ಸೆಪ್ಟೆಂಬರ್ 18ರಿಂದ ಆರಂಭವಾಗುತ್ತಿರುವ ಅಧಿಕ ಮಾಸದಲ್ಲಿ 15 ದಿನಗಳ ಶುಭಯೋಗವಿದೆ. ಅಧಿಕ ಮಾಸದಲ್ಲಿ 9 ದಿನ ಸರ್ವಾರ್ಥ ಸಿದ್ಧಿ ಯೋಗವಿದ್ದು, ದ್ವೀಪುಷ್ಕರ ಯೋಗವು 2 ದಿನವಿದ್ದರೆ, ಅಮೃತ ಸಿದ್ಧಿಯೋಗವು ಒಂದು ದಿನವಿದೆ. ಉಳಿದ ಇನ್ನೆರಡು ದಿನ ಪುಷ್ಯ ನಕ್ಷತ್ರದ ಯೋಗವಿದೆ. ಈ ಅಧಿಕ ಮಾಸಕ್ಕೆ ಪುರಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. 

ಪೂಜೆ, ಭಕ್ತಿ, ಆರಾಧನೆ, ಜಪ-ತಪ, ಯೋಗ, ಧ್ಯಾನ ಮುಂತಾದ್ದಕ್ಕೆಲ್ಲ ಮಹತ್ವವಾದ ಮಾಸವಾಗಿರುವುದು ಅಧಿಕ ಮಾಸವಾಗಿದೆ. ಇದು ಅಕ್ಟೋಬರ್ 16ರವರೆಗೆ ಇರಲಿದೆ. ಈ ಮಾಸದಲ್ಲಿ ಭಗವಾನ್ ವಿಷ್ಣುವಿನ ಆರಾಧನೆ ಮಾಡಿದರೆ ಬಹಳ ಒಳ್ಳೆಯದು. ಹೀಗಾಗಿ ವಿಷ್ಣುಪುರಾಣ, ವಿಷ್ಣುವಿನ ಸ್ತೋತ್ರಗಳು ಹಾಗೂ ಭಾಗವತ ಪುರಾಣವನ್ನು ಪಠಿಸುವುದರಿಂದ ವಿಶೇಷ ಲಾಭವುಂಟಾಗುತ್ತದೆ. ಯಜ್ಞಗಳನ್ನು ಕೈಗೊಳ್ಳುವುದರ ಜೊತೆಗೆ ಶ್ರೀಮದ್ ದೇವೀ ಭಾಗವತ, ಶ್ರೀ ಭಾಗವತ ಪುರಾಣ, ಶ್ರೀ ವಿಷ್ಣು ಪುರಾಣ, ಭವಿಷ್ಯೋತ್ತರ ಪುರಾಣಗಳ ಶ್ರವಣ, ಪಠಣ ಹಾಗೂ ಮನನವನ್ನು ಮಾಡಿದರೆ ವಿಶೇಷವಾದ ಲಾಭ ಸಿಗುತ್ತದೆ. ಅಷ್ಟೇ ಅಲ್ಲದೆ, ಈ ಮಾಸದಲ್ಲಿ ನೆಲದ ಮೇಲೆ ಮಲಗಿ ಒಂದೇ ಹೊತ್ತು ಊಟ ಮಾಡಿದರೆ ಅನಂತ ಫಲ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಸಹ ಇದೆ.

ಇದನ್ನು ಓದಿ: ಕನ್ಯಾ ರಾಶಿಗೆ ಸೂರ್ಯನ ಪ್ರವೇಶ, ನಿಮ್ಮ ರಾಶಿ ಫಲಾಫಲಗಳು ಹೇಗಿವೆ? 

ಪೌರಾಣಿಕ ಕಥೆ
ಈ ಮಾಸಕ್ಕೆ ಯಾರೂ ಅಧಿಪತಿಯಾಗಲು ಇಷ್ಟಪಡುತ್ತಿರಲಿಲ್ಲ. ಆಗ ಈ ಮಾಸವು ವಿಷ್ಣುವಿನ ಬಳಿ ಹೋಗಿ ತನ್ನನ್ನು ಉದ್ದಾರ ಮಾಡು, ನನಗೆ ಅಧಿಪತಿ ದೇವರನ್ನು ಕೊಡು ಎಂದು ಪ್ರಾರ್ಥಿಸುತ್ತದೆ. ಇದಕ್ಕೆ ಪ್ರಸನ್ನವಾಗುವ ವಿಷ್ಣು, ಅವನ ಶ್ರೇಷ್ಠ ಹೆಸರಾದ ಪುರುಷೋತ್ತಮ ಎಂಬ ಹೆಸರನ್ನು ಈ ಮಾಸಕ್ಕೆ ನಾಮಕರಣ ಮಾಡುತ್ತಾನೆ. ಹೀಗಾಗಿ ಇದಕ್ಕೆ ಪುರುಷೋತ್ತಮ ಮಾಸ ಎನ್ನಲಾಗುತ್ತದೆ. ಅಲ್ಲದೆ, ಆಶೀರ್ವಾದ ಮಾಡುವ ಭಗವಾನ್ ವಿಷ್ಣುವು, ಈ ಮಾಸದಲ್ಲಿ ಶ್ರೀಮದ್ ಭಾಗವತ ಕಥೆಯ ಶ್ರವಣ, ಮನನ ಮಾಡುವುದಲ್ಲದೆ, ಶಿವನಿಗೆ ಪೂಜೆ, ಧಾರ್ಮಿಕ ಅನುಷ್ಠಾನ, ಧಾನ-ಧರ್ಮಗಳನ್ನು ಮಾಡಿದರೆ ಅಕ್ಷಯ ಫಲ ಲಭಿಸಲಿದೆ. ಹಾಗಾಗಿ ಈ ಮಾಸವು ದಾನ - ಪುಣ್ಯಗಳಿಗೆ ಶ್ರೇಷ್ಠವಾದ ಮಾಸವಾಗಿದೆ. 

ಹೊಸತನ್ನು ಮಾಡುವುದಿಲ್ಲ
ಪಿತೃಪಕ್ಷದಂತೆಯೇ ಈ ಮಾಸದಲ್ಲೂ ಯಾವುದೇ ಮುಹೂರ್ತ ಇರುವುದಿಲ್ಲ. ಅಂದರೆ, ಈ ಸಮಯದಲ್ಲಿ ಯಾರಾದರು ಹೊಸ ಮನೆಗೆ ಹೋಗುವುದಿದ್ದರೆ, ಹೊಸ ಅಂಗಡಿ ಇಲ್ಲವೇ ಉದ್ಯಮ ಪ್ರಾರಂಭಿಸುವುದಿದ್ದರೆ, ಮತ್ತೆ ಯಾವುದಾದರೂ ಮಂಗಳ ಕಾರ್ಯ ಮಾಡುವುದಿದ್ದರೆ ನವರಾತ್ರಿ ಶುರುವಾಗುವವರೆ ಕಾದು, ನವರಾತ್ರಿಯಲ್ಲಿ ಆಚರಿಸಬೇಕು. 

ಇದನ್ನು ಓದಿ: ವಾಸ್ತು ಹೀಗಿದ್ದರೆ ಕಾಸು ಬರೋದಲ್ಲದೇ, ದುಡ್ಡು ದುಪ್ಪಟ್ಟಾಗತ್ತೆ…! 

ಅಕ್ಷಯ ಪುಣ್ಯಫಲಕ್ಕೆ ಮಂತ್ರ
ಅಕ್ಷಯ ಪುಣ್ಯಫಲಕ್ಕೆ ಮಂತ್ರ ಫಲಿಸಲು ಮಂತ್ರವಿದ್ದು, ಈ ಕೆಳಗಿನ ಸಾಲುಗಳನ್ನು ಪಠಿಸಬೇಕು. ಆಗ ಒಳ್ಳೆಯದಾಗುವುದಲ್ಲದೆ, ಪುಣ್ಯವು ಅಕ್ಷಯವಾಗಲಿದೆ.  


ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ /
ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ //


ಇದನ್ನು ಓದಿ: ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…! 

ಅಧಿಕಮಾಸದ ಶುರು
ಉತ್ತರ ಫಲ್ಗುಣಿ ನಕ್ಷತ್ರದ ಶುಕ್ಲ ಪಕ್ಷದ ಶುಭಯೋಗದಲ್ಲಿ ಅಧಿಕ ಮಾಸವು ಪ್ರಾರಂಭವಾಗಲಿದೆ. ಸೆಪ್ಟೆಂಬರ್ 18ರ ಈ ದಿನ ಬಹಳ ಶುಭವಾಗಿದ್ದು, ಇದರ ಜೊತೆಗೆ ಸೆಪ್ಟೆಂಬರ್ 26 ಹಾಗೂ ಅಕ್ಟೋಬರ್ 1, 2, 4, 6, 7, 9, 11, 17 ರಂದು ಸರ್ವಾರ್ಥ ಸಿದ್ಧಿಯೋಗವಿದ್ದು, ಈ ಸಮಯದಲ್ಲಿ ಸಂಕಲ್ಪ ಉತ್ತಮವಾಗಿದ್ದರೆ ಜನರ ಇಷ್ಟಾರ್ಥ ಸಿದ್ಧಿಸುತ್ತದೆ. ಇದನ್ನು ಹೊರತುಪಡಿಸಿ ಸೆಪ್ಟೆಂಬರ್ 19 ಮತ್ತು 27ರ ಎರಡು ದಿನ ಯಾವುದೇ ಕೆಲಸ ಮಾಡಿದರೂ ಅದರ ದುಪ್ಪಟ್ಟು ಫಲ ಸಿಗುತ್ತದೆ. ಅಧಿಕ ಮಾಸದಲ್ಲಿ ಈ ಬಾರಿ 2 ದಿನ ಪುಷ್ಯ ನಕ್ಷತ್ರ ಸಹ ಬಂದಿದೆ. ಅಕ್ಟೋಬರ್ 10 ಮತ್ತು 11ರಂದು ಯಾವುದೇ ಅವಶ್ಯಕ ಶುಭ ಕಾರ್ಯ ಮಾಡುವುದಿದ್ದರೆ ಮಾಡಬಹುದಾಗಿದೆ. ಅಲ್ಲದೆ, ಈ ದಿನಗಳಲ್ಲಿ ಖರೀದಿ ಮಾಡುವುದಿದ್ದರೂ ಪ್ರಶಸ್ತವಾಗಿದ್ದು, ಮಾಡಿದ ಖರೀದಿಯು ಶುಭವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.