Asianet Suvarna News Asianet Suvarna News

Havan Ash Benefits : ದೃಷ್ಟಿ ದೋಷ ನಿವಾರಿಸುವ ಹವನದ ಭಸ್ಮ, ಬಳಕೆ ಹೇಗೆ?

ಪೂಜೆ – ಹವನಗಳಲ್ಲಿ ಬಳಸುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆದಿದೆ. ಶಾಸ್ತ್ರಗಳ ಪ್ರಕಾರ, ಈ ಪೂಜೆಗೆ ಬಳಸಿದ ವಸ್ತುಗಳು ಮನೆಯಲ್ಲಿ ಸುಖ, ಸಮೃದ್ಧಿ ತರುತ್ತವೆ. ಹೋಮದ ನಂತ್ರ ಭಸ್ಮವನ್ನು ಭಕ್ತಿಯಿಂದ ಎಲ್ಲರೂ ಹಣೆಗೆ ಹಚ್ಚಿಕೊಳ್ತಾರೆ. ಆದ್ರೆ ಈ ಭಸ್ಮವನ್ನು ನೀವು ಇನ್ನೂ ಬೇರೆ ಬೇರೆ ವಿಧದಲ್ಲಿ ಬಳಸಿ ಪ್ರಯೋಜನ ಪಡೆಯಬಹುದು.
 

Havan Ash Benefits from removing evil eye to gain money
Author
First Published Nov 12, 2022, 1:30 PM IST

ದೇವಸ್ಥಾನದಲ್ಲಿ ಅಥವಾ ಮನೆಗಳಲ್ಲಿ ವಿಶೇಷ ಸಂದರ್ಭದಲ್ಲಿ ಹೋಮ ಮಾಡೋದನ್ನು ನೀವು ನೋಡಿರ್ತೀರಿ. ನಿಮ್ಮ ಮನೆಯಲ್ಲಿ ನಡೆದ ಹೋಮದಲ್ಲಿ ನೀವು ಭಾಗಿಯಾಗಿರಬಹುದು. ದೇವರ ಕೃಪೆಗೆ ಪಾತ್ರರಾಗಲು ಹೋಮ ಮಾಡ್ತಾರೆ ಎಂದು ನಂಬಿದವರೇ ಹೆಚ್ಚು. ಹೋಮದಿಂದ ಏನೆಲ್ಲ ಲಾಭವಿದೆ ಎನ್ನುವುದನ್ನು ಬಹುತೇಕರು ತಿಳಿಯುವ ಪ್ರಯತ್ನ ನಡೆಸಿರೋದಿಲ್ಲ. ಹೋಮ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಪ್ರಮುಖವೆಂದು ಪರಿಗಣಿಸಲಾಗಿದೆ. ಹವನವನ್ನು ಸಂಸ್ಕೃತದಲ್ಲಿ ಯಜ್ಞ ಎಂದು ಕರೆಯಲಾಗುತ್ತದೆ. ಹವನ ಮಾಡುವ ಸಮಯದಲ್ಲಿ ಪೂರ್ಣಾಹುತಿ ಹೆಸರಿನಲ್ಲಿ ಜೇನುತುಪ್ಪ, ತುಪ್ಪ, ಹಣ್ಣುಗಳು ಸೇರಿದಂತೆ ಅನೇಕ ವಸ್ತುಗಳನ್ನು ಅಗ್ನಿಗೆ ಹಾಕಲಾಗುತ್ತದೆ.  ಧಾರ್ಮಿಕ ಗ್ರಂಥಗಳ ಪ್ರಕಾರ, ಹವನದಲ್ಲಿ ಬಳಸುವ ಪ್ರತಿಯೊಂದು ವಸ್ತುವನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತವೆಂದು ಪರಿಗಣಿಸಲಾಗುತ್ತದೆ. 

ಮನೆ (House) ಯಲ್ಲಿ ಅಥವಾ ದೇವಸ್ಥಾನ (Temple) ದಲ್ಲಿ ಹವನ (Havan) ಮಾಡುವುದರಿಂದ ಧನಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ. ಮನೆ ಹಾಗೂ ಮನಸ್ಸು ಎರಡೂ ಶುದ್ಧವಾಗುತ್ತದೆ. ಯಜ್ಞ ಭಸ್ಮ ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ. ನಾವಿಂದು ಹವನದ ಭಸ್ಮದಿಂದ ಆಗುವ ಅದ್ಭುತ ಪರಿಹಾರಗಳ ಬಗ್ಗೆ  ಹೇಳ್ತೇವೆ.  

ನಕಾರಾತ್ಮಕ ಶಕ್ತಿಯ ನಾಶ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹವನ ಮಾಡಿದ ನಂತರ ಯಜ್ಞದ ಭಸ್ಮವನ್ನು ಮನೆಯ ಎಲ್ಲ ಕೋಣೆಗಳಿಗೆ ಹಾಕುವುದ್ರಿಂದ ಮನೆಯಲ್ಲರುವ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. 

Broom Vastu: ಪೊರಕೆ ಕಾಲಿಗೆ ತಾಗಿಸ್ಬಾರ್ದು ಅನ್ನೋದು ಇದೇ ಕಾರಣಕ್ಕೆ!

ದೃಷ್ಟಿ ದೋಷ ನಿವಾರಣೆ : ಹವನದ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳುವುದ್ರಿಂದ ದೃಷ್ಟಿ ಬಿದ್ದಿದ್ದರೆ ಅದು ಕಡಿಮೆಯಾಗುತ್ತದೆ. ಬೇರೆಯವರ ದೃಷ್ಟಿ ನಿಮ್ಮ ಮೇಲಾಗಿದೆ ಎನ್ನಿಸಿದ್ರೆ ನೀವು ಹವನದ ನಂತ್ರ ಆ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳಿ.  

ಆರ್ಥಿಕ ಸಮೃದ್ಧಿ : ಯಜ್ಞದ ಭಸ್ಮವನ್ನು ಹಣ ಇಡುವ  ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಸಮೃದ್ಧಿಯನ್ನು ನೀವು ಕಾಣಬಹುದು. ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.  

ದುಃಸ್ವಪ್ನಕ್ಕೆ ಪರಿಹಾರ : ಯಜ್ಞ ಮಾಡಿದ ನಂತ್ರ ಆ ಭಸ್ಮವನ್ನು ಒಂದು ಬಟ್ಟೆಯಲ್ಲಿ ಕಟ್ಟಿ, ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ರಾತ್ರಿ ಬೀಳುವ  ದುಃಸ್ವಪ್ನ ದೂರವಾಗುತ್ತದೆ. ದಿಂಬಿನ ಕೆಳಗೆ ನೀವು ನಾಲ್ಕು ದಿನ ಇಟ್ಟು ಮಲಗಿದ್ರೆ ಸಾಕು.  

ಶತ್ರುಗಳ ನಾಶಕ್ಕೆ ಭಸ್ಮ :  ಶತ್ರುಗಳಿಂದ ಪದೇ ಪದೇ ತೊಂದರೆ ಅನುಭವಿಸುತ್ತಿದ್ದರೆ ನೀವು ಭಸ್ಮವನ್ನು ಬಳಸಬೇಕು. ಶತ್ರುವಿನ ಹೆಸರನ್ನು ತೆಗೆದುಕೊಂಡು ಮನೆಯ ದಕ್ಷಿಣ ದಿಕ್ಕಿನ ಯಾವುದೇ ಮರದ ಕೆಳಗೆ ಹವನದ ಭಸ್ಮವನ್ನು ಹಾಕಬೇಕು. ಹೀಗೆ ಮಾಡಿದರೆ ಶತ್ರುವಿನಿಂದ ನಿಮಗೆ ಮುಕ್ತಿ ಸಿಗುತ್ತದೆ.   

ರೋಗದಿಂದ ಮುಕ್ತಿ : ಹೋಮದ ಭಸ್ಮವನ್ನು ನೀರಿನಲ್ಲಿ ಬೆರೆಸಿ ಪ್ರತಿದಿನ ಸೇವಿಸಿದರೆ ರೋಗಗಳು ಕಡಿಮೆಯಾಗುತ್ತವೆ.  ಇದಲ್ಲದೇ ಯಜ್ಞದ ಭಸ್ಮವನ್ನು ಚರ್ಮ ರೋಗಕ್ಕೆ ನೀವು ಬಳಸಬಹುದು. ಭಸ್ಮವನ್ನು ಚರ್ಮಕ್ಕೆ ಹಚ್ಚಿದ್ರೆ ಸಮಸ್ಯೆ ಕಡಿಮೆಯಾಗುತ್ತದೆ.   

ಸ್ವಂತ ಮನೆಯ ಬಯಕೆ ಈಡೇರಿಕೆಗೆ : ಸ್ವಂತ ಮನೆ ನಿರ್ಮಾಣಕ್ಕೆ ನೀವು ಮುಂದಾಗಿದ್ದರೆ ಅಥವಾ ಭೂಮಿ ಖರೀದಿಸುವ ಬಯಕೆ ಹೊಂದಿದ್ದರೆ ಭಸ್ಮವನ್ನು ಒಂದು ಪೇಪರ್ ನಲ್ಲಿ ಭಸ್ಮವನ್ನು ಹಾಕಿ, ಅದ್ರಲ್ಲಿ ಭೂಮಿ ಅಥವಾ ಮನೆ ಹೆಸರನ್ನು ಬರೆದು ಪೂರ್ವ ದಿಕ್ಕಿಗೆ ಕಟ್ಟಿಡಿ. ಇದ್ರಿಂದ ನಿಮ್ಮ ಆಸೆ ನೆರವೇರುತ್ತದೆ.  

ಕೋರ್ಟ್ ಪ್ರಕರಣ ಇತ್ಯರ್ಥ : ನ್ಯಾಯಾಲಯದ ಪ್ರಕರಣಗಳನ್ನು ಗೆಲ್ಲಲು ಅಥವಾ ಕೋರ್ಟ್ ಕಾಟದಿಂದ ತಪ್ಪಿಸಿಕೊಳ್ಳಲು ಬಯಸಿದ್ರೆ  ಕೇಸ್ ಫೈಲ್‌ ಗೆ ಸ್ವಲ್ಪ ಹವನದ ಭಸ್ಮವನ್ನು ಸಿಂಪಡಿಸಿ. ಹೀಗೆ ಮಾಡಿದ್ರೆ ಪ್ರಕರಣದಲ್ಲಿ ಜಯ ಸಿಗುತ್ತದೆ. ನ್ಯಾಯಾಲಯದ ಮೊಕದ್ದಮೆಯಿಂದ ಮುಕ್ತಿ ಸಿಗುತ್ತದೆ.  

ಮಗುವಿಗೆ ಓದೋದ್ರಲ್ಲಿ ಆಸಕ್ತಿನೇ ಇಲ್ವಾ? ಈ Vastu rules ಟ್ರೈ ಮಾಡಿ

ಗ್ರಹ ಶಾಂತಿಗಾಗಿ ಭಸ್ಮ ಬಳಕೆ : ಗ್ರಹ ದೋಷದಿಂದಾಗಿ ಜೀವನದಲ್ಲಿ ಸಮಸ್ಯೆ ಎದುರಾಗಿದ್ದರೆ ಗ್ರಹ ಶಾಂತಿಗಾಗಿ ಹವನದ ಭಸ್ಮವನ್ನು ಬಳಸಬಹುದು. ಭಸ್ಮವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ, ಹತ್ತಿರದ ದೇವಾಲಯದ ಅಂಗಳದಲ್ಲಿ ಹೂಳಬೇಕು. ಇದ್ರಿಂದ ಗ್ರಹ ದೋಷ ಕಡಿಮೆಯಾಗುತ್ತದೆ. 
 

Follow Us:
Download App:
  • android
  • ios