ಮೇಷ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಈ ನಾಲ್ಕು ರಾಶಿಗಳಿಗೆ ಶುರುವಾಯ್ತು ಒಳ್ಳೆ ದಿನ

ಏ.14ರಂದು ಸೂರ್ಯನು ಮೀನ ರಾಶಿಯಿಂದ ಮೇಷಕ್ಕೆ ಪ್ರವೇಶಿಸುತ್ತಿದ್ದಾನೆ. ಇದರಿಂದ ಮೂರು ರಾಶಿಗಳ ಅದೃಷ್ಟ ಬದಲಾಗಲಿದೆ. 

Good days of these zodiac signs will start from April 14 skr

ಸೂರ್ಯನು ಮೇಷ ಸೇರಿದಂತೆ ಹನ್ನೆರಡು ರಾಶಿಗಳಲ್ಲಿ ಸಂಚರಿಸುವ ಕಾಲವನ್ನೇ ಸಂಕ್ರಮಣ ಕಾಲ ಎನ್ನುತ್ತಾರೆ. ಹೀಗಾಗಿ ಪ್ರತಿ ತಿಂಗಳೂ ಸಂಕ್ರಮಣವಾಗುತ್ತದೆ. ಏಪ್ರಿಲ್ ತಿಂಗಳ 14ರಂದು ಸೂರ್ಯ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಾನೆ. ರಾಶಿಚಕ್ರದ ಮೊದಲ ರಾಶಿಯಾದ ಮೇಷಕ್ಕೆ ಸೂರ್ಯ ಪ್ರವೇಶಿಸುವ ದಿನವನ್ನು ಭಾರತದ ಹಲವೆಡೆ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರಿನ ಅನ್ವಯ ನಾವು ಯುಗಾದಿಗೆ ಹೊಸ ವರ್ಷ ಆಚರಿಸಿದ್ದೇವೆ. ಆದರೆ, ಪಂಜಾಬ್, ಹರಿಯಾಣಗಳಲ್ಲಿ ಮೇಷ ಸಂಕ್ರಮಣವನ್ನು ಹೊಸ ವರ್ಷವೆಂದು ಬೈಸಾಕಿ ಹಬ್ಬ ಆಚರಿಸಲಾಗುತ್ತದೆ. ಕೇರಳದಲ್ಲಿ ವಿಶು ಎಂದು ಆಚರಿಸಲ್ಪಡುತ್ತದೆ. ಗ್ರಹಗಳಲ್ಲಿ ಸೂರ್ಯ ಮೊದಲನೆಯವನಾದರೆ, ರಾಶಿಚಕ್ರದಲ್ಲಿ ಮೇಷ ಮೊದಲನೆಯದು. ಈ ಎರಡರ ಸಂಗಮ ಬಹಳ ಪ್ರಭಾವಶಾಲಿಯಾಗಿದ್ದು, ಮೇಷ ಸಂಕ್ರಮಣದ ಪರಿಣಾಮವಾಗಿ 3 ರಾಶಿಗಳು ಅತ್ಯಂತ ಶುಭ ಫಲವನ್ನು ಪಡೆಯುತ್ತಿವೆ. ಸೂರ್ಯನ ಕೃಪಾಶೀರ್ವಾದ ಪಡೆಯುತ್ತಿರುವ ರಾಶಿಚಕ್ರಗಳು ಇವು..

ಮೇಷ(Aries)
ಸೂರ್ಯನು ಇದೇ ರಾಶಿಗೆ ಪ್ರವೇಶಿಸುತ್ತಿರುವುದರಿಂದ ನಿಮ್ಮ ಆತ್ಮವಿಶ್ವಾಸ(Confidence) ಹೆಚ್ಚಲಿದೆ. 
ಆತ್ಮವಿಶ್ವಾಸ ಹೆಚ್ಚಾದ ಪ್ರಭಾವ ಉದ್ಯೋಗ ರಂಗದಲ್ಲಿ ನಿಮ್ಮ ಪ್ರಭಾವ, ವರ್ಚಸ್ಸು ಹೆಚ್ಚಲಿದೆ. 
ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ನೆಂಟರಿಷ್ಟರ ಭೇಟಿ ಸಾಧ್ಯವಾಗುತ್ತದೆ.
ಮಕ್ಕಳ ಸಂತೋಷ ಹೆಚ್ಚುತ್ತದೆ. ನಿರೀಕ್ಷೆಯಲ್ಲಿರುವ ದಂಪತಿಗೆ ಮಗುವಿನ ಭಾಗ್ಯವೂ ಸಿಗಲಿದೆ. 
ಉನ್ನತ ವ್ಯಾಸಂಗ(higher education)ಕ್ಕಾಗಿ, ಸಂಶೋಧನೆಗಾಗಿ ವಿದೇಶ ಪ್ರಯಾಣ ಯೋಗವಿರಲಿದೆ. 
ಉದ್ಯೋಗ ಬದಲಾವಣೆ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಜವಾಬ್ದಾರಿ ಕೂಡಾ ಬದಲಾವಣೆಗಳಾಗಬಹುದು. ಭಡ್ತಿ ಸಾಧ್ಯತೆಗಳಿವೆ.
ನಿಮ್ಮೆಲ್ಲ ಕಾರ್ಯಗಳಿಗೆ ಸಂಗಾತಿಯ ಸಂಪೂರ್ಣ ಸಹಕಾರ ಸಿಗುತ್ತದೆ. 
ಉದ್ಯೋಗದಲ್ಲಿ ವರ್ಗಾವಣೆ(job transfer) ಆಗುವ ಸಂಭವಗಳೂ ಹೆಚ್ಚಲಿವೆ. 

Wednesday ಈ 4 ಕೆಲಸ ಮಾಡಿದ್ರೆ ಬದುಕು ಬರ್ಬಾದ್ ಆಗುತ್ತೆ!

ಕಟಕ(Cancer)
ನಿಮ್ಮ ಆಸ್ತಿಯಿಂದ ಆದಾಯ ಹೆಚ್ಚಾಗುತ್ತದೆ.
ತಾಯಿಯಿಂದ ಹಣ ಪಡೆಯುವ ಸಾಧ್ಯತೆಗಳಿವೆ.
ಕಲೆ ಮತ್ತು ಸಂಗೀತ(art and music)ದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಕಾರ್ಯ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆ ಇದೆ.
ಉದ್ಯೋಗ ಸ್ಥಳ ಬದಲಾವಣೆ ಕೂಡ ಸಾಧ್ಯ.
ಸಂಬಳ, ಆಸ್ತಿ ಸೇರಿದಂತೆ ವಿವಿಧ ರಂಗದಲ್ಲಿ ಆದಾಯ ಹೆಚ್ಚಲಿದೆ.
ಆಸ್ತಿಯಿಂದ ಆದಾಯದ ಮೂಲಗಳು ಹೆಚ್ಚಲಿವೆ. 
ಸಕಾಲದಲ್ಲಿ ಮಾಡುವ ಹೂಡಿಕೆಯ ಪರಿಣಾಮ ಉತ್ತಮ ಫಲಿತಾಂಶ ಕಾಣಬಹುದಾಗಿದೆ.

ಸಿಂಹ(Leo)
ನೀವು ಅಗತ್ಯ ಕಾರ್ಯಗಳಿಗೆ ತಾಯಿಯ ಬೆಂಬಲ ಸೇರಿದಂತೆ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ.
ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂದರ್ಶನಗಳು ಇತ್ಯಾದಿ ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ.
ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ. 
ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ವಾಹನ ಸುಖ ಹೆಚ್ಚಾಗಲಿದೆ. ಹೊಸ ವಾಹನ ಖರೀದಿ ಯೋಗವಿದೆ.
ಉದ್ಯೋಗದಲ್ಲಿ ಅಧಿಕಾರಿಗಳು ಸಹೋದ್ಯೋಗಿಗಳು ಹಾಗೂ ಇತರರಿಂದ ಅಗತ್ಯ ಬೆಂಬಲವನ್ನು ಪಡೆಯುತ್ತಾರೆ.
ಪ್ರಗತಿಯ ಹಾದಿ ಸುಗಮವಾಗಲಿದೆ. ಯಾವುದಕ್ಕೂ ಅತಿಯಾಗಿ ಕಷ್ಟ ಪಡಬೇಕಿಲ್ಲ.
ಒಟ್ಟಾರೆ ಆದಾಯ(Income) ಹೆಚ್ಚಲಿದೆ.

Panchanga: ಇಂದು ಗುರುವಿನ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಫಲಾಫಲಗಳು ಹೀಗಿವೆ

ಮೀನ(Pisces)
ಶೈಕ್ಷಣಿಕ ಕೆಲಸ ಮತ್ತು ಗೌರವ ಹೆಚ್ಚಾಗುವುದು.
ಆತ್ಮವಿಶ್ವಾಸ ಹೆಚ್ಚಲಿದೆ.
ಕೆಲಸದಲ್ಲಿ ಉತ್ಸಾಹ  ಇರುತ್ತದೆ.
ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿ ವಿಸ್ತರಣೆಯಾಗಬಹುದು.
ಒಳ್ಳೆಯ ಕಾರಣಕ್ಕಾಗಿ ಮನೆ ಸ್ಥಳಾಂತರವಾಗುವ ಸಾಧ್ಯತೆಯೂ ಇದೆ.
ಅಧಿಕಾರಿಗಳ ಸಹಕಾರ ದೊರೆಯಲಿದೆ.
ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮವು ಹೇರಳವಾಗಿರುತ್ತದೆ.
ಸತ್ಸಂಗ ಇತ್ಯಾದಿ ಕಾರಣಕ್ಕಾಗಿ ನೀವು ಧಾರ್ಮಿಕ ಸ್ಥಳಕ್ಕೆ ಹೋಗಬಹುದು.
ಅಗತ್ಯ ಬಿದ್ದಾಗ ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios