುವ ಮೂಲಕ, ನೀವು ಗಣೇಶನ ಆಶೀರ್ವಾದವನ್ನು ಪಡೆಯಬಹುದು.

ಈ 5 ರಾಶಿಯವರಿಗೆ ಗುರು ಪುಷ್ಯ ರಾಜಯೋಗದಿಂದ ವರ್ಷಾಂತ್ಯದಲ್ಲಿ ಭಾರಿ ಆದಾಯ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ

ಅರಿಶಿನ ಬಳಸಿ
ಗುರು ಗ್ರಹವು (Jupiter Planet) ನಿಮ್ಮ ಬೆಳವಣಿಗೆ (Growth), ಅದೃಷ್ಟ (Luck) ಮತ್ತು ಸಮೃದ್ಧಿಯನ್ನು (Prosperity) ಪ್ರಭಾವಿಸುತ್ತಾನೆ. ನಿಮ್ಮ ಉತ್ತಮ ಪ್ರಯತ್ನಗಳ ಹೊರತಾಗಿಯೂ ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನೀವು ಹೆಣಗಾಡುತ್ತಿದ್ದರೆ, ಗುರುವನ್ನು ನೀವು ಒಲಿಸಿಕೊಳ್ಳಬೇಕಿದೆ ಎಂದರ್ಥ. ನಿಮ್ಮ ಸ್ನಾನದ ನೀರಿಗೆ ಸ್ವಲ್ಪ ಪ್ರಮಾಣದ ಅರಿಶಿನವನ್ನು ಸೇರಿಸಿ ಬಳಸಿ. ಅರಿಶಿನವು ಗುರು ಗ್ರಹದೊಂದಿಗೆ ಸಂಪರ್ಕ (connection)  ಹೊಂದಿದೆ. ಅದರ ಹಳದಿ ಬಣ್ಣವು ಬೆಳವಣಿಗೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಈ ಸರಳ ಮತ್ತು ಪರಿಣಾಮಕಾರಿ ಪರಿಹಾರವು ಗುರುಗ್ರಹದ ಸಕಾರಾತ್ಮಕ (Positive) ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು (success) ಮತ್ತು ಬೆಳವಣಿಗೆಯನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹಣೆಯ ಮೇಲೆ ಅರಿಶಿನದ ತಿಲಕವನ್ನು ಸಹ ಧರಿಸಿ. ಇದು ಅದೃಷ್ಟವನ್ನು ತರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ. ನಿಮ್ಮ ದಿನಚರಿಯಲ್ಲಿ ಅರಿಶಿನವನ್ನು ಸೇರಿಸಿದರೆ ಗುರುಗ್ರಹದ ಪ್ರಯೋಜನಕಾರಿ ಶಕ್ತಿಯನ್ನು ಬಳಸಿಕೊಳ್ಳಬಹುದು.

 

Latest Videos
Follow Us:
Download App:
  • android
  • ios