ಈಗ ಜಗತ್ತಿನ ಅತ್ಯಂತ ಚರ್ಚೆಯಲ್ಲಿ ಇರುವ ವ್ಯಕ್ತಿ. ಸರಿಪಡಿಸಲಾಗದ ಪ್ರಮಾದ ವಿವಾದಗಳಿಂದಲೇ ಈಗ ಟಾಕ್ ಆಫ್ ದ ವರ್ಲ್ಡ್ ಆಗಿರುವನು ಝೆಲೆನ್ಸ್ಕಿ. ಇಷ್ಟೊಂದು ಚರ್ಚೆಯಲ್ಲಿ ಇರಬೇಕಾದರೆ ಜಗತ್ತಿನ ಬಲಿಷ್ಠ ಅನಿಷ್ಟ ನಾಯಕರೆಲ್ಲರ ಕಣ್ಣು ಈತನ ಮೇಲಿರಬೇಕಾದರೆ, ಇವನ ಜಾತಕ ಫಲ ಕಾರಣವಿರಲೇಬೇಕು. 

ಜ್ಯೋತಿಷ್ಯ ತಜ್ಞ ಹರೀಶ್ ಕಶ್ಯಪ್

ಝೆಲೆನ್ಸ್ಕಿ ಅತ್ಯಂತ ಕಿರಿ ವಯಸ್ಸಿಗೇ ಜನಮನ್ನಣೆ ಪಡೆದು, ಯುಕ್ರೇನ್ ನಂಥ ಅಪಾಯಕಾರಿ(ರಶಿಯ ತಂಟೆ, ನ್ಯೂಕ್ಸ್ )ದೇಶದ ಅಧ್ಯಕ್ಷನೂ ಆಗಿ 42ನೆ ವಯಸ್ಸಿಗೇ ದಾರಿಗೆಟ್ಟು ಅಸಾಧ್ಯ ಯುದ್ಧವ ರಶಿಯದಂಥ ಬೃಹತ್ ದೇಶದ ಮೇಲೆ ಮಾಡಿ, ತನ್ನ ನೆಲವ ಶಕ್ತಿಯ ಜನರ ಸಂಪೂರ್ಣವಾಗಿ ನಾಶ ಮಾಡಿಕೊಂಡು , ಈಗ ಅದೇ ಹಚ್ಚಿಕೊಟ್ಟ ಯುರೋಪಿ ನಾಯಕರ ಮುಂದೆ ಅಕ್ಷರಶಃ ಸಹಾಯಕ್ಕಾಗಿ ಭಿಕ್ಷೆಗೆ ಮಂಡಿ ಊರಿಹನು. ಅಷ್ಟೇ ಅಲ್ಲದೇ ಅಮೆರಿಕ ಅಧ್ಯಕ್ಷ ಟ್ರಂಪ್ ನ ಮನೆಯಲ್ಲೇ ಛೀಮಾರಿ ಹಾಕಿಸಿಕೊಂಡು ದಿಕ್ಕೇ ದಿಗ್ಮೂಢ ನಾಗಿರುವನು.

ಇನ್ನು ಟ್ರಂಪ್ ಕೊಟ್ಟ "ಸಕಾಲ ಆಘಾತ" ವನ್ನು ಈತ ಜೀವಮಾನವೆಲ್ಲ ಹೊತ್ತು ಜೀವಿಸಬೇಕಾಗುತ್ತೆ. ತನ್ನ ನೆಲದ ಜನರ ಹತ್ಯೆಗಳ ಮಹಾ ಪಾಪದ ಮೊದಲನೇ ಹೊಡೆತ ಇದೀಗ ಈತನಿಗೆ ಬಿದ್ದಿದೆ ಅಷ್ಟೇ. ಜೀವನವೆಲ್ಲಾ ಈ ಪಾಪದ ಹೊರೆ ಹೊತ್ತು ಜನ್ಮಾಂತರಗಳಲ್ಲಿ ಕೂಡಾ ಅನುಭವಿಸಬೇಕಾಗುತ್ತದೆ. ಇವನ , ಇಂಥವರ ಎತ್ತಿಕಟ್ಟಿ ತಮ್ಮ ಯುದ್ಧಬಿಜಿನೆಸ್ ತೀಟೆಗಳ ತೀರಿಸಿಕೊಳ್ಳೋ ಪಚ್ಚಿಮಇಸಾಯಿಗಳಿಗೆ ಯಾವ ದೇವದೂತನೂ ಸದ್ಬುದ್ಧಿ ಕೊಡುವುದರಲ್ಲಿ ಎಂದಿಗೂ ಸೋತಿದ್ದಾನೆ. ಯಾಕೆಂದರೆ ಅವರು ದೇವರನ್ನಲ್ಲ, ಬಿಜಿನೆಸ್ ಅನ್ನೇ ನಂಬುವುದು. ಹಾಗಾಗಿ ನಿರಂತರ ಯುದ್ಧಗಳ ಪಾಪದ ಹೊರೆಗಳಿಂದ ಅವರೂ ಎಂದಿಗೂ ಮುಕ್ತರಾಗೋಲ್ಲ. ವಿಶೇಷವಾಗಿ ಜೋ ಬೈಡನ್ ಈ ಅಕ್ಷಯಪಾಪದ ಪಾತ್ರೆಯೇ ಆಗಿರುವನು. ಸದ್ಯ, "ಟ್ರಂಪ್ ಕಳಿತ ಕಲಿತ"ವನಾಗಿ ಪುನ ಅಧ್ಯಕ್ಷನಾಗಿರುವುದು ದೈವಪ್ರೇರಣೆಯೇ ಆಗಿದೆ.

 (ಟ್ರಂಪ್ ಜಾತಕ 2018 ನಲ್ಲಿ ಹೇಳಿದ್ದೆ, ಅಧಿಕಾರ ಪೂರ್ಣಗೊಳಿಸಲು ಕೂಡಾ ಕಷ್ಟವಿದೆ ಅಂತ ಹೇಳಿದ್ದೆ. ಹಾಗೇ ಅಡ್ಡಾದಿಡ್ಡಿಯಾಗಿ ನಡೆದು ಮುಂದಿನ ಚುನಾವಣೆ ಬರಿದೆ 2 % ವೋಟ್ ಶೇರ್ ನಿಂದ ಸೋತ ಟ್ರಂಪ್. ಆತನ ಹಲವು ಮಹಾ ಯೋಗಗಳು ವಿಪರೀತಯೋಗಗಳೂ ಸೇರಿ ಚಕ್ರವರ್ತಿ ಯೋಗವೂ ಇರಲಾಗಿ ಬಹುಕಷ್ಟದಿಂದ ಈ ಇಳಿವಯಸ್ಸಿನಲ್ಲಿ(77) ಪುನ ಗೆದ್ದು ಜಗತ್ತಿನ ಬಹುಶಕ್ತ ಕುರ್ಚಿಯಲ್ಲಿ ವಿರಾಜಮಾನನಾಗಿದ್ದಾನೆ.)

ಯುದ್ಧ ಅಂದರೆ , ತೀಟೆ ಅಂತ ಅಂದುಕೊಂಡ ಯಾರೆಲ್ಲ ನಾಯಕರು ತೀವ್ರವಾದಿ ದೂರ್ತರು ಇದ್ದಾರೋ, ಅವರಿಗೆಲ್ಲ ಝೆಲೆನ್ಸ್ಕಿಯ ಈ ಕೆಟ್ಟ ಪ್ರಹಸನ ಪಾಠವಾಗಬೇಕು. ಆದರೆ ಆಸುರೀಯ ಜನ ಅಂದು ಕೌರವರೂ ಕಲಿಯಲಿಲ್ಲ, ಇವರೂ(ಪಶ್ಚಿಮ,ಇಸಾಯಿ) ಕಲಿಯರು. ಅಂದು ಪಾಂಡವರ ಪರವಾಗಿ ಯುದ್ಧ ನಿಲ್ಲಿಸಲು ಸ್ವತಃ ಶ್ರೀಕೃಷ್ಣನೇ ಮಧ್ಯವರ್ತಿ(ದೂತ)ಯಾಗಿ ಪ್ರಯತ್ನಿಸಿದನು ಆದರೆ ದುರ್ಯೋಧನ(ಕಲಿ) ಕೃಷ್ಣನನ್ನೇ ಅವಮಾನಿಸಿದ. ನಿರ್ನಾಮ ನಾಶವಾಗಿ ಹೋದ. ಅವನೇ ಈ ಕಲಿಯುಗಕ್ಕೆ ನಾಯಕ, ಇದೇ ಪಚ್ಚಿಮಾದವರಲ್ಲಿ ನಾನಾ ರೂಪಗಳಿಂದ ಬೆರೆತು, ಹೀಗೆಲ್ಲ ನೀಚರಾದ್ಧಾಂತಗಳ ಮಾಡಿಸುತ್ತಿರುವ.

ಈಗ ತಾತ್ಕಾಲಿಕವಾಗಿ ಅಮೆರಿಕ ನಾಯಕತ್ವ ಟ್ರಂಪ್ ವಹಿಸಿ ಈ ಕಲಿಗಳ ನಿಗ್ರಹಿಸುವ ಲಕ್ಷಣ ತೋರುತ್ತಿರುವ. ಪುಟಿನ್ ತನ್ನೆಲ್ಲ ತಾಳ್ಮೆಯ ಪಣಕ್ಕೆ ಇಟ್ಟು ಟ್ರಂಪ್ ಮೈತ್ರಿಯ ಒಪ್ಪಿ ದೀರ್ಘವಾಗಿ ಗಮನಿಸುತ್ತಿರುವ. ಮಾರ್ಚ್ ಕೊನೆಗೆ ಯುಗಾದಿಯಿಂದ ಜೂನ್ ಮಧ್ಯದವರೆಗೂ ಈ ಯುದ್ಧ ಸಮೂಹಿಗಳ ಸಮ್ಮೋಹನ ಕ್ರಿಯೆ ನಡೆವುದು. ಜಗದೀಶ್ವರನ ಹೆಣಿಗೆ ಏನಿದೆಯೋ ಆತನೇ ಬಲ್ಲ ಉಳಿದ ಅನ್ಯ ನಮ್ಮನ್ನೂ ಕಾಪಾಡಬೇಕಲ್ಲ.

ಇಂಥ ಭಯಾನಕ ದುರ್ದೆಸೆಯಲ್ಲಿ ಝಲೆನ್ಸ್ಕಿಯ ಮಹತ್ವ ಏನೂ ಇಲ್ಲ. ಅವ ದಾಳ ಅಷ್ಟೇ. ಆಟವೆಲ್ಲ ಪಚ್ಚಿಮ ವಸಾಹತುಗಳದ್ದೇ! ಆದರೂ ಆ ದಾಳದ ಜಾತಕ ಏನ ಹೇಳುವುದು? ಝಲೆನ್ಸ್ಕಿ ಜಾತಕ ನೋಡುವುದಾದರೆ ವೃಷಭ ಲಗ್ನ, ಆಶ್ಲೇಷಾ ನಕ್ಷತ್ರ ಕರ್ಕ ರಾಶಿ. ಜಾತಕದಲ್ಲಿ ಈತನ ಗುರುಬಲ ಅತ್ಯಂತ ಉತ್ತಮವಿದೆ ಅನ್ನೋದು ಒಂದೇ ಒಳ್ಳೆಯದು. ಇನ್ನೆಲವೂ ಕಸ. ಲಗ್ನಪತಿ ಶುಕ್ರ ಮಕರದಲ್ಲಿ ಅಸ್ತ. ಬಾಧಕ ರವಿ. ದ್ವಿತೀಯ ಬುಧನು ಅಷ್ಟಮದಲ್ಲಿ. ತೃತೀಯ ಚಂದ್ರ ಸ್ವಕ್ಷೇತ್ರ ಕರ್ಕ, ಅಲ್ಲಿ ವ್ಯಯ ಸಪ್ತಮೇಶ ಕುಜ ನೀಚ.ದಶಮೇಶ ಶನಿ ಸಿಂಹ ಕೇಂದ್ರದಲ್ಲಿ ಶಶಕ ಮಹಾಪುರುಷಯೋಗವಿದ್ದು, ಬಲಿಷ್ಠ ಗುರುವಿನ ಅನುಕೂಲದಿಂದ ಸಣ್ಣ ಪ್ರಾಯಕ್ಕೇ ಬಹುಖ್ಯಾತಿ ಅಪಖ್ಯಾತಿಗಳ ಪಡೆದಿರುವುದು!

ಇವನ ನಕ್ಷತ್ರ ಗುಣ, ಅಲ್ಲಿ ನೀಚ ಕುಜ, ದ್ವಿತೀಯ ಶನಿ ಸಾಕು ಇವನ ಅನಾಟಮಿ ಸುಳ್ಳಿನ ಕಂತೆ ಅಂತ ನಿರ್ಧಾರಿತವಾಗಿ ಹೇಳೋಕೆ. ಮನಸಲ್ಲೇ ಏನೋ, ಹೇಳೋದೇ ಏನೋ, ಮಾಡೋದೇ ಏನೋ. ಸ್ವಂತ ಸ್ವಾರ್ಥವೂ ಈತನಿಗೆ ಪರಾವಲಂಬಿಯೇ ಆಗಿರುವುದು ಈತನ ಪ್ರಾರಬ್ಧ ಕರ್ಮ ಅಷ್ಟೇ.

ಇನ್ನು ಚಂದ್ರ ದಶಾ, ನೀಚ ವಕ್ರೀಕುಜ ಅಲ್ಲಿ ಚಂದ್ರನನ್ನು (ಆಲೋಚನೆ, ಸತ್ವಾಂಶ) ಪೀಡಿಸುವನು. ಮಕರದಿಂದ ರವಿ ನೋಡುವುದು ಪಾಪವೃದ್ಧಿ. ಅದರದೇ ದಶೆಯಲ್ಲಿ 2021 ರಾಹು ಭುಕ್ತಿಯಲ್ಲಿ ಮನೋರೋಗದಿಂದ ಯುದ್ಧಕ್ಕೆ ನಿರ್ಧಾರ. ಪಾಪ ಶನಿಕೇಂದ್ರ ಭುಕ್ತಿ 2024 ಏಪ್ರಿಲ್ ವರೆಗೂ ಇದ್ದು, ಮಾಡಬಾರದ ಕೆಲಸವನ್ನೇ ಮಾಡುವುದು ಉತ್ತೇಜನ. ಶಶಕ ಮಹಾಯೋಗ ಇದ್ದರೆ ಒಳ್ಳೇದೇ ಆಗಬೇಕು ಅಂತ ಇಲ್ಲ , ಯಾಕೆಂದರೆ ಅದು ಶನಿ. ಇದರ ಬಗ್ಗೆ ಬಹಳ ಜಾಗರೂಕವಾಗಿ ಫಲ ಹೇಳಬೇಕು. ಈಗ ಚಂದ್ರ ದಶೆಯ ಬುಧ ಭುಕ್ತಿಯಲ್ಲಿ, ಸೋತು ಹೈರಾಣ, ಕೈ ಮುಗಿಯುವ ಹಾಗೆ ಆಗಿದೆ. ಆದರೆ, ನೀಚಕುಜ ಪೀಡನೆಯ ಚಂದ್ರ ದಶಾ ಇದು 2027 ಡಿಸೆಂಬರ್ ವರೆಗೂ ನಡೆಯುತ್ತೆ, ಇವನ ಹೊರಳಾಡಿಸುತ್ತ ಇವನ ಸಂಗ ಮಾಡಿದವರನ್ನೂ ಪೀಡಿಸುತ್ತೆ. 

ಈತ ಈಗೇನು ಹಳವುಗೊಂಡು ದೇಶದೇಶ ನಾಯಕರ ಹಿಂದೆ ಅಲೆಯುತ್ತಿರುವನೋ ಇದೆಲ್ಲ ಬರಿದೆ ಅಧ್ಯಕ್ಷ ಅಧಿಕಾರವನ್ನು ಕಳೆದುಕೊಳ್ಳಿರುವುದಕ್ಕೇನೇ. ಏನಾದರೂ ಅಧಿಕಾರ ಜಾರಿತೋ, ಇವನ ಪ್ರಾಣಕ್ಕೇ ಸಂಚಕಾರವಿದೆ. ಇದನ್ನು ಅರಿತೇ ಇಷ್ಟೆಲ್ಲಾ ಸರ್ಕಸ್ ಮಾಡುತಿಹ, ದೇಶಕ್ಕಾಗಿ ತನ್ನ ಜನಕ್ಕಾಗಿ ಅಲ್ಲ. ಚಂದ್ರನ ಬಾಧೆ(ನೀಚಕುಜ) ಮತ್ತು ದ್ವಿತೀಯ ಶಶಕ ಶನಿಗಳ ಪ್ರಭಾವವಿದು, ಅಪಾಯಕಾರಿ ಕಾಂಬಿನೇಶನ್.

2025 ಸದ್ಯ ಗೋಚಾರದ ಚತುರ್ಗ್ರಹ ಯೋಗಗಳು, ಶನಿರಾಹು ಅಪಾಯಕಾರಿ ಯುತಿದೋಷ, ನೀಚ ಕುಜ ಸಂಚಾರಗಳು, ಇವನ ಈ ಎಲ್ಲಾ ಸ್ವಾರ್ಥಗಳ ಬುಡಮೇಲು ಮಾಡೀತು. ಯುದ್ಧ , ಸದ್ಯ ವಿರಾಮದತ್ತ ಮುಖಮಾಡಿದಂತಿದೆ....ಮುಗಿದಿಲ್ಲ.