Asianet Suvarna News Asianet Suvarna News

Udupi: ಅಬುದಾಭಿಯ ಸಚಿವರೊಂದಿಗೆ ಪುತ್ತಿಗೆಶ್ರೀ

ಅಬುದಾಭಿಯಲ್ಲಿಂದು ಸರಕಾರದ ಕ್ಯಾಬಿನೆಟ್ ಮಂತ್ರಿಗಳಾದ  ಸಮಾಜ ಧರ್ಮ ಸಾಮರಸ್ಯ ಸಚಿವರಾದ ಶೇಖ್ ನಹ್ಯಾನ್ ಬಿನ್ ಮುಬಾರಕ್  ಅಲ್ ನಹ್ಯಾನ್ ರೊಂದಿಗೆ  ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಸೌಹಾರ್ದ  ಭೇಟಿ ನಡೆಯಿತು.

Puttige Mutt seer in Abudhabhi skr
Author
First Published Dec 19, 2022, 10:06 AM IST

ಅಬುದಾಭಿಯಲ್ಲಿಂದು ಸರಕಾರದ ಕ್ಯಾಬಿನೆಟ್ ಮಂತ್ರಿಗಳಾದ  ಸಮಾಜ ಧರ್ಮ ಸಾಮರಸ್ಯ ಸಚಿವರಾದ ಶೇಖ್ ನಹ್ಯಾನ್ ಬಿನ್ ಮುಬಾರಕ್  ಅಲ್ ನಹ್ಯಾನ್ ರೊಂದಿಗೆ  ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಸೌಹಾರ್ದ  ಭೇಟಿ ನಡೆಯಿತು.

ಈ ಸಂದರ್ಭದಲ್ಲಿ  ಸಮಕಾಲೀನ ಸಮಸ್ಯೆಗಳ ಬಗ್ಗೆ, ಸಮಾಜದಲ್ಲಿ  ಪರಸ್ಪರ ಶಾಂತಿ ಸೌಹಾರ್ದ ವನ್ನು ಗಟ್ಟಿಗಳಿಸುವಲ್ಲಿ  ಧಾರ್ಮಿ ಕ ನಾಯಕರು  ಕೈಗೊಳ್ಳುವ ಕ್ರಮಗಳ ಬಗ್ಗೆ  ವಿಸ್ತೃತ ಚರ್ಚೆ  ನಡೆಯಿತು. ಈ ಸಂದರ್ಭದಲ್ಲಿ  ಪೂಜ್ಯ  ಶ್ರೀಪಾದರ  ಸಮಾಜಮುಖಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಶ್ರೀಗಳು  ವಿವರಿಸಿದರು. ಮಂತ್ರಿಗಳು ಶ್ರೀಗಳ ವಿಶ್ವಶಾಂತಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು .

ಶ್ರೀಗಳು ತಮ್ಮ  ಮುಂಬರುವ ಶ್ರೀ  ಕೃಷ್ಣ ಪೂಜಾ ಪರ್ಯಾಯಕ್ಕೆ  ಪ್ರೀತಿಪೂರ್ವಕ ಆಹ್ವಾನಿಸಿದಾಗ ಮಾನ್ಯ  ಮಂತ್ರಿಗಳು ಸಂತೋಷದಿಂದ  ಒಪ್ಪಿಗೆ ಸೂಚಿಸಿದರು.

Billionaires zodiac 2022: ವಿಶ್ವದ ಅತಿ ಶ್ರೀಮಂತರು ಹೆಚ್ಚಾಗಿ ಯಾವ ರಾಶಿಗೆ ಸೇರಿದ್ದಾರೆ ಗೊತ್ತಾ?

ದುಬೈನಲ್ಲಿ ಪುತ್ತಿಗೆ ಶ್ರೀಗಳಿಗೆ ಸನ್ಮಾನ
ದುಬೈ ಶ್ರೀ ರಾಘವೇಂದ್ರ ಸೇವಾ  ಸಮಿತಿ ಸದಸ್ಯರಿಂದ ಭಾವಿ ಪರ್ಯಾಯ ಸ್ವಾಮಿಗಳಾದ ಪೂಜ್ಯ ಪುತ್ತಿಗೆ ಶ್ರೀಪಾದರಿಗೆ  ಭವ್ಯ ಸ್ವಾಗತ, ಸಾಮೂಹಿಕ ಪಾದಪೂಜೆ , ತೊಟ್ಟಿಲುಪೂಜಾ ಸೇವೆ ಮತ್ತು ಭವ್ಯ ಅಭಿನಂದನಾ ಕಾರ್ಯಕ್ರಮವು  ವೈಭವದಿಂದ  ನಡೆಯಿತು.

ಪೂಜ್ಯ ಶ್ರೀಪಾದರು  ನೆರೆದ ಭಕ್ತರಿಗೆ ಭಗವದ್ಗೀತ ಲೇಖನ  ದೀಕ್ಷೆಯನ್ನು ನೀಡಿ ಎಲ್ಲ ಭಕ್ತರನ್ನು ಮುಂಬರುವ ಶ್ರೀಕೃಷ್ಣಪೂಜಾ ಪರ್ಯಾಯಕ್ಕೆ ಆಗಮಿಸುವಂತೆ ಕರೆಯಿತ್ತರು. ಕಾರ್ಯಕ್ರಮವನ್ನು   ಸತ್ಯಬೋಧಾಚಾರ್ಯರು ಆಯೋಜಿಸಿದ್ದರು.

ಈ  ಸಂದರ್ಭದಲ್ಲಿ ಶ್ರೀ ಮಠದ  ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಮತ್ತು ಅರ್ಚಕ ಶ್ರೀ ಶ್ರೀಪತಿ ಉಪಾಧ್ಯಾಯ  ಇವರನ್ನು  ಗೌರವಿಸಲಾಯಿತು. ದುಬೈಯಲ್ಲಿ ನೂರಾರು ಮಂದಿಯನ್ನು ಭಗವದ್ಗೀತಾ ಪ್ರಚಾರಕ್ಕೆ  ಪ್ರೇರೇಪಿಸಿದ ಸುರೇಶ್ ರವರನ್ನು ಸನ್ಮಾನಿಸಲಾಯಿತು. ಸಂಯೋಜಕರಾದ  ಶ್ರೀ  ಹರಿಪ್ರಸಾದ್  ಇವರು ಧನ್ಯವಾದವಿತ್ತರು. ಪೂಜ್ಯ ಶ್ರೀಪಾದರು  ದುಬೈ  -ಅಬುದಾಭಿಯಲ್ಲಿ  ಡಿಸೆಂಬರ್ 23ರವರೆಗೆ  ಸಂಚರಿಸಲಿದ್ದಾರೆ.

Ramayana story: ವಾಲಿ ಸುಗ್ರೀವರ ನಡುವೆ ವೈರತ್ವ ಶುರುವಾಗಿದ್ದು ಏಕೆ?

ದುಬೈ ಮಹಾನಗರದಲ್ಲಿ ಮುದ್ರಾಧಾರಣೆ
ಪೂಜ್ಯ ಶ್ರೀಪಾದರು ಪರ್ಯಾಯ ಸಂಚಾರ ನಿಮಿತ್ತ ದುಬೈ ಮಹಾನಗರಕ್ಕೆ  ಆಗಮಿಸಿದ ಶ್ರೀಗಳಿಂದ ನೆರೆದ ಭಕ್ತ ಜನರು ಮುದ್ರಾಧಾರಣೆಯನ್ನು ಮಾಡಿಸಿಕೊಂಡು  ಧನ್ಯರಾದರು. ನೂರಾರು ಭಕ್ತರು ಪರ್ಯಾಯದ ಅಪೂರ್ವ ಯೋಜನೆಯಾದ ಪವಿತ್ರವಾದ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗವಹಿಸುವ ದೀಕ್ಷೆಯನ್ನು ಪಡೆದುಕೊಂಡರು .

Follow Us:
Download App:
  • android
  • ios