Asianet Suvarna News Asianet Suvarna News

ಬಂದೇ ಬಿಡ್ತು ಗಣೇಶನ ಹಬ್ಬ; ಈ ವರ್ಷ ಚತುರ್ಥಿ ಯಾವಾಗ?, ಪೂಜಾ ವಿಧಾನ ತಿಳಿಯಿರಿ..!

ಪ್ರತಿ ವರ್ಷ ಗಣೇಶ ಚತುರ್ಥಿಯು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪ್ರಾರಂಭವಾಗುತ್ತದೆ. ಆ ದಿನ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಚತುರ್ಥಿಯನ್ನು 10 ದಿನಗಳ ಕಾಲ ನಿರಂತರವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣಪತಿ ಸ್ಥಾಪನೆಯ ಮಂಗಳಕರ ಸಮಯ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ganesh chaturthi 2023 date and time shubh muhurat of ganesh chaturthi and poojanvidhi suh
Author
First Published Jul 30, 2023, 2:55 PM IST

ಪ್ರತಿ ವರ್ಷ ಗಣೇಶ ಚತುರ್ಥಿಯು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪ್ರಾರಂಭವಾಗುತ್ತದೆ. ಆ ದಿನ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಚತುರ್ಥಿಯನ್ನು 10 ದಿನಗಳ ಕಾಲ ನಿರಂತರವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣಪತಿ ಸ್ಥಾಪನೆಯ ಮಂಗಳಕರ ಸಮಯ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

 ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆ 10ದಿನಗಳ ಕಾಲ ನಡೆಯುತ್ತದೆ. ಅಂದು ಗಣೇಶನಿಗೆ ಡೋಲು ಬಾರಿಸುವ ಮೂಲಕ ಭವ್ಯವಾದ ಸ್ವಾಗತವನ್ನು ನೀಡಲಾಗುತ್ತದೆ ಮತ್ತು ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.  ಇದರೊಂದಿಗೆ ಗಣೇಶನನ್ನು ಪ್ರತಿದಿನವೂ ವಿಧಿ ವಿಧಾನಗಳಿಂದ ಪೂಜಿಸಲಾಗುತ್ತದೆ. ಅನಂತ ಚತುರ್ದಶಿಯ ದಿನದಂದು ಗಣೇಶನನ್ನು ಬೀಳ್ಕೊಡಲಾಗುತ್ತದೆ. ಈ ಕುರಿತು ಎಲ್ಲಾ ಡೀಟೇಲ್ಸ್ ಇಲ್ಲಿದೆ….

ಗಣೇಶ ಚತುರ್ಥಿ ಯಾವಾಗ..?

ವೈದಿಕ ಪಂಚಾಂಗದ ಪ್ರಕಾರ ಈ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯು, ಸೆಪ್ಟೆಂಬರ್‌ 18ರಂದು ಮಧ್ಯಾಹ್ನ 2.9ರಿಂದ ಪ್ರಾರಂಭವಾಗಿ ಸೆಪ್ಟೆಂಬರ್‌ 19ರಂದು ಮಧ್ಯಾಹ್ನ 2.12ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಉದಯ ತಿಥಿ ಪ್ರಕಾರ ಸೆಪ್ಟೆಂಬರ್‌ 19ರಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ.

ಗಣೇಶ ಪ್ರತಿಷ್ಠಾಪನೆಗೆ ಶುಭ ಮೂಹೂರ್ತ

ಗಣೇಶ ಚತುರ್ಥಿಯ ದಿನದಂದು ಶುಭ ಮೂಹೂರ್ಥದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಶುಭ ಫಲವನ್ನು ತಂದು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಅದಕ್ಕಾಯೇ  ನೀವು ಗಣೇಶನನ್ನು ಪ್ರತಿಷ್ಠಾಪಿಸುವಾಗ ಶುಭ ಸಮಯವನ್ನು ತಿಳಿಯಿರಿ. ಈ ವರ್ಷ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಶುಭ ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ವರ್ಷ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲು ಶುಭ ಸಮಯವು ಸೆಪ್ಟೆಂಬರ್‌ 19ರಂದು ಬೆಳಿಗ್ಗೆ 11.07 ರಿಂದ ಇರುತ್ತದೆ. ಈ ಮುಹೂರ್ತದಲ್ಲಿ ನೀವು ಗಣಪತಿ ಬಪ್ಪನನ್ನು ನಿಮ್ಮ ಮನೆಗೆ ಸ್ವಾಗತಿಸಬಹುದು. 

ಶನಿ ಪ್ರಭಾವದ ರಾಶಿಗಳು; ವೃತ್ತಿಪರ ಜೀವನದಲ್ಲಿ ಸಮಸ್ಯೆ, ಕೊನೆಯಲ್ಲಿ ಯಶಸ್ಸು..!

 

ಗಣೇಶ ಚತುರ್ಥಿ ಮಹತ್ವ

ಗಣೇಶನನ್ನು ಬುದ್ದಿವಂತಿಕೆ ಮತ್ತು ವಿವೇಚನೆಯ ದೇವರು ಎಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯ ದಿನದಂದು ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ. ಅಂತಹ ಮನೆಗಳಲ್ಲಿ ಗಣೇಶನ ಕೃಪೆ ಯಾವಾಗಲೂ ಇರುತ್ತದೆ. ಮತ್ತು ವ್ಯಕ್ತಿಯ ಜೀವನದಲ್ಲಿ ಎಲ್ಲಾ ಅಡೆತಡೆಗಲು ದೂರವಾಗುತ್ತದೆ. ಇದರೊಂದಿಗೆ ಸುಖ-ಸಮೃದ್Di ಮತ್ತು ಯಶಸ್ಸು ಪ್ರಾಪ್ತಿಯಾಗುತ್ತದೆ.

ಗಣೇಶ ಚತುರ್ಥಿಯ ಆರಾಧನೆಯ ವಿಧಾನ

ಗಣೇಶ ಚತುರ್ಥಿಯ ದಿನದಂದು ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ಮನೆಯ ದೇವಸ್ಥಾನವನ್ನು ಸರಿಯಾಗಿ ಸ್ವಚ್ಛಗೊಳಿಸಿ. ಕಂಬದ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹರಡಿ. ನಂತರ ಗಣೇಶನ ಮೂರ್ತಿಯನ್ನು ಕೂರಿಸಬೇಕು. ಮುಖವು ಪೂರ್ವಕ್ಕೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದಾದ ನಂತರ ಗಣಪತಿಗೆ ದೂರ್ವೆ, ಗಂಗಾಜಲ, ಅರಿಶಿನ ಶ್ರೀಗಂಧ, ಸಿಂಧೂರ, ಹಣ್ಣು ಹೂವು ಮಾಲೆ ಅಕ್ಷತೆ ಮತ್ತು ಮೋದಕವನ್ನು ಅರ್ಪಿಸಿ. ಗಣೇಶನ ಆರತಿಯೊಂದಿಗೆ ಪಾರ್ವತಿ ಶಿವ ಎಲ್ಲಾ ದೇವತೆಗಳ ಆರತಿಯನ್ನು ಮಾಡಿ… ಜೈ ಗಣೇಶ….

ಪ್ರಕೃತಿ ವಿಕೋಪಕ್ಕೆ ಕಾರಣವೇ 'ಸಂಸಪ್ತಕ ಯೋಗ': ಈ ಆರು ರಾಶಿಯವರಿಗಂತೂ ಇದು 'ಸಂಕಷ್ಟ' ಕಾಲ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios