ಭಾರತದಲ್ಲಿ Karwa Chauth ಶುರುವಾಗಿದ್ದು ಎಲ್ಲಿಂದ ?
ಭಾರತದಲ್ಲಿ ಕರ್ವಾ ಚೌತನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅನೇಕ ರಾಜ್ಯಗಳಲ್ಲಿ ಮಹಿಳೆಯರು ಉಪವಾಸ ವೃತ ಕೈಗೊಳ್ತಾರೆ. ಈ ಉಪವಾಸಕ್ಕೆ ಮಹತ್ವದ ಸ್ಥಾನವಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಕರ್ವಾ ಚೌತ್ ಆಚರಣೆ ಭಿನ್ನವಾಗಿದೆ.
ಕರ್ವಾ ಚೌತ್, ಹಿಂದೂ ಸಂಪ್ರದಾಯದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಉಪವಾಸಗಳಲ್ಲಿ ಇದು ಮುಖ್ಯವಾದದ್ದು. ದೇಶದ ಅನೇಕ ರಾಜ್ಯಗಳಲ್ಲಿ ಕರ್ವಾ ಚೌತ್ ಉಪವಾಸಕ್ಕೆ ಮಹತ್ವವಿದೆ. ಪತಿಯ ಆಯಸ್ಸು ವೃದ್ಧಿಗೆ ಮಹಿಳೆಯರು ಉಪವಾಸ ಮಾಡ್ತಾರೆ. ಕರ್ವಾ ಚೌತ್ ಎಂಬ ಶಬ್ಧ ಎರಡು ಪದಗಳಿಂದ ಬಂದಿದೆ. ಕರ್ವ ಎಂದರೆ ಮಣ್ಣಿನ ಮಡಿಕೆ ಎಂದರ್ಥ. ಹಾಗೆಯೇ ಚೌತ್ ಎಂದರೆ ಚತುರ್ಥಿ ಎಂದರ್ಥ. ಇಂದು ಕರ್ವಾ ಚೌತ್ ಎಲ್ಲಿಂದ ಶುರುವಾಯ್ತು ಹಾಗೆ ಅದನ್ನು ಏಕೆ ಮಾಡಲಾಗುತ್ತೆ ಎಂಬೆಲ್ಲ ವಿಷ್ಯವನ್ನು ಹೇಳ್ತೇವೆ.
ಕರ್ವಾ ಚೌತ್ (Karwa Chauth) ಇತಿಹಾಸ (History) : ಕರ್ವಾ ಚೌತ್ ಈಗ ಬಂದ ಪದ್ಧತಿಯಲ್ಲ. ಕರ್ವಾ ಚೌತ್ ಹಾಗೂ ಪುರಾಣಕ್ಕೆ ಸಂಬಂಧವಿದೆ. ಕರ್ವಾ ಚೌತ್ ಬಂದಿದ್ದು ಬ್ರಹ್ಮನಿಂದ ಎಂದು ಹೇಳಲಾಗುತ್ತದೆ. ದೇವರು ಮತ್ತು ರಾಕ್ಷಕರ ಮಧ್ಯೆ ಯುದ್ಧ ನಡೆಯುತ್ತಿತ್ತು. ಈ ವೇಳೆ ಉಪವಾಸ ಮಾಡುವಂತೆ ಬ್ರಹ್ಮ ದೇವನು, ದೇವರುಗಳ ಪತ್ನಿಯರಿಗೆ ಹೇಳಿದ್ದನಂತೆ. ಯುದ್ಧದಲ್ಲಿ ಎಲ್ಲ ದೇವರಿಗೆ ವಿಜಯ ಪ್ರಾಪ್ತಿಯಾಗಲಿ ಎನ್ನುವ ಕಾರಣಕ್ಕೆ ಬ್ರಹ್ಮ (Brahma) ಉಪವಾಸ ಮಾಡುವಂತೆ ಹೇಳಿದ್ದನಂತೆ. ದೇವರುಗಳ ಪತ್ನಿಯರು ನಿರ್ಜಲ ಉಪವಾಸ ಮಾಡಿದರಂತೆ. ನಂತ್ರ ಚಂದ್ರನಿಗೆ ಅರ್ಧ ನೀಡಿ, ಉಪವಾಸ ಮುಗಿಸಿದ್ರಂತೆ. ಹಿಂದು ಧರ್ಮದಲ್ಲಿ ಕರ್ವಾ ಚೌತ್ ಹೀಗೆ ಶುರುವಾಯ್ತು ಎನ್ನಲಾಗುತ್ತದೆ. ಪತ್ನಿಯರ ವೃತದಿಂದ ದೇವರುಗಳಿಗೆ ವಿಜಯ ಪ್ರಾಪ್ತಿಯಾಯ್ತು ಎನ್ನಲಾಗುತ್ತದೆ. ಹಾಗಾಗಿಯೇ ಈ ಉಪವಾಸಕ್ಕೆ ಹೆಚ್ಚು ಮಾನ್ಯತೆ ನೀಡಲಾಗಿದೆ.
ಕರ್ವಾ ಚೌತ್ ಉಪವಾಸ ಶುರುವಾಗಿದ್ದು ಭಾರತದ ಯಾವ ರಾಜ್ಯದಲ್ಲಿ? : ಕರ್ವಾ ಚೌತ್ ಅನ್ನು ಹಿಂದಿನ ಕಾಲದಲ್ಲಿ ವಿಶೇಷವಾಗಿ ಉತ್ತರ ಪ್ರದೇಶ, ಪಂಜಾಬ್, ದೆಹಲಿ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಈಗ ದೇಶದಾದ್ಯಂತ ಅನೇಕ ವಿವಾಹಿತ ಮಹಿಳೆಯರು ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ದಿನ ಕಳೆದಂತೆ ಈ ಹಬ್ಬವನ್ನು ಆಚರಿಸುವ ವಿಧಾನ ವಿಭಿನ್ನವಾಗಿವೆ. ಕರ್ವಾ ಚೌತನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪತ್ನಿಯರ ಜೊತೆ ಗಂಡಂದಿರು ಕೂಡ ಕರ್ವಾ ಚೌತ್ ಆಚರಿಸ್ತಾರೆ. ಆದ್ರೆ ಮೊದಲ ಬಾರಿ ವಾಯುವ್ಯ ಪ್ರದೇಶದ ರಾಜ್ಯಗಳಲ್ಲಿ ಕರ್ವಾ ಚೌತ್ ಶುರುವಾಯಿತು ಎಂದು ಹೇಳಲಾಗುತ್ತದೆ.
Astrology Tips: ಹಳೆ ಪೊರಕೆ ಎಸೆಯುವ ಮುನ್ನ ಇದು ನೆನಪಿರಲಿ
ರಾಜರ ಮೇಲೆ ಮೊಘಲರು ಆಕ್ರಮಣ ಮಾಡಿದಾಗ ಸೈನಿಕರು ರಾಜ್ಯವನ್ನು ರಕ್ಷಿಸಲು ಯುದ್ಧಕ್ಕಿಳಿದಿದ್ದರು. ಈ ವೇಳೆ ಸೈನಿಕರ ಪತ್ನಿಯರು ನಿರ್ಜಲ ಉಪವಾಸ ಮಾಡಿದ್ದರು. ಸೈನಿಕರನ್ನು ರಕ್ಷಿಸುವಂತೆ ದೇವರನ್ನು ಪ್ರಾರ್ಥಿಸಿದ್ದರು. ಇದೇ ಕಾರಣಕ್ಕೆ ಇಂದಿಗೂ ಪಂಜಾಬಿನಲ್ಲಿ ಈ ಉಪವಾಸವನ್ನು ಮಾಡಲಾಗುತ್ತದೆ. ಪಂಜಾಬ್‌ನಲ್ಲಿ ಸರ್ಗಿ ಪ್ರಾಮುಖ್ಯತೆ ಪಡೆದಿದೆ. ಕರ್ವಾ ಚೌತ್ ದಿನದಂದು ಅತ್ತೆ ಸೂರ್ಯೋದಯಕ್ಕೆ ಮೊದಲು ಸೊಸೆಯಂದಿರಿಗೆ ಸರ್ಗಿ ನೀಡುತ್ತಾರೆ. ಸರ್ಗಿಯ ತಟ್ಟೆಯನ್ನು ಅತ್ತೆ ಸಿದ್ಧಪಡಿಸಬೇಕು. ಇದರಲ್ಲಿ ಅನೇಕ ಖಾದ್ಯಗಳನ್ನು ಹಾಕಲಾಗುತ್ತದೆ. ಬೇರೆ ಬೇರೆ ರಾಜ್ಯದಲ್ಲಿ ಕರ್ವಾ ಚೌತ್ ಸರ್ಗಿ ಭಿನ್ನವಾಗಿರುತ್ತದೆ. ಹಾಗೆಯೇ ಭಿನ್ನವಾಗಿ ಕರ್ವಾ ಚೌತ್ ಆಚರಣೆ ಮಾಡಲಾಗುತ್ತದೆ. ಪತ್ನಿಯರು ನೀರು ಕೂಡ ಸೇವನೆ ಮಾಡದೆ ಈ ವೃತ ಆಚರಣೆ ಮಾಡಿದ್ರೆ ಮಂಗಳಕರ ಫಲಿತಾಂಶ ಪ್ರಾಪ್ತಿಯಾಗಲಿದೆ.
Vaastu Plants: ಮನೆಯೊಳಗೆ ಧನ ಹರಿಸುವ ಅದೃಷ್ಟದ ವಾಸ್ತು ಗಿಡಗಳಿವು
ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಕರ್ವಾ ಚೌತ್ ಉಪವಾಸವನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 13 ರಂದು ಮಧ್ಯಾಹ್ನ 1 ಗಂಟೆ 59 ನಿಮಿಷಕ್ಕೆ ಕರ್ವಾ ಚೌತ್ ಆರಂಭವಾಗುತ್ತದೆ. ಅಕ್ಟೋಬರ್ 14 ರಂದು ಬೆಳಿಗ್ಗೆ 3 ಗಂಟೆ 8 ನಿಮಿಷಕ್ಕೆ ಕರ್ವಾ ಚೌತ್ ಮುಗಿಯುತ್ತದೆ. ಹಾಗಾಗಿ ಈ ಬಾರಿ ಅಕ್ಟೋಬರ್ 13ರಂದು ಕರ್ವಾ ಚೌತ್ ಆಚರಿಸಲಾಗುತ್ತದೆ. ಈಗಾಗಲೇ ಕರ್ವಾ ಚೌತ್ ಗೆ ತಯಾರಿ ಜೋರಾಗಿ ನಡೆಯುತ್ತಿದೆ.