ಮೋದಕ ತಿನ್ತಾ ಗಣೇಶ ವಿಮಾನದಲ್ಲಿ ಬರ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಗಣೇಶ ಚತುರ್ಥಿ ಮುಗಿದಿದೆ. ಆದರೆ ದೇಶಾದ್ಯಂತ ಗಣೇಶನ ಹಬ್ಬವನ್ನು ತಿಂಗಳ ಕಾಲ ಆಚರಿಸಲಾಗುತ್ತದೆ. ಮಕ್ಕಳಿಂದ ಹಿರಿಯರವರೆಗೆ ಗಣೇಶನ ಜೊತೆ ಅವಿನಾಭಾವ ಸಂದಂಧ ಹೊಂದಿದ್ದಾರೆ. ಎಲ್ಲರ ಸಾಮಾಜಿಕ ಜಾಲತಾಣ ಖಾತೆಗಳು ಗಣೇಶನ ಫೋಟೋದಿಂದ ತುಂಬಿ ಹೋಗಿದೆ. ಈ ಮಧ್ಯೆ ಇಂಡಿಗೋ ಏರ್‌ಲೈನ್ಸ್‌ ಕೂಡ ಗಣೇಶ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದೆ. ವಿಶೇಷ ಸಂದರ್ಭಗಳ ಫೋಟೋ ವೀಡಿಯೋಗಳನ್ನು ಸದಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಇಂಡಿಗೋ ಏರ್‌ಲೈನ್ಸ್ ಈ ಬಾರಿ ಗಣೇಶ ವಿಮಾನದಲ್ಲಿ ಬರುತ್ತಿರುವ ಫೋಟೋವನ್ನು ಶೇರ್ ಮಾಡಿ ಗಣೇಶ ಹಬ್ಬದ ಶುಭ ಕೋರಿದ್ದಾರೆ. 

ಸೆಪ್ಟೆಂಬರ್ 19ರಿಂದಲೇ ಈ ಗಣೇಶ ಹಬ್ಬ (Ganesh Festival) ಜೋರಾಗಿದ್ದು, ದೇಶಾದ್ಯಂತ ಮಕ್ಕಳು ಹಿರಿಯರಾದಿಯಾಗಿ ಗಣೇಶನನ್ನು ಸ್ವಾಗತಿಸಲು ಉತ್ಸಾಹದಿಂದ ಸಜ್ಜಾಗಿದ್ದರು. ಗಣೇಶ ಚತುರ್ಥಿಯ ದಿನ ಜನ ಮನೆಯಲ್ಲಿ ಗಣೇಶನನ್ನು ಕೂರಿಸಿ ಆತನಿಗೆ ಮೋದಕ ಲಡ್ಡು (Laddu)ಮುಂತಾದ ಸಿಹಿಗಳನ್ನು ಮಾಡಿ ಆತ ಸಂತುಷ್ಟನಾಗಬೇಕೆಂದು ಬಯಸುತ್ತಾರೆ. ಅದೇ ರೀತಿ ಇಲ್ಲಿ ಇಂಡಿಗೋ ಗಣೇಶ (Ganesh) ಮೋದಕ ಇರುವ ಪಾತ್ರೆಯನ್ನು ಹಿಡಿದು ವಿಮಾನದ ಸೀಟಿನಲ್ಲಿ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. 

ಇದು ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಿದ ಫೋಟೋ ಆಗಿದ್ದು, ಬಪ್ಪ ಮನೆಗೆ ಬರುತ್ತಿದ್ದಾನೆ ಎಂದು ಬರೆದು ಈ ಪೋಟೋವನ್ನು ಶೇರ್ ಮಾಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ. ಇಂಡಿಗೋ ವಿಮಾನದ (Indigo Flight) ವಿಂಡೋ ಸೈಡ್‌ ಸೀಟಿನಲ್ಲಿ ಕುಳಿತಿರುವ ಗಣೇಶ ಮಡಿಲಲ್ಲಿ ದೊಡ್ಡ ಬಟ್ಟಲಿನಲ್ಲಿ ಮೋದಕವನ್ನು ಇರಿಸಿಕೊಂಡಿದ್ದಾನೆ. 

ಗಣಪತಿ ಬಿಡುವಾಗ ಬಪ್ಪ ಮೋರಿಯಾ ಅಂತಾರಲ್ಲ, ಹಂಗಂದ್ರೇನು?

ಈ ಫೋಟೋ ನೋಡಿದ ಬಹುತೇಕರು ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ. ಈ ಐಡಿಯಾ ಹಿಂದಿರುವವರಿಗೆ ನನ್ನ ಮೆಚ್ಚುಗೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂಡಿಗೋ ವಿಮಾನದ ಆಹಾರದ ಮೆನುವಿನಲ್ಲಿ ಮೋದಕವನ್ನು ಸೇರಿಸಲು ಗಣೇಶ ಮನವಿ ಮಾಡುತ್ತಿದ್ದಾನೆ ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ. ನಿಮ್ಮ ಈ ಯೋಚನೆ ನನಗೆ ಇಷ್ಟವಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

View post on Instagram

ಕಲಿಯುಗದಲ್ಲಿ ಗಣೇಶ ಹೊಸ ಅವತಾರ ಎತ್ತುತ್ತಾನಂತೆ! ಹೆಸರೇನಿರುತ್ತೆ ಗೊತ್ತಾ?