ಗುಲಾಬಿ ಹೂವು ನೀಡಿ ರಂಜಾನ್ ಶುಭ ಕೋರಿದ ಹಿಂದುಗಳು ,ಯಾದಗಿರಿಯಲ್ಲಿ ಭಾವೈಕ್ಯತೆ ಸಂದೇಶ

ಗುಲಾಬಿ ಹೂವು ನೀಡಿ ರಂಜಾನ್ ಶುಭ  ಕೋರಿದ ಹಿಂದುಗಳು
ಭಾವೈಕ್ಯತೆ ಸಂದೇಶ ಸಾರಿದ ಹಿಂದು- ಮುಸ್ಲಿಂ ಸಹೋದರರು...!
ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಸಹೋದರರು ಸಾಮರಸ್ಯ

Hindu Muslims Celebrates Ramdan And Basava Jayanti In Yadgir District rbj

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ, (ಮೇ.03):
ರಾಜ್ಯದಲ್ಲಿ ಹಿಂದೂ-ಮುಸ್ಲಿಂ ರ ನಡುವೆ ಧರ್ಮ ಸಂಘರ್ಷ ತಾರಕ್ಕೆರಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಧರ್ಮ ದಂಗಲ್ ನಡುವೆ ರಂಜಾನ್ ಹಬ್ಬ ಹಾಗೂ ಬಸವೇಶ್ವರ ಜಯಂತಿ ಆಚರಣೆಯನ್ನು ಭಾವೈಕ್ಯತೆಯಿಂದ ಆಚರಣೆ ಮಾಡಿದರು. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಸಹೋದರರು ಸಾಮರಸ್ಯದ ಸಂದೇಶ ಸಾರಿದ್ದಾರೆ.

ಯರಗೋಳದಲ್ಲಿ ಹಿಂದೂ-ಮುಸ್ಲಿಂ ರು ಸಹೋದರರಂತೆ
ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸಹೋದರಂತೆ  ಜೀವನ ನಡೆಸುತ್ತಿದ್ದಾರೆ. ಯಾವುದೇ ಜಾತ್ರೆ ಉತ್ಸವ, ಹಬ್ಬ ಹರಿದಿನವಿದ್ದರು‌ ಯಾವುದೇ ಜಾತಿ ಬೇಧ-ಭಾವವಿಲ್ಲದೇ ಹಿಂದೂ-ಮುಸ್ಲಿಂ ರು ಸೇರಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಇಂದು ಪವಿತ್ರ ರಂಜಾನ್ ಹಬ್ಬದ ದಿನ ಯಾದಗಿರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಂಭ್ರಮಪಟ್ಟರು. ಯರಗೋಳ ಗ್ರಾಮದಲ್ಲಿ ಬೆಳಿಗ್ಗೆ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು‌.

ಒಂದೆಡೆ ರಂಜಾನ್ ಪ್ರಾರ್ಥನೆ, ಇನ್ನೊಂದೆಡೆ ಬಸವಣ್ಣನ ಸ್ಮರಣೆ, ಭಾವೈಕ್ಯತೆಗೆ ಸಾಕ್ಷಿಯಾದ ಕರ್ನಾಟಕ

ಗುಲಾಬಿ ಹೂವು ನೀಡಿ ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭ ಕೋರಿದ ಹಿಂದೂಗಳು
ಇವತ್ತು ಮುಸಲ್ಮಾನ ರ ಪವಿತ್ರ ಹಬ್ಬ ರಂಜಾನ್ ಇದ್ದ ಕಾರಣ, ಯರಗೋಳದಲ್ಲಿ ಮುಸಲ್ಮಾನ ಬಾಂಧವರು ಸಾಮೂಹಿಕ ಪ್ರಾರ್ಥನೆಯ ನಂತರ ಹಿಂದೂ ಸಹೋದರರು ಮುಸ್ಲಿಂ ಬಾಂಧವರಿಗೆ ಗುಲಾಬಿ ಹೂವು ನೀಡಿ ರಂಜಾನ್ ಹಬ್ಬದ ಶುಭಾಶಯಗಳು ಕೊರಿದರು.
ಈ ವೇಳೆ ಇಂದು ಬಸವೇಶ್ವರ ಜಯಂತಿ ಆಚರಣೆ ಹಿನ್ನೆಲೆ ಹಿಂದೂ ಸಹೋದರರಿಗೆ ಮುಸ್ಲಿಂ ಸಹೋದರರು ಬಸವೇಶ್ವರ ಜಯಂತಿಯ ಶುಭಾಶಯಗಳನ್ನು ಕೊರಿದರು. 

ನಾವೆಲ್ಲ ಒಂದೇ ಎಂದ ಯರಗೋಳ ಗ್ರಾಮಸ್ಥರು
ಯರಗೋಳ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಕಡಿಮೆ ಇದ್ರು ಕೂಡ ಬಹು ಸಂಖ್ಯಾತ ಹಿಂದೂ ಬಾಂಧವರು ಮುಸ್ಲಿಂ ಬಾಂಧವರ ಜೊತೆ ಉತ್ತಮವಾಗಿ ಒಡನಾಟ ಹೊಂದಿದ್ದಾರೆ. ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ  ಹಿಂದೂ-ಮುಸ್ಲಿಂ ಬಾಂಧವರ ನಡುವೆ ವೈರತ್ವ ಕಾಣುತ್ತಿದೆ. ಆದರೆ ಯರಗೋಳ ಗ್ರಾಮದಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶವನ್ನು ಸಾರಿದ್ದಾರೆ. ಈ ಬಗ್ಗೆ ಯರಗೋಳ ಗ್ರಾಮದ ಮುಖಂಡ ವೀರಣ್ಣಗೌಡ ಮಾತನಾಡಿ, ಊರಲ್ಲಿ ಹಿಂದು- ಮುಸ್ಲಿಂ ಎಂಬ ಬೇದಭಾವ ಮಾಡದೇ ನಾವು ಸಹೋದರರಂತೆ ಇದ್ದೆವೆ‌. ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಸಹೋದರರಿಗೆ ಗುಲಾಬಿ ಹೂವು ನೀಡಿ ಹಬ್ಬದ ಶುಭಾಶಯಗಳನ್ನು ಕೊರಿದ್ದೆವೆ. ಮುಸ್ಲಿಂ ಬಾಂಧವರು ಕೂಡ ಬಸವೇಶ್ವರ ಜಯಂತಿ ಶುಭಾಶಯಗಳನ್ನು ಕೊರಿದ್ದಾರೆ ಎಂದರು. ಜಾತಿ-ಜಾತಿ ಎಂದು ನಾವು ಬಡಿದಾಡದೇ ಮಾನವರು ನಾವೆಲ್ಲ ಒಂದೇ, ಸಹೋರರಂತೆ ಇದ್ದೆವೆ ಎಂದರು.

ತಾಂಬೂಲ ನೀಡಿ, ಹಬ್ಬದ ಸಂಭ್ರಮ
ಯರಗೋಳ ಗ್ರಾಮದಲ್ಲಿ ಪುರಾತನದಿಂದಲೂ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ದಿನ ಮುಸ್ಲಿಂ ಸಹೋದರರಿಗೆ ವಿಳ್ಯದೇಲೆ ತಾಂಬೂಲ ನೀಡಿ ಪೊಲೀಸರು ಮುಸ್ಲಿಂ ಸಹೋದರರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೊರುತ್ತಾರೆ. ಅದರಂತೆ ಯರಗೋಳ ಗ್ರಾಮದ ಉಕ್ಕಡ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮುಸ್ಲಿಂ ಸಹೋದರರಿಗೆ ತಾಂಬೂಲ ನೀಡಿ ಹಬ್ಬದ ಶುಭಾಶಯಗಳನ್ನು ಕೊರಿದರು.

Latest Videos
Follow Us:
Download App:
  • android
  • ios