ಈ ದೇವಿಗೆ ವಿಶೇಷ ಜಾತ್ರೆ ನಡೆಸಿದ್ರೆ ಇಷ್ಟಾರ್ಥಗಳು ಈಡೇರುತ್ತಂತೆ..!
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ಗೌರಸಮುದ್ರ ಮಾರಮ್ಮ ಅಂದ್ರೆ ಸಾಕು, ಬುಡಕಟ್ಟು ಸಮುದಾಯದ ಜನರ ಆರಾದ್ಯ ದೈವ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ. ಸುಮಾರು ವರ್ಷಗಳಿಂದ ಈ ಜಾತ್ರೆಯನ್ನು ಈ ಭಾಗದ ಜನರು ಅದ್ದೂರಿಯಾಗಿ ಮಾಡಿಕೊಂಡು ಬರ್ತಿದ್ದಾರೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಸೆ.20): ಈ ಭಾಗದ ಬುಡಕಟ್ಟು ಜನಾಂಗದ ಸಂಸ್ಕೃತಿ ಪ್ರತಿರೂಪ ಈ ಜಾತ್ರೆ. ಸುತ್ತಮುತ್ತ ಹತ್ತು ಊರುಗಳಿಂದ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಳ್ತಾರೆ ಜನರು. ದೇವಿಗೆ ವಿಶೇಷವಾಗಿ ಜಾತ್ರೆ ನಡೆಸಿದ್ರೆ ತಮ್ಮ ಇಷ್ಟಾರ್ಥಗಳು ಈಡೇರಲಿವೆ ಎಂಬುದೇ ಇಲ್ಲಿನ ಭಕ್ತರ ನಂಬಿಕೆ. ಅಷ್ಟಕ್ಕೂ ಯಾವುದು ಆ ಜಾತ್ರೆ? ನಡೆಯುತ್ತಿರೋದ್ರಾರು ಎಲ್ಲಿ ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ......,
ಎಸ್ ವೀಕ್ಷಕರೇ, ಹೀಗೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿರೋ ಲಕ್ಷಾಂತರ ಭಕ್ತವೃಂದ. ಮತ್ತೊಂದೆಡೆ ದೇವರ ಪಲ್ಲಕ್ಕಿ ಮೆರವಣಿಗೆ ವೇಳೆ ಬುಡಕಟ್ಟು ಸಂಪ್ರದಾಯದಂತೆ ಕೈಯಲ್ಲಿ ಕೋಲು ಹಿಡಿದು, ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಉಯ್ಯೋ, ಉಯ್ಯೋ ಎನ್ನುತ್ತಿರುವ ಜನರು. ಈ ದೃಶ್ಯಗಳ ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ. ಗೌರಸಮುದ್ರ ಮಾರಮ್ಮ ಅಂದ್ರೆ ಸಾಕು, ಬುಡಕಟ್ಟು ಸಮುದಾಯದ ಜನರ ಆರಾದ್ಯ ದೈವ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ. ಸುಮಾರು ವರ್ಷಗಳಿಂದ ಈ ಜಾತ್ರೆಯನ್ನು ಈ ಭಾಗದ ಜನರು ಅದ್ದೂರಿಯಾಗಿ ಮಾಡಿಕೊಂಡು ಬರ್ತಿದ್ದಾರೆ. ಮೊದಲೇ ಬುಡಕಟ್ಟು ಜನರ ಸಂಸ್ಕೃತಿ ಈ ಜಾತ್ರಾ ಆಚರಣೆ ಆಗಿರೋದ್ರಿಂದ, ಅಂದಿನ ಕಾಲದಲ್ಲಿ ಜನರಿಗೆ ಪ್ಲೇಗ್, ಅಮ್ಮ, ಇನ್ನಿತರ ಕಾಯಿಲೆಗಳು ಬಂದ ಸಂದರ್ಭದಲ್ಲಿ ಈ ಮಹಾತಾಯಿ ಮಾರಮ್ಮನಿಗೆ ಹರಕೆ ಮಾಡಿಕೊಂಡ್ರೆ ಸಾಕು ಆ ಎಲ್ಲಾ ಸಮಸ್ಯೆಗಳು ಮಾಯ ಆಗುತ್ತಿದ್ದವು ಎನ್ನುವುದು ಪೂರ್ವಜರ ಕಾಲದಿಂದಲೂ ನಮ್ಮಲ್ಲಿ ನಂಬಿಕೆ ಇದೆ. ಇದು ಸುಮಾರು ಐನೂರು ವರ್ಷಗಳಿಂದಲೂ ಆಚರಣೆ ಮಾಡಿಕೊಂಡು ಬರ್ತಿರುವ ಜಾತ್ರೆಯಾಗಿದೆ. ಇಲ್ಲಿ ಯಾವುದೇ ಮೇಲು ಕೀಳು ಎನ್ನುವ ಬೇದ ಭಾವ ಇಲ್ಲ, ಎಲ್ಲಾ ಭಕ್ತಾಧಿಗಳು ಆಗಮಿಸ್ತಾರೆ ಅಂತಾರೆ ಗ್ರಾಮದ ಹಿರಿಯರು ಮಾರನಾಯಕ.
ಮೋದಕ ತಿನ್ತಾ ಇಂಡಿಗೋ ವಿಮಾನದಲ್ಲಿ ಬಂದಿಳಿದ ಬಪ್ಪಾ.... ಫೋಟೋ ವೈರಲ್
ಇಷ್ಟೇ ಅಲ್ಲದೇ ಗೌರಸಮುದ್ರ ಮಾರಮ್ಮ ಜಾತ್ರೆ ಅಂದ್ರೆನೇ ಕೋಟೆನಾಡಿನ ಬುಡಕಟ್ಟು ಜನರ ಸಂಸ್ಕೃತಿ ಎಂದೇ ಬಿಂಬಿತವಾಗಿದೆ. ಈ ಜಾತ್ರೆಗೆ ಸುಮಾರು ಲಕ್ಷಾಂತರ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಅಗಮಿಸ್ತಾರೆ. ತಾವು ಬೇಡಿಕೊಂಡಿರುವ ಇಷ್ಟಾರ್ಥಗಳು ನೆರವೇರಿತ್ತವೆ ಎನ್ನುವ ನಂಬಿಕೆ ಜನರಲ್ಲಿದೆ. ಈ ಭಾಗದ ಜನರು ಆ ದೇವಿಗೆ ತಮ್ಮ ಇಷ್ಟಂದಂತೆ ಮೆರವಣಿಗೆ ವೇಳೆ ಕೋಳಿ, ಈರುಳ್ಳಿ ಇನ್ನಿತರ ವಸ್ತುಗಳನ್ನು ತೂರುವ ಪದ್ದತಿ ಮೊದಲಿಂದ ಇಲ್ಲಿದೆ. ಮಧ್ಯಾಹ್ನ ಮಾರಮ್ಮ ಎಂದೇ ಈ ದೇವಿಯು ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದು ಸ್ಥಳೀಯ ಭಕ್ತ ವಿಜಯ್ ಕುಮಾರ್ ಹೇಳಿದ್ದಾರೆ.
ಒಟ್ಟಾರೆಯಾಗಿ ಮಾರಮ್ಮ ದೇವಿಯ ಜಾತ್ರೆಯು ಅದ್ದೂರಿಯಾಗಿ ನೆರವೇರಿದ್ದು, ತಮ್ಮ ಬೇಡಿಕೆಗಳು ಈಡೇರಲಿವೆ ಎಂಬುದು ಇಲ್ಲಿನ ಬುಡಕಟ್ಟು ಸಮುದಾಯದ ಭಕ್ತರ ನಂಬಿಕೆಯಾಗಿದೆ. ಈಗೆ ಈ ಭಾಗದ ಜನರ ನೆಮ್ಮದಿ ತಾಯಿ ಕಾಪಾಡಿ ಎಂಬುದು ನಮ್ಮ ಆಶಯ.....