Asianet Suvarna News Asianet Suvarna News

ಬಾಬಾ ವಂಗಾ ಭವಿಷ್ಯವೆಲ್ಲಾ ನಿಜವಾಗಿದ್ಯಾ? ಇವರ ಭವಿಷ್ಯಕ್ಕೆ ಯಾಕಿಷ್ಟು ಮಹತ್ವ?

ಅನೇಕ ದೊಡ್ಡ ಜಾಗತಿಕ ಘಟನೆಗಳು ಸಂಭವಿಸುವ ಬಗ್ಗೆ ಅವರು (Baba Vanga) ಮೊದಲೇ ಮುನ್ಸೂಚನೆ ನೀಡಿದ್ದರು ಎಂದು ನಂಬಲಾಗುತ್ತದೆ. ಹಾಗಿದ್ದರೆ ಅವರು ಹೇಳಿದ್ದು ನಿಜವಾದ ಘಟನೆಗಳು ಇದೆಯೇ? ನೋಡೋಣ.

 

Had predictions of Baba Vanga became real significance of predictions bni
Author
First Published Nov 11, 2023, 12:41 PM IST

ಬಲ್ಗೇರಿಯಾದ ಅತೀಂದ್ರಿಯ ಭವಿಷ್ಯಜ್ಞಾನಿ ಬಾಬಾ ವಂಗಾ (Baba Vanga) ಅವರ ಭವಿಷ್ಯ ನುಡಿಗಳು ಪ್ರತಿವರ್ಷದ ಆರಂಭದ ಹಿಂದಿನ ದಿನಗಳಲ್ಲಿ ಮತ್ತೆ ನೆನೆಯಲ್ಪಡುತ್ತವೆ. ಈ ವರ್ಷದ ಬಗ್ಗೆ ಆಕೆ ಏನು ಹೇಳಿದ್ದಾಳೆ ಎಂದು ನೋಡಲಾಗುತ್ತದೆ. ಆಕೆ 1996ರಲ್ಲೇ ನಿಧನಳಾಗಿದ್ದರೂ ಸಹ, ಅವರ ಭವಿಷ್ಯವಾಣಿಗಳು ಅವಳ ಮರಣದ ನಂತರ ಬಹಳ ಕಾಲ ನಿಜವಾಯಿತು ಎಂದು ಹೇಳಲಾಗುತ್ತದೆ. ಆಕೆ ಕುರುಡಿಯಾಗಿದ್ದರು. ಆದರೆ ನಡೆಯಬಹುದಾದುದನ್ನು ಥಟ್‌ ಎಂದು ಹೇಳುತ್ತಿದ್ದಳು ಎಂದು ನಂಬುವವರು ಬಹಳ ಮಂದಿ.

ಅನೇಕ ದೊಡ್ಡ ಜಾಗತಿಕ ಘಟನೆಗಳು ಸಂಭವಿಸುವ ಬಗ್ಗೆ ಅವರು ಮೊದಲೇ ಮುನ್ಸೂಚನೆ ನೀಡಿದ್ದರು ಎಂದು ನಂಬಲಾಗುತ್ತದೆ. ಹಾಗಿದ್ದರೆ ಅವರು ಹೇಳಿದ್ದು ನಿಜವಾದ ಘಟನೆಗಳು ಇದೆಯೇ? ನೋಡೋಣ.

1. ನ್ಯೂಯಾರ್ಕ್‌ ದಾಳಿ (9/11)
ಬಾಬಾ ವಂಗಾ ಅವರ ಅತ್ಯಂತ ವ್ಯಾಪಕವಾಗಿ ಉಲ್ಲೇಖಿಸಲಾದ ಭವಿಷ್ಯವಾಣಿಯು ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದೆ. "ಹಾರರ್‌, ಹಾರರ್‌, ಉಕ್ಕಿನ ಪಕ್ಷಿಗಳ ದಾಳಿಯ ನಂತರ ಅಮೇರಿಕನ್ ಸಹೋದರರು ಬೀಳುತ್ತಾರೆ. ತೋಳಗಳು ಪೊದೆಯಲ್ಲಿ ಊಳಿಡುತ್ತವೆ. ಮುಗ್ಧರ ರಕ್ತವು ಚಿಮ್ಮುತ್ತದೆʼʼ ಎಂದು ಆಕೆ 1989ರಲ್ಲಿ ಹೇಳಿದ್ದಳು. ʼಉಕ್ಕಿನ ಪಕ್ಷಿಗಳು' ಅಪಹರಿಸಲ್ಪಟ್ಟ ವಿಮಾನಗಳನ್ನು ಉಲ್ಲೇಖಿಸುತ್ತವೆ. ಆದರೆ ʼಅಮೆರಿಕನ್ ಸಹೋದರರುʼ ಎಂದರೆ ಅವಳಿ ಗೋಪುರಗಳು. ಅವಳು ಪೊದೆ (ಬುಷ್) ಎಂಬ ಪದವನ್ನು ಬಳಸಿದ್ದಾಳೆ. ದಾಳಿ ನಡೆದ ಸಂದರ್ಭದಲ್ಲಿ ಅಮೆರಿಕದ ಮಿಲಿಟರಿ ಶಕ್ತಿಯ ʼತೋಳಗಳನ್ನುʼ ಮುನ್ನಡೆಸಿದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್‌ ಆಗಿದ್ದರು!

2. 2022ರ ಬರ ಮತ್ತು ಪ್ರವಾಹಗಳು
ಬಾಬಾ ವಂಗಾ 2022ರ ಬಗ್ಗೆ ಆರು ಮುನ್ನೋಟ ನೀಡಿದ್ದಳು. ಅವುಗಳಲ್ಲಿ ಎರಡು ನಿಜವಾಗಿವೆ. ಪ್ರಪಂಚದಾದ್ಯಂತದ ದೊಡ್ಡ ನಗರಗಳು ಗಮನಾರ್ಹ ಬರ ಮತ್ತು ನೀರಿನ ಕೊರತೆಯಿಂದ ಹಾನಿಗೊಳಗಾಗುತ್ತವೆ ಎಂದು ಅವರು ಹೇಳಿದ್ದರು. ಬ್ರಿಟನ್‌ 1935ರಿಂದೀಚೆಗಿನ ಅತ್ಯಂತ ಶುಷ್ಕ ಜುಲೈ ಅನ್ನು ಅನುಭವಿಸಿತು. ಆಗಸ್ಟ್‌ 2022ರಂದು ಅಧಿಕೃತವಾಗಿ ಬರಗಾಲವನ್ನು ಘೋಷಿಸಿತು. ಫ್ರಾನ್ಸ್, ಇಟಲಿ, ಪೋರ್ಚುಗಲ್ ಮತ್ತು ಯುರೋಪ್‌ನ ಹೆಚ್ಚಿನ ಭಾಗಗಳು ದಾಖಲೆ ಬರ ಮತ್ತು ವಿನಾಶಕಾರಿ ಕಾಳ್ಗಿಚ್ಚುಗಳನ್ನು ಎದುರಿಸುತ್ತಿವೆ. ಆಸ್ಟ್ರೇಲಿಯಾ ಮತ್ತು ಏಷ್ಯಾ ತೀವ್ರ ಪ್ರವಾಹದಿಂದ ತತ್ತರಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಜುಲೈನಲ್ಲಿ, ಸಿಡ್ನಿಯಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಎಂಟು ತಿಂಗಳ ಮಳೆ ಬಿದ್ದಿತು. ಇದು 2022ರಲ್ಲಿ ಮೂರನೇ ಬಾರಿಗೆ ಪ್ರವಾಹಕ್ಕೆ ಕಾರಣವಾಯಿತು.

3. ಕುರ್ಸ್ಕ್ ದುರಂತ
ಆಗಸ್ಟ್ 2000ರಲ್ಲಿ, ರಷ್ಯಾದ ಪರಮಾಣು ಜಲಾಂತರ್ಗಾಮಿ ಕರ್ಸ್ಕ್ ಬ್ಯಾರೆಂಟ್ಸ್ ಸಮುದ್ರದಲ್ಲಿ ಮುಳುಗಿತು. ಇದು ವಿನಾಶಕಾರಿ ಅಪಘಾತವಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 118 ಸಿಬ್ಬಂದಿ ಸತ್ತರು. ಬಾಬಾ ವಂಗ ಆ ವಿಪತ್ತನ್ನು ಊಹಿಸಿದ್ದಳೇ? ಆಕೆಯ ಅತ್ಯಂತ ವ್ಯಾಪಕ ವರದಿಯಾದ ಹೇಳಿಕೆಗಳಲ್ಲಿ ಒಂದು ಇದಕ್ಕೆ ಹೋಲಿಕೆಯಾಗಿದೆ. ಆಗಸ್ಟ್ 1999ರಲ್ಲಿ, ಕುರ್ಸ್ಕ್ ನೀರಿನಿಂದ ಆವೃತವಾಗುತ್ತದೆ ಮತ್ತು ಇಡೀ ಪ್ರಪಂಚವು ಅದರ ಬಗ್ಗೆ ಅಳುತ್ತದೆ ಎಂದು ಆಕೆ 1980ರಲ್ಲಿ ಭವಿಷ್ಯ ನುಡಿದಿದ್ದಳು. ಅವಳು ಇಲ್ಲಿ ರಷ್ಯಾದ ನಗರವಾದ ಕುರ್ಸ್ಕ್ ಅನ್ನು ಉಲ್ಲೇಖಿಸಿದ್ದಳು.

4. ಬರಾಕ್ ಒಬಾಮ ಮತ್ತು ಡೊನಾಲ್ಡ್ ಟ್ರಂಪ್ ಅವರ ಉದಯ
ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ರಾಜಕೀಯವನ್ನು ಒಳಗೊಂಡಿವೆ. ಕರಿಯ ವ್ಯಕ್ತಿ ಅಮೆರಿಕದ 44ನೇ ಅಧ್ಯಕ್ಷ ಆಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ ಎಂದು ವರದಿಯಾಗಿದೆ. ಬರಾಕ್ ಒಬಾಮಾ ಅವರು ಜಾರ್ಜ್ W ಬುಷ್‌ ನಂತರ 44ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಒಬಾಮಾ ಅವರ ಉತ್ತರಾಧಿಕಾರಿಯಾಗಿ ಡೊನಾಲ್ಡ್ ಟ್ರಂಪ್ ಹೊರಹೊಮ್ಮಿದ್ದರು. ಅದನ್ನೂ ಬಾಬಾ ಮುಂಗಂಡಿದ್ದಾರೆ. ʼʼಪ್ರತಿಯೊಬ್ಬರೂ ಅದನ್ನು (ಸಾಂಸ್ಕೃತಿಕ ಯುದ್ಧ) ಕೊನೆಗೊಳಿಸಲು (ಟ್ರಂಪ್?) ಅವರ ಮೇಲೆ ಭರವಸೆ ಇಡುತ್ತಾರೆ. ಆದರೆ ಇದಕ್ಕೆ ವಿರುದ್ಧವಾದುದು ಸಂಭವಿಸುತ್ತದೆ. ಅವರು ದೇಶವನ್ನು ಕೆಡವುತ್ತಾರೆ. ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ಸಂಘರ್ಷಗಳು ಉಲ್ಬಣಗೊಳ್ಳುತ್ತವೆʼʼ ಎಂದಿದ್ದಳು. ರೇಸ್, ಗರ್ಭಪಾತ ಮತ್ತು ಬಂದೂಕುಗಳಂತಹ ಬಿಸಿಬಿಸಿ ಸಮಸ್ಯೆಗಳ ಕುರಿತು ಯುಎಸ್ ಸಂಪ್ರದಾಯವಾದಿಗಳು ಮತ್ತು ಪ್ರಗತಿಪರರ ನಡುವಿನ ತೀವ್ರ ಭಿನ್ನಾಭಿಪ್ರಾಯಗಳು ಅವಾಗಿದ್ದವು ಎಂಬ ಊಹೆ.

5. ಇಂದಿರಾ ಗಾಂಧಿ ಹತ್ಯೆ (Assassination of Indira Gandhi) 
1980ರ ದಶಕದ ಆರಂಭದಲ್ಲಿ ಭಾರತದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ಕಾಲದ ಅತ್ಯಂತ ಮಹತ್ವದ ಮತ್ತು ವಿವಾದಾತ್ಮಕ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. 1984ರಲ್ಲಿ ಅವರು ಸಿಖ್ಖರ ಅತ್ಯಂತ ಪವಿತ್ರ ಸ್ಥಳವಾದ ಗೋಲ್ಡನ್ ಟೆಂಪಲ್ ಮೇಲೆ ಮಿಲಿಟರಿ ದಾಳಿಗೆ ಆದೇಶಿಸಿದರು. ಅದೇ ವರ್ಷದ ಅಕ್ಟೋಬರ್‌ನಲ್ಲಿ, ಆಕೆಯ ಇಬ್ಬರು ಸಿಖ್ ಅಂಗರಕ್ಷಕರು ಅವರನ್ನು ಗುಂಡಿಕ್ಕಿ ಕೊಂದರು. ಹಲವು ವರ್ಷಗಳ ಹಿಂದೆ, 1969ರಲ್ಲಿ, ಬಾಬಾ ವಂಗಾ ಇಂದಿರಾ ಗಾಂಧಿಯ ಬಗ್ಗೆ ದರ್ಶನ ಹೊಂದಿದ್ದರು. ʼʼಹೊಗೆ ಮತ್ತು ಬೆಂಕಿಯಲ್ಲಿ ನಾನು ಕಿತ್ತಳೆ-ಹಳದಿ ಉಡುಪನ್ನು ನೋಡುತ್ತೇನೆ. ಆ ಉಡುಪು ಅವಳನ್ನು ನಾಶಪಡಿಸುತ್ತದೆʼʼ ಎಂದಿದಳು ವಂಗಾ. ಅಂಗರಕ್ಷಕರು ಗುಂಡು ಹಾರಿಸಿದ ದಿನ ಇಂದಿರಾ ಗಾಂಧಿ ಅವರು ನಿಜವಾಗಿಯೂ ಕೇಸರಿ ಬಣ್ಣದ ಸೀರೆಯನ್ನು ಧರಿಸಿದ್ದರು.

2024ರ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯ:, ನಮ್ಮ ನಿಮ್ಮ ಮೇಲೂ ಆಗಬಹುದು ಸೈಬರ್ ಅಟ್ಯಾಕ್

6. ಅವಳ ಸ್ವಂತ ಸಾವು
ಸೋವಿಯತ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಅವರ ಮರಣದ ದಿನಾಂಕವನ್ನು ವಂಗಾ ನಿಖರವಾಗಿ ಊಹಿಸಿದ್ದಾಳೆ ಎಂಬುದು ಬಾಬಾ ವಂಗಾ ಬಗ್ಗೆ ಪ್ರಸಾರವಾದ ಕಥೆ. ಆದರೆ ಅವಳು ತನ್ನ ಸಾವಿನ ದಿನಾಂಕವನ್ನು ತಾನೇ ಊಹಿಸಿದ್ದಳು. 1990ರ ಒಂದು ಹೇಳಿಕೆಯಲ್ಲಿ ಆಕೆ ಆಗಸ್ಟ್ 11, 1996ರಂದು ʼಈ ಮಾರಣಾಂತಿಕ ಸುರುಳಿಯನ್ನು ಮಗುಚಿಹಾಕುವ ದಿನʼ ಎಂದು ಆಕೆ ಸೂಚಿಸಿದ್ದಳು. ಅದೇ ದಿನ ಬಾಬಾ ವಂಗಾ ತೀರಿಕೊಂಡಳು. ದಾಗ.

2023ರ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವಾಣಿಗಳು ಹೀಗಿವೆ:
1. ಮುಂದಿನ ವರ್ಷ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ತನ್ನ ದೇಶವಾಸಿಯಿಂದಲೇ ಹತ್ಯೆಯ ಪ್ರಯತ್ನ ನಡೆಯಲಿದೆ.
2. ಯುರೋಪ್‌ನಲ್ಲಿ ಭಯೋತ್ಪಾದಕ ದಾಳಿ ಹೆಚ್ಚಲಿದೆ. ದೊಡ್ಡ ದೇಶವೊಂದು ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸುತ್ತದೆ.
3. ಮುಂದಿನ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ.
4. ಭಯಾನಕ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ.
5. ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಅವರು ಗುರಿಯಾಗಿಸುತ್ತಾರೆ.
6. ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಬರಲಿವೆ.

ಬಾಬಾ ವಾಂಗಾ ಭವಿಷ್ಯ: 2024ರಲ್ಲಿ ಸೂಪರ್ ಪವರ್ ಆಗೋದು ಚೀನಾವೋ-ಭಾರತವೋ?
 

Follow Us:
Download App:
  • android
  • ios