Asianet Suvarna News Asianet Suvarna News

ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವೋಪೇತ ಗುರುವಂದನಾ ಕಾರ್ಯಕ್ರಮ

ತಮ್ಮ ನಾಲ್ಕನೇ ಐತಿಹಾಸಿಕ ಶ್ರೀ ಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಶ್ರೀ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ  ಆಸ್ಟ್ರೇಲಿಯಾದ ಮೆಲ್ಬರ್ನ್ ಮಹಾನಗರದಲ್ಲಿ ಅಭೂತಪೂರ್ವ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವವನ್ನು ಸಲ್ಲಿಸಲಾಯಿತು.

Guruvandana program for Puttige Shri in Melbourne, Australia udupi rav
Author
First Published Jan 23, 2023, 8:58 PM IST

ಉಡುಪಿ (ಜ.23) : ತಮ್ಮ ನಾಲ್ಕನೇ ಐತಿಹಾಸಿಕ ಶ್ರೀ ಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಶ್ರೀ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ  ಆಸ್ಟ್ರೇಲಿಯಾದ ಮೆಲ್ಬರ್ನ್ ಮಹಾನಗರದಲ್ಲಿ ಅಭೂತಪೂರ್ವ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವವನ್ನು ಸಲ್ಲಿಸಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ  ಪೂರ್ಣಕುಂಭ, ವೇದಘೋಷ, ಚಂಡೆ ವಾದ್ಯಗಳೊಂದಿಗೆ ಗುರುಗಳನ್ನು  ಸ್ವಾಗತಿಸಲಾಯಿತು. ನಂತರ ಭಕ್ತರಿಂದ ಸಾಮೂಹಿಕ ಪಾದಪೂಜೆ, ಶ್ರೀಗಳಿಂದ ಸಂಸ್ಥಾನ ಪೂಜೆ ನೆರವೇರಿತು. 

 

Udupi: ಅಬುದಾಭಿಯ ಸಚಿವರೊಂದಿಗೆ ಪುತ್ತಿಗೆಶ್ರೀ

ಸಾಂಪ್ರದಾಯಿಕ ಶೈಲಿಯಲ್ಲಿ ಉಡುಪಿ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಸಂಜೆ ಶ್ರೀಗಳನ್ನು  ವೈಭವೋಪೇತವಾಗಿ ಮೆರವಣಿಗೆಯ ಮೂಲಕ ಕರೆತರಲಾಯಿತು.  ಮೆರವಣಿಗೆಯಲ್ಲಿ ಉಡುಪಿಯ ಪ್ರಸಿದ್ಧ ಕಲೆ ಹುಲಿವೇಷ , ಕೋಲಾಟ, ಪ್ರಸಿದ್ಧ ದಾಸರುಗಳ ವೇಷ ಪ್ರಮುಖ ಆಕರ್ಷಣೆಯಾಗಿತ್ತು. ಗುರುವಂದನಾ ಕಾರ್ಯಕ್ರಮಕ್ಕೆ ಸರಕಾರದ ವತಿಯಿಂದ ಆಗಮಿಸಿದ ಪ್ರವಾಸ ಮತ್ತು ಕ್ರೀಡಾ ಸಚಿವ ಸ್ಟೀವ್  ಡಿಮೋ ಪುಲಸ್  ರವರು ತಮ್ಮ ಗೌರವವನ್ನು ಶ್ರೀಗಳಿಗೆ ಅರ್ಪಿಸುತ್ತಾ ತಮ್ಮ ದೇಶ ಎಲ್ಲ ಧರ್ಮದವರನ್ನೂ ಗೌರವಿಸುತ್ತೆ , ವಿಶೇಷವಾಗಿ  ಹಿಂದೂ  ಭಾರತೀಯ ಪರಂಪರೆ ಯ  ಜೀವನ ಪದ್ಧತಿ ತುಂಬಾ ಅನುಕರಣೀಯವಾಗಿದೆ. ಎಂದರು .

ತಾವು 2017 ರಲ್ಲಿ ಶ್ರೀ ವೆಂಕಟಕೃಷ್ಣ ಬೃಂದಾವನವನ್ನು ಉದ್ಗಾಟಿಸಿದ್ದನ್ನು ನೆನಪಿಸಿಕೊಂಡರು  ಶ್ರೀಪಾದರು ಸಚಿವರ ಸರಳ ಸಜ್ಜನಿಕೆಯನ್ನು ಹೊಗಳುತ್ತಾ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಸಚಿವರಿಂದ ನಡೆಯುವಂತಾಗಲಿ ಎಂದು ಹಾರೈಸುತ್ತಾ  ಮುಂದಿನ ತಮ್ಮ ಪರ್ಯಾಯಕ್ಕೆ ಆಹ್ವಾನಿಸಿದರು .

ಪುತ್ತಿಗೆ ಶ್ರೀಗಳ ವಿಶ್ವ ಪರ್ಯಾಯಕ್ಕೆ ಬಾಳೆ ಮಹೂರ್ತದ ನಾಂದಿ!

ನಗರದ ಭಕ್ತರು ಗುರುಗಳಿಗೆ ನಾಣ್ಯದ ತುಲಾಭಾರವನ್ನು ಸಮರ್ಪಿಸುವ ಮೂಲಕ ಗೌರವವನ್ನು ಸಲ್ಲಿಸಿದರು.  ಇಸ್ಕಾನ್ , ವೈದಿಕ್  ಸೊಸೈಟಿ , GSB  ಸಂಘಟನೆ ,ತುಳು ಸಂಘ  ಮೊದಲಾದ ಸಂಘ ಸಂಸ್ಥೆಗಳಿಂದ ಶ್ರೀಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು .ಅರವಿಂದ್ ಜೋಷಿ ಪ್ರಸ್ತಾವನೆ  ಸಲ್ಲಿಸಿದರು .ಶ್ರೀ ರಮೇಶ್ ರವರು ಸ್ವಾಗತಿಸಿದರು . ಶ್ರೀ ಧೀರನ್ ರವರು ಕಾರ್ಯಕ್ರಮ ನಿರ್ವಹಿಸಿದರು . ಶ್ರೀ ಗಿರೀಶ್ ಬಾಳಿಗಾ ರವರು  ಧನ್ಯವಾದ ವಿತ್ತರು . ರಾತ್ರಿ ತೊಟ್ಟಿಲು ಪೂಜೆ, ಆಶೀರ್ವಚನ, ಫಲ ಮಂತ್ರಾಕ್ಷತೆ ಸ್ವೀಕಾರದೊಂದಿಗೆ ಗುರುವಂದನಾ ಕಾರ್ಯಕ್ರಮವು  ವಿಜೃಂಭಣೆಯಿಂದ ಪರಿಸಮಾಪ್ತಿಯಾಯಿತು. 800ಕ್ಕೂ ಅಧಿಕ ಭಕ್ತರು  ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

Follow Us:
Download App:
  • android
  • ios