Asianet Suvarna News Asianet Suvarna News

Datta Jayanti 2022: 24 ಗುರುಗಳನ್ನು ಹೊಂದಿದ್ದ ದತ್ತಾತ್ರೇಯ ಗುರು!

ದತ್ತಾತ್ರೇಯ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪ. ಈ ಬಾರಿ ಡಿಸೆಂಬರ್ 7ರ ಪೌರ್ಣಿಮೆಯಂದು ದತ್ತ ಜಯಂತಿ ಇದೆ. ಅಂದ ಹಾಗೆ ದತ್ತಾತ್ರೇಯರಿಗೆ 24 ಗುರುಗಳಿದ್ದರು ಎಂಬ ವಿಷಯ ನಿಮಗೆ ಗೊತ್ತೇ?

From insects to birds Lord Dattatreyas unique teachers skr
Author
First Published Dec 6, 2022, 12:03 PM IST

ಭಗವಾನ್ ದತ್ತಾತ್ರೇಯರು ತ್ರಿಮೂರ್ತಿಗಳ ಸ್ವರೂಪ. 3 ಮುಖಗಳು ಹಾಗೂ 6 ಕೈಗಳನ್ನು ಹೊಂದಿರುವ ಇವರೊಂದಿಗೆ ಸದಾ ಹಸು ಹಾಗೂ ನಾಯಿಗಳು ಇರುತ್ತವೆ. ದತ್ತಾತ್ರೇಯರ ಪೂಜೆಯಿಂದ ತ್ರಿಮೂರ್ತಿಗಳ ಆಶೀರ್ವಾದ ಫಲ ಪಡೆಯಬಹುದು. ಇಂಥ ದತ್ತಾತ್ರೇಯ ಭಗವಾನ್ ಕೂಡಾ ಗುರುವಿನ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಜೀವನದಲ್ಲಿ ಕೀಟಗಳು, ಪಕ್ಷಿಗಳು, ಪ್ರಾಣಿಗಳು ಸೇರಿದಂತೆ 24 ಗುರುಗಳನ್ನು ಸೃಷ್ಟಿಸಿದರು. ಆ ಗುರುಗಳು ಯಾರು? ಎಲ್ಲ ಗುರುಗಳಿಂದ ಅವರೇನು ಕಲಿತಿದ್ದಾರೆ ತಿಳಿಯೋಣ. 

ಭೂಮಿ(Earth)
ಭೂಮಿಯಿಂದ ನಾವು ಸಹನೆ ಮತ್ತು ದಾನದ ಮನೋಭಾವವನ್ನು ಕಲಿಯಬಹುದು. ಭೂಮಿಯ ಮೇಲಿನ ಜನರು ಅನೇಕ ರೀತಿಯ ಆಘಾತಗಳನ್ನು ಮಾಡುತ್ತಾರೆ. ಭೂಮಿಯು ಪ್ರತಿ ಆಘಾತವನ್ನು ದಾನದ ಭಾವನೆಯಿಂದ ಸಹಿಸಿಕೊಳ್ಳುತ್ತದೆ.

ಸೂರ್ಯ(Sun)
ಸೂರ್ಯ ಒಬ್ಬನೇ ಆಗಿದ್ದರೂ ಬೇರೆ ಬೇರೆ ಮಾಧ್ಯಮಗಳ ಮೂಲಕ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾನೆ. ಹಾಗೆಯೇ ಆತ್ಮ ಒಂದೇ ಆದರೂ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಗಾಳಿ(Air)
ಒಳ್ಳೆಯ ಅಥವಾ ಕೆಟ್ಟ ಗಾಳಿಯು ಹೀಗೆ ಬಂದು ಹಾಗೆ ಹೋಗಬಹುದು. ಆದರೆ ಗಾಳಿಯ ಮೂಲ ರೂಪವೆಂದರೆ ಸ್ವಚ್ಛತೆ. ಅದೇ ರೀತಿ ನಾವು ಒಳ್ಳೆಯವರು ಅಥವಾ ಕೆಟ್ಟವರ ಜೊತೆ ಇದ್ದರೂ ನಮ್ಮ ಒಳ್ಳೆಯತನವನ್ನು ಬಿಡಬಾರದು. 

ಆಕಾಶ(Sky)
ದತ್ತಾತ್ರೇಯ ಅವರು ಆಕಾಶದಿಂದ ಕೂಡಾ ಕಲಿತಿದ್ದಾರೆ ಮತ್ತು ಕಲಿಯಲು ತಿಳಿಸಿದ್ದಾರೆ. ಒಬ್ಬನು ಎಲ್ಲೆಡೆ ಗೋಚರವಾಗಿಯೂ ದೇಶ, ಸಮಯ ಮತ್ತು ಪರಿಸ್ಥಿತಿಯಲ್ಲಿ ಬಾಂಧವ್ಯದಿಂದ ದೂರವಿರಬೇಕು. 

New Year 2023: ಹೊಸ ವರ್ಷದಲ್ಲಿ ಈ 5 ರಾಶಿಗಳಿಗೆ ಆಸ್ತಿ ಮಾಡುವ ಅದೃಷ್ಟ

ನೀರು(Water)
ನಾವು ಯಾವಾಗಲೂ ಪರಿಶುದ್ಧರಾಗಿದ್ದಾಗ ಮಾತ್ರ ನಮಗೆ ಬೆಲೆ ಎಂಬುದನ್ನು ನೀರನ್ನು ನೋಡಿ ತಿಳಿಯಬಹುದಾಗಿದೆ.

ಪಾರಿವಾಳ(Pigion)
ಬಲೆಗೆ ಸಿಕ್ಕಿಹಾಕಿಕೊಂಡ ಮಕ್ಕಳನ್ನು ನೋಡಿದ ಪೋಷಕ ಪಾರಿವಾಳಗಳು ಸಹ ಬಲೆಗೆ ಸಿಕ್ಕಿ ಹಾಕಿಕೊಳ್ಳುತ್ತವೆ. ಯಾರೊಂದಿಗಾದರೂ ಅತಿಯಾದ ಬಾಂಧವ್ಯವೇ ದುಃಖಕ್ಕೆ ಕಾರಣ ಎಂಬ ಪಾಠವನ್ನು ಅವುಗಳಿಂದ ಕಲಿಯಬಹುದು. 

ಜಿಂಕೆ(Deer)
ಜಿಂಕೆಗಳು ಜಿಗಿತ, ಸಂಗೀತ, ವಿನೋದದಲ್ಲಿ ಕಳೆದುಹೋಗುತ್ತವೆ, ಅದು ಸಿಂಹ ಅಥವಾ ಇತರ ಯಾವುದೇ ಹಿಂಸಾತ್ಮಕ ಪ್ರಾಣಿಗಳ ಉಪಸ್ಥಿತಿಯನ್ನು ಗ್ರಹಿಸುವುದಿಲ್ಲ. ಹೀಗಾಗಿ ಸಾಯುತ್ತವೆ. ನಾವು ಎಂದಿಗೂ ಅಜಾಗರೂಕರಾಗಿರಬಾರದು ಎಂದು ಇದರಿಂದ ತಿಳಿಯಬಹುದು.

ಸಮುದ್ರ(Ocean)
ತನ್ನ ಅಲೆಗಳಂತೆಯೇ ಜೀವನದ ಏರಿಳಿತಗಳಲ್ಲಿಯೂ ಸಂತೋಷ ಮತ್ತು ಕ್ರಿಯಾತ್ಮಕವಾಗಿರಬೇಕು ಎಂದು ಸಮುದ್ರವು ಕಲಿಸುತ್ತದೆ.

ಪತಂಗ
ಪತಂಗವು ಬೆಂಕಿಯ ಕಡೆಗೆ ಆಕರ್ಷಿತವಾಗುತ್ತದೆ ಮತ್ತು ಸುಟ್ಟುಹೋಗುತ್ತದೆ. ನೋಟ ಮತ್ತು ಸುಳ್ಳು ಮೋಹದ ಆಕರ್ಷಣೆಯಲ್ಲಿ ಸಿಲುಕಿಕೊಳ್ಳಬಾರದು ಎಂದು ಪತಂಗದಿಂದ ಕಲಿಯಬಹುದು.  

Zodiac Sign: ಪ್ರಬಲ ಸಂಗಾತಿಯ ನಿಯಂತ್ರಣದಲ್ಲಿ ಈ ರಾಶಿಯವರು ಸುಖವಾಗಿರ್ತಾರೆ

ಜೇನುನೊಣ(honeybee)
ಜೇನುನೊಣಗಳು ಜೇನುತುಪ್ಪವನ್ನು ಬಹಳ ಕಷ್ಟಪಟ್ಟು, ವರ್ಷವಿಡೀ ಶ್ರಮ ಹಾಕಿ ಸಂಗ್ರಹಿಸುತ್ತವೆ. ಆದರೆ ಒಂದು ದಿನ ಎಲ್ಲ ಜೇನುತುಪ್ಪವನ್ನು ಮನುಷ್ಯನೋ, ಕರಡಿಯೋ ಕೊಂಡೊಯ್ಯುತ್ತಾರೆ. ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಬಾರದು ಎಂದು ಇದರಿಂದ ತಿಳಿಯಬಹುದು. 

ಮೀನು(Fish)
ನಾವು ರುಚಿಗೆ ಬೆಲೆ ಕೊಡಬಾರದು. ನಮ್ಮ ಸುತ್ತಲೇ ಸಾಕಷ್ಟು ಆಹಾರ ಸಿಗುವಾಗ ಯಾರೋ ತೋರಿದ ಆಮಿಷಕ್ಕೆ ಬಲಿಯಾಗಬಾರದು. ಮೀನು ಕೊಕ್ಕೆಯಲ್ಲಿ ಸಿಲುಕಿದ ಮಾಂಸದ ತುಂಡನ್ನು ತಿನ್ನಲು ಹೋಗುತ್ತದೆ ಮತ್ತು ಅಂತಿಮವಾಗಿ ಸಾಯುತ್ತದೆ.

ಬೆಂಕಿ(Fire)
ಯಾವುದೇ ಸಂದರ್ಭಗಳು ಇರಲಿ, ನಾವು ನಮ್ಮತನ ಬಿಟ್ಟುಕೊಡಬಾರದು ಎಂಬುದನ್ನು ದತ್ತಾತ್ರೇಯರು ಬೆಂಕಿಯಿಂದ ಕಲಿತರು. ಬೇರೆ ಬೇರೆ ಕಾಡಿನ ನಡುವೆ ಬದುಕಿದ ನಂತರವೂ ಬೆಂಕಿ ಒಂದೇ ರೀತಿ ಕಾಣುತ್ತದೆ. ಅದನ್ನು ಎಲ್ಲಿಯೇ ಬಿಟ್ಟರೂ ಸುಡುವುದೇ ಅದರ ಗುಣ.

ಆತ್ಮ(Soul)
ಆತ್ಮವು ಲಾಭ ಮತ್ತು ನಷ್ಟವನ್ನು ಮೀರಿದೆ. ಆತ್ಮವು ಯಾವುದೇ ರೀತಿಯ ಲಾಭ ಅಥವಾ ನಷ್ಟದಿಂದ ಬದಲಾಗುವುದಿಲ್ಲ. ಹಾಗೆಯೇ ನಾವು ಕೂಡಾ ಇರಬೇಕು..

ನಾಗರಹಾವು(Snake)
ದತ್ತಾತ್ರೇಯರು ಯಾವುದೇ ಸನ್ಯಾಸಿ ಏಕಾಂಗಿಯಾಗಿ ಬದುಕಬೇಕು, ಆದರೆ ಒಂದೇ ಸ್ಥಳದಲ್ಲಿ ಇರಬಾರದು ಎಂದು ಹಾವಿನಿಂದ ಕಲಿತರು. ಜ್ಞಾನವನ್ನು ಎಲ್ಲೆಡೆ ಹಂಚಬೇಕು. ದೇವರು ಕೂಡ ಭ್ರಮೆಗಳನ್ನು ಸೃಷ್ಟಿಸುತ್ತಾನೆ ಮತ್ತು ನಾಶಪಡಿಸುತ್ತಾನೆ ಎಂದು ಜೇಡದಿಂದ ಕಲಿತರು. ಹೀಗೆ ದತ್ತಾತ್ರೇಯರು, ಹೆಬ್ಬಾವು ಮತ್ತಿತರೆ ಕೀಟಗಳು ಸೇರಿದಂತೆ 24 ಜೀವಿಗಳನ್ನು ತಮ್ಮ ಗುರುವಾಗಿ ಪರಿಗಣಿಸಿ ಅವುಗಳಿಂದ ಬದುಕಿನ ಪಾಠ ಕಲಿತಿದ್ದರು. 

Follow Us:
Download App:
  • android
  • ios