ವಿಜಯಪುರ: ಶಿವರಾತ್ರಿಯಂದು ಸಿದ್ದೇಶ್ವರ ಶ್ರೀಗಳ ರೀತಿ ಉಡುಗೆ ತೊಟ್ಟ ಪುಟಾಣಿ, ಕಾಲಿಗೆ ಬಿದ್ದ ಭಕ್ತರು..!

ಪೂಜೆಯ ವೇಳೆ‌ ಸಿದ್ದೇಶ್ವರ ಶ್ರೀಗಳ ರೀತಿಯಲ್ಲೆ ಬಿಳಿ ಅಂಗಿ, ಬಿಳಿ ಲುಂಗಿ ಉಟ್ಟು ಪುಟಾಣಿ ಗಮನ ಸೆಳೆದಿದೆ. ಜಾನವಿ ಗೊಳಸಂಗಿ ಸಿದ್ದೇಶ್ವರ ಶ್ರೀಗಳ ರೀತಿಯಲ್ಲಿ ಉಡುಗೆ ತೊಟ್ಟು ಗಮನ ಸೆಳೆದಿದ್ದಾಳೆ. ಪುಟಾಣಿ ನಡೆದು ಬರುವಾಗ ಭಕ್ತರು ಕಾಲಿಗೆ ಬಿದ್ದಿದ್ದಾರೆ. 

Girl who Dressed like Siddeshwar Shri during Shivaratri in Vijayapura grg

ವಿಜಯಪುರ(ಫೆ.19):  ಶಿವರಾತ್ರಿ ಪೂಜೆಯಲ್ಲಿ ಸಿದ್ದೇಶ್ವರ ಶ್ರೀಗಳ ರೀತಿ ಉಡುಗೆ ತೊಟ್ಟು ಪುಟಾಣಿ ಗಮನ ಸೆಳೆದ  ಘಟನೆ ವಿಜಯಪುರ ನಗರದ ಮಲ್ಲಿಕಾರ್ಜುನ ದೇಗುಲದಲ್ಲಿ ನಡೆದಿದೆ. 

ಪೂಜೆಯ ವೇಳೆ‌ ಸಿದ್ದೇಶ್ವರ ಶ್ರೀಗಳ ರೀತಿಯಲ್ಲೆ ಬಿಳಿ ಅಂಗಿ, ಬಿಳಿ ಲುಂಗಿ ಉಟ್ಟು ಪುಟಾಣಿ ಗಮನ ಸೆಳೆದಿದೆ. ಜಾನವಿ ಗೊಳಸಂಗಿ ಸಿದ್ದೇಶ್ವರ ಶ್ರೀಗಳ ರೀತಿಯಲ್ಲಿ ಉಡುಗೆ ತೊಟ್ಟು ಗಮನ ಸೆಳೆದಿದ್ದಾಳೆ. ಪುಟಾಣಿ ನಡೆದು ಬರುವಾಗ ಭಕ್ತರು ಕಾಲಿಗೆ ಬಿದ್ದಿದ್ದಾರೆ. 

ಶ್ರದ್ಧಾ, ಭಕ್ತಿಯ ಮಹಾಶಿವರಾತ್ರಿ ಸಂಭ್ರಮ

ನಗರದಲ್ಲಿರುವ ರಾಜ್ಯದ ಅತೀ 2ನೇ ದೊಡ್ಡದಾದ 85 ಅಡಿಯ ಶಿವಗಿರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶಿವಾಲಯಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಮಹಾ ಶಿವರಾತ್ರಿ ಆಚರಿಸಲಾಯಿತು.

Murdeshwar: ಶ್ರದ್ಧಾ-ಭಕ್ತಿಯಿಂದ ಜರುಗಿದ ಶಿವರಾತ್ರಿ

ಶಿವಲಿಂಗ ದರ್ಶನಕ್ಕೆ ಬೆಳ್ಳಂಬೆಳಗ್ಗೆ 4 ಗಂಟೆಗೆ ಭಕ್ತರ ದಂಡು ಶಿವಲಿಂಗ ದರ್ಶನಕ್ಕಾಗಿ ಉದ್ದನೆ ಸಾಲಿನಲ್ಲಿ ನಿಂತಿತ್ತು. ಬೆಳಗ್ಗೆ 4.30ರಿಂದ 5 ಗಂಟೆವರೆಗೆ ರುದ್ರಾಭಿಷೇಕ ಮಾಡಲಾಯಿತು. ನಂತರತ ಪ್ರತಿ ತಾಸಿಗೊಮ್ಮೆ ಶಿವನ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಸುಕಿನ 5 ಗಂಟೆಯಿಂದ ಸರದಿಯಂತೆ ಮೂರು ಸರದಿ ಮಾರ್ಗದ ಮೂಲಕ ಭಕ್ತರನ್ನು ಒಳಗಡೆ ಬಿಡಲಾಯಿತು. ಭಕ್ತಾದಿಗಳು, ಕಾಯಿ, ಕರ್ಪೂರ, ಬಿಲ್ವ ಪತ್ರಿ ಮುಂತಾದ ಪೂಜಾ ಸಾಮಗ್ರಿಗಳ ಜೊತೆಗೆ ಬಂದು ಶಿವನಿಗೆ ಪೂಜೆ ಸಲ್ಲಿಸಿದರು. ಸಂಜೆ ಮಹಿಳೆಯರಿಂದ ರಥವನ್ನು ಎಳೆಯಲಾಯಿತು. ಸುಮಾರು ಲಕ್ಷಾಂತರ ಜನರು ಶಿವನ ದರ್ಶನ ಪಡೆದು ಮಹಾಶಿವರಾತ್ರಿಗೆ ಸಾಕ್ಷಿಯಾದರು. ಶಿವಗಿರಿಗೆ ಹೋಗಿ ಬರಲು ಆಟೋ, ಬಸ್‌ ಸಂಚಾರ ದಿನವಿಡೀ ಅವ್ಯಾಹತವಾಗಿ ಸಂಚರಿಸಿದವು.

ಶಂಕರಲಿಂಗ ದೇವಸ್ಥಾನ, ಅಡವಿ ಶಂಕರಲಿಂಗ ದೇವಸ್ಥಾನ, ಸುಂದರೇಶ್ವರ ದೇವಸ್ಥಾನ, ಶ್ರೀ 770 ಲಿಂಗದ ಗುಡಿ ಸೇರಿದಂತೆ ನಗರದ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಇಡೀ ದಿನ ಅವ್ಯಾಹತವಾಗಿ ಜರುಗಿದವು. ಬಹುತೇಕ ಭಕ್ತಾದಿಗಳು ಉಪವಾಸ ವ್ರತ ಆಚರಿಸಿ ಶಿವನ ಜಪತಪದಲ್ಲಿ ಮಗ್ನರಾಗಿದ್ದರು. ಎಲ್ಲೆಲ್ಲೂ ಓಂ ನಮಃ ಶಿವಾಯ ಎಂಬ ಶಿವಸ್ತುತಿಗ, ಗಂಟೆ, ಜಾಗಟೆ ನಿನಾದ ಕೇಳಿ ಬಂತು. ಪುರುಷರು, ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಆದಿಯಾಗಿ ನಗರದ ಬಹುತೇಕ ಶಿವಾಲಯಗಳಿಗೆ ತೆರಳಿ ಶಿವನ ದರ್ಶನ ಪಡೆದು ಶಿವ ಭಜನೆಯಲ್ಲಿ ಮೈ ಮರೆತರು. ಹಿರಿಯರು, ಪುರುಷರು, ಮಹಿಳೆಯರು, ಮಕ್ಕಳಾದಿಯಾಗಿ ಬಹುತೇಕ ಮಂದಿ ಉಪವಾಸ ವ್ರತ ಆಚರಿಸುವುದರೊಂದಿಗೆ ರಾತ್ರಿಯಿಡೀ ಜಾಗರಣೆ ಮಾಡಿದರು. ಶನಿವಾರ ಮಹಾಶಿವರಾತ್ರಿ ನಿಮಿತ್ತ ಇಡೀ ಜಿಲ್ಲೆಯ ಜನರು ಶಿವನ ಸ್ತುತಿಯಲ್ಲಿ ತಲ್ಲೀಣರಾಗಿದ್ದರು. ಹೀಗಾಗಿ ಇಡೀ ಜಿಲ್ಲೆಯಲ್ಲಿ ಮಹಾ ಶಿವರಾತ್ರಿ ಕಳೆಗಟ್ಟಿತ್ತು.

ಪುಣ್ಯ ಸ್ನಾನ: 

ಮಹಾಶಿವರಾತ್ರಿ ದಿನದಂದು ನದಿ ಸ್ನಾನ ಮಾಡುವುದು ಪುಣ್ಯದ ಕೆಲಸ ಎಂಬ ಪ್ರತೀತಿ ಇದೆ. ಹಾಗಾಗಿ ವಿಜಯಪುರ ಜಿಲ್ಲೆಯಲ್ಲಿನ ಕೃಷ್ಣಾ ಹಾಗೂ ಭೀಮಾ ನದಿಯಲ್ಲಿ ಸಹಸ್ರಾರು ಮಂದಿ ನದಿ ಸ್ನಾನ ಮಾಡಿ ಶಿವನ ಧ್ಯಾನ ಮಾಡಿ ಕೃತಾರ್ಥರಾದರು. ಜಿಲ್ಲೆಯ ವಿವಿಧೆಡೆ ಶಿವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಇಡೀ ದಿನ ನಿರಂತರವಾಗಿ ನಡೆದವು. ಭಕ್ತಾದಿಗಳು ಶಿವನ ಜಪತಪ ಮಾಡಿ ಮನುಕುಲಕ್ಕೆ ಲೇಸು ಬಯಸಿದರು.

Latest Videos
Follow Us:
Download App:
  • android
  • ios