Holi Festival: ಗುಮ್ಮಟನಗರಿ ವಿಜಯಪುರದಲ್ಲಿ ಸಂಭ್ರಮದ ಹೋಳಿ ಕಾಮದಹನ..!

*  ಮನೆ ಮನೆಗಳಲ್ಲು ನಡೆಯುತ್ತೆ ಕಾಮದಹನ
*  ಬೆಂಕಿಯಲ್ಲಿ ಕಡಲೆ, ಕೊಬ್ಬರಿ, ಹೋಳಿಗೆ ಸುಟ್ಟು ತಿನ್ನುವುದ್ಯಾಕೆ?!
*  ಕಾಮದಹನದ ಜೊತೆಗೆ ಹಲಗೆ ಅಬ್ಬರ
 

Holi Festival Celebration in Vijayapura grg

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ(ಮಾ.18):  ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ಗುಮ್ಮಟನಗರಿ ವಿಜಯಪುರದಲ್ಲಿ(Vijayapura) ಕಾಮದಹನ ನಡೆಸಲಾಯಿತು. ನಗರದ ಹಳೆ ಓಣಿಗಳಾದ ಜೋರಾಪೂರ ಪೇಟ, ಶಾ ಪೇಟಿ, ಜಾಡರ ಓಣಿ, ಅಡಕಿ ಗಲ್ಲಿ, ಬೆಂಡಿಗೇರಿ ಓಣಿ ಸೇರಿದಂತೆ ಹಲವು ಕಡೆಗಳಲ್ಲಿ ಕಾಮದಹನ ಮಾಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲು(Rural Area) ಕಾಮದಹನ ಆಚರಣೆ ನಡೆಯಿತು.

Holi Festival Celebration in Vijayapura grg

ಕಾಮದಹನದ ಜೊತೆಗೆ ಹಲಗೆ ಅಬ್ಬರ..!

ಹೋಳಿ(Holi) ಕಾಮದಹನ ಹಿನ್ನೆಲೆಯಲ್ಲಿ ಯುವಕರು, ಮಕ್ಕಳು ಹಲಗೆ ಬಾರಿಸೋದು ವಾಡಿಕೆ.. ಹಾಗೇ ವಿಜಯಪುರ ನಗರ ಸೇರಿದಂತೆ ಹಳ್ಳಿಗಳಲ್ಲಿ ಹಲಗೆ ಸದ್ದು ಜೋರಾಗಿತ್ತು. ಕಾಮದಹನ ವೇಳೆ ಹಲಗೆ ಬಾರಿಸುತ್ತ ಸುತ್ತು ಹಾಕಲಾಗುತ್ತೆ.. ಕಾಮದಹನ ವೇಳೆ ಬಾಯಿ ಬಾಯಿ ಬಡೆದುಕೊಳ್ಳುವ ಆಚರಣೆಯು ಉತ್ತರ ಕರ್ನಾಟಕ(North Karnataka) ಭಾಗದಲ್ಲಿದೆ..

Holi Festival Celebration in Vijayapura grg

Holi 2022: ಹೋಳಿ ಹಬ್ಬದ ದಿನ ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಗೌರವ ಹೆಚ್ಚುತ್ತೆ?

ಮಾಜಿ ಸಚಿವ ಎಸ್‌ ಕೆ ಬೆಳ್ಳುಬ್ಬಿಯಿಂದಲು ಶಾಸ್ತ್ರೋಕ್ತ ಕಾಮದಹನ..!

ವಿಜಯಪುರ ಜಿಲ್ಲೆಯ ನಾನಾ ಕಡೆಗಳಲ್ಲಿ ಕಾಮದಹನ ನಡೆಯಿತು. ಜೊತೆಗೆ‌ ಕೊಲ್ಹಾರ ಪಟ್ಟಣದಲ್ಲಜ ಮಾಜಿ ಸಚಿವ ಎಸ್‌ ಕೆ ಬೆಳ್ಳುಬ್ಬಿ(SK Bellubbi) ಕಾಮದಹನ ನೆರವೇರಿಸಿದರು. ಅದಕ್ಕು ಮೊದಲು ಸ್ಥಳೀಯರ ಜೊತೆ ಜೊತೆಗೆ ಹೋಳಿ ಹುಣ್ಣಿಮೆ ಕುರಿತಾದ ಜನಪದ ಗೀತೆಗಳನ್ನ ಹಾಡಿದ್ದು ವಿಶೇಷವಾಗಿತ್ತು. ಇನ್ನು ಪಟ್ಟಣ ನಿವಾಸಿಗಳ ಜೊತೆಗೆ ಬೆಳ್ಳುಬ್ಬಿ ಶಾಸ್ತ್ರೋಕ್ತವಾಗಿ ಕಾಮದಹನ ನೆರವೇರಿದರು.. ಮೊದಲಿನಿಂದಲು ಬೆಳ್ಳುಬ್ಬಿ ಪಟ್ಟಣದ ಜನರ ಜೊತೆಗೆ ಶಾಸ್ತ್ರೋಕ್ತವಾಗಿ ಕಾಮದಹನ ಕಾರ್ಯಕ್ರಮ ನಡೆಸುವುದು ವಾಡಿಕೆಯಾಗಿದೆ.

Holi Festival Celebration in Vijayapura grg

Holi 2022: ಬಣ್ಣದೋಕುಳಿಯಲ್ಲಿ ಕಣ್ಣುಗಳನ್ನು ರಕ್ಷಿಸುವುದು ಹೇಗೆ ?

ಗುಮ್ಮಟನಗರಿಯ ಮನೆ-ಮನೆಗಳಲ್ಲಿ ಕಾಮ ದಹನ..!

ಸಾಮೂಹಿಕವಾಗಿ ಕಾಮನ ಆಕೃತಿ ಕೂರಿಸಿ ದಹನ ಮಾಡೋದು ಇದೆ. ಓಣಿಗಳಲ್ಲಿ ಸ್ಥಳೀಯರು ಸೇರಿ ಸಾಮೂಹಿಕವಾಗಿ ಕಾಮದಹನ ನಡೆಸುತ್ತಾರೆ. ಜೊತೆಗೆ ವಿಜಯಪುರದಲ್ಲಿ ಮನೆಗಳ ಎದುರು ಸಹ ಕಾಮದಹನ ನಡೆಯೋದು ವಿಶೇಷ. 5 ಗೋವಿನ ಸಗಣಿಯ ಭರಣಿಗಳನ್ನ ತಂದು ಒಟ್ಟಾಗಿ ಇಡಲಾಗುತ್ತೆ. ಭರಣಿಗಳ ಒಳಗೆ ಕೊಬ್ಬರಿ ತುಂಡುಗಳು, ತುಪ್ಪ, ಕರ್ಪೂರ, ಹೋಳಿಗೆ ಇಟ್ಟು ನೂಲು ಸುತ್ತಲಾಗುತ್ತೆ. ಬಳಿಕ ಹೂವು ಹಾಕಿ ಪೂಜೆ ಮಾಡಲಾಗುತ್ತೆ. ಇನ್ನು ಮನೆಯವರೇ ಸೇರಿ ಪೂಜೆ ಮಾಡಲಾದ ಸ್ಥಳದಲ್ಲಿ ೫ ಸುತ್ತು ಹಾಕುತ್ತಾರೆ. ಬಳಿಕ ಕಾಮದಹನ ನಡೆಸಲಾಗುತ್ತೆ.. ಈ ವೇಳೆ ಹಲಗೆ ಬಾರಿಸುತ್ತ ಸಗಣಿಯ ಭರಣಿಗಳಿಗೆ ಶಾಸ್ತ್ರೋಕ್ತವಾಗಿ ದಹಿಸಲಾಗುತ್ತೆ.

HoLi 2022: ನವವಿವಾಹಿತೆ ಕಾಮದಹನ ನೋಡ್ಲೇಬಾರ್ದು, ಅತ್ತೆ ಸೊಸೆ ಜೊತೆಯಾಗಿ ನೋಡಿದ್ರಂತೂ ಕಷ್ಟ ಕಷ್ಟ

ಕಾಮನ ಬೆಂಕಿಯಲ್ಲಿ ಕಡಲೆ ಸುಟ್ಟು ತಿಂದರೇ ಏನಾಗುತ್ತೆ?

ಇನ್ನು ಮನೆಗಳ ಎದುರು ನಡೆಸುವ ಕಾಮದಹನದಲ್ಲಿ ಕಡಲೆ ಕಾಳು, ಒಣ ಕೊಬ್ಬರಿ ಸುಟ್ಟು ತಿನ್ನುವ ಆಚರಣೆಯು ಇದೆ. ಕಾಮದಹನದ ಬಳಿಕ ಅದೆ ಬೆಂಕಿಯಲ್ಲಿ ಒಣ ಕಡಲೆಯನ್ನ ಬುಟ್ಟಿಯೊಂದರಲ್ಲಿ ಹಾಕಿ ಹುರಿಯಲಾಗುತ್ತೆ. ಬಳಿಕ ಮನೆ ಮಂದಿ ಎಲ್ಲರು ಸೇರಿ ಈ ಸುಟ್ಟ ಕಡಲೆಯನ್ನ ತಿನ್ನುವ ಪದ್ದತಿ ಇದೆ. ಮನೆಯಲ್ಲಿನ ಮಕ್ಕಳಿಗು ತಿನ್ನಿಸಲಾಗುತ್ತೆ.. ಹೀಗೆ ತಿಂದರೆ ಹಲ್ಲುಗಳು ಗಟ್ಟಿಯಾಗುತ್ವೆ ಎನ್ನುವ ನಂಬಿಕೆ ಇದೆ. ಸಾಮೂಹಿಕವಾಗಿ ನಡೆಯುವ ಕಾಮದಹನದಲ್ಲಿ ಹೋಳಿಗೆ, ಕಡುಬುಗಳನ್ನ ಅರೆಬರೆ ಸುಟ್ಟು ತಿನ್ನುವ ಪದ್ದತಿಯು ಇದೆ. ಹೀಗೆ ಮಾಡಿದ್ರೆ ದೇಹದಲ್ಲಿನ ರೋಗ-ರುಜಿನಗಳು ಮಾಯವಾಗುತ್ವೇ ಎನ್ನುವ ನಂಬಿಕೆಯು ಇದೆ.

Holi Festival Celebration in Vijayapura grg

12 ದಿನಗಳ ಹೋಳಿ ಎಲ್ಲಿ ಆಚರಿಸಲಾಗುತ್ತದೆ?

ರಾಜಸ್ಥಾನದ ಅಜ್ಮೇರ್‌ನಲ್ಲಿ ಪುಷ್ಕರ್ ಎಂಬ ಹೆಸರಿನ ಹಿಂದೂ ಯಾತ್ರಾ ಸ್ಥಳವಿದೆ. ಪುಷ್ಕರದಲ್ಲಿ ಬ್ರಹ್ಮದೇವನ ಏಕೈಕ ದೇವಾಲಯವಿದೆ. ಈ ಯಾತ್ರಾ ನಗರದಲ್ಲಿ 12 ದಿನಗಳ ಕಾಲ ಹೋಳಿ ಹಬ್ಬ ಆಚರಿಸಲಾಗುತ್ತದೆ. ಮೊದಲೇ ಹೇಳಿದಂತೆ ಪುಷ್ಕರ್ ನಲ್ಲಿ ಹೋಳಿ ಸಂಭ್ರಮ ಆರಂಭವಾಗಿದೆ. ಇಲ್ಲಿನ ಲೇಬೆಲ್ಲಾ ಹೋಳಿ ಮಂಡಳದ ಆಶ್ರಯದಲ್ಲಿ ಪ್ರತಿದಿನ ವರಾಹ ಘಾಟ್ ಚೌಕದಲ್ಲಿ ಮಾರ್ಚ್ 7 ರಿಂದ ಮಾರ್ಚ್ 18 ರವರೆಗೆ ಹೋಳಿ ಹಬ್ಬ ನಡೆಯಲಿದೆ. 
 

Latest Videos
Follow Us:
Download App:
  • android
  • ios