ಎಲ್ಲವೂ ಡಿಜಿಟಲ್ ಆಗಿರುವ ಈ ಸಂದರ್ಭದಲ್ಲಿ ಫ್ಲರ್ಟಿಂಗ್ ಕೂಡ ಮೊಬೈಲ್ ಸಂದೇಶಗಳ ಮೂಲಕವೇ ನಡೆಯುತ್ತಿರುತ್ತೆ. ಸಂಗಾತಿ ಆಚೆ ಕೋಣೆಯಲ್ಲಿದ್ದರೂ ಮೊಬೈಲ್ ಮೂಲಕ ಫ್ಲರ್ಟಿಂಗ್ ಮಾಡೋ ಜಮಾನಾ ನಮ್ಮ ಕಣ್ಣ ಮುಂದಿದೆ. ಹೀಗಿರೋ ಸಮಯದಲ್ಲಿ ನೀವು ಯಾವ ರೀತಿಯ ಪ್ರೀತಿ ಪ್ರೇಮದ ಸಂದೇಶಗಳನ್ನು ಕಳುಹಿಸುತ್ತೀರಿ, ಯಾವ ಇಮೋಜಿ ಬಳಸುತ್ತೀರಿ ಎನ್ನುವುದೆಲ್ಲಾ ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ ಹಾಗೂ ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ಇರುತ್ತೆ. ಬನ್ನಿ ಹಾಗಾದ್ರೆ ಯಾವ ರಾಶಿಯವರು ಮೊಬೈಲ್ ಫ್ಲರ್ಟಿಂಗ್‌ನಲ್ಲಿ ಹೇಗೆ ಅಂತ ತಿಳಿಯೋಣ.

ಮೇಷ

ನಿಮ್ಮ ಮೃದು ಪ್ರೇಮದ ಸಂದೇಶಗಳಿಗೆ ಆಚೆ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ ಅಂದರೆ ನೀವು ಚಡಪಡಿಸಿ ಹೋಗುತ್ತೀರಿ. ಖಚಿತಪಡಿಸಿಕೊಳ್ಳುವುದಕ್ಕೆ ಎರಡು ಮೂರನೇ ಸಲ, ನಾಲ್ಕನೇ ಸಲ ಸಂದೇಶ ಕಳಿಸಿ ಪೀಡಿಸುವುದಕ್ಕೆ ನೀವು ಹಿಂಜರಿಯುವುದಿಲ್ಲ. ಅದೇನು ಅಂತ ಖಾತ್ರಿ ಆಗಬಿಡಬೇಕು ನಿಮಗೆ. ಫ್ಲರ್ಟಿಂಗಲ್ಲೂ ಸಂದೇಶ ಸ್ಪಷ್ಟವಾಗಿರಬೇಕು ಎಂಬ ಆಸೆ.

ವೃಷಭ

ನೀವು ಜೋಕುಗಳನ್ನು ಇಷ್ಟಪಡುತ್ತೀರಿ ಹಾಗೂ ನಿಮ್ಮ ಸಂದೇಶಗಳೂ ಹಾಸ್ಯಮಯವಾಗಿ ಇರುತ್ತವೆ. ಅದರ ಜೊತೆಗೆ ನಗುಮುಖ ಸೂಚಿಸುವ, ಕಣ್ಣು ಹೊಡೆಯುವ ಇಮೋಜಿಗಳನ್ನು ನೀವು ಬಳಸುವುದರಿಂದ, ಬಹುಶಃ ನಿಮ್ಮ ಸಂದೇಶದಿಂದ ತಪ್ಪು ಅರ್ಥ ಬರುವಂತೆ ಇದ್ದರೂ ನೀವು ಆ ಕಡೆಯವರು ಇದನ್ನು ಇಷ್ಟಪಡದಿದ್ದರೂ ಅದು ಹಾಸ್ಯ ಎಂದು ಹೇಳಿ ಬಚಾವಾಗುವ ಸಾಧ್ಯತೆ ಇದೆ.

ಮಿಥುನ

ನಿಮ್ಮ ಕಣ್ಣೇ ಹೃದಯದಲ್ಲಿದೆ ಅಥವಾ ನಿಮ್ಮ ಹೃದಯ ಕಣ್ಣುಗಳಾಗಿದೆಯೇ ಏನೋ. ಯಾಕೆಂದರೆ ನಿಮ್ಮ ಸಂದೇಶದ ತುಂಬಾ ಹಾರ್ಟ್ ಇಮೋಜಿಗಳೇ ತುಂಬಿರುತ್ತವೆ. ನಿಮ್ಮ ಪಾರ್ಟ್‌ನರ್‌ಗೆ ನಿಮ್ಮ ಸಂದೇಶವನ್ನು ಸ್ಪಷ್ಟವಾಗಿ ರವಾನಿಸುವುದರಲ್ಲಿ ನೀವು ಹಿಂದೆ ಬೀಳುವುದೇ ಇಲ್ಲ. ಯಾಕೆಂದರೆ ನೀವ ನಿಜಜೀವನದಲ್ಲೂ ಬಹಿರ್ಮುಖಿ.

ನಿಮ್ಮ ಜೋಡಿ ಹೊಂದಿ ಬಾಳುತ್ತದಾ? ನಿರ್ಧರಿಸುವುದು ಹೇಗೆ? ...

ಕಟಕ

ನೀವು ತುಂಬಾ ಸೆನ್ಸಿಟಿವ್. ಹೀಗಾಗಿ ನೀವು ಫ್ಲರ್ಟ್ ಮೆಸೇಜ್‌ಗಳನ್ನು ಕಳಿಸುವ ಮುನ್ನ ತುಂಬಾ ಯೋಚಿಸುತ್ತೀರಿ. ಯಾಕೆಂದರೆ ಒಂದು ವೇಳೆ ತಿರಸ್ಕಾರ ದೊರೆತರೆ ಅದನ್ನು ತಡೆದುಕೊಳ್ಳುವ ಶಕ್ತಿ ನಿಮಗೆ ಇರುವುದಿಲ್ಲ. ನೀವು ಪ್ರೀತಿಸುವ ವ್ಯಕ್ತಿಯ ಎಲ್ಲ ಸೋಶಿಯಲ್ ಪೋಸ್ಟ್, ತಾಣಗಳನ್ನು ಎಡೆಬಿಡದೆ ಹಿಂಬಾಲಿಸುತ್ತೀರಿ.

ಸಿಂಹ

ನಿಮ್ಮ ಫ್ಲರ್ಟಿಂಗ್‌ ಅನ್ನು ಮ್ಯಾಕ್ಸಿಮಮ್ ಲೆವೆಲ್‌ಗೆ ತೆಗೆದುಕೊಂಡು ಹೋಗಲು ನೀವು ಬಯಸುತ್ತೀರಿ. ಬರೀ ಟೆಕ್ಸ್ಟ್ ಮೆಸೇಜಲ್ಲ, ಇಮೋಜಿಯೂ ಅಲ್ಲ, ಬದಲಿಗೆ ಪ್ರೇಮಗೀತೆಗಳನ್ನು ಪ್ಲೇಲಿಸ್ಟ್‌ಗಳನ್ನೂ ಕಳಿಸಲು ನೀವು ಮರೆಯೋದಿಲ್ಲ. ನಿಮ್ಮ ಆಸಕ್ತಿಯ ವ್ಯಕ್ತಿಗೆ ನಿಮ್ಮ ಮನಸ್ಸು ಏನು ಅಂತ ಪೂರ್ತಿ ಅರ್ಥ ಮಾಡಿಸೋವರೆಗೂ ನೀವು ಬಿಡುವುದಿಲ್ಲ.

ಕನ್ಯಾ

ಬರೀ ಫ್ಲರ್ಟ್ ಮಾಡೋದಕ್ಕಿಂತಲೂ ಹೆಚ್ಚು ವಿಶಾಲವಾದ ಸಂಗತಿಗಳಲ್ಲಿ ನೀವು ಆಸಕ್ತಿ ವಹಿಸಿರುತ್ತೀರಿ. ಉದಾಹರಣೆಗೆ ನಿಮ್ಮ ಸಂಗಾತಿ ನಿಮಗೆ ಯಾವುದಾದರೊಂದು ಮೂವಿ ನೋಡುವಂತೆ ಮೆಸೇಜ್‌ ಕಳಿಸಿದರೆ, ನೀವು ಅದನ್ನು ನೋಡುವುದಷ್ಟೇ ಅಲ್ಲ, ಅದರಲ್ಲಿರುವ ಕೋಟ್‌ ಅಥವಾ ಡಯಲಾಗ್ ಅಥವಾ ಮೆಸೇಜನ್ನು ಮರಳಿ ಅವರಿಗೆ ಕಳಿಸುತ್ತೀರಿ.

ತುಲಾ

ನೀವು ಫ್ಲರ್ಟಿಂಗ್ ವಿಷಯದಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುವವರು. ಪಿಕ್ಚರ್, ಸೆಲ್ಫಿ ಇತ್ಯಾದಿ ಮೆಸೇಜ್ ಮಾಡುತ್ತೀರಿ. ಹಾಗಂತ ನೀವು ಅದನ್ನೇ ಸೋಶಿಯಲ್ ಸೈಟ್‌ಗಳಲ್ಲಿ ಮಾಡುವುದಿಲ್ಲ. ನಿಮ್ಮ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುತ್ತೀರಿ. ಇದು ನಿಮ್ಮ ಪಾಲಿಗೆ ಅವರು ಸ್ಪೆಶಲ್ ಅಂತ ತಿಳಿಸುವ ನಿಮ್ಮ ಉಪಾಯ ಆಗಿರುತ್ತದೆ.

ದೇವರ ತೀರ್ಥ ತೆಗೆದುಕೊಳ್ಳಲೂ ರೀತಿ ನೀತಿ ಇವೆ, ಏನವು? ...

ವೃಶ್ಚಿಕ

ನೀವು ಬೆಚ್ಚಗಿನ ಮೃದು ಸ್ವಭಾವದವರಾಗಿದ್ದರೂ, ಫ್ಲರ್ಟಿಂಗ್ ವಿಷಯದಲ್ಲಿ ಆಚೆಗಿರುವ ವ್ಯಕ್ತಿಗಿಂತಲೂ ಸ್ವಲ್ಪ ಮುಂದುವರಿಯೋಕೆ ಹಿಂಜರಿಯಲಾರಿರಿ. ನೀವೇ ಮೊದಲಾಗಿ ಮೆಸೇಜ್ ಕಳಿಸುವಿರಿ. ನಿಮ್ಮ ಪ್ರತಿದಿನ ಅವರಿಲ್ಲದೆ ಆರಂಭವಾಗಲಾರದು ಎನ್ನುವುದನ್ನು ಈ ಮೂಲಕ ಖಚಿತಪಡಿಸುವಿರಿ.

ಧನು

ನೀವು ಸ್ವಲ್ಪ ಫಂಕಿ ಅಥವಾ ತಕ್ಷಣದ ಪ್ರತಿಕ್ರಿಯೆ ನೀಡುವ ಸ್ವಭಾವದ ವ್ಯಕ್ತಿ. ಎದುರಿಗಿನ ವ್ಯಕ್ತಿ ಆ ಡ್ರೆಸ್‌ನಲ್ಲಿ ಹೇಗೆ ಕಾಣ್ತಿದಾರೆ ಎಂಬುದನ್ನು ಥಟ್ಟನೆ ಹೇಳೋಕೆ ಹಿಂಜರಿಯೋಲ್ಲ. ವ್ಯಕ್ತಿಗಳ ಸ್ಟೈಲ್‌ಗೆ ಮೆಚ್ಚುಗೆ ನೀಡೋಕೆ ಹಿಂಜರಿಯೋಲ್ಲ. ಇದು ನಿಮ್ಮ ಕ್ರಶ್ ಜೊತೆಗೆ ಫ್ಲರ್ಟ್ ಮಾಡೋಕೆ ಒಂದು ಸುಲಭದ ದಾರಿಯೂ ಆಗಿರುತ್ತದೆ.

ಮಕರ

ಸಣ್ಣ ಸಣ್ಣ ಸಂಗತಿಗಳನ್ನೂ ಕೇಳಿ ತಿಳಿದುಕೊಳ್ಳುವುದು ನಿಮ್ಮ ಸ್ವಭಾವ. ಹೀಗಾಗಿ ನಿಮ್ಮ ಕ್ರಶ್‌ನ ಇಡೀ ದಿನ ಹೇಗಿತ್ತು ಅಂತ ವಿಚಾರಿಸುವುದು, ಅದನ್ನು ಕೇಳಿಸಿಕೊಳ್ಳೂವುದು ನಿಮಗೆ ಸ್ವಲ್ಪವೂ ಬೋರ್ ಎನಿಸುವುದಿಲ್ಲ. ಈ ವಿವರಗಳಿಂದ ನಿಮಗೆ ಬೇಕಾದ ಆಸಕ್ತಿಯ ಸಂಗತಿಗಳನ್ನು ನೀವು ಹೆಕ್ಕಿಕೊಂಡು ಆಚೆಯ ವ್ಯಕ್ತಿಗೆ ಅಚ್ಚರಿ ಮೂಡಿಸುತ್ತೀರಿ ಅನ್ನುವುದೂ ನಿಜವೇ.

ಕುಂಭ

ನೀವು ತುಂಬಾ ಕ್ರಿಯೇಟಿವ್ ವ್ಯಕ್ತಿ. ಹೀಗಾಗಿ ಫ್ಲರ್ಟಿಂಗೇ ಆದರೂ ಯಾವುದೋ ಒಂದು ಫಾರ್‌ವರ್ಡ್ ಮೆಸೇಜ್ ಕಳಿಸಿ ಸುಮ್ಮನಾಗುವುದು ನಿಮ್ಮ ಸ್ವಭಾವವೇ ಅಲ್ಲ. ನೀವೇ ರಚಿಸಿದ ಒಂದು ಕವಿತೆ, ಒಂದು ಕತೆ, ಒಂದು ಗ್ರೀಟಿಂಗ್ಸ್ ಇತ್ಯಾದಿಗಳು ನಿಮ್ಮ ಅಭಿವ್ಯಕ್ತಿಯ ಭಾಗವಾಗಿ ಅವರನ್ನು ತಲುಪಿದಾಗ ನಿಮಗೆ ಆಗುವ ರೋಮಾಂಚನವೇ ಬೇರೆ.

ಭೂಮಿ ಹೇಗೆ ಸರ್ವನಾಶ ಆಗುತ್ತೆ? ನಿಮಗೆ ಇದು ಗೊತ್ತೆ? ...

ಮೀನ

ಇದನ್ನೆಲ್ಲ ನೀವು ಸುಲಭವಾಗಿ, ಸರಳವಾಗಿ ತೆಗೆದುಕೊಳ್ಳುತ್ತೀರಿ. ನೀವು ಪ್ರೀತಿಸುವವರಿಗೆ ಹೃದಯವನ್ನೂ ಕೊಡಬಲ್ಲಿರಿ, ಹಾಗೇ ತಿರಸ್ಕೃತರಾದರೆ ಅದನ್ನು ಈಸಿಯಾಗಿ ತೆಗೆದುಕೊಳ್ಳುತ್ತೀರಿ ಎಂಬುದೂ ನಿಶ್ಚಯವೇ. ಅದೊಂದು ಅಪಾಯವಿಲ್ಲದ ಜೋಕ್ ಎಂಬಂತೆ ತೆಗೆದುಕೊಳ್ಳುವ ಕಲೆ ನಿಮಗೆ ಸಿದ್ಧಿಸಿದೆ.