ಹಿಂದೂ ಧರ್ಮದಲ್ಲಿ ಶಂಖಕ್ಕೆ ಭಾರೀ ಮಹತ್ವವಿದೆ. ಇದನ್ನು ಪವಿತ್ರ ಎಂದು ನಂಬಲಾಗಿದೆ. ಅಲ್ಲದೆ, ಪೂಜೆ, ಆರಾಧನೆ ಸಂದರ್ಭದಲ್ಲಿ ಶಂಖನಾದ ಇದ್ದೇ ಇರುತ್ತದೆ. ಶಂಖದಲ್ಲಿ ಹಲವಾರು ಪ್ರಕಾರಗಳಿದ್ದು, ಅವುಗಳಲ್ಲಿ ಪ್ರಮುಖವಾಗಿ ಮೂರು ಪ್ರಕಾರಗಳೆಂದು ಹೇಳಲಾಗುತ್ತದೆ. ವಾಮಾವರ್ತಿ, ದಕ್ಷಿಣಾವರ್ತಿ ಮತ್ತು ಮಧ್ಯವರ್ತಿ ಶಂಖಗಳು ಎಂದು ಹೇಳಲಾಗಿದೆ. ಈ ಶಂಖಗಳಲ್ಲೇ ಒಂದಾದ ಕಾಮಧೇನು ಶಂಖವೂ ಸಹ ಅತಿ ಪ್ರಮುಖ ಎಂದು ಹೇಳಲಾಗುತ್ತದೆ. 

ಈ ಕಾಮಧೇನು ಶಂಖವು ತುಂಬಾ ಅಪರೂಪವಾಗಿದ್ದು, ಗೋವಿನ ಮುಖವನ್ನು ಹೋಲುವಂತಿರುತ್ತದೆ. ಇದಕ್ಕಾಗಿಯೇ ಇದನ್ನು ಕಾಮಧೇನು ಶಂಖ ಎಂದು ಹೇಳಲಾಗುತ್ತದೆ. ಇದು ನಿಮ್ಮ ಮನೆಯಲ್ಲಿದ್ದರೆ ನಿಮಗೆ ಸುಖ-ನೆಮ್ಮದಿಯ ಜೊತೆಗೆ ಸಂಪತ್ತು ವೃದ್ಧಿಯಾಗಲಿದೆ. ಎಲ್ಲರೂ ಹೇಳುವ ಪ್ರಕಾರ ಶಂಖವು ತುಂಬ ಫಲಕಾರಿಯಾಗಿದ್ದು, ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. 

ಇದನ್ನು ಓದಿ: ಗುರು ಗ್ರಹದ ರಾಶಿ ಪರಿವರ್ತನೆ; ಅಶುಭ ಪ್ರಭಾವದಿಂದ ಪಾರಾಗಲು ಇಲ್ಲಿದೆ ಪರಿಹಾರ...

ಮನೆಯಲ್ಲಿ ಶಂಖವನ್ನಿಟ್ಟುಕೊಂಡರೆ ಲಾಭ
ಮನೆಯಲ್ಲಿ ಶಂಖವನ್ನು ಇಟ್ಟುಕೊಂಡರೆ ಅನೇಕ ಲಾಭಗಳಿದ್ದು, ಕಾಮಧೇನು ಶಂಖವನ್ನಿಟ್ಟರೆ ಇನ್ನೂ ಹೆಚ್ಚು ಶುಭಫಲವನ್ನು ನೀಡುತ್ತದೆ. ಇದನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಯಾವಾಗಲೂ ಲಕ್ಷ್ಮೀ ಕೃಪೆ ಇರುತ್ತದೆ. ಪುರಾಣ ಕಥೆಗಳ ಪ್ರಕಾರ ಮಹರ್ಷಿ ಪುಲಸ್ತ್ಯ ಹಾಗೂ ಋಷಿ ವಸಿಷ್ಠರು ಲಕ್ಷ್ಮೀ ಕೃಪೆಯನ್ನು ಪಡೆಯುವ ಸಲುವಾಗಿ ಈ ಶಂಖಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಈ ಮೂಲಕ ಲಕ್ಷ್ಮೀ ದೇವಿಯನ್ನು ಪ್ರಸನ್ನಗೊಳಿಸಿಕೊಂಡಿದ್ದರು. ಹೀಗಾಗಿ ಇವರ ಮೇಲೆ ಲಕ್ಷ್ಮೀ ಕೃಪೆ ಪ್ರಾಪ್ತವಾಗಿತ್ತು. 

ಮನೋಕಾಮನೆಗಳ ಪೂರೈಕೆ
ಕಾಮಧೇನು ಶಂಖ ಮನೆಯಲ್ಲಿದ್ದರೆ ನಿಮ್ಮ ಮನಸ್ಸಿನ ಆಸೆಗಳು ಪೂರೈಸುತ್ತವೆ. ನೀವು ಬಯಸಿದ್ದರಲ್ಲಿ ಬಹುತೇಕ ಅಂಶಗಳು ಈಡೇರುತ್ತವೆ. ಮನೆಯಲ್ಲಿ ಪೂಜೆಯ ಸಮಯದಲ್ಲಿ ಈ ಶಂಖನಾದವನ್ನು ಮೊಳಗಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಪುರಾಣ ಹೇಳುತ್ತದೆ. ನೀವು ಯಾವುದಾದರೂ ಇಚ್ಛೆ ಪೂರ್ತಿಯಾಗಬೇಕೆಂದು ಇಷ್ಟ ಪಟ್ಟಿದ್ದರೆ ಶ್ರದ್ಧಾ-ಭಕ್ತಿಯಿಂದ ನಿತ್ಯವೂ ಪೂಜಿಸಿ ಬಳಸಿ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಿ.

ಇದನ್ನು ಓದಿ: ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..? 

ಮೋಕ್ಷ ಪ್ರಾಪ್ತಿ
ಕಾಮಧೇನು ಶಂಖವು ಮನೆಯಲ್ಲಿದ್ದು ಪೂಜಿಸಲ್ಪಡುತ್ತಿದ್ದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಶಂಖವನ್ನು ಶಕ್ತಿಶಾಲಿ ಎಂದೂ ಹೇಳಲಾಗುತ್ತಿದ್ದು, ಇದರಲ್ಲಿ 33 ಕೋಟಿ ದೇವತೆಗಳೂ ನೆಲೆಸಿದ್ದಾರೆಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹೀಗಾಗಿ ಇದು ಬಹಳ ಶ್ರೇಷ್ಠ ಎಂಬ ಹಿನ್ನೆಲೆಯಲ್ಲಿ ಪೂಜೆಗಳನ್ನು ಮಾಡಲಾಗುತ್ತದೆ. ಇನ್ನು ಈ ಶಂಖವನ್ನು ದಾನ ಮಾಡಿದರೆ ಮೋಕ್ಷವು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಯಾವುದಾದರೂ ಶುಭ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಈ ಕಾಮಧೇನು ಶಂಖವನ್ನು ದಾನ ಮಾಡಬಹುದಾಗಿದೆ. ಹಣಕ್ಕೆ ಕಾವಲು
ಈ ಶಂಖವು ನಿಮ್ಮ ಮನೆಯಲ್ಲಿದ್ದರೆ ನಿಮ್ಮ ಹಣಕ್ಕೆ ಕಾವಲು ಇದ್ದಂತೆ. ಅಂದರೆ, ನಿಮ್ಮ ಹಣವು ಅಷ್ಟು ಸುಲಭವಾಗಿ ನಿಮ್ಮ ಕೈಬಿಟ್ಟು ಹೋಗುವುದಿಲ್ಲ. ಇದರ ಕೃಪೆಯಿಂದ ಹಣದ ಉಳಿಕೆ ಹೆಚ್ಚಿ ಸಂಪತ್ತು ವೃದ್ಧಿಯಾಗುತ್ತಾ ಹೋಗುತ್ತದೆ. ಯಾರಿಗಾದರೂ ಗಳಿಸಿದ ಹಣ ನಿಲ್ಲುತ್ತಿಲ್ಲವಾದರೆ, ದಿನೇದಿನೆ ಹೊಸ ಖರ್ಚುಗಳು ಹುಟ್ಟಿಕೊಳ್ಳುತ್ತಿವೆ ಎಂದಾದರೆ ಹಣ ಇಡುವ ಜಾಗದಲ್ಲಿ ಈ ಕಾಮಧೇನು ಶಂಖವನ್ನು ಇಡಬೇಕು. ಆಗ ಲಕ್ಷ್ಮೀ ಕೃಪೆಯಾಗಿ ಹಣವು ಉಳಿಕೆಯಾಗುತ್ತದೆ. 

ಇದನ್ನು ಓದಿ: ಹಸ್ತರೇಖೆಯಿಂದ ತಿಳಿಯಿರಿ ವೈವಾಹಿಕ ಜೀವನದ ರಹಸ್ಯ..! 

ಮನೋಬಲ ಹೆಚ್ಚಳ
ಕಾಮಧೇನು ಶಂಖವನ್ನು ನೀವು ನಿತ್ಯವೂ ಪೂಜಿಸುವುದರಿಂದ ಮನೋಬಲವು ಹೆಚ್ಚಳಗೊಳ್ಳುವುದು. ಮನೋಬಲ, ಮಾನಸಿಕ ಆತ್ಮವಿಶ್ವಾಸ ಹಾಗೂ ತರ್ಕಶಕ್ತಿಯನ್ನು ವೃದ್ಧಿಸುವ ಶಂಖ ಎಂದು ಈ ಕಾಮಧೇನು ಶಂಖಕ್ಕೆ ಹೇಳಲಾಗುತ್ತದೆ. ಅಷ್ಟರ ಮಟ್ಟಿಗೆ ಇದು ಶಕ್ತಿಯನ್ನು ಹೊಂದಿದೆ. ಹೀಗಾಗಿ ಕಾಮಧೇನು ಶಂಖವನ್ನು ಶುದ್ಧ ಜಲದಿಂದ ಸ್ವಚ್ಛಗೊಳಿಸಿ ಶ್ವೇತ ವಸ್ತ್ರದ ಮೇಲೆ ಇಡಬೇಕು. ಶಂಖಕ್ಕೆ ಹೂವನ್ನು ಇಟ್ಟು ಅದರ ಬಳಿ ದೀಪವನ್ನು ಹಚ್ಚಬೇಕು. ಆ ಬಳಿಕ “ಓಂ ನಮಃ ಗೋಮುಖೀ ಕಾಮಧೇನು ಶಂಖಾಯ ಮಮ ಸರ್ವ ಕಾರ್ಯಸಿದ್ದಿ ಕುರು - ಕುರು ನಮಃ’’ ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಎಲ್ಲವೂ ಸಿದ್ಧಿಸುತ್ತದೆ.