Chikkamagaluru: ಹರಿಹರಪುರ ಶ್ರೀ ಮಠದಲ್ಲಿ ಕೋಟಿ ಕುಂಕುಮಾರ್ಚನೆಯ ಮಂಗಲೋತ್ಸವ ಸಂಪನ್ನ

ಮಲೆನಾಡಿನ ಕೊಪ್ಪದ ಹರಿಹರಪುರದಲ್ಲಿ ಕಳೆದ 12ರಿಂದ ಸಂಭ್ರಮವೂ ಸಂಭ್ರಮ. ಧಾರ್ಮಿಕ ಕಾರ್ಯಕ್ರದ ಜೊತೆಗೆ ಸಾಂಸ್ಕೃತಿಕ ಕಾರ್ಯಮಕ್ಕೂ ಶ್ರೀ ಮಠ ಸಾಕ್ಷಿ ಆಗುತ್ತಿದೆ. 

hariharapura mutt devotional programs in chikkamagaluru near koppa gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.22): ಮಲೆನಾಡಿನ ಕೊಪ್ಪದ ಹರಿಹರಪುರದಲ್ಲಿ (Hariharapura Mutt) ಕಳೆದ 12ರಿಂದ ಸಂಭ್ರಮವೂ ಸಂಭ್ರಮ. ಧಾರ್ಮಿಕ ಕಾರ್ಯಕ್ರಮದ (Devotional Programs) ಜೊತೆಗೆ ಸಾಂಸ್ಕೃತಿಕ ಕಾರ್ಯಕ್ಕೂ ಶ್ರೀ ಮಠ ಸಾಕ್ಷಿ ಆಗುತ್ತಿದೆ. ಇಲ್ಲಿನ ಶ್ರೀ  ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ (Sri Swayam Prakasha Sachidananda Saraswathi Swamiji) ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ವೈಭವ್ಯದಿಂದ ನಡೆಯುತ್ತಿದೆ. ಮಹಾಕುಂಭಾಭೀಷೇಕದ ಬಳಿಕ ಶ್ರೀ ಮಠದಲ್ಲಿ ಕೋಟಿ ಕುಂಕುಮಾರ್ಚನೆ, ಸಹಸ್ರ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಮಂಗಲೋತ್ಸವ ಸಂಪನ್ನನೊಂದಿಗೆ  ನಾಡಿನ ಗಣ್ಯಾತಿಗಣ್ಯರು ಸಮ್ಮುಖದಲ್ಲಿ ಗುರುವಂದನ ಕಾರ್ಯಕ್ರಮ ಶದ್ದಾ ಭಕ್ತಿಯಿಂದ ನಡೆಯಿತು.

ಸಹಸ್ರ ಚಂಡಿಕಾ ಮಹಾಯಾಗದ ಪೂರ್ಣಾಹುತಿ: ಜಿಲ್ಲೆಯ ಕೊಪ್ಪ ತಾಲ್ಲೂಕಿನ ಶ್ರಿ ಶಾರದಾ ಲಕ್ಷ್ಮಿನೃಸಿಂಹ ದೇವಾಲಯದಲ್ಲಿ ಮಹಾಕುಂಭಾಭೀಷೇಕದ ನಿಮಿತ್ತ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಏಪ್ರೀಲ್ 10ರಿಂದ 24ರ ವರೆಗೂ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುಲಿದೆ. ಲೋಕಕಲ್ಯಾಣ ಕಾರ್ಯಕ್ರಮದಲ್ಲಿ  ಭಕ್ತರ ಶದ್ಧಾ ಭಕ್ತಿ, ಸಡಗರ,ಸಂಭ್ರಮ ಎಲ್ಲೆ ಮೀರಿದೆ.ಹೌದು ಕಳೆದ 12 ವರ್ಷಗಳ ಹಿಂದೆ ಶಾರದಾ ಪರಮೇಶ್ವರಿ , ಲಕ್ಷ್ಮಿ ನರಸಿಂಹ, ಆಂಜನೇಯ ದೇವಾಲಯ ಪುನರ್ ನಿರ್ಮಾಣದ ಕಾರ್ಯ ಸಂಪನ್ನವಾಗಿತ್ತು. 

Chikkamagaluru ಭಕ್ತಿಯಲ್ಲಿ ಭಾವಪರವಶರಾದ ಸಿಎಂ ಬೊಮ್ಮಾಯಿ

ದೇವಸ್ಥಾನಗಳ ಪುನರ್ ಪ್ರತಿಷ್ಠಾನದ ಅಂಗವಾಗಿ ಹರಿಹರಪುರ ಶ್ರೀ ಮಠದಲ್ಲಿ  ಮಹಾಕುಂಭಾಭಿಷೇಕವು ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠದಲ್ಲಿ ವೈಭವದಿಂದ ನಡೆದಿದೆ.ಇದೀಗ  ಹರಿಹರಪುರ ಮಠದ ಶ್ರೀ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ  ಕುಂಭಾಭಿಷೇಕದ ಅಂಗವಾಗಿ  ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇದೇ ತಿಂಗಳು 10ರಿಂದ ನಿತ್ಯವೂ ಹೋಮ ಹವನಗಳು ನಡೆಯುತ್ತಿದ್ದು ಅದರ ಅಂಗವಾಗಿ ನೂರಕ್ಕೂ ಹೆಚ್ಚು ಪುರೋಹಿತರಿಂದ ಸಹಸ್ರ ಚಂಡಿಕಾ ಮಹಾಯಾಗ ನಡೆಯಿತು. ಶ್ರೀ ಮಠದಲ್ಲಿ  ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು ಕೋಟಿ ಕುಂಕುಮಾರ್ಚನೆಯ ಮಂಗಲೋತ್ಸವ ಸಂಪನ್ನವಾಯಿತು. 

ಗುರುವಂದನ ಕಾರ್ಯಕ್ರಮದಲ್ಲಿ ನಾಡಿನ ಗಣ್ಯಾತಿಗಣ್ಯರು: ಕಳೆದ 12 ದಿನಗಳಿಂದಲೂ ಮಲೆನಾಡಿನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣವಾಗಿರುವುದು ಐತಿಹಾಸಿಕ ಕುಂಭಾಭಿಷೇಕ ಕಾರ್ಯಕ್ರಮ. ಇದರ  ನಿಮಿತ್ತ  ಶ್ರೀ ಮಠದಲ್ಲಿ ಧಾರ್ಮಿಕ,  ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಸಾಕ್ಷಿ ಆಗುತ್ತಿದೆ. ಇಂದು ಕೂಡ ನಡೆದ ಧಾರ್ಮಿಕ ಕಾರ್ಯದಲ್ಲಿ  ನಾಡಿನ ಗಣ್ಯಾತಿಗಣ್ಯರು ಆಗಮಿಸಿ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.ತುಂಗಾನದಿ ತಟದಲ್ಲಿ ಭವ್ಯವಾಗಿ ಎದ್ದು ನಿಂತಿರುವ ಲಕ್ಷ್ಮಿನೃಸಿಂಹ ದೇವಾಲಯದಲ್ಲಿ ಐತಿಹಾಸಿಕ ಮಹಾ ಕುಂಭಾಷೇಕದ ನಿಮಿತ್ತ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಇಂದು ಶ್ರೀ ಮಠದಲ್ಲಿ ಸಹಸ್ರ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಕೋಟಿ ಕುಂಕುಮಾರ್ಚನೆಯ ಮಂಗಲೋತ್ಸವ ಸಂಪನ್ನವಾಯಿತು. ತದನಂತರ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳಿಗೆ ನಾಡಿನ ಗಣ್ಯಾತಿಗಣ್ಯರು ಗುರುವಂದನೆ ಸಲ್ಲಿಸಿದರು. 

ಗುರುವಂದನ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ , ಮಾಜಿ ಸಿಎಂ ಯಡಿಯ್ಯೂರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಆರೋಗ್ಯ ಸಚಿವ ಸುಧಾಕರ್, ಶಿಕ್ಷಣ ಸಚಿವ ಬಿ ಸಿ ನಾಗೇಶ್, ಬಿಜೆಪಿ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ , ಖಾತ್ಯ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಅಶೋಕ್ ಹಾರನಹಳ್ಳಿ ,ಮಠದ ಆಡಳಿತಾಧಿಕಾರಿ ಡಾ ಬಿ ಎಸ್ ರವಿಶಂಕರ್, ಸೇರಿದಂತೆ ಹಲವು ಗಣ್ಯರು ಹಾಜರಾದ್ದರು. ಮಲೆನಾಡಿನಲ್ಲಿ ನಿರ್ಮಾಣವಾಗಿರುವ ನೂತನ ದೇವಸ್ಥಾನ ಭವ್ಯವಾಗಿದ್ದು ಸನಾತನ ಧರ್ಮವನ್ನು ಸಾರಿತ್ತಿದೆ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ರು. ಅಲ್ಲದೆ ಆದಿ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕಿನಲ್ಲಿ ಸಂಚರಿಸುವ ಮೂಲಕ ದೇಶದಲ್ಲಿ ಏಕತೆ ಮೂಡಿಸುವಲ್ಲಿ ಅತಿದೊಡ್ಡ ಕೆಲಸ ಮಾಡಿದರು. ಅದೇ ಪರಂಪರೆಯಲ್ಲಿ ಹರಿಹರಪುರ ಶ್ರೀಮಠದ ಸ್ವಾಮೀಜಿಗಳು ದೇಶದ ಎಲ್ಲಾ ಜಾತಿ-ಭಾಷೆ-ಪ್ರದೇಶಗಳ ಜನರನ್ನು ಸೇರಿಸಿದ್ದಾರೆ ಎಂದು ಸ್ಮರಿಸಿದರು. 

ಸೆಲ್ಫಿಗೆ ಮುಗಿಬಿದ್ದ ಮಹಿಳಾಮಣಿಗಳು: ಗುರುವಂದನಾ ಕಾರ್ಯಕ್ರಮಕ್ಕೂ ಮುನ್ನ ಸಭಾಂಗಣಕ್ಕೆ ಆಗಮಿಸಿದ ಸಂಸದ ತೇಜಸ್ವಿ ಸೂರ್ಯ ಆಗಮಿಸಿದ್ದರು. ಕಾರ್ಯಕ್ರಮ ಆರಂಭಕ್ಕೂ ಇನ್ನು ಅರ್ಧಗಂಟೆ ಬಾಕಿ ಇತ್ತು.ಆ ವೇಳೆಯಲ್ಲಿ ಅಲ್ಲಿಗೆ ಆಗಮಿಸಿದ ಭಕ್ತರು ತೇಜಸ್ವಿ ಸೂರ್ಯ ಜೊತೆಗೆ ಸೆಲ್ಫಿಗೆ ಮುಗಿಬಿದ್ದರು. ಅದರಲ್ಲೂ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಮಹಿಳಾ ಭಕ್ತರು ಸಂಸದರ ಜೊತೆಗೆ ಪೋಟೋ ತೆಗೆಸಿಕೊಳ್ಳಲು ಕ್ಯೂ ನಿಂತು ಸೆಲ್ಫಿಗಾಗಿ ಮಹಿಳೆಯರು  ಬೇಡಿಕೆಇಟ್ಟರು. ವೇದಿಕೆ ಮುಂಭಾಗ ಸೆಲ್ಫಿ ಕ್ಲಿಕ್ಕಿಸಿಕೊಂಡು, ಫೋಟೋ ತೆಗೆದುಕೊಂಡು ಮಹಿಳೆಯರು ಫುಲ್ ಖುಷಿಯಾದರು. 

Chikkamagaluru: ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಸಂಭ್ರಮ

ಹೆಚ್ಚಿನ ಸಂಖ್ಯೆಯಲ್ಲಿ ಪೋಟೋ ತೆಗೆದುಕೊಳ್ಳುವರ ಸಂಖ್ಯೆ ಜಾಸ್ತಿಯಾದ ಹಿನ್ನಲೆಯಲ್ಲಿ ಸಂಸದರು ಜನರಿಗೆ ಸಾಕೆಂದರೂ ಬಿಡದೇ ಫೋಟೋ ಕ್ಲಿಕ್ಕಿಸಿಕೊಂಡರು. ಕೊನೆಗೆ ಮಹಿಳೆಯರಿಗೆ ಕೈಮುಗಿದ ಸಂಸದ ತೇಜಸ್ವಿ ಸೂರ್ಯ ವೇದಿಕೆ ತೆರಳಿದರು. ಒಟ್ಟಾರೆ ಲಕ್ಷಾಂತರ ಭಕ್ತರು ಮಠಕ್ಕೆ ಆಗಮಿಸಿ ದೇವರದರ್ಶನ ಪಡೆದು ಪುನೀತರಾಗುತ್ತಿದ್ದರೆ. ಇನ್ನು ಎರಡು ದಿನವೂ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುಲಿದೆ. ರುದ್ರಹೋಮ, ಮಹಾರಥೋತ್ಸವಕ್ಕೆ ಶ್ರೀ ಮಠ ಸಾಕ್ಷಿಯಾಗಲಿದೆ.

Latest Videos
Follow Us:
Download App:
  • android
  • ios