Asianet Suvarna News Asianet Suvarna News

ಚಂದ್ರಗ್ರಹಣದ ಬಳಿಕ ಹೆಚ್ಚಲಿದೆ ಸಮುದ್ರದುಬ್ಬರ; ಸುನಾಮಿ ಸಾಧ್ಯತೆ

ಗ್ರಹಗಳ ಸ್ಥಾನವು ಈ ವರ್ಷ ಜಗತ್ತಿನಲ್ಲಿ ಭಾರೀ ಮಳೆಯನ್ನು ಸೂಚಿಸುತ್ತದೆ. ಈ ವರ್ಷ ಚಂದ್ರನ ಸ್ಥಿತಿ ನೋಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಿಸುತ್ತದೆ. ಇದರ ಪರಿಣಾಮದಿಂದಾಗಿ ಜಗತ್ತಿನ ಪೂರ್ವ ಮತ್ತು ಪಶ್ಚಿಮ ಭಾಗದ ಸಮುದ್ರದಲ್ಲಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದ್ದು, ಕೆಲವೆಡೆ ಸುನಾಮಿ ರೂಪ ತಾಳುವ ಸಾಧ್ಯತೆ ಇದೆ ಎನ್ನುತ್ತಾರೆ ಜ್ಯೋತಿಷಿಗಳು.

High waves will rise in the ocean after Chandra Grahan astrologers warn skr
Author
First Published May 2, 2023, 9:42 AM IST

ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇದರಲ್ಲಿ ಏಪ್ರಿಲ್ 20ರಂದು ಮೇಷ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಿದೆ. ನಂತರ ಗುರು ಕೂಡ ಅದೇ ರಾಶಿಯನ್ನು ತಲುಪಿದನು, ಅಲ್ಲಿ ಬುಧ ಮತ್ತು ರಾಹು ಈಗಾಗಲೇ ಇದ್ದಿದ್ದರಿಂದ ಇವೆಲ್ಲವೂ ಸೇರಿ ಜಗತ್ತಿನ ಮೇಲೆ ಅಗಾಧ ಪರಿಣಾಮ ಬೀರಿತು. ಪ್ರಪಂಚದಾದ್ಯಂತದ ವಿವಿಧ ಪ್ರದೇಶಗಳು ಭೂಕಂಪ ಸೇರಿದಂತೆ ಹಲವಾರು ವಿಪತ್ತುಗಳನ್ನು ಎದುರಿಸಿದವು.

ಈಗ ಮೇ 2ರಂದು ಶುಕ್ರವು ಈಗಾಗಲೇ ಮಂಗಳ ಇರುವ ಮಿಥುನ ರಾಶಿಯಲ್ಲಿ ಸಂಕ್ರಮಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಮೇಯಲ್ಲಿ ಶುಕ್ರ ಮತ್ತು ಮಂಗಳನ ಸಂಯೋಗ ನಡೆಯಲಿದೆ. ಮೇ 5ರಂದು, ಚಂದ್ರಗ್ರಹಣವು ತುಲಾ ರಾಶಿಯಲ್ಲಿ ಸಂಭವಿಸಲಿದೆ. ಸ್ವಲ್ಪ ಸಮಯದ ನಂತರ ಚಂದ್ರನು ಮಂಗಳನ ಚಿಹ್ನೆಯಾದ ವೃಶ್ಚಿಕಕ್ಕೆ ಸಾಗುತ್ತಾನೆ. ಇದಾದ ನಂತರ ಮಂಗಳ ಮೇ 10ರಂದು ಚಂದ್ರನ ರಾಶಿಯನ್ನು ಕರ್ಕ ರಾಶಿಗೆ ಬದಲಾಯಿಸಲಿದ್ದಾನೆ, ಮತ್ತೊಂದೆಡೆ, ಈ ದಿನ ರಾತ್ರಿ 9.48ಕ್ಕೆ, ಚಂದ್ರನು ಧನು ರಾಶಿಯಿಂದ ಶನಿಯ ರಾಶಿಯಾದ ಮಕರ ರಾಶಿಗೆ ಸಾಗುತ್ತಾನೆ. 

ಅಶುಭ ಚಂದ್ರನ ಸ್ಥಾನ (Moon's position is not favourable)
ಈ ರೀತಿಯಾಗಿ, ಮಂಗಳ, ಶನಿ ಮತ್ತು ಚಂದ್ರನ ಸ್ಥಾನಗಳು ಮತ್ತು ಗ್ರಹಣವನ್ನು ಆಳವಾಗಿ ಅಧ್ಯಯನ ಮಾಡಿದ ನಂತರ, ಜ್ಯೋತಿಷಿಗಳು ಚಂದ್ರಗ್ರಹಣದ ಸ್ಥಾನವು ಕೆಟ್ಟದಾಗಿದೆ ಮತ್ತು ಚಂದ್ರನ ಈ ಸ್ಥಾನವು ಮುಖ್ಯವಾಗಿ ನೀರಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬುತ್ತಾರೆ. ಈ ಪರಿಸ್ಥಿತಿಯು ಏಪ್ರಿಲ್ 2023ರಿಂದ ಸೆಪ್ಟೆಂಬರ್ 2023ರ ಮಧ್ಯದವರೆಗೆ ಮುಂದುವರಿಯಬಹುದು ಮತ್ತು ಮುಂಬರುವ ದಿನಗಳಲ್ಲಿ ನೀರಿಗೆ ಸಂಬಂಧಿಸಿದ ದುರಂತವನ್ನು ಆಹ್ವಾನಿಸುವಂತಿದೆ. ಅದೇ ಸಮಯದಲ್ಲಿ, ಇದರಿಂದಾಗಿ, 2023ರಲ್ಲಿ ಬರಗಾಲದಂಥ ಪರಿಸ್ಥಿತಿ ಕೂಡಾ ಎದುರಾಗಬಹುದು. ಒಟ್ಟಿನಲ್ಲಿ ಚಂದ್ರನ ಅಶುಭ ಪರಿಣಾಮ ಎಂದರೆ ಮಾನಸಿಕ ಕ್ಷೋಭೆಗಳು ಎಲ್ಲೆಡೆ ಹೆಚ್ಚುತ್ತವೆ ಎಂದೂ ಅರ್ಥೈಸಿಕೊಳ್ಳಬಹುದು.

ಜಮೀನು ವಿವಾದ ಹೆಚ್ಚಾಗುವ ಸಾಧ್ಯತೆ
ಮಂಗಳನ ಸಂಗತಿಗಳು ಭೂಮಿಗೆ ಸಂಬಂಧಿಸಿದವು. ಇದರಿಂದ ದೇಶ ದೇಶಗಳ ನಡುವೆ ವಿವಾದ ಏರ್ಪಡುತ್ತದೆ ಎಂದು ಹಲವು ಜ್ಯೋತಿಷ್ಯ ತಜ್ಞರು ನಂಬುತ್ತಾರೆ. ಆದರೆ ಇದೀಗ ಗ್ರಹಚಾರಗಳು ನೀರಿನ ಪರಿಸ್ಥಿತಿಗೆ ಮಾರಕವಾಗಬಹುದು. ಈ ಕಾರಣದಿಂದಾಗಿ, ಸಮುದ್ರದಲ್ಲಿ ಚಲನೆ ಹೆಚ್ಚುತ್ತದೆ, ಇದರಿಂದಾಗಿ ಹೆಚ್ಚಿನ ಅಲೆಗಳು ಏಳುತ್ತವೆ. ಇದಲ್ಲದೆ ಅತಿವೃಷ್ಟಿ ಭೂಮಿಯ ಮೇಲೂ ಪರಿಣಾಮ ಬೀರಲಿದ್ದು, ಇದರಿಂದ ಬೆಳೆ ನಾಶವಾಗಿ ಮತ್ತೊಮ್ಮೆ ಜಗತ್ತಿನಾದ್ಯಂತ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಊಹಿಸಲಾಗಿದೆ.

ಚಂದ್ರಗ್ರಹಣದ ನಂತರ ಅನಾಹುತ (Disasters after Chandra Grahan)
ಚಂದ್ರಗ್ರಹಣದ ನಂತರ ಭೂಕಂಪ, ಪ್ರವಾಹ, ಸುನಾಮಿ, ವಿಮಾನ ಅಪಘಾತವನ್ನು ಕಾಣಬಹುದು. ಕೆಲವು ದೊಡ್ಡ ಅಪರಾಧಿಗಳು ಭಾರತಕ್ಕೆ ಬರುವ ಸೂಚನೆಗಳೂ ಇವೆ. ಆದರೂ ಪ್ರಾಣ ಹಾನಿಯಾಗುವ ಸಾಧ್ಯತೆ ಕಡಿಮೆ. ಪ್ರಪಂಚದಾದ್ಯಂತ ಗಡಿಯಲ್ಲಿ ಉದ್ವಿಗ್ನತೆ ಇರುತ್ತದೆ, ದೇಶದಲ್ಲಿ ಆಂದೋಲನ, ಹಿಂಸಾಚಾರ, ಪಿಕೆಟಿಂಗ್, ಮುಷ್ಕರ ನಡೆಯುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
ರಾಜಕೀಯ ಮತ್ತು ಚಲನಚಿತ್ರ ಕ್ಷೇತ್ರದಿಂದ ದುಃಖದ ಸುದ್ದಿಗಳನ್ನು ಕಾಣಬಹುದು.

Health Horoscope: ಮೇನಲ್ಲಿ ನಿಮ್ಮ ರಾಶಿಯ ಆರೋಗ್ಯ ಹೇಗಿರಲಿದೆ?

ಇನ್ನು ಸಕಾರಾತ್ಮಕ ವಿಷಯವೆಂದರೆ ವ್ಯಾಪಾರವು ವೇಗಗೊಳ್ಳುತ್ತದೆ, ರೋಗಗಳು ಕಡಿಮೆಯಾಗುತ್ತವೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಆದಾಯ ಹೆಚ್ಚಲಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios