ಕಂಪ್ಲಿ ಕಲಾರತಿ ಉತ್ಸವದ ಸಂಭ್ರಮ, ಸಾಂಸ್ಕೃತಿಕ ಇತಿಹಾಸ ಮರುಕಳಿಸಿದ ವೈಭವ ಮೆರವಣಿಗೆ

ಬಳ್ಳಾರಿ ವಿಜಯನಗರ ವಿಭಜನೆ ‌ಬಳಿಕ ಇದೇ ಮೊದಲ ಬಾರಿಗೆ ಕಂಪ್ಲಿ ಕಲಾರತಿ ಉತ್ಸವ‌ ಮಾಡಲಾಗ್ತಿದೆ. ಐತಿಹಾಸಿಕ ಇತಿಹಾಸವಿರುವ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ  ಮಾಡುತ್ತಿರೋ  ಕಂಪ್ಲಿ ಕಲಾರತಿ ಉತ್ಸವದ ಮೊದಲ ದಿನದ ಕಲಾತಂಡಗಳ ಮೆರವಣಿಗೆ ಜನಮನ ಸೆಳೆಯಿತು.

historical kampli utsav and procession celebration gow

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಳ್ಳಾರಿ (ಫೆ.11): ಬಳ್ಳಾರಿ ವಿಜಯನಗರ ವಿಭಜನೆ ‌ಬಳಿಕ ಇದೇ ಮೊದಲ ಬಾರಿಗೆ ಕಂಪ್ಲಿ ಕಲಾರತಿ ಉತ್ಸವ‌ ಮಾಡಲಾಗ್ತಿದೆ. ಐತಿಹಾಸಿಕ ಇತಿಹಾಸವಿರುವ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ  ಮಾಡುತ್ತಿರೋ  ಕಂಪ್ಲಿ ಕಲಾರತಿ ಉತ್ಸವದ ಮೊದಲ ದಿನದ ಕಲಾತಂಡಗಳ ಮೆರವಣಿಗೆ ಜನಮನ ಸೆಳೆಯಿತು. ಜಿಲ್ಲಾ ವಿಭಜನೆ ಬಳಿಕ ಮತ್ತು ಅದಕ್ಕಿಂತ ಮುಂಚೆಯಿಂದಲೂ ಕಂಪ್ಲಿ ಉತ್ಸವ ಮಾಡಬೇಕೆಂಬ ಬಹುಕಾಲದ ಬೇಡಿಕೆಯಿತ್ತು. ಇದೀಗ ಅದು ಸಾಕಾರಗೊಂಡಿದೆ.  ಕಂಪ್ಲಿ ಕಲಾರತಿ ಉತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವೈಭವ ಮೆರವಣಿಗೆಯು ಪಟ್ಟಣದ ಸಾಂಸ್ಕೃತಿಕ ಕಲಾ ವೈಭವವನ್ನು ಮರುಕಳಿಸಿತು. ಕಂಪ್ಲಿ ಕಲಾರತಿ ಉತ್ಸವದ ಮೆರವಣಿಗೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್   ಪಟ್ಟಣದ ಕೋಟೆ ಪ್ರದೇಶದಲ್ಲಿ ಗಂಡುಗಲಿ ಕುಮಾರರಾಮ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಚಾಲನೆ ನೀಡಿದರು.

ಅದ್ಧೂರಿಯಾಗಿ ನಡೆದ ಮೆರವಣಿಗೆ: ಕಲಾ ತಂಡದೊಂದಿಗೆ ಮೆರವಣಿಗೆಯು ಪಟ್ಟಣದ ಕೋಟೆ ಪ್ರದೇಶದಿಂದ ಆರಂಭವಾಗಿ ಡಾ.ರಾಜ್ ಕುಮಾರ್ ರಸ್ತೆಯ ಮೂಲಕ  ಮಾರ್ಕೆಟ್ ಮಾರ್ಗವಾಗಿ   ಮಸೀದಿ ಮೂಲಕ ಅಂಬೇಡ್ಕರ್ ವೃತ್ತದಿಂದ ಸೋಮೇಶ್ವರ ದೇವಸ್ಥಾನದವರೆಗೆ ಸಾಗಿತು.

ಗಮನ ಸೆಳೆದ ವಿವಿಧ ಕಲಾತಂಡಗಳು: ಮೆರವಣಿಗೆಯಲ್ಲಿ  ತಾಷರಂಡೋಲ್, ಡೊಳ್ಳು ಕುಣಿತ, ಹಗಲುವೇಷ, ನಂದಿಧ್ವಜ, ಮರಗಾಲು ಕುಣಿತ, ಕಹಳೆವಾದನ, ವೀರಗಾಸೆ ಕುಣಿತ, ಹಕ್ಕಿಗೂಡು ಹಕ್ಕಿಪಿಕ್ಕಿ ಜನಪದ ಮಹಿಳಾ ನೃತ್ಯ ತಂಡದಿಂದ ಜಾನಪದ ನೃತ್ಯ, ಕುದುರೆ ಕುಣಿತ, ಗೊರವರ ಕುಣಿತ, ಹಲಗೆ ವಾದನnಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವವದ ಮೆರಗನ್ನು ಇನ್ನಷ್ಟು ಹೆಚ್ಚಿಸಿದವು.

ಸೋಮಪ್ಪ ಕೆರೆಯಲ್ಲಿ ತುಂಗಭದ್ರ ಆರತಿ ಮಹೋತ್ಸವ:
ಕಂಪ್ಲಿ ಕಲಾರತಿ ಉತ್ಸವದ ಭಾಗವಾಗಿ ಪಟ್ಟಣದ ಸೋಮಪ್ಪನ ದೇವಸ್ಥಾನದ ಮುಂಭಾಗದಲ್ಲಿರುವ ಸೋಮಪ್ಪ ಕೆರೆಯಲ್ಲಿ ತುಂಗಭದ್ರಾ ಆರತಿ ಮಹೋತ್ಸವ ಹಾಗೂ ಬಾಗಿನ ಸಮರ್ಪಣೆಯ ಧಾರ್ಮಿಕ ಕಾರ್ಯಕ್ರಮವು ಅದ್ದೂರಿಯಾಗಿ  ನಡೆಯಿತು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಕೆರೆ ತೀರದಲ್ಲಿ ನೀರಿಗೆ ಹಾಲನ್ನು ಹಾಕಿ ನಂತರ ಬಾಗಿನವನ್ನು ಸಮರ್ಪಣೆ ಮಾಡುವ ಮೂಲಕ ಚೊಚ್ಚಲ ಕಂಪ್ಲಿ ಕಲಾರತಿ ಉತ್ಸವಕ್ಕೆ ಚಾಲನೆ ನೀಡಿದರು.

Gadag News: ಮೂರು ದಿನಗಳ ಲಕ್ಕುಂಡಿ ಉತ್ಸವಕ್ಕೆ ಸಿಎಂ ಚಾಲನೆ

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ,  ಕಂಪ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿದ್ಯಾಧರೆ, ತಹಶೀಲ್ದಾರ ಗೌಸಿಯಾ ಬೇಗಂ, ತಾಪಂ ಇಒ ಮಲ್ಲನಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಲಿಂಗಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.

Latest Videos
Follow Us:
Download App:
  • android
  • ios