Asianet Suvarna News Asianet Suvarna News

Hindu Culture: ಸಾಧು – ಸಂತರ ಅಂತ್ಯ ಸಂಸ್ಕಾರ ಹೇಗಿರುತ್ತೆ?

ನಮ್ಮ ದೇಶದಲ್ಲಿ ಅನೇಕ ಧರ್ಮಗಳಿವೆ, ಧರ್ಮ ಗುರುಗಳಿದ್ದಾರೆ. ಪ್ರತಿಯೊಬ್ಬರೂ ಅವರದೇ ಪದ್ಧತಿಯಲ್ಲಿ ಅಂತ್ಯ ಸಂಸ್ಕಾರ ಮಾಡ್ತಾರೆ. ಸಾಧು ಸಂತರ ಅಂತ್ಯಸಂಸ್ಕಾರ ಕೂಡ ಭಿನ್ನವಾಗಿದೆ. ಹಿಂದೂ ಸ್ವಾಮಿಗಳಿಗೆ ಅಗ್ನಿ ಸ್ಪರ್ಶ ಮಾಡೋದಿಲ್ಲ. ಯಾವ ವಿಧದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತೆ ಗೊತ್ತಾ?
 

How Last Rites Of Hindu Saint Happen
Author
First Published Sep 17, 2022, 4:47 PM IST

ಹುಟ್ಟಿದ ಮೇಲೆ ಸಾವು ನಿಶ್ಚಿತ. ಹುಟ್ಟುವ ಸಮಯ ಗೊತ್ತಿದ್ರೂ ಸಾಯುವ ದಿನ ಗೊತ್ತಿರೋದಿಲ್ಲ. ಭೂಮಿ ಮೇಲೆ ಕಾಲಿಟ್ಟವರೆಲ್ಲ ಒಂದಲ್ಲ ಒಂದು ದಿನ ದೇಹವನ್ನು ತ್ಯಜಿಸ್ತಾರೆ. ಸತ್ತ ನಂತ್ರ ದೇಹವನ್ನು ಹಾಗೆ ಬಿಡುವಂತಿಲ್ಲ. ದೇಹವನ್ನು ವಿಧಿ – ವಿಧಾನಗಳ ಮೂಲಕ ಅಂತ್ಯಕ್ರಿಯೆ ಮಾಡಲಾಗುತ್ತದೆ. ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಜಾತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ. ನಮ್ಮ ದೇಶದಲ್ಲಿ ಸಾಧು – ಸಂತರಿಗೆ ವಿಶೇಷ ಮಹತ್ವವಿದೆ. ಅವರನ್ನು ದೇವರ ಪ್ರತಿನಿಧಿ ಎಂದು ಭಾವಿಸಲಾಗುತ್ತದೆ. ಅವರು ಬದುಕಿದ್ದಾಗ ಅವರಿಗೆ ಪೂಜೆಗಳು ನಡೆಯುತ್ತವೆ. ಹಾಗೆಯೇ ಅವರು ದೇಹ ತ್ಯಾಗ ಮಾಡಿದಾಗ ಅವರ ಅಂತ್ಯಕ್ರಿಯೆಯನ್ನು ಪದ್ಧತಿ ಪ್ರಕಾರ ಮಾಡಲಾಗುತ್ತದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಮುಸ್ಲಿಂ ಸಮುದಾಯದಲ್ಲಿ ದೇಹವನ್ನು ಹೂಳಲಾಗುತ್ತದೆ. ಹೀಗೆ ಬೇರೆ ಬೇರೆ ಧರ್ಮದಲ್ಲಿ ಅಂತ್ಯಕ್ರಿಯೆ ಭಿನ್ನವಾಗಿದೆ. ಆದ್ರೆ ಹಿಂದೂ ಧರ್ಮದಲ್ಲಿ ಸಾಧು – ಸಂತರಿಗೆ ಮಾತ್ರ ಅಗ್ನಿ ಸ್ಪರ್ಶ ಮಾಡುವುದಿಲ್ಲ. ಸಾಧು – ಸಂತ (Sant ) ರ ದೇಹವನ್ನು ಏಕೆ ಸುಡುವುದಿಲ್ಲ ಎಂಬುದನ್ನು ನಾವಿಂದು ಹೇಳ್ತೇವೆ. 

ಸಾಧು – ಸಂತರ ದೇಹವನ್ನು ಏಕೆ ಸುಡುವುದಿಲ್ಲ ? :

ಭೂ ಸಮಾಧಿ (Earth Burial) : ಮೊದಲಿನಿಂದಲೂ ಸಾಧು, ಸಂತರ ಅಂತಿಮ ಸಂಸ್ಕಾರವನ್ನು 3 ರೀತಿಯಲ್ಲಿ ಮಾಡಲಾಗ್ತಿದೆ. ಇವುಗಳಲ್ಲಿ ಒಂದು ಭೂ ಸಮಾಧಿ. ಒಬ್ಬ ಸಂತ ಸಾಮಾನ್ಯ ಪ್ರಜೆಗಿಂತ ತುಂಬಾ ಭಿನ್ನವಾಗಿರುತ್ತಾನೆ. ಅವನು ತನ್ನ ಇಡೀ ಜೀವನದಲ್ಲಿ ಸಾಕಷ್ಟು ತಪಸ್ಸು ಮಾಡಿರುತ್ತಾನೆ. ಜೀವನದ ಸುಖ, ಸಂತೋಷವನ್ನು ತ್ಯಾಗ ಮಾಡಿರುತ್ತಾನೆ. ಈ ಕಾರಣಕ್ಕಾಗಿಯೇ ಅವರನ್ನು ದೇವರ ದೂತ ಎಂದು ನಂಬಲಾಗುತ್ತದೆ. ಹಾಗಾಗಿಯೇ ಅವರು ಈ ಜಗತ್ತನ್ನು ತೊರೆದಾಗ ಪದ್ಮಾಸನದ ಭಂಗಿಯಲ್ಲಿ ಅವರನ್ನು ಸಮಾಧಿ ಮಾಡಲಾಗುತ್ತದೆ. ಇದಕ್ಕೆ ಸಿದ್ಧಯೋಗದ ಭಂಗಿ ಎಂದೂ ಕರೆಯಲಾಗುತ್ತದೆ. ಸಮಾಧಿಗೆ ಪೂಜೆ, ಅರ್ಚನೆ ಮಾಡಿ ಭೂ ಸಮಾಧಿ ಮಾಡಲಾಗುತ್ತದೆ. ಗುರುವಿನ ಪಕ್ಕದಲ್ಲಿಯೇ ಸಾಧುಗಳನ್ನು ಸಮಾಧಿ ಮಾಡುವ ಪದ್ಧತಿಯಿದೆ. ಋಷಿಗಳು ಮತ್ತು ಸಂತರ ಸಮಾಧಿಯೊಂದಿಗೆ ಅವರ ವಸ್ತುಗಳನ್ನು ಸಹ ಸಮಾಧಿ ಮಾಡಲಾಗುತ್ತದೆ. 

ಅಗ್ನಿ ಸ್ಪರ್ಶ : ಸಾಮಾನ್ಯವಾಗಿ ಋಷಿಗಳು ಮತ್ತು ಸಂತರನ್ನು ಭೂಮಿ ಸಮಾಧಿ ಮಾಡಲಾಗುತ್ತದೆ. ಆದ್ರೆ ವೈಷ್ಣವ ಸಂತರು ದೇಹವನ್ನು ತ್ಯಾಗ ಮಾಡಿ, ಇಹಲೋಕ ತ್ಯಜಿಸಿದಾಗ ಅವರ ಅಂತಿಮ ಸಂಸ್ಕಾರ ಸ್ವಲ್ಪ ಭಿನ್ನವಾಗಿರುತ್ತದೆ. ಅವರ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ.  

ಜಲ ಸಮಾಧಿ : ಹಿಂದಿನ ಕಾಲದಲ್ಲಿ ಋಷಿ ಹಾಗೂ ಸಂತರು ಸಾವನ್ನಪ್ಪಿದಾಗ ಅವರನ್ನು ಜಲ ಸಮಾಧಿ ಮಾಡಲಾಗ್ತಾ ಇತ್ತು. ರಾಮಾಯಣ, ಮಹಾಭಾರತ ಮತ್ತು ಇತರ ಹಿಂದೂ ಪುರಾಣ ಗ್ರಂಥಗಳಲ್ಲಿ  ಭಾರತೀಯ ಸಂತರನ್ನು ಜಲ ಸಮಾಧಿ ಮಾಡಿರುವ  ಉಲ್ಲೇಖವಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಕಡಿಮೆಯಾಗಿದೆ. ಇದಕ್ಕೆ ಅನೇಕರ ವಿರೋಧವೂ ಇದೆ. ಜಲ ಸಮಾಧಿಯಿಂದ ನೀರು ಕಲುಷಿತಗೊಳ್ಳುತ್ತದೆ. ಹಾಗಾಗಿ ಕೆಲವರು ಜಲಸಮಾಧಿಗೆ ವಿರೋಧ ವ್ಯಕ್ತಪಡಿಸ್ತಿದ್ದಾರೆ.   

ಭಾರತದಲ್ಲಿ Karwa Chauth ಶುರುವಾಗಿದ್ದು ಎಲ್ಲಿಂದ ?

ಋಷಿಗಳ ಕೊನೆ ಆಸೆಯಂತೆ ಅಂತ್ಯ ಸಂಸ್ಕಾರ : ಋಷಿ, ಸಂತರಿಗೆ ಜಾತಿ, ಪಂಥವಿಲ್ಲ. ಹಾಗಾಗಿ ಅವರ ಜಾತಿಯಂತೆ ಅಂತ್ಯಸಂಸ್ಕಾರ ಮಾಡುವ ಬದಲು ಅವರ ಕೊನೆ ಆಸೆಗೆ ಮಹತ್ವ ನೀಡಲಾಗುತ್ತದೆ. ಕೆಲ ಸಂತರು ತಮ್ಮ ಅಂತ್ಯಸಂಸ್ಕಾರವನ್ನು ಹೇಗೆ ಮಾಡ್ಬೇಕು ಎಂಬುದನ್ನು ಮೊದಲೇ ಹೇಳಿರುತ್ತಾರೆ. ಅವರು ದೇಹ ತ್ಯಾಗ ಮಾಡಿದಾಗ ಅವರ ಕೊನೆಯ ಆಸೆಯಂತೆ ಅವರ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ.   

ಶನಿ ದೇವನನ್ನು ಕನಸಿನಲ್ಲಿ ಕಾಣೋದು ಶುಭ ಸಂಕೇತವೇ?

ಬೇರೆ ಧರ್ಮದಲ್ಲಿ ಹೇಗಿದೆ? : ಮುಸ್ಲಿಂ ಧರ್ಮದಲ್ಲಿ ಧಾರ್ಮಿಕ ವ್ಯಕ್ತಿಯನ್ನು ಮಲಗಿಸಿ ಸಮಾಧಿ ಮಾಡಲಾಗುತ್ತದೆ. ಕ್ರಿಶ್ಚಿಯನ್ ಧರ್ಮದಲ್ಲಿ ಕೂಡ ಮೆರವಣಿಗೆ ಮಾಡಿ ನಂತ್ರ ಸಮಾಧಿ ಮಾಡಲಾಗುತ್ತದೆ. ಪಾರ್ಸಿ ಧಾರ್ಮಿಕ ಗುರುಗಳ ಮೃತ ದೇಹವನ್ನು ಹಾಗೆಯೇ ಬಿಡಲಾಗುತ್ತದೆ. ಆ ದೇಹವನ್ನು ರಣಹದ್ದು ತಿನ್ನುತ್ತದೆ.
 

Follow Us:
Download App:
  • android
  • ios