Asianet Suvarna News Asianet Suvarna News

ಭವಭಾರವನ್ನು ಮಾತ್ರವಲ್ಲ, ಅನಾರೋಗ್ಯವನ್ನೂ ದೂರ ಮಾಡುತ್ತೆ ಜನಿವಾರ!

ಜನಿವಾರ ಧಾರಣೆ ಸಂಸ್ಕಾರವನ್ನು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ.  ಅನೇಕರು ಜನಿವಾರ ಧಾರಣೆ ಬಗ್ಗೆ ಗೇಲಿ ಮಾಡ್ತಾರೆ. ಆದ್ರೆ ಅದರಲ್ಲಿ ಅನೇಕ ರೋಗಗಳಿಂದ ರಕ್ಷಿಸುವ ಶಕ್ತಿ ಇದೆ ಎಂಬುದು ಕೆಲವರಿಗೆ ಗೊತ್ತಿಲ್ಲ. 
 

Holy thread could keep healthy with spiritual thoughts
Author
Bangalore, First Published Jul 30, 2022, 4:02 PM IST

ಜನಿವಾರ ಧರಿಸುವುದು ಹಿಂದೂ ಆಚರಣೆಗಳಲ್ಲಿ ಒಂದಾಗಿದೆ. ಜನಿವಾರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಜನಿವಾರ ಧರಿಸುವುದರ ಹಿಂದೆ ಅದರದೇ  ಆದ ವೈಜ್ಞಾನಿಕ, ಪೌರಾಣಿಕ ಮಹತ್ವವಿದೆ. ಅನೇಕರಿಗೆ ಜನಿವಾರದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಬಹುತೇಕರು ಜನಿವಾರವನ್ನು ಧರ್ಮದ ಜೊತೆ ಜೋಡಣೆ ಮಾಡಿದ್ದಾರೆ. ಜನಿವಾರದ ಬಗ್ಗೆ ವಿಜ್ಞಾನಿಗಳು ಮತ್ತು ನಾಸಾ ಕೂಡ ಕೆಲವೊಂದು ಆಸಕ್ತಿದಾಯಕ ವಿಷ್ಯಗಳನ್ನು ಹೇಳಿದೆ.

ಹಿಂದಿನ ಕಾಲದಲ್ಲಿ ಗುರುಕುಲ (Gurukula) ದಲ್ಲಿ ದೀಕ್ಷೆ ಪಡೆಯುವ ಮೊದಲು ಎಲ್ಲರೂ ಜನಿವಾರ ತೊಡುವುದು ಅನಿವಾರ್ಯವಾಗಿತ್ತು. ಜನಿವಾರವನ್ನು ಬ್ರಹ್ಮ (Brahma), ವಿಷ್ಣು ಮತ್ತು ಮಹೇಶನ ಸಂಕೇತವೆಂದು ಪರಿಗಣಿಸಲಾಗಿದೆ. ಪವಿತ್ರ ದಾರವನ್ನು ಧರಿಸುವುದನ್ನು ಯಜ್ಞೋಪವೀತ (Yajnopaveeta) ಸಂಸ್ಕಾರ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಪುರುಷರು ಪ್ರತಿ ಸದ್ಗುಣ ಮತ್ತು ಪೂಜೆಯಲ್ಲಿ ಪವಿತ್ರ ದಾರವನ್ನು ಧರಿಸುವುದು ಅವಶ್ಯಕ. ಈ ದಾರದ ಮಹತ್ವ ಪೂಜೆಗೆ ಸೀಮಿತವಾಗಿಲ್ಲ.
ಜನಿವಾರ ಧರಿಸುವ ವ್ಯಕ್ತಿಯು ಅನೇಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶುಚಿತ್ವದಿಂದ ಹಿಡಿದು ಆಹಾರ ಮತ್ತು ಶೌಚಾಲಯದವರೆಗೆ ನಿಯಮಗಳನ್ನು ನಿಗದಿಪಡಿಸಲಾಗಿದೆ. ನಂಬಿಕೆಗಳ ಪ್ರಕಾರ, ಜನಿವಾರದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. 

ಜನಿವಾರ ಧರಿಸುವುದ್ರಿಂದ ಆಗುವ ಪ್ರಯೋಜನಗಳು : 
1. ಹೃದ್ರೋಗದ ಅಪಾಯವೂ ಜನಿವಾರದಿಂದ ಕಡಿಮೆಯಾಗುತ್ತದೆ ಎಂಬ ಹಳೆಯ ನಂಬಿಕೆ ಇದೆ. 
2.  ಜನಿವಾರ ಧರಿಸುವುದರಿಂದ ರಕ್ತ ಸಂಚಾರ ಉತ್ತಮವಾಗಿರುತ್ತದೆ. 
3.  ಕಿವಿಯ ಮೇಲೆ ದಾರ ಹಾಕುವುದ್ರಿಂದ ಕಿವಿಯ ಒಳಗಿನ ನರಗಳ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಅದು ನೇರವಾಗಿ ಮೆದುಳಿನ ನರಗಳಿಗೆ ಸಂಬಂಧಿಸಿದೆ ಎಂದು ಜನರು ಹೇಳುತ್ತಾರೆ. ಇದರಿಂದ ನೆನಪಿನ ಶಕ್ತಿಯೂ ಚುರುಕಾಗುತ್ತದೆ.  
4.  ಜನಿವಾರ ಧರಿಸುವುದರಿಂದ ಆಗುವ ಮತ್ತೊಂದು ಪ್ರಯೋಜನ ಕರುಳಿಗೆ ಆಗುತ್ತದೆ. ಇದು ಮಲಬದ್ಧತೆ ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. 
5. ಜನಿವಾರ ಧರಿಸುವುದರಿಂದ ಮನಸ್ಸಿನಲ್ಲಿ ಪರಿಶುದ್ಧತೆಯ ಭಾವನೆ ಉಂಟಾಗುತ್ತದೆ. ಇದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಕೆಟ್ಟ ಕೆಲಸಗಳಿಂದ ಮನಸ್ಸನ್ನು ದೂರವಿಡುತ್ತದೆ.
6. ಆಗಾಗ್ಗೆ ಕೆಟ್ಟ ಕನಸುಗಳನ್ನು ಕಾಣುವ ಪುರುಷರು ಮಲಗುವಾಗ ಕಿವಿಗೆ ಜನಿವಾರವನ್ನು ಸುತ್ತಿಕೊಂಡು ಮಲಗಬೇಕು, ಇದು ನಕಾರಾತ್ಮಕ ಶಕ್ತಿಗಳನ್ನು ದೂರವಿರಿಸುತ್ತದೆ.

Zodiac Signs: ಈ ರಾಶಿಗಳ ಮಕ್ಕಳಿಗೆ ಅಪ್ಪ ಅಂದ್ರೆ ಸ್ಟ್ರಾಂಗೆಸ್ಟ್‌ ಮ್ಯಾನ್

ಕಿವಿ ಮೇಲೆ ಜನಿವಾರ ಹಾಕಿಕೊಳ್ಳುವುದ್ರಿಂದ ಆಗುವ ಇನ್ನಷ್ಟು ಲಾಭಗಳು : ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಬಲ ಕಿವಿಯ ಮೇಲೆ ದಾರವನ್ನು ಇಟ್ಟುಕೊಳ್ಳಬೇಕು. ಮಲ ಮೂತ್ರ ವಿಸರ್ಜನೆ ನಂತ್ರ ಕೈ ಮತ್ತು ಪಾದಗಳನ್ನು ತೊಳೆಯಬೇಕು. ಕೈ, ಪಾದ ತೊಳೆದ   ನಂತರ ಕಿವಿಯಿಂದ ದಾರವನ್ನು ತೆಗೆದು ಹಾಕಬೇಕು. ಈ ಶುಚಿಗೊಳಿಸುವಿಕೆಯು ಹಲ್ಲು, ಬಾಯಿ, ಹೊಟ್ಟೆ, ಹುಳುಗಳು, ಬ್ಯಾಕ್ಟೀರಿಯಾದ ಕಾಯಿಲೆಗಳಿಂದ ಪುರುಷನನ್ನು ರಕ್ಷಿಸುತ್ತದೆ.  
ಹೊಕ್ಕುಳದಿಂದ ದೇಹದ ಮೇಲ್ಭಾಗವನ್ನು ಧಾರ್ಮಿಕ ಚಟುವಟಿಕೆಗಳಿಗೆ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಕೆಳಗಿನ ಭಾಗವನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಬಲ ಕಿವಿಗೆ ಇಷ್ಟೊಂದು ಪ್ರಾಮುಖ್ಯತೆ ಕೊಡಲು ವೈಜ್ಞಾನಿಕ ಕಾರಣವೆಂದರೆ ಈ ಕಿವಿಯ ನಾಳ, ಜನನಾಂಗ ಮತ್ತು ವೃಷಣಗಳ ನಡುವೆ ಅವಿನಾಭಾವ ಸಂಬಂಧವಿದೆ. ಆಯುರ್ವೇದದ ದೃಷ್ಟಿಯಿಂದಲೂ ಈ ಅಂಶ ಸಾಬೀತಾಗಿದೆ.  

ಕಾಗೆ ಕಣ್ಣು, ಗೂಬೆ ಕಣ್ಣು ಮಕ್ಕಳ ಮೇಲೆ ಬೀಳುತ್ತೆ, ದೃಷ್ಟಿ ತೆಗೆಯಬೇಕು ಅಷ್ಟೇ!

ಇದಲ್ಲದೆ ಮಲ ಮತ್ತು ಮೂತ್ರವನ್ನು ಹೊರಹಾಕುವ ಮೊದಲು, ದಾರವನ್ನು ಎರಡು ಬಾರಿ ಕಿವಿಗೆ ಬಿಗಿಯಾಗಿ ಸುತ್ತಿಕೊಳ್ಳಬೇಕು.  ಕಿವಿಯ ಹಿಂದೆ ಎರಡು ನರಗಳಿದ್ದು ಇದು ಹೊಟ್ಟೆಯ ಕರುಳಿಗೆ ಸಂಬಂಧಿಸಿದೆ. ಕರುಳಿನ ಮೇಲೆ ಒತ್ತಡ ಹಾಕುವ ಮೂಲಕ  ಅದು ಅವುಗಳನ್ನು ಸಂಪೂರ್ಣವಾಗಿ ತೆರೆಯುತ್ತದೆ. ಇದರಿಂದಾಗಿ ಮಲ ವಿಸರ್ಜನೆ  ಸುಲಭವಾಗುತ್ತದೆ. ಜನಿವಾರದಿಂದ ಮಲಬದ್ಧತೆ, ಎಸಿಡಿಟಿ, ಹೊಟ್ಟೆಯ ಕಾಯಿಲೆಗಳು, ಮೂತ್ರದ ಕಾಯಿಲೆಗಳು ಸೇರಿದಂತೆ ಇತರ ಯಾವುದೇ ಸಾಂಕ್ರಾಮಿಕ ರೋಗ ಕಾಡುವುದಿಲ್ಲ ಎನ್ನಲಾಗುತ್ತದೆ. 

Follow Us:
Download App:
  • android
  • ios