Asianet Suvarna News Asianet Suvarna News

ಉರ್ದು ಶಾಲೆಯಲ್ಲಿ ಗಣಪತಿ ಪೂಜೆ;ಭಾವೈಕ್ಯತೆ ಸಾರಿದ ಮುಸಲ್ಮಾನ ವಿದ್ಯಾರ್ಥಿಗಳು!

ವಿಜಯನಗರ ಜಿಲ್ಲೆಯ ತಂಬ್ರಹಳ್ಳಿ ಸರ್ಕಾರಿ ಉರ್ದು ಶಾಲೆಯಲ್ಲಿ ಮುಸಲ್ಮಾನರು ಗಣಪತಿ ಕೂಡಿಸಿ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯೆತೆ ಸಾರಿದರು.

Ganesh chaturthi special ganapati pooja in government urdu school at vijayanagar rav
Author
First Published Sep 24, 2023, 5:47 PM IST

ವಿಜಯನಗರ (ಸೆ.24): ವಿಜಯನಗರ ಜಿಲ್ಲೆಯ ತಂಬ್ರಹಳ್ಳಿ ಸರ್ಕಾರಿ ಉರ್ದು ಶಾಲೆಯಲ್ಲಿ ಮುಸಲ್ಮಾನರು ಗಣಪತಿ ಕೂಡಿಸಿ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯೆತೆ ಸಾರಿದರು.

ಕಳೆದ ವರ್ಷವೂ ಗಣಪತಿಯನ್ನು ಕೂಡಿಸಿ ಪೂಜಿಸಿದ್ದ ಉರ್ದು ಶಾಲೆ ಈ ಬಾರಿಯೂ ಶಾಲೆಯಲ್ಲಿ ಗಣೇಶೋತ್ಸವ ಆಚರಿಸಿದ್ದಾರೆ. ವಿಶೇಷವೆಂದರೆ ಈ ಶಾಲೆಯಲ್ಲಿ ಬಹುತೇಕ ಮುಸ್ಲಿಂ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ ಕೃಷ್ಣಾ ಜನ್ಮಾಷ್ಟಮಿಯನ್ನೂ ಆಚರಿಸಿದ್ದರು. ಇದೀಗ ಗಣಪನ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೆರವಣಿಗೆ ಮೂಲಕ ಶಾಲೆಯ ಗಣಪತಿ ಮೂರ್ತಿ ವಿಗ್ರಹವನ್ನು ವಿಸರ್ಜನೆ ಮಾಡಿದ್ದಾರೆ. ಈ ವೇಳೆ ಮುಸ್ಲಿಂ ವಿದ್ಯಾರ್ಥಿಗಳಿಂದಲೇ ವಿಘ್ನ ವಿನಾ

ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ: ಅಲ್ಹಾಭಕ್ಷ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ!ಯಕನ ಪೂಜೆ ಮಾಡಿ ವಿಸರ್ಜನೆ ಮಾಡಿರೋದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Follow Us:
Download App:
  • android
  • ios