Asianet Suvarna News Asianet Suvarna News

ಮನೆಯಲ್ಲಿ ಎಷ್ಟು ಬಾಲ ಗೋಪಾಲ ಮೂರ್ತಿ ಇಡಬಹುದು? ನಿಯಮಗಳೇನು?

ಕೃಷ್ಣನ ಭಕ್ತರು, ಹೋದ ಕಡೆಯಲ್ಲೆಲ್ಲ ಕೃಷ್ಣನ ಮೂರ್ತಿಯನ್ನು ಮನೆಗೆ ತರ್ತಾರೆ. ಅದನ್ನು ದೇವರ ಮನೆಯಲ್ಲಿ ಸ್ಥಾಪಿಸಿ ಪೂಜೆ ಮಾಡ್ತಾರೆ. ಬಾಲ ಗೋಪಾಲನ ಮೂರ್ತಿ ಎಲ್ಲರನ್ನೂ ಆಕರ್ಷಿಸೋದು ಹೆಚ್ಚು. ಹಾಗಂತ ನಾಲ್ಕೈದು ಮೂರ್ತಿ ತಂದು ಪೂಜೆ ಮಾಡೋದು ಎಷ್ಟು ಸರಿ?
 

How Many Laddu Gopal Idols Can We Keep At Home
Author
First Published Jun 8, 2023, 3:24 PM IST | Last Updated Jun 8, 2023, 3:24 PM IST

ಮನೆಯಲ್ಲಿ ಅತಿ ಮುಖ್ಯವಾದ ಭಾಗ ಎಂದರೆ ಅದು ದೇವರಕೋಣೆ. ದೇವರ ಮನೆಯಲ್ಲಿ ಮೂರ್ತಿಗಳು ಮನೆಯ ವಿನ್ಯಾಸವನ್ನು ಇಮ್ಮಡಿಗೊಳಿಸುತ್ತೆ. ಅಲ್ಲಿ ನೆಲೆಸುವ ದೇವತೆಗಳು ಮನೆಯ ರಕ್ಷಣೆಯನ್ನು ಮಾಡುತ್ತಾರೆ ಹಾಗೂ ಕುಟುಂಬದ ಸುಖ ಸಂತೋಷಕ್ಕೆ ಕಾರಣವಾಗಿರುತ್ತಾರೆ. ದೇವರ ಮೂರ್ತಿಗಳನ್ನಿಟ್ಟು ಅದಕ್ಕೆ ಸಲ್ಲಿಸುವ ಪೂಜೆಗಳಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತೆ. ಪುಟ್ಟ ಕೃಷ್ಣ (Krishna) ನ ಬಾಲ್ಯದ ಆಟ ತುಂಟಾಟಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಜಗದೊಡೆಯ ಕೃಷ್ಣನೆಂದು ಆತನನ್ನು ಪೂಜಿಸುತ್ತಾರೆ. ಸಕಲ ಕಷ್ಟಗಳನ್ನು ನಿವಾರಿಸುವ ಕೃಷ್ಣ ಹಲವಾರು ಅವತಾರಗಳನ್ನು ಎತ್ತಿದ್ದಾನೆ. ಅವನ ಎಲ್ಲ ಅವತಾರಗಳನ್ನೂ ಭಕ್ತರು ಮೂರ್ತಿ (Idol) ರೂಪದಲ್ಲಿ ಪೂಜಿಸುತ್ತಾರೆ.

ಎಲ್ಲ ಮೂರ್ತಿಗಳಂತೆಯೇ ಅನೇಕರು ಲಡ್ಡು ಗೋಪಾಲನ ಮೂರ್ತಿಯನ್ನು ಕೂಡ ಮನೆಯಲ್ಲಿಟ್ಟು ಪೂಜಿಸಿ ನೈವೇದ್ಯವನ್ನು ನೀಡುತ್ತಾರೆ. ದೇವರ ಮನೆಯಲ್ಲಿನ ಮೂರ್ತಿಗಳು ಶುಭ (Good Luck) ದ ಸಂಕೇತ. ಹಾಗಂತ ನಾವು ಬೇಕಾಬಿಟ್ಟಿ ಎಲ್ಲ ದೇವರ ಮೂರ್ತಿಗಳನ್ನು ದೇವರ ಮನೆಯಲ್ಲಿ ತಂದಿಡೋ ಹಾಗಿಲ್ಲ. ದೇವರ ಮೂರ್ತಿಗಳನ್ನು ಸ್ಥಾಪಿಸುವುದಕ್ಕೂ ಕೆಲವು ನಿಯಮಗಳು ಇವೆ. ಎಲ್ಲ ದೇವರ ಹಾಗೆ ಲಡ್ಡು ಗೋಪಾಲ ಮೂರ್ತಿಯನ್ನು ಮನೆಯ ದೇವರ ಮನೆಯಲ್ಲಿ ಇರಿಸಲು ಕೂಡ ಕೆಲವು ನಿಯಮ ಇದೆ.

ಕನಸಿನಲ್ಲಿ 'ಎತ್ತಿನ ಗಾಡಿ' ಬಂದರೆ ಏನಾಗುತ್ತೆ?: ಕಾಗೆ ಕಂಡರೆ ವಿಪತ್ತು ಸಂಭವ

ದೇವರ ಮನೆಯಲ್ಲಿ ಎಷ್ಟು ಲಡ್ಡು ಗೋಪಾಲನನ್ನು ಇಡಬಹುದು? : ನೀವು ದೇವರ ಕೋಣೆಯಲ್ಲಿ ಬಾಲ ಲಡ್ಡು ಕೃಷ್ಣನ ಮೂರ್ತಿಯನ್ನು ಇಡುವುದಾದರೆ ಕೇವಲ ಒಂದು ಮೂರ್ತಿಯನ್ನು ಇಡುವುದು ಒಳ್ಳೆಯದು. ಆ ಒಂದು ಮೂರ್ತಿಗೆ ಸರಿಯಾದ ನಿಯಮದ ಪ್ರಕಾರ ಪೂಜೆ ಮಾಡಿ ನೈವೇದ್ಯವನ್ನು ಅರ್ಪಿಸಬೇಕು. ಬಾಲ ಗೋಪಾಲನನ್ನು ಪ್ರತಿನಿತ್ಯ ಶೃಂಗರಿಸುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ಸದಾ ನೆಲೆಸುತ್ತದೆ.

ಒಂದಕ್ಕಿಂತ ಹೆಚ್ಚು ಗೋಪಾಲನ ಮೂರ್ತಿಯನ್ನು ಇಡಬಹುದೇ?: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ದೇವರ ಒಂದೇ ಮೂರ್ತಿಯನ್ನು ಇಡುವುದು ಶುಭ. ಹಾಗೊಮ್ಮೆ ಗೋಪಾಲನ ಎರಡು ಮೂರ್ತಿ ನಿಮ್ಮ ಮನೆಯಲ್ಲಿ ಇದೆ ಎಂದಾದರೆ ಆ ಎರಡೂ ಮೂರ್ತಿಗಳಿಗೂ ಪ್ರತ್ಯೇಕವಾದ ಪೂಜೆ ಮಾಡಬೇಕು. ಉದಾಹರಣೆಗೆ ಒಂದು ಮೂರ್ತಿಯನ್ನು ಬಾಲ ಗೋಪಾಲನ ರೂಪದಲ್ಲಿ ಪೂಜಿಸಿದರೆ ಇನ್ನೊಂದು ಮೂರ್ತಿಯನ್ನು ಬಾಲ ಬಲರಾಮನ ರೂಪದಲ್ಲಿ ಪೂಜಿಸಬೇಕು. ಇದರಿಂದ ಆ ಪೂಜೆಯ ಪೂರ್ಣ ಫಲ ನಿಮಗೆ ಸಿಗುತ್ತದೆ.

ಲಡ್ಡು ಗೋಪಾಲನ ಮೂರ್ತಿ ಹೇಗಿರಬೇಕು? : ಲಡ್ಡು ಗೋಪಾಲನ ಮೂರ್ತಿ ಹೆಚ್ಚು ದೊಡ್ಡದಾಗಿರಬಾರದು. ನಿಮ್ಮ ಬೆರಳಿನಷ್ಟು ಅಥವಾ 3 ಇಂಚಿನ ಮೂರ್ತಿಯನ್ನು ಇಡುವುದು ಬಹಳ ಶುಭವಾಗಿದೆ. ಇದಕ್ಕಿಂತ ದೊಡ್ಡ ಮೂರ್ತಿಯನ್ನು ಮನೆಯಲ್ಲಿ ಪೂಜೆ ಹಾಗೂ ಸ್ಥಾಪನೆ ಮಾಡಬಾರದು.

Vastu Tips: ಈ ಆಕಾರದ ಗೋಡೆ ಗಡಿಯಾರ ನಿಮ್ಮ ಮನೆಯ ನೆಮ್ಮದಿಯನ್ನೇ ಕಸಿಯುತ್ತೆ, ಎಚ್ಚರ!

ಲಡ್ಡು ಗೋಪಾಲನನ್ನು ಸ್ಥಾಪಿಸುವ ನಿಯಮಗಳು : ಮನೆಯಲ್ಲಿ ಲಡ್ಡು ಗೋಪಾಲನನ್ನು ಸ್ಥಾಪಿಸಿ ಪೂಜಿಸುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಮನೆಯಲ್ಲಿ ಸಮೃದ್ಧಿ ನೆಲೆಸುತ್ತೆ ಹಾಗೂ ಪೂಜೆಯ ಸಂಪೂರ್ಣ ಫಲ ದೊರೆಯುತ್ತೆ.
• ಲಡ್ಡು ಗೋಪಾಲನ್ನು ದೇವರ ಮನೆಯಲ್ಲಿ ಸ್ಥಾಪಿಸಿದ ನಂತರ ಪ್ರತಿದಿನವೂ ಕೃಷ್ಣನಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆಯನ್ನು ಹಾಕಬೇಕು.
• ಲಡ್ಡು ಗೋಪಾಲನಿಗೆ ದಿನದಲ್ಲಿ ಕನಿಷ್ಠ ನಾಲ್ಕು ಬಾರಿ ನೈವೇದ್ಯವನ್ನು ಅರ್ಪಿಸಬೇಕು. ನೈವೇದ್ಯ ಸಾತ್ವಿಕ ಭೋಜನವೇ ಆಗಿರಬೇಕು.
• ಗೋಪಾಲನ ವಸ್ತ್ರವನ್ನು ಪ್ರತಿದಿನವೂ ಬದಲಿಸಿ, ಶೃಂಗರಿಸಬೇಕು. ಗೋಪಾಲಕೃಷ್ಣನ ಹಣೆಗೆ ಚಂದನದ ತಿಲಕವಿಡಬೇಕು.
• ಮನೆಯಲ್ಲಿ ಕೃಷ್ಣನ ಮೂರ್ತಿಯನ್ನು ಒಂಟಿಯಾಗಿ ಇಡಕೂಡದು. ಹಾಗೊಮ್ಮೆ ಮನೆಯಲ್ಲಿ ಯಾರೂ ಇರುವುದಿಲ್ಲ ಎಂದಾದರೆ ಮೂರ್ತಿಯನ್ನು ನಿಮ್ಮ ಜೊತೆಗೇ ಒಯ್ಯಬೇಕು.
• ರಾತ್ರಿಯ ಸಮಯದಲ್ಲಿ ಗೋಪಾಲ ಮೂರ್ತಿಯನ್ನು ಮಲಗಿಸಬೇಕು ಮತ್ತು ದೇವರ ಕೋಣೆಯ ಪರದೆಯನ್ನು ಹಾಕಬೇಕು.
• ಬೆಳ್ಳಿಗ್ಗೆ ಎದ್ದು ಸ್ನಾನ ಮಾಡಿ ಗೋಪಾಲನಿಗೆ ಆರತಿ ಎತ್ತಬೇಕು ಹಾಗೇ ಸಂಜೆ ಕೂಡ ಆರತಿ ಮಾಡಬೇಕು.

Latest Videos
Follow Us:
Download App:
  • android
  • ios