ರಾಮಾವತಾರ ಕೊನೆಯಾಗಿದ್ದು ಹೇಗೆ? ರಾಮ ವೈಕುಂಠಕ್ಕೆ ಮರಳಿದ್ದು ಯಾವಾಗ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. 

ಅಯೋಧ್ಯೆಯ ರಾಜ ದಶರಥ(Dashrath)ನ ಹಿರಿಯ ಮಗನಾಗಿ ಜನಿಸಿದ ರಾಮ(Rama)ನನ್ನು ಹಿಂದೂ ಧರ್ಮದಲ್ಲಿ ಮರ್ಯಾದಾ ಪುರುಷೋತ್ತಮ ಎಂದೇ ಕರೆಯಲಾಗುತ್ತದೆ. ಅಕ್ಷರಶಃ ಪರಿಪೂರ್ಣ ವ್ಯಕ್ತಿ ಆತ, ಸ್ವಯಂ ನಿಯಂತ್ರಣವನ್ನು ಸಂಪೂರ್ಣವಾಗಿ ಸಾಧಿಸಿದವನು.. ರಾಮನ ಜೀವನ ಪೂರ್ತಿ ಕಠಿಣ ಪರೀಕ್ಷೆಗಳು, ಅಡೆತಡೆಗಳು, ನೋವುಗಳು ತುಂಬಿದ್ದವು. ಹಾಗಿದ್ದೂ ಆತ ಸಂಪೂರ್ಣ ಧರ್ಮಕ್ಕೆ ಬದ್ಧವಾಗಿದ್ದ. ದೇವರಿಗೆ ಸಾವಿಲ್ಲವಾದರೂ ಮನುಷ್ಯನ ಅವತಾರ ಎತ್ತಿದ ಮೇಲೆ ಮನುಷ್ಯರಂತೆಯೇ ಕೊನೆ ಕಾಣಬೇಕಷ್ಟೇ. ಹಾಗೆ ರಾಮ ಹೇಗೆ ಅಂತ್ಯ ಕಂಡ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ಪ್ರಶ್ನೆಗೆ ಉತ್ತರ ಬಹಳ ಆಸಕ್ತಿದಾಯಕವಾಗಿದೆ. ಏಕೆಂದರೆ ಇದು ಹಲವಾರು ನಿಗೂಢ ಮತ್ತು ರೋಮಾಂಚನಕಾರಿ ಕಥೆಗಳನ್ನು ಹೊಂದಿದೆ. 

ರಾಮನ ಸಾವಿನ ಘಟನೆ
ಸಾವು ಎಂಬುದನ್ನು ವಿಷ್ಣುವಿನ ಅವತಾರಗಳಲ್ಲಿ ಬಳಸಬಾರದು. ಏಕೆಂದರೆ ಪ್ರತಿ ಅವತಾರವೂ ತನ್ನ ಕಾರ್ಯ ಸಾಧಿತವಾದ ಮೇಲೆ ವೈಕುಂಠ(Vaikunta)ಕ್ಕೆ ಮರಳುತ್ತದೆ ಎನ್ನಲಾಗುತ್ತದೆ. ಎಲ್ಲ ಅವತಾರಗಳು ಧರ್ಮವನ್ನು ಪುನಃಸ್ಥಾಪಿಸಲು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಇದನ್ನು ಸಾವು ಎನ್ನದಿದ್ದರೂ ಶ್ರೀ ರಾಮನ ಅವತಾರದ ಕೊನೆಯ ಕ್ಷಣ ಭೂಮಿಯ ಮೇಲೆ ಎನ್ನಬಹುದು. ರಾಮನು ಸರಯೂ(River Sarayu) ನದಿಯನ್ನು ಸ್ವಯಂಪ್ರೇರಣೆಯಿಂದ ಪ್ರವೇಶಿಸಿದಾಗ ಆತ ಕಣ್ಮರೆಯಾದ. ಈ ದಿವ್ಯ ಘಟನೆಯನ್ನು ರಾಮನ ಮರಣ ಎಂದು ವಿವರಿಸಲಾಗಿದೆ. ಈ ಕಥೆ ಪದ್ಮ ಪುರಾಣ(Padma Purana)ದಿಂದ ಬಂದಿದೆ.

ರಾಮ ಅಯೋಧ್ಯೆಗೆ ಮರಳಿದ ನಂತರ ಏನಾಯಿತು?
ರಾವಣನ ಸಂಹಾರದ ಬಳಿಕ ಅಯೋಧ್ಯೆ(Ayodhye)ಗೆ ಮರಳಿದ ಶ್ರೀರಾಮನು ಹನ್ನೊಂದು ಸಾವಿರ ವರ್ಷಗಳ ಕಾಲ ಆಳಿದನು ಮತ್ತು ತನ್ನ ಜನರ ಅನುಕೂಲಕ್ಕಾಗಿ ಹಲವಾರು 'ಯಜ್ಞ'ಗಳನ್ನು ಮಾಡಿದನು. ಅವನು ಆಳಿದ ದೊಡ್ಡ ಸಾಮ್ರಾಜ್ಯದ ಅನೇಕ ಭಾಗದಲ್ಲಿ ಅವನ ಮಕ್ಕಳು ಮತ್ತು ಅವನ ಸಹೋದರರ ಪುತ್ರರನ್ನು ರಾಜರನ್ನಾಗಿ ಮಾಡಲಾಯಿತು. ಈ ಅವಧಿಯಲ್ಲಿ ಸೀತಾ(Seeta) ದೇವಿಯನ್ನು ಭೂದೇವಿ ತನ್ನೊಂದಿಗೆ ಕರೆಸಿಕೊಳ್ಳುತ್ತಾಳೆ. ಆಗ ಸೀತೆ ಭೂಮಿಯಿಂದ ಕಣ್ಮರೆಯಾಗುತ್ತಾಳೆ. ಲವ ಮತ್ತು ಕುಶ ತಮ್ಮ ತಂದೆಯಂತೆ ಆಡಳಿತಗಾರರಾಗಿ ಬೆಳೆದರು. ಆಗ ರಾಮನು ಸ್ವರ್ಗಲೋಕಕ್ಕೆ ಹೊರಡುವ ಸಮಯ ಬರುತ್ತದೆ.

ಹಾಲು, money plant ಜೊತೆಯಾಗಿ ನಿಮ್ಮನ್ನು ಲಕ್ಷ್ಮೀಪುತ್ರನಾಗಿಸಬಲ್ಲವು!

ಶ್ರೀರಾಮನನ್ನು ಭೇಟಿಯಾಗಲು ಬಂದ ಕಾಲ
ಒಂದು ದಿನ ಋಷಿಯೊಬ್ಬರು ರಾಮನ ಬಳಿಗೆ ಬಂದು ಖಾಸಗಿ ಮಾತನಾಡಬೇಕೆಂದರು. ಅವರು ಸಂಭಾಷಣೆ ನಡೆಸುತ್ತಿರುವ ಕೋಣೆಗೆ ಯಾರೂ ಪ್ರವೇಶಿಸಬಾರದು ಎಂದು ಸಂತರು ಹೇಳಿದರು. ಶ್ರೀರಾಮನು ಲಕ್ಷ್ಮಣ(Lakshman)ನಿಗೆ ಕೋಣೆಯ ಬಾಗಿಲನ್ನು ಕಾಯುವಂತೆ ನಿರ್ದೇಶಿಸಿದನು. ಸಂಭಾಷಣೆಯ ಸಮಯದಲ್ಲಿ ಯಾರಾದರೂ ಕೋಣೆಗೆ ಪ್ರವೇಶಿಸಿದರೆ ಅವರನ್ನು ಕೊಲ್ಲುವಂತೆ ಹೇಳಿದನು. ರಾಮಾಯಣದ ಕೆಲವು ಆವೃತ್ತಿಗಳಲ್ಲಿ, ಈ ಸಂತನು ಬೇರೆ ಯಾರೂ ಅಲ್ಲ, ಕಾಲದೇವ ಅಥವಾ ಸಮಯ(time) ಎಂದು ಹೇಳಲಾಗುತ್ತದೆ.

ಈ ಋಷಿಯು ರಾಮನ ಸಮಯ ಭೂಮಿಯ ಮೇಲೆ ಮುಗಿದಿದೆ ಎಂದು ನೆನಪಿಸುತ್ತಾರೆ. ಲಕ್ಷ್ಮಣನು ಕಾವಲು ಕಾಯುತ್ತಿರುವಾಗ ದೂರ್ವಾಸ(Sage Durvas) ಮುನಿ ಅವನ ಬಳಿ ಬಂದು ಪ್ರವೇಶ ಕೋರುತ್ತಾರೆ. ಅವರನ್ನು ಲಕ್ಷ್ಮಣ ತಡೆದಾಗ ಕೋಪಗೊಳ್ಳುತ್ತಾರೆ. ತಮ್ಮನ್ನು ಅವಮಾನಿಸಿದರೆ ಅಯೋಧ್ಯೆ ಹಾಗೂ ಅಲ್ಲಿನ ನಿವಾಸಿಗಳ ಮೇಲೆ ಮತ್ತು ಇಡೀ ರಘು ವಂಶದ ಮೇಲೆ ಭೀಕರ ವಿನಾಶದ ಶಾಪ ನೀಡುವುದಾಗಿ ಬೆದರಿಕೆ ಹಾಕುತ್ತಾರೆ. ಆಗ ಲಕ್ಷ್ಣಣನು ದೂರ್ವಾಸರು ಏನೇ ಶಿಕ್ಷೆ ಕೊಡುವುದಿದ್ದರೂ ತನಗೇ ಕೊಡುವಂತೆ ಕೋರುತ್ತಾನೆ. ತನ್ನ ಸಮಯ ಬಂದಿದೆ ಎಂಬುದು ಅವನಿಗೆ ಅರಿವಾಗಿರುತ್ತದೆ. 

ದಾರಿಯಲ್ಲಿ ಬಂಗಾರ ಸಿಕ್ಕರೆ ಮನೆಗೆ ತರ್ಬೇಡಿ..!

ರಾಮಾವತಾರದ ಅಂತ್ಯ
ನಂತರ ಲಕ್ಷ್ಮಣನು ಸರಯೂ ನದಿ ಬಳಿ ಹೋಗಿ ಅನಂತ ಶೇಷ(Ananth Shesh) ರೂಪ ತಾಳುತ್ತಾನೆ. ಲಕ್ಷ್ಮಣನ ಮರಣದ ವಿಷಯ ತಿಳಿದ ಶ್ರೀ ರಾಮ ತಾನು ಕೂಡಾ ತನ್ನೆಲ್ಲ ಜವಾಬ್ದಾರಿಗಳನ್ನು ಮಕ್ಕಳ ಹೆಗಲಿಗೆ ಹಾಕಿ ಸೀದಾ ಸರಯೂ ನದಿಯೊಳಗೆ ನಡೆದು ಹೋಗುತ್ತಾನೆ. ಹಾಗೇ ಹೋಗುತ್ತಾ ನೀರಿನಲ್ಲಿ ಮುಳುಗಿ ಮಾಯವಾಗುತ್ತಾನೆ. ನಂತರ ಅದೇ ಸ್ಥಳದಲ್ಲಿ ವಿಷ್ಣುವು ಅನಂತ ಶೇಷನ ಮೇಲೆ ಮಲಗಿದ ರೂಪದಲ್ಲಿ ಕಾಣಿಸಿಕೊಂಡು ಭಕ್ತರಿಗೆ ಆಶೀರ್ವಾದ ಮಾಡುತ್ತಾನೆ.