Asianet Suvarna News Asianet Suvarna News

Solar Eclipse 2022: ಈ ವರ್ಷದಲ್ಲೆಷ್ಟು ಬಾರಿ ಸೂರ್ಯ ಗ್ರಹಣ?

ಈ ವರ್ಷ 2 ಬಾರಿ ಸೂರ್ಯ ಗ್ರಹಣ ಕಾಣಿಸಿಕೊಳ್ಳಲಿದೆ. ಆದರೆ, ಇದು ಭಾರತದಲ್ಲಿ ಕಾಣಿಸಿಕೊಳ್ಳಲಿದೆಯೇ? ಅಥವಾ ಬೇರೆ ದೇಶಗಳಲ್ಲಿ ಮಾತ್ರವೇ? ಯಾವ ರಾಶಿಯವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬ ವಿಷಯಗಳ ಬಗ್ಗೆ ತಿಳಿಯೋಣ...

How many Solar eclipses in this year
Author
Bangalore, First Published Mar 22, 2022, 6:24 PM IST

ಗ್ರಹಣದ (Eclipse) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದು ಜ್ಯೋತಿಷ್ಯ ಶಾಸ್ತ್ರ (Astrology) ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಮಹತ್ವವನ್ನು ಪಡೆದುಕೊಂಡಿದೆ. ಪಂಚಾಂಗಗಳಲ್ಲಿ (Panchanga) ಗ್ರಹಣದ ಬಗ್ಗೆ ಮುಂಚಿತವಾಗಿಯೇ ತಿಳಿಸಿಕೊಡಲಾಗುತ್ತದೆ. ಯಾವ ಸಮಯದಲ್ಲಿ ಗ್ರಹಣವಿದೆ? ಈ ಬಾರಿಯ ಗ್ರಹಣ ನಮ್ಮ ಭಾರತಕ್ಕೆ (India) ಬರಲಿದೆಯೇ..? ಅಥವಾ ಭಾರತಕ್ಕೆ ಬಾಧಿಸುವುದಿಲ್ಲವೇ? ನಮ್ಮ ದೇಶದಲ್ಲಿ ಗ್ರಹಣವಾದರೆ ಯಾವಾಗ..? ಯಾರ ಮೇಲೆ ಪರಿಣಾಮ ಬೀರುತ್ತದೆ? ಏನು ಮಾಡಬೇಕು..? ಅನುಷ್ಠಾನಗಳನ್ನು ಯಾವ ರೀತಿ ಮಾಡಬೇಕು ಎಂಬಿತ್ಯಾದಿ ಅಂಶಗಳನ್ನು ಮೊದಲೇ ಲೆಕ್ಕಾಚಾರ ಹಾಕಿಬಿಡಲಾಗುತ್ತದೆ.

ಇವೆಲ್ಲ ಲೆಕ್ಕಾಚಾರಗಳೂ ಸಹ ಗ್ರಹಗತಿಗಳ ಆಧಾರದ ಮೇಲೆ ನಡೆಯುತ್ತದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹಣಕ್ಕೆ ರಾಹು ಕಾರಣವಾದರೆ, ಚಂದ್ರ ಗ್ರಹಣಕ್ಕೆ ಕೇತು ಕಾರಣವಾಗಲಿದೆ. ಈ ಬಾರಿ ಭಾರತದಲ್ಲಿ ಎಷ್ಟು ಬಾರಿ ಸೂರ್ಯ ಗ್ರಹಣ ಇದೆ ಎಂದು ನೋಡುವುದಾದರೆ ಅದು 2 ಬಾರಿ ಎಂಬುದು ತಿಳಿದುಬರುತ್ತದೆ. ಹಾಗಾದರೆ, ಈ ಗ್ರಹಣ ಒಳ್ಳೆಯದೇ..? ಎಂಬ ಪ್ರಶ್ನೆ ಮೂಡುವುದು ಸಹಜ.

ಜ್ಯೋತಿಷ್ಯ ಶಾಸ್ತ್ರದ (Astrology) ಅನ್ವಯ ಗ್ರಹಣಗಳು ಒಳ್ಳೆಯದಲ್ಲ. ಇದು ಅಶುಭ ಕಾರಕ. ಆದರೆ, ಕೆಲವೊಮ್ಮೆ ಕೆಲವು ರಾಶಿಯವರಿಗೆ ಶುಭ ಫಲವನ್ನು ಕೊಡುತ್ತದೆ. ಇನ್ನು ಕೆಲವು ರಾಶಿಯವರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಸೂರ್ಯ ಗ್ರಹಣದ ಬಗ್ಗೆ ನೋಡೋಣ...
ಈ ವರ್ಷ ಎರಡು ಸೂರ್ಯಗ್ರಹಣಗಳು (Sun Eclipse) ಮತ್ತು ಎರಡು ಚಂದ್ರ ಗ್ರಹಣಗಳು ಬರುತ್ತವೆ. ಆದರೆ, ನಾವೀಗ ಸೂರ್ಯ ಗ್ರಹಣದ ಬಗ್ಗೆ ನೋಡೋಣ... 

ಖಗೋಳಶಾಸ್ತ್ರದ (astronomy) ಪ್ರಕಾರ ಚಂದ್ರನು ಭೂಮಿಯ ಮಧ್ಯದಲ್ಲಿ ಸೂರ್ಯನಿಗೆ ಅಡ್ಡ  ಬಂದಾಗ ಅದನ್ನು ಸೂರ್ಯಗ್ರಹಣ ಎನ್ನಲಾಗುತ್ತದೆ. ಇನ್ನೊಂದು ವಿಚಾರವೆಂದರೆ ಗ್ರಹಣಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಸಹ ಮಾಡುವಂತಿಲ್ಲ. ಅಲ್ಲದೆ ಇನ್ನೂ ಅನೇಕ ಕಟ್ಟುಪಾಡುಗಳಿವೆ. 

ಇದನ್ನು ಓದಿ: ರಾಹು, ಕೇತು, ಶನಿಯ ಕ್ರೂರ ದೃಷ್ಟಿಯನ್ನು ತಣಿಸಲು ಹೀಗ್ಮಾಡಿ..

ಮೊದಲ ಸೂರ್ಯಗ್ರಹಣ ಯಾವಾಗ?
ಈ ವರ್ಷದ ಮೊದಲ ಸೂರ್ಯ ಗ್ರಹಣವು ಏಪ್ರಿಲ್ (April) 30 ರಂದು ಕವಿಯಲಿದ್ದು, ಭಾರತದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಇದರ ಬಗ್ಗೆ ಚಿಂತೆ ಮಾಡಬೇಕಾದ ಯಾವುದೇ ಅಗತ್ಯವಿಲ್ಲ. ಸೂರ್ಯ ಗ್ರಹಣದ ಸೂತಕ ನಮ್ಮ ದೇಶದವರಿಗೆ ಬಾಧಿಸುವುದಿಲ್ಲ. ನಿರಾಂತಕವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಈ ಬಾರಿಯ ಸೂರ್ಯ ಗ್ರಹಣವು ವೃಷಭ ರಾಶಿಯಲ್ಲಾದರೂ (Taurus) ಹನ್ನೆರಡು  ರಾಶಿಗಳವರಿಗೂ (zodiac signs) ಪ್ರಭಾವವನ್ನು ಬೀರಲಿದೆ. ಏಪ್ರಿಲ್ 30ರ ಶನಿವಾರ (Saturday) ಮಧ್ಯಾಹ್ನ 12:15ಕ್ಕೆ ಪ್ರಾರಂಭವಾಗಿ ಸಂಜೆ 4 ಗಂಟೆಗೆ ಅಂತ್ಯಗೊಳ್ಳಲಿದೆ. 

ಎಲ್ಲಿಲ್ಲಿ ಸೂರ್ಯ ಗ್ರಹಣದ ಗೋಚಾರ?
ಈ ಬಾರಿಯ ಸೂರ್ಯ ಗ್ರಹಣವು ದಕ್ಷಿಣ ಆಫ್ರಿಕಾ (South Africa), ಅಮೆರಿಕದ ಕೆಲವು ಪ್ರದೇಶಗಳು, ಅಟ್ಲಾಂಟಿಕ್ (Atlantic) ಹಾಗೂ ಅಂಟಾರ್ಟಿಕ್ ಸಾಗರ (Antarctic Ocean) ಮತ್ತು ಪೆಸಿಫಿಕ್ ಸಾಗರದಲ್ಲಿ (Pacific Ocean) ಗೋಚರಿಸಲಿದೆ.

ಎರಡನೇ ಸೂರ್ಯಗ್ರಹಣ
ಈ ವರ್ಷದ 2ನೇ ಸೂರ್ಯಗ್ರಹಣವು ಇದೇ ಅಕ್ಟೋಬರ್ 25ರಂದು ಕಾಣಿಸಿಕೊಳ್ಳಲಿದೆ. ಈ ಗ್ರಹಣ ಸಹ ವೃಶ್ಚಿಕ ರಾಶಿಯಲ್ಲುಂಟಾಗಲಿದ್ದು, ಭಾರತಕ್ಕೆ ಇದು ಯಾವುದೇ ರೀತಿಯಲ್ಲಿಯೂ ಬಾಧಿಸುವುದಿಲ್ಲ. ಅಂದು ಬೆಳಗ್ಗೆ 4:29ಕ್ಕೆ ಗ್ರಹಣ ಆರಂಭವಾಗಿ ಸಂಜೆ 5:42ಕ್ಕೆ ಮುಕ್ತಾಯವಾಗಲಿದೆ. ಅಂದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದರ ಸೂತಕದ ಅವಧಿ ಗಣನೆಗೆ ಬರುವುದಿಲ್ಲ. ಭಾಗಶಃ ಗ್ರಹಣ ಇದಾಗಿದ್ದು, ಯೂರೋಪ್, ಈಶಾನ್ಯ ಆಫ್ರಿಕಾ, ಅಟ್ಲಾಂಟಿಕ್ ಸಾಗರ (Atlantic Ocean) ಹಾಗೂ ರಷ್ಯಾದ ಕೆಲ ರಾಷ್ಟ್ರಗಳಲ್ಲಿ ಕಂಡು ಬರಲಿದೆ.

ಇದನ್ನು ಓದಿ: ಸಾಲ ಪಡೆಯುವಾಗ, ಕೊಡುವಾಗ ಈ ನಿಯಮ ಪಾಲಿಸ್ಲೇಬೇಕು!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios