ಶನಿವಾರ ಜನಿಸಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?
ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವು ಅವನ ರಾಶಿಚಕ್ರ ಚಿಹ್ನೆ (zodiac sign), ಜಾತಕ ಮತ್ತು ಜನ್ಮ ದಿನಾಂಕವನ್ನು ಅವಲಂಬಿಸಿರುತ್ತದೆ ಅನ್ನೋದು ನಿಮಗೆ ಗೊತ್ತೇ ಇದೆ. ಒಂದೊಂದು ರಾಶಿಯಲ್ಲಿ ಜನಿಸಿದವರ ಯೋಗ, ಅದೃಷ್ಟ ಬೇರೆ ಬೇರೆಯಾಗಿರುತ್ತೆ. ಹಾಗಿದ್ರೆ ಶನಿವಾರ ಜನಿಸಿದವರ ಬಗ್ಗೆ ತಿಳಿಯಬೇಕು ಅನ್ನೋದಾದ್ರೆ ನೀವು ಇದನ್ನ ಓದಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೀವನದಲ್ಲಿ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವು ಅವನ ರಾಶಿಚಕ್ರ ಚಿಹ್ನೆ (zodiac sign), ಜಾತಕ ಮತ್ತು ಜನ್ಮ ದಿನಾಂಕವನ್ನು ಅವಲಂಬಿಸಿರುತ್ತದೆ. ಪ್ರತಿ ದಿನವು ತನ್ನದೇ ಆದ ಪ್ರಾಮುಖ್ಯತೆ ಮತ್ತು ಶಕ್ತಿಯನ್ನು ಹೊಂದಿರುತ್ತದೆ. ಮಗು ಜನಿಸಿದ ವಾರದ ಗುಣಗಳು ಸಹ ಇದರಲ್ಲಿ ಪ್ರತಿಬಿಂಬಿತವಾಗುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿವಾರವು ಶನಿದೇವನಿಗೆ ಸಮರ್ಪಿತವಾದ ದಿನವಾಗಿದೆ. ಶನಿವಾರ ಜನಿಸಿದ ಜನರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಯಾರ ಮೇಲೆ ಶನಿದೇವನು ಜೀವಮಾನದ ಪ್ರಭಾವವನ್ನು ಬೀರುತ್ತಾನೆ ನೋಡೋಣ…
ಶನಿವಾರ ಜನಿಸಿದವರು ಈ ರೀತಿ ಇರುತ್ತಾರೆ…
ಶನಿವಾರ ಜನಿಸಿದವರು ಸ್ವಾಭವತಃ ಕಷ್ಟಪಟ್ಟು ದುಡಿಯುವವರು. ತಮ್ಮ ಕಠಿಣ ಪರಿಶ್ರಮದಿಂದ, (hard work) ಈ ಜನರು ಅದೃಷ್ಟವನ್ನು ತಲೆಕೆಳಗಾಗಿಸುತ್ತಾರೆ. ಇವರು ಸುಮ್ಮನೆ ಕುಳಿತು ತಿನ್ನುವವರು ಅಲ್ಲವೇ ಅಲ್ಲ, ಯಾವುದೇ ಕೆಲಸವನ್ನು ಸಹ ಶ್ರಮದಿಂದ ಮಾಡಿ, ಅದರಿಂದ ಪ್ರತಿಫಲ ಪಡೆಯುವವರು ಇವರಾಗಿರುತ್ತಾರೆ.
ಈ ದಿನ ಜನಿಸಿದ ಜನರು ತಾವು ಮಾಡಲು ನಿರ್ಧರಿಸಿದ ಯಾವುದೇ ಕೆಲಸದಲ್ಲಿ ಜಯ (success) ಸಾಧಿಸಿದ ನಂತರವೇ ತಮ್ಮ ಪ್ರಾಣ ಬಿಡುತ್ತಾರೆ. ಅಂದರೆ ಇವರು ದೃಢ ನಿರ್ಧಾರ ಮಾಡುವವರಾಗಿರುತ್ತಾರೆ. ತಾವು ಹಿಡಿದ ಕೆಲಸ ಮುಗಿಸುವವರೆಗೆ ಇವರು ಸುಮ್ಮನೆ ಇರೋದೇ ಇಲ್ಲ.
ಶನಿವಾರ ಜನಿಸಿದ (saturday born) ಜನರು ಯಾವಾಗಲೂ ಸಹಾಯ ಮಾಡಲು ಸಿದ್ಧರಿರುತ್ತಾರೆ. ಈ ಜನರು ದಾನ ಮಾಡಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ತಮ್ಮ ಕೈಯಲ್ಲಿ ಏನೂ ಇಲ್ಲದಿದ್ದರೂ, ಕೈಯಲ್ಲಿ ಏನಿದೆಯೋ ಅದನ್ನೆ ಅವರು ದಾನವಾಗಿ ನೀಡುತ್ತಾರೆ. ಇವರು ಮಹಾದಾನಿಗಳು.
ಜೀವನದ ಆರಂಭಿಕ ಹಂತಗಳಲ್ಲಿ, ಅವರು ಆನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆದರೆ ನಂತರದ ಅವರ ಜೀವನವು ಸಂತೋಷದಿಂದ ತುಂಬಿರುತ್ತದೆ. ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ, ಯಾಕೆಂದರೆ ನಿಮ್ಮ ಗುಣ ಸ್ವಭಾವ, ಕಠಿಣ ಪರಿಶ್ರಮ ಮುಂದೆ ನಿಮಗೆ ಜೀವನದಲ್ಲಿ ಅತ್ಯುತ್ತಮ ಸ್ಥಾನವನ್ನು ನೀಡುತ್ತದೆ.
ಅಂತಹ ಜನರು ಕೋಪ (angry) ಸ್ವಭಾವದವರು. ಈ ಜನರು ಬಹಳ ಬೇಗನೆ ಕೋಪಗೊಳ್ಳುತ್ತಾರೆ. ಇವರು ಮನಸ್ಸಿನೊಳಗೆ ಏನೂ ಇಟ್ಟುಕೊಳ್ಳುವುದಿಲ್ಲ ನಿಜಾ. ಆದರೆ ಸಣ್ಣ ಪುಟ್ಟ ವಿಷಯಕ್ಕೂ ಬೇಗನೆ ಕೋಪಗೊಳ್ಳುತ್ತಾರೆ. ಇವರ ಈ ಗುಣ ಸ್ವಭಾವದಿಂದ ಕೆಲವೊಮ್ಮೆ ಕೆಟ್ಟದ್ದೂ ಘಟಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಶನಿವಾರ ಜನಿಸಿದ ಜನರು ಅಂತರ್ಮುಖಿಗಳು, ಇವರು ಪ್ರತಿಭೆಯಿಂದ ಶ್ರೀಮಂತರಾಗಿದ್ದಾರೆ. ಇದು ಯೋಗ್ಯವಾಗಿದ್ದರೂ, ಅವರು ಕಡಿಮೆ ಗೌರವವನ್ನು ಪಡೆಯುತ್ತಾರೆ. ಅವರು ಕೆಟ್ಟವರಾಗಿರೋದಿಲ್ಲ, ಆದರೆ ಕೆಲವೊಮ್ಮೆ ಸಂದರ್ಭಗಳು ಅವರನ್ನು ಕೆಟ್ಟವರಾಗುವಂತೆ ಮಾಡುತ್ತದೆ. .