Asianet Suvarna News Asianet Suvarna News

ಮಕರ ರಾಶಿಯ ಪುರುಷರ ಮನ ಮತ್ತೆ ಗೆಲ್ಲಬೇಕಾ? ಇಲ್ಲಿದೆ ಮಾರ್ಗ!!

ಮಕರ ರಾಶಿಯ ವ್ಯಕ್ತಿ ನಿಮ್ಮ ಬಾಳ ಸಂಗಾತಿಯಾಗಿ ಸಿಕ್ಕಿದ್ದರೆ, ಇಲ್ಲವೇ ನಿಮ್ಮ ಅತಿ ಆತ್ಮೀಯ ಗೆಳೆಯ ಆಗಿದ್ದರೆ ಅವರು ನಿಮ್ಮಿಂದ ದೂರ ಹೋಗುತ್ತಿದ್ದಾರೆ ಅವರನ್ನು ನಿಮ್ಮ ಕಡೆಗೆ ಸೆಳೆದುಕೊಳ್ಳಲು ನೀವು ಮಾರ್ಗವನ್ನು ಹುಡುಕುತ್ತಿದ್ದರೆ ಇಲ್ಲಿವೆ ಸಲಹೆಗಳು..

Here are suggestions to get Capricorn man back to your life
Author
First Published Dec 12, 2022, 3:07 PM IST

 ನಿಮ್ಮ ಜೀವನದಲ್ಲಿ ಪ್ರಮುಖವಾದ ಮಕರ ರಾಶಿಯ ವ್ಯಕ್ತಿಯು ನಿಮ್ಮ ಜೊತೆಗಿನ ಸಂಬಂಧ ಕಡಿದುಕೊಳ್ಳುವ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ, ಅವನ ಆಸಕ್ತಿಯನ್ನು ಗೆಲ್ಲಲು ಮಾರ್ಗಗಳು ಇಲ್ಲಿವೆ.

ಶಾಂತಿ (Calm) ಮತ್ತು ತರ್ಕಬದ್ಧ ವಿಧಾನವನ್ನು ಬಳಸಿ
ಈ ರಾಶಿಚಕ್ರ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯು ತರ್ಕಬದ್ಧತೆಯಿಂದ (Rational) ಎಲ್ಲವನ್ನೂ ಗ್ರಹಿಸುತ್ತಾನೆ ಮತ್ತು ಭಾವನೆಯ ಹೊಡೆತಕ್ಕೆ ಸಿಲುಕಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸತ್ಯಗಳನ್ನು ಎದುರು ನೋಡುತ್ತಾನೆ. ಇವರ ಗಮನವನ್ನು ಸೆಳೆಯಲು ನೀವು ಬಯಸಿದರೆ, ಎಲ್ಲಾ ಭಾವನಾತ್ಮಕ ವಿಚಾರಗಳ ಬದಲು, ಸಮತೋಲಿತ ಮತ್ತು ಸಂವೇದನಾಶೀಲ ಸಂವಹನವನ್ನು ಬಳಸಿ. ಕಿರುಚಾಟ, ಕಣ್ಣೀರು ಮತ್ತು ನಾಟಕೀಯ ಭಾವನಾತ್ಮಕ ಪ್ರದರ್ಶನವು ಅವನಿಗೆ ಕಿರಿಕಿರಿ (Irritation) ತರುವ ಕಾರಣ ಆತ ನಿಮ್ಮಿಂದ ದೂರಾಗುತ್ತಾನೆ.

ಇದನ್ನೂ ಓದಿ: ಸಂಬಂಧದಲ್ಲಿ ನಾಟಕವೆಲ್ಲಾ ಇವರಿಗೆ ಇಷ್ಟವೇ ಆಗೋಲ್ಲ!

ಆತನ ಭಾವನೆಗಳನ್ನು ಅರ್ಥೈಸಿಕೊಳ್ಳಿ (Understanding)
ಇವರು ವೃತ್ತಿ ಆಧಾರಿತ (Career oriented) ಜೀವಿಗಳಾಗಿದ್ದು, ಸಾಮಾನ್ಯವಾಗಿ ತಮ್ಮ ಸಮಯವನ್ನು ವ್ಯರ್ಥ ಮಾಡದೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವನು ಕೆಲಸದಲ್ಲಿ ನಿರತನಾದರೆ ಪ್ರಪಂಚವನ್ನೇ ಮರೆತು ಬಿಡಬಹುದು. ಆದ್ದರಿಂದ, ಆಗಾಗ ಕರೆಗಳು ಮತ್ತು ಸಂದೇಶಗಳೊಂದಿಗೆ ಅವನನ್ನು ಡಿಸ್ಟರ್ಬ್ ಮಾಡುವುದು ನಿಲ್ಲಿಸಿ. ಹಾಗೂ ಇಬ್ಬರ ನಡುವಿನ ಅಂತರ (Distance) ಕಡಿಮೆ ಮಾಡಲು ಅತ್ಯಂತ ಪ್ರಾಮಾಣಿಕವಾಗಿ ಮಾತನಾಡಿ. ನೇರವಾಗಿ ಮನ ಬಿಚ್ಚಿ ಮಾತನಾಡುವ ವ್ಯಕ್ತಿತ್ವ ಮಕರ ರಾಶಿಯ ಪುರುಷನನ್ನು ಹೆಚ್ಚು ಆಕರ್ಷಿಸುತ್ತದೆ.

ಸಹಾಯಕ್ಕಾಗಿ ಅವರ ಸ್ನೇಹಿತರು ಮತ್ತು ಕುಟುಂಬವನ್ನು ಸಂಪರ್ಕಿಸಿ (Contact)
ಮಕರ ರಾಶಿಯ ಮನುಷ್ಯನು ತನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಿಲ್ಲ. ಅವರ ಹೃದಯ ಮತ್ತು ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ಅವರ ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ತಿಳಿದಿರುತ್ತದೆ. ಅವನು ನಂಬುವ (Trust) ಮತ್ತು ಇಷ್ಟಪಡುವ ಅವನ ನಿಕಟ ಜನರನ್ನು ಸಂಪರ್ಕಿಸಿ ಆತ ನಿಮ್ಮಿಂದ ದೂರ ಉಳಿಯಲು ಪ್ರಯತ್ನಿಸುತ್ತಿರುವ ಕಾರಣವನ್ನು ತಿಳಿದುಕೊಳ್ಳಿ.

ನೇರವಾಗಿ ಅವನನ್ನೇ ತಲುಪಿ, ಸಲಹೆಯನ್ನು (Suggestion) ಕೇಳಿ
ಮಕರ ರಾಶಿಯ ಜನಗಳು ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿ. ಸ್ವತಂತ್ರ ಮತ್ತು ಪ್ರಾಯೋಗಿಕ ಚಿಂತನೆ ಜೊತೆಗೆ ಅಭಿಪ್ರಾಯಗಳನ್ನು ವ್ಯಕ್ತಮದಿಸುವುದರಲ್ಲಿ ನಿಪುಣರು. ಅವರೊಂದಿಗೆ ನೀವು ನಿಮ್ಮ ಭಾವನೆಗಳ ಬಗ್ಗೆ ಮಾತನಾಡುವ ಬದಲು, ನಿಮ್ಮ ವೃತ್ತಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಕೇಳಿ, ಆಗ ಅವನು ನಿಮ್ಮೊಂದಿಗೆ ಬೆರೆಯಬಹುದು. ಏಕೆಂದರೆ, ಅವನು ಸಹಾಯ ಮಾಡಲು ಬಯಸುತ್ತಾನೆ.

ಇದನ್ನೂ ಓದಿ: Pisces Personality: ರೊಮ್ಯಾಂಟಿಕ್, ಪ್ರಾಮಾಣಿಕ, ತ್ಯಾಗಿಗಳು ಮೀನ ರಾಶಿಯವರು..

ಸುಂದರವಾಗಿ ಕಾಣುವಂತೆ (Look) ತಯಾರಾಗಿ
ಅವನು ಕಳೆದುಕೊಂಡಿರುವುದನ್ನು ಅವನಿಗೆ ಪ್ರದರ್ಶಿಸಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಮಕರ ರಾಶಿಯ ಪುರುಷನು ಚೆನ್ನಾಗಿ ಪಾಲಿಶ್ (Polish) ಮಾಡಿದ ಮಹಿಳೆಯರನ್ನು ಆರಾಧಿಸುತ್ತಾನೆ. ಇದು ಅವನನ್ನು ನಿಮ್ಮ ಕಡೆಗೆ ಲೈಂಗಿಕವಾಗಿ ಆಮಿಷವೊಡ್ಡುವುದು ಮಾತ್ರವಲ್ಲದೆ ನಿಮ್ಮ ಜೊತೆಗಿನ ಸಂಭಾಷಣೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ.

ಎಲ್ಲಾ ಸಮಯದಲ್ಲೂ ಲಭ್ಯವಾಗುವುದನ್ನು (Available) ನಿಲ್ಲಿಸಿ
ಅವನು ಕರೆ ಮಾಡಿದ ಕೂಡಲೇ ಅವನಿಗೆ ಲಭ್ಯವಾಗುವುದು, ಅವನು ಹೇಳುವ ಮೊದಲೇ ಬೇಟಿ ಮಾಡುವುದು ಇಂತಹ ಕೆಲಸಗಳನ್ನು ನಿಲ್ಲಿಸಿ, ಯಾಕೆಂದರೆ, ಇದು ಅವನು ನಿಮ್ಮಲ್ಲಿ ಆಸಕ್ತಿಯನ್ನು (Interest) ಕಳೆದುಕೊಳ್ಳುವಂತೆ ಮಾಡಬಹುದು. ನಿಮಗೂ ಒಂದು ಸ್ವಂತ ಜೀವನ ಇದೆ ಎಂದು ನೆನಪಿರಲಿ, ಆ ಜೀವನವನ್ನು ಪಡೆಯಿರಿ, ಪ್ರವಾಸಕ್ಕೆ ಹೋಗಿ, ನೀವು ಇಷ್ಟಪಡುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಮತ್ತು ನಿಮ್ಮ ಜೀವನವು (Life) ಅವನ ಸುತ್ತ ಸುತ್ತುತ್ತಿಲ್ಲ ಎಂದು ತೋರಿಸಿ.

Follow Us:
Download App:
  • android
  • ios