Holi 2023: ಹುಬ್ಬಳ್ಳಿಯಲ್ಲಿ ಇಂದು ಸಂಭ್ರಮದ ಜಗ್ಗಲಗಿ ಹಬ್ಬ

ಹೋಳಿ ಹಬ್ಬದ ನಿಮಿತ್ತ ಹುಬ್ಬಳ್ಳಿ ಜಗ್ಗಲಗಿ ಸಮಿತಿಯಿಂದ ಮಾ.9ರಂದು ಮಧ್ಯಾಹ್ನ 3 ಗಂಟೆಗೆ ಜಗ್ಗಲಗಿ ಹಬ್ಬ ನಡೆಯಲಿದೆ. ಅತ್ಯಂತ ಸಂಭ್ರಮದಿಂದ ಹಬ್ಬ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹಬ್ಬದ ಆಯೋಜಕ ಮಹೇಶ ಟೆಂಗಿನಕಾಯಿ ಹೇಳಿದರು.

Holi 2023 Today is the festival of Jaggalagi in Hubli rav

ಹುಬ್ಬಳ್ಳಿ (ಮಾ.9) : ಹೋಳಿ ಹಬ್ಬದ ನಿಮಿತ್ತ ಹುಬ್ಬಳ್ಳಿ ಜಗ್ಗಲಗಿ ಸಮಿತಿ(Jaggalagi habba)ಯಿಂದ ಮಾ.9ರಂದು ಮಧ್ಯಾಹ್ನ 3 ಗಂಟೆಗೆ ಜಗ್ಗಲಗಿ ಹಬ್ಬ ನಡೆಯಲಿದೆ. ಅತ್ಯಂತ ಸಂಭ್ರಮದಿಂದ ಹಬ್ಬ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹಬ್ಬದ ಆಯೋಜಕ ಮಹೇಶ ಟೆಂಗಿನಕಾಯಿ(Mahesh Tenginayi) ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷದಿಂದ ಜಗ್ಗಲಗಿ ಹಬ್ಬ ಆಚರಿಸಲಾಗುತ್ತಿದೆ. ಕೊರೋನಾ(Corona virus) ಕಾರಣದಿಂದ 2 ವರ್ಷ ಹಬ್ಬ ಆಚರಿಸಿರಲಿಲ್ಲ. 9ನೇ ಬಾರಿ ನಗರದಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೋಳಿ ಹಬ್ಬ ಮತ್ತು ಚರ್ಮ ವಾದ್ಯಗಳ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಈ ಹಬ್ಬವನ್ನು ಆಯೋಜಿಸಲಾಗಿದೆ ಎಂದರು.

Holi 2023: ಹೋಳಿ ಹಬ್ಬಕ್ಕೆ ಹುಬ್ಬಳ್ಳಿಯಲ್ಲಿ ರಂಗಿನ ತಯಾರಿ: ಹರ್ಬಲ್ ಬಣ್ಣಕ್ಕೆ ಭಾರೀ ಬೇಡಿಕೆ

ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಮೆರವಣಿಗೆ ಮೂರು ಸಾವಿರ ಮಠದ ಮೈದಾನದಿಂದ ಆರಂಭವಾಗಿ ವಿಕ್ಟೋರಿಯಾ ರಸ್ತೆ, ಬಾನಿ ಓಣಿ, ಸ್ಟೇಷನ್‌ ರಸ್ತೆ, ಮರಾಠ ಗಲ್ಲಿ, ಬ್ರಾಡ್ವೇ, ದುರ್ಗದ ಬೈಲ್‌, ಬೆಳಗಾಂವ್‌ ಗಲ್ಲಿ, ಪೆಂಡಾರ ಗಲ್ಲಿ, ತುಳಜಾ ಭವಾನಿ ವೃತ್ತ, ದಾಜಿಬಾನಪೇಟೆ ಮಾರ್ಗವಾಗಿ ಮೂರು ಸಾವಿರ ಮಠ ತಲುಪಲಿದೆ. ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಸುಮಾರು 20ಕ್ಕೂ ಹೆಚ್ಚು ವಿವಿಧ ಮಠಾಧೀಶರು ಭಾಗವಹಿಸುವರು ಎಂದು ಹೇಳಿದರು.

ಹಬ್ಬದಲ್ಲಿ ಸುತ್ತಲಿನ ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಕಲಘಟಗಿ, ಶಿವಳ್ಳಿ, ಅಮರಗೋಳ, ಮರೇವಾಡ, ತಾರಿಹಾಳ, ಸೂರಶೆಟ್ಟಿಕೊಪ್ಪ ಹಾಗೂ ಧಾರವಾಡ, ಗಂಗಾವತಿ, ಉಡುಪಿ ಸೇರಿದಂತೆ ಹುಬ್ಬಳ್ಳಿ ನಗರದ ವಿವಿಧೆಡೆಯಿಂದ ನೂರಾರು ಜಾನಪದ ಕಲಾವಿದರ 40ಕ್ಕೂ ಹೆಚ್ಚು ತಂಡಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಹಾನಗಲ್‌ ಕುಮಾರೇಶ್ವರ ಯುವಕ ಮಂಡಳದಿಂದ ಬೇಡರ ವೇಷ, ಹುಬ್ಬಳ್ಳಿಯ ರಾಧಾಕೃಷ್ಣ ಅಕಾಡೆಮಿಯಿಂದ ವಿವಿಧ ಚರ್ಮವಾದ್ಯಗಳ ಪ್ರದರ್ಶನ, ಸ್ವರ್ಣ ಮಯೂರಿ ಗೊಂಬೆ ತಂಡದಿಂದ ಪ್ರದರ್ಶನ ಇರಲಿದೆ.

ಉಡುಪಿಯ ಕಾಡುಬೆಟ್ಟು ಪ್ರದೇಶದ ಹುಲಿ ಕುಣಿತ, ಬೆಳಗಾವಿಯ ಮೋತಿಭಾಗ್‌ ಗಲ್ಲಿಯ ಡೋಲ್‌ ತಾಷಾ ಪಟಾಕ, ಬೆಂಗಳೂರಿನ ತಮಟೆ ರವಿ ತಂಡದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಮೆರವಣಿಗೆಯ ಮಾರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಮೆರವಣಿಗೆಯಲ್ಲಿ 41 ಕಲಾತಂಡಗಳು, 509 ಕಲಾವಿದರು ಭಾಗವಹಿಸಲಿದ್ದಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಧಾರವಾಡ: ಪೂರ್ವ ಬಿಟ್ಟರೆ ಆರೂ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕರು!

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಧಾರವಾಡ ವಿಭಾಗದ ಲಿಂಗರಾಜ ಪಾಟೀಲ, ಸತೀಶ ಶೆಜವಾಡಕರ, ಸುಭಾಸ್‌ಸಿಂಗ್‌ ಜಮಾದಾರ, ರವಿ ನಾಯಕ, ಪ್ರಭು ನವಲಗುಂದಮಠ, ದತ್ತಮೂರ್ತಿ ಕುಲಕರ್ಣಿ, ಬಸವರಾಜ ಅಮ್ಮಿನಬಾವಿ, ಜಗದೀಶ ಬುಳ್ಳಾನವರ, ಚಂದ್ರಶೇಖರ ಗೋಕಾರ, ಸುಬ್ರಹ್ಮಣ್ಯ ಶಿರಕೋಳ, ಕೃಷ್ಣಾ ಗಂಡಗಾಳೇಕರ ಇತರರಿದ್ದರು.

Latest Videos
Follow Us:
Download App:
  • android
  • ios