Asianet Suvarna News Asianet Suvarna News

ಗುರು ಪೂರ್ಣಿಮಾ 2023: ಇದರ ಮಹತ್ವ ಏನು? ಆಚರಣೆ ಹೇಗೆ?

ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದ ಪಡೆಯುತ್ತೇವೆಯೋ ಅವರನ್ನು ಗೌರವಿಸುವ ದಿನವೇ ಗುರು ಪೂರ್ಣಿಮೆ. ಗುರು ಪೂರ್ಣಿಮೆಯನ್ನು ಆಚರಿಸುವುದರ ಮಹತ್ವವೇನು ಹಾಗೂ ಯಾವ ರೀತಿ ಈ ದಿನ ವಿಶೇಷ ಪೂಜೆಯನ್ನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

guru purnima 2023 puja vidhi information suh
Author
First Published Jun 30, 2023, 6:37 PM IST

ಮನುಷ್ಯನ ಜೀವನದಲ್ಲಿ ಗುರುವು ಮಹತ್ವದ ಪಾತ್ರ ವಹಿಸುತ್ತಾನೆ. ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದ ಪಡೆಯುತ್ತೇವೆಯೋ ಅವರನ್ನು ಗೌರವಿಸುವ ದಿನವೇ ಗುರು ಪೂರ್ಣಿಮ (guru purnima) . ಗುರು ಪೂರ್ಣಿಮೆಯನ್ನು ಆಚರಿಸುವುದರ ಮಹತ್ವವೇನು ಹಾಗೂ ಯಾವ ರೀತಿ ಈ ದಿನ ವಿಶೇಷ ಪೂಜೆಯನ್ನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಗೆ ಬಹಳ ಪ್ರಾಮುಖ್ಯತೆ ಇದೆ. ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಏಕೆಂದರೆ ಮಹರ್ಷಿ ವೇದವ್ಯಾಸರು ಈ ದಿನ ಜನಿಸಿದರು ಎಂದು ನಂಬಲಾಗಿದೆ.

ವ್ಯಾಸರ ಜ್ಞಾನದ ಸಂಪೂರ್ಣ ವಿದ್ಯೆಯನ್ನು 4 ವೇದಗಳು, ಉಪನಿಷತ್ತುಗಳು, ಉಪವೇದಗಳು, 27 ಸ್ಮೃತಿಗಳು, 27 ಉಪಸ್ಮೃತಿಗಳು ಎಂದು ವರ್ಗೀಕರಿಸಲಾಗಿದೆ ಎಂದು ಹೇಳುತ್ತಾರೆ. ಜೀವನದ ಪ್ರತಿಯೊಂದು ಅಂಶಕ್ಕೂ ಸಂಬಂಧಿಸಿದ ಜ್ಞಾನವನ್ನು ಅವರು ತಿಳಿಸಿದ್ದಾರೆ. ಅವರು ಮಹಾಭಾರತ ಸೇರಿ ಪುರಾಣ ಕಥೆ (Mythical story)ಗಳನ್ನು ಬರೆದಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ.

ಈ ವರ್ಷ ಗುರುಪೂರ್ಣಿಮೆಯನ್ನು ಜುಲೈ (July) 3 ರಂದು ಆಚರಿಸಲಾಗುತ್ತದೆ. ಈ ದಿನದಂದು ಗುರುವನ್ನು ಭಕ್ತಿಯಿಂದ ಪೂಜಿಸುವುದರಿಂದ ವಿಶೇಷ ಲಾಭ ದೊರೆಯುತ್ತದೆ ಎಂದು ನಂಬಲಾಗಿದೆ.

ಮೂರು ದಿನ ದೇಹ ತೊರೆದ ಸಾಯಿಬಾಬಾ; ನೀರಿನಿಂದ ಬೆಳಗಿದವು ದೀಪಗಳು..!

 

ಗುರುಪೂರ್ಣಿಮೆಯ ಮಹತ್ವ

ಗುರುಪೂರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಮಹರ್ಷಿ ವೇದ ವ್ಯಾಸರಿಗೆ ವೇದ (Veda) ಗಳ ಜ್ಞಾನವಿತ್ತು. ಮಹರ್ಷಿ ವೇದ ವ್ಯಾಸರನ್ನು 7 ಚಿರಂಜೀವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅಂದರೆ ಅವರು ಅಮರರಾಗಿದ್ದಾರೆ ಮತ್ತು ಇಂದಿಗೂ ಜೀವಂತರಾಗಿದ್ದಾರೆ ಎಂದು ನಂಬಲಾಗಿದೆ. ಧಾರ್ಮಿಕ ಗ್ರಂಥ (holy scripture) ಗಳಲ್ಲಿ ಅವರನ್ನು ಭಗವಾನ್ ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ .

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಪೂಜೆ ಮತ್ತು ಉಪವಾಸ (fasting) ವನ್ನು ಮಾಡುವುದರಿಂದ ಜಾತಕದಲ್ಲಿ ಗುರು ದೋಷ ಮತ್ತು ಪಿತೃದೋಷವು ಕೊನೆಗೊಳ್ಳುತ್ತದೆ. ಇದಲ್ಲದೆ ಉದ್ಯೋಗ, ವ್ಯಾಪಾರ, ವೃತ್ತಿಯಲ್ಲಿನ ಅಡೆತಡೆಗಳು ದೂರವಾಗುತ್ತವೆ.

ಈ ರೀತಿ ಪೂಜೆಯನ್ನು ಮಾಡಿ

ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ (bathing) ಮಾಡಿ.

ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಹಾಕಿ.

ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ದೇವರ ಮನೆ (God's house) ಯನ್ನು ಸರಿಯಾಗಿ ಸ್ವಚ್ಛಗೊಳಿಸಿ.

ದೇವತೆಗಳಿಗೆ ಪಂಚಾಮೃತ (Panchamrita) ದಿಂದ ಸ್ನಾನ ಮಾಡಬೇಕು.

ಸ್ವಲ್ಪ ಗಂಗಾಜಲವನ್ನು ಚಿಮುಕಿಸಿ. ಆಗ ಗುರುವನ್ನು ಸ್ಮರಿಸಿ. ಈ ರೀತಿಯಾಗಿ ವಿಷ್ಣುವನ್ನು ಪೂಜಿಸಬೇಕು.

ಈ ಮಂತ್ರಗಳನ್ನು ಪಠಿಸಬೇಕು

ಓಂ ಗುರುಭ್ಯೋ ನಮಃ

ಓಂ ಪರಮತ್ತ್ವಾಯ ನಾರಾಯಣಾಯ ಗುರುಭ್ಯೋ ನಮಃ

ಓಂ ವೇದಹಿ ಗುರು ದೇವೈ ವಿದ್ಯಾಹೇ ಪರಂ ಗುರುವೇ ಧೀಮಹಿ ತನ್ನೋಃ ಪ್ರಚೋದಯತೋ

ಮಾ ಗು ಗುರುಭ್ಯೋ ನಮಃ

ಈ 5 ಕೆಟ್ಟ ಅಭ್ಯಾಸಗಳಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ; ನಿಮಗೆ ದುರಾದೃಷ್ಟ ಬರಲಿದೆ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios